Apr 19, 2026 Languages : ಕನ್ನಡ | English

ಲವ್ವರ್‌ ಬಗ್ಗೆ ಸತ್ಯ ಬಿಚ್ಚಿಟ್ಟ ಸೋನು ಗೌಡ - ಬಿಗ್ ಬಾಸ್ ಬೆಡಗಿಯ ಎರಡು ಪ್ರೇಮ ಕಥೆಗಳು ರಿವೀಲ್‌!!

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುವ ಬಿಗ್‌ ಬಾಸ್‌ ಖ್ಯಾತಿಯ ಸೋನು ಶ್ರೀನಿವಾಸ್‌ ಗೌಡ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ತಮ್ಮ ಜೀವನದಲ್ಲಿ ನಡೆದ ಎರಡು ಪ್ರೇಮ ಕಥೆಗಳ ಬಗ್ಗೆ ಮತ್ತು ತಮ್ಮ ಗೆಳೆಯ ರಾಜೇಶ್‌ ಅವರ ಸಾವಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ವಿಶೇಷವೆಂದರೆ, ಏಪ್ರಿಲ್ 18 ಸೋನು ಅವರ ಪಾಲಿಗೆ ಅತ್ಯಂತ ಭಾವನಾತ್ಮಕ ದಿನವಾಗಿತ್ತು.

ಇನ್‌ಸ್ಟಾಗ್ರಾಮ್‌ನಲ್ಲಿ ಹಣ ಗಳಿಕೆಯ ಹೊಸ ದಾರಿ ಹಿಡಿದ ಸೋನು ಗೌಡ
ಇನ್‌ಸ್ಟಾಗ್ರಾಮ್‌ನಲ್ಲಿ ಹಣ ಗಳಿಕೆಯ ಹೊಸ ದಾರಿ ಹಿಡಿದ ಸೋನು ಗೌಡ

ಒಂದೆಡೆ ಮನೆಯಲ್ಲಿ ಪ್ರೀತಿಯ ತಮ್ಮನ ಹುಟ್ಟುಹಬ್ಬದ ಸಂಭ್ರಮವಿದ್ದರೆ, ಇನ್ನೊಂದೆಡೆ ತನ್ನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗೆಳೆಯ ರಾಜೇಶ್‌ ಸಾವನ್ನಪ್ಪಿ ಇಂದಿಗೆ 11 ದಿನಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಸೋನು ಒಂದು ಎಮೋಷನಲ್‌ ವಿಡಿಯೋ ಹಂಚಿಕೊಂಡಿದ್ದಾರೆ.

ರಾಜೇಶ್‌ ಮೊದಲ ಪ್ರೀತಿ, ಅವನೇ ನನ್ನ ಶಕ್ತಿ!

ಸೋನು ಹೇಳುವಂತೆ ರಾಜೇಶ್‌ ಅವರ ಫಸ್ಟ್‌ ಲವ್ವರ್‌. ಬಿಗ್‌ ಬಾಸ್‌ ಮುಗಿಸಿ ಹೊರಬಂದ ಮೇಲೆ ಸೋನು ಸಾಕಷ್ಟು ಟ್ರೋಲ್‌ ಮತ್ತು ಕಷ್ಟಗಳನ್ನು ಎದುರಿಸಿದ್ದರು. ಆ ಸಮಯದಲ್ಲಿ ರಾಜೇಶ್‌ ಅವರಿಗೆ ಬೆನ್ನೆಲುಬಾಗಿ ನಿಂತು ಹೊಸ ಬದುಕು ಕಟ್ಟಿಕೊಳ್ಳಲು ಧೈರ್ಯ ನೀಡಿದ್ದರಂತೆ.

"ರಾಜೇಶ್‌ರಿಂದ ನನಗೆ ಯಾವತ್ತೂ ತೊಂದರೆಯಾಗಿಲ್ಲ. ನಮ್ಮಿಬ್ಬರ ಮಧ್ಯೆ ಬಿರುಕು ಮೂಡೋಕೆ ಕಾರಣ ಆ ಮೂರನೇ ವ್ಯಕ್ತಿ. ರಾಜೇಶನ ಹಳೆಯ ಗೆಳತಿ (Ex) ಮಧ್ಯೆ ಬಂದಿದ್ದರಿಂದಲೇ ನಾವಿಬ್ಬರೂ ದೂರ ಆಗಬೇಕಾಯಿತು. ಅವಳು ನೆಟ್ಟಗಿಲ್ಲ, ನನಗೂ ನೆಟ್ಟಗೆ ಇರೋಕೆ ಬಿಡಲಿಲ್ಲ" ಎಂದು ಸೋನು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ರಾಜೇಶ್‌ ಅನಾರೋಗ್ಯದಿಂದ ಮೃತಪಟ್ಟಿದ್ದು, ಅವರ ಬಗ್ಗೆ ನೆಗೆಟಿವ್‌ ಕಾಮೆಂಟ್ ಮಾಡಬೇಡಿ ಎಂದು ಸೋನು ವಿನಂತಿಸಿದ್ದಾರೆ.

