Jan 25, 2026 Languages : ಕನ್ನಡ | English

ಎಷ್ಟೇ ವರ್ಷ ಕಳೆದರೂ ಅದೇ ಜೋಷ್ ನಲ್ಲಿ ಓಂ ಸೀನ್ ರೀ ಕ್ರಿಯೇಟ್ ಮಾಡಿದ ಶಿವಣ್ಣ - ವಿಡಿಯೋ ಬಾರಿ ವೈರಲ್

ಕನ್ನಡ ಸಿನಿರಂಗದ ಎವರ್ ಗ್ರೀನ್ ಸಿನಿಮಾಗಳಲ್ಲಿ ಒಂದಾದ ಓಂ ಚಿತ್ರವನ್ನು ಪ್ರೇಕ್ಷಕರು ಇಂದಿಗೂ ಮರೆತಿಲ್ಲ. ನಟ ಉಪೇಂದ್ರ ನಿರ್ದೇಶನದಲ್ಲಿ, ಶಿವರಾಜ್ ಕುಮಾರ್ ಅಭಿನಯದ ಈ ಸಿನಿಮಾ ಕನ್ನಡದ ಕ್ರೈಮ್-ಡ್ರಾಮಾ ಶೈಲಿಗೆ ಹೊಸ ದಿಕ್ಕು ಅಂದೇ ತೋರಿಸಿತ್ತು. ಹೌದು 1995ರಲ್ಲಿ ಬಿಡುಗಡೆಯಾದ ಈ ಚಿತ್ರವು ಕಾಲಾಂತರದಲ್ಲಿ ಹಲವು ಬಾರಿ ಮರುಬಿಡುಗಡೆಗೊಂಡು, ಪ್ರತಿ ಬಾರಿ ಪ್ರೇಕ್ಷಕರಿಂದ ಅದೇ ಉತ್ಸಾಹವನ್ನು ಪಡೆದಿದೆ ಎನ್ನಬಹದು. 

ಮತ್ತೆ ಓಂ ಸೀನ್ ರೀ ಕ್ರಿಯೇಟ್ ಮಾಡಿದ ಶಿವಣ್ಣ - ಈ ವೈರಲ್ ವಿಡಿಯೋ ನಿಮಗಾಗಿ!!
ಮತ್ತೆ ಓಂ ಸೀನ್ ರೀ ಕ್ರಿಯೇಟ್ ಮಾಡಿದ ಶಿವಣ್ಣ - ಈ ವೈರಲ್ ವಿಡಿಯೋ ನಿಮಗಾಗಿ!!

ಹೇ ದಿನಕರ ಹಾಡಿನ ನೆನಪು ಮತ್ತೆ ಇದೀಗ ಮರುಕಳಿಸುತ್ತಿದೆ. ಓಂ ಚಿತ್ರದ ಪ್ರತಿಯೊಂದು ಸೀನ್ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯಾಗಿದೆ. ವಿಶೇಷವಾಗಿ “ಹೇ ದಿನಕರ” ಹಾಡು ಇಂದಿಗೂ ಎಲ್ಲರ ಫೇವರಿಟ್ ಆಗಿ ಉಳಿದಿದೆ. ಈ ಹಾಡಿನ ದೃಶ್ಯದಲ್ಲಿ ಶಿವಣ್ಣನ ಅಭಿನಯ, ಶೈಲಿ ಮತ್ತು ಆಕರ್ಷಕತೆ ಪ್ರೇಕ್ಷಕರಿಗೆ ಮರೆಯಲಾಗದ ಅನುಭವ ನೀಡಿತ್ತು. ಇತ್ತೀಚೆಗೆ ಶಿವಣ್ಣ ಈ ಹಾಡಿನ ದೃಶ್ಯವನ್ನು ಪುನಃ ರೀ ಕ್ರಿಯೇಟ್ ಮಾಡಿದ್ದಾರೆ. ಸ್ವಿಮ್ಮಿಂಗ್ ಪೂಲ್ನಲ್ಲಿ ಸೂರ್ಯ ನಮಸ್ಕಾರ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಅಭಿಮಾನಿಗಳು ಈ ದೃಶ್ಯವನ್ನು ನೋಡಿ ಹಳೆಯ ನೆನಪುಗಳನ್ನು ತಂದುಕೊಂಡು, ಮತ್ತೆ ಓಂ ಚಿತ್ರದ ಮಾಯೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಬಹುದು.  ಹೌದು ಮತ್ತೊಂದು ವಿಶೇಷವೆಂದರೆ, ಓಂ ಸಿನಿಮಾ ಮರುಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ಶೀಘ್ರದಲ್ಲೇ ದಿನಾಂಕವನ್ನು ಫೈನಲ್ ಮಾಡುವ ಕಾರ್ಯ ಸಹ ನಡೆಯುತ್ತಿದ್ದು, ಅಭಿಮಾನಿಗಳು ಅದನ್ನು ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಈ ಸಿನಿಮಾ 550ಕ್ಕೂ ಹೆಚ್ಚು ಬಾರಿ ಮರುಬಿಡುಗಡೆಗೊಂಡಿದೆ ಎಂಬ ದಾಖಲೆ ಹೊಂದಿದೆ. ಇದು ಕನ್ನಡ ಸಿನಿರಂಗದಲ್ಲಿ ಅಪರೂಪದ ಸಾಧನೆ.

ಈ ಬಗ್ಗೆ ಅಭಿಮಾನಿಗಳ ಪ್ರತಿಕ್ರಿಯೆ ನೋಡುವುದಾದರೆ, ಶಿವಣ್ಣನ ವೀಡಿಯೋ ವೈರಲ್ ಆದ ನಂತರ, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂತೋಷವನ್ನು ಹಂಚಿಕೊಂಡರು. “ಓಂ ಎಂದರೆ ಎವರ್ ಗ್ರೀನ್ ”, “ಶಿವಣ್ಣ ಎಂದರೆ ಎನರ್ಜಿ” ಎಂಬ ಕಾಮೆಂಟ್‌ಗಳು ಹೆಚ್ಚು ಬರುತ್ತಿವೆ. ಓಂ ಚಿತ್ರದ ಮರುಬಿಡುಗಡೆ ಸುದ್ದಿ ಕೇಳಿ, ಅಭಿಮಾನಿಗಳು ಮತ್ತೆ ಚಿತ್ರಮಂದಿರದಲ್ಲಿಯೇ  ಅದೇ ಉತ್ಸಾಹದಿಂದ ಸಿನಿಮಾ ನೋಡಲು ಸಿದ್ಧರಾಗಿದ್ದಾರೆ. 

ಓಂ ಸಿನಿಮಾ ಕನ್ನಡ ಸಿನಿರಂಗದ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದೆ. ಶಿವಣ್ಣ ರೀ ಕ್ರಿಯೇಟ್ ಮಾಡಿದ ದೃಶ್ಯವು ಅಭಿಮಾನಿಗಳಿಗೆ ಹಳೆಯ ನೆನಪುಗಳನ್ನು ತಂದುಕೊಟ್ಟಿದ್ದು, ಮರುಬಿಡುಗಡೆಗೆ ಸಿದ್ಧತೆ ನಡೆಯುತ್ತಿರುವುದು ಮತ್ತೊಂದು ಸಂಭ್ರಮದ ವಿಷಯವಾಗಿದೆ ನೋಡಿ.  ಎವರ್ ಗ್ರೀನ್