ಎರಡನೇ ಪ್ರೀತಿ ಅಂದ್ರೆ ಅದೊಂದು 'ಸ್ಕ್ಯಾಮ್'!

ತಮ್ಮ ಎರಡನೇ ಪ್ರೇಮದ ಬಗ್ಗೆ ಮಾತನಾಡಿರುವ ಸೋನು, ಅದನ್ನು ಪ್ರೀತಿ ಎಂದು ಕರೆಯಲು ಇಷ್ಟಪಡುವುದಿಲ್ಲ. "ಅದೊಂದು ದೊಡ್ಡ ಸ್ಕ್ಯಾಮ್‌. ಆ ವ್ಯಕ್ತಿಯಿಂದಲೇ ನನ್ನ ಗೌರವಕ್ಕೆ ಧಕ್ಕೆ ಬಂತು. ಸಮಾಜದಲ್ಲಿ ನಾನು ತಲೆ ಎತ್ತಿ ಓಡಾಡದಂತಹ ಪರಿಸ್ಥಿತಿ ತಂದವನೇ ಅವನು" ಎಂದು ಹೇಳುವ ಮೂಲಕ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಆ ವ್ಯಕ್ತಿಯಿಂದಾಗಿ ಅನುಭವಿಸಿದ ಅವಮಾನದ ಬಗ್ಗೆ ಸೋನು ಈಗಲೂ ಮರುಗುತ್ತಿದ್ದಾರೆ.

ರಾಜೇಶ್‌ ಸತ್ತಿದ್ದಾರೆ ಎಂದು ನಾನು ನಂಬಲ್ಲ!

ತಮ್ಮ ರೂಮಿನಲ್ಲಿ ರಾಜೇಶ್‌ ಜೊತೆಗಿರುವ ಫೋಟೋವನ್ನು ಫ್ರೇಮ್‌ ಮಾಡಿಸಿ ಗೋಡೆಗೆ ಹಾಕಿಕೊಂಡಿರುವ ಸೋನು, ಅದನ್ನು ನೋಡಿ ಕಣ್ಣೀರು ಹಾಕಿದ್ದಾರೆ. "ನನಗೆ ರಾಜೇಶ್‌ ಫೋಟೋಗೆ ಹಾರ ಹಾಕಿ ಪೂಜೆ ಮಾಡಲು ಇಷ್ಟವಿಲ್ಲ. ಅವನು ಸತ್ತಿದ್ದಾನೆ ಎಂದು ನಾನು ನಂಬಲ್ಲ. ಅವನು ಯಾವತ್ತೂ ನನ್ನ ಜೊತೆಗೇ ಇರುತ್ತಾನೆ" ಎಂದು ಭಾವುಕರಾಗಿ ನುಡಿದಿದ್ದಾರೆ. ಸೋನು ಅವರ ಈ ಸ್ಥಿತಿ ಕಂಡು ಅವರ ತಾಯಿ ಕೂಡ ಕಣ್ಣೀರು ಹಾಕಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಗಳಿಕೆಯ ಹಾದಿ
ವೈಯಕ್ತಿಕ ನೋವುಗಳ ನಡುವೆಯೂ ಸೋನು ತಮ್ಮ ವೃತ್ತಿಜೀವನವನ್ನು ಮುಂದುವರಿಸುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 'ಸಬ್‌ಸ್ಕ್ರಿಪ್ಶನ್‌' ಆಪ್ಶನ್ ನೀಡುವ ಮೂಲಕ ಅಲ್ಲಿಯೂ ಕೂಡ ಹಣ ಗಳಿಸುತ್ತಿದ್ದಾರೆ. ತಮ್ಮ ಖಾಸಗಿ ಲೈಫ್‌ನ ಅಪ್‌ಡೇಟ್‌ಗಳನ್ನು ನೋಡಲು ಫಾಲೋವರ್ಸ್‌ಗಳಿಗೆ ಚಂದಾದಾರರಾಗುವಂತೆ ಅವರು ಆಹ್ವಾನ ನೀಡಿದ್ದಾರೆ.

Latest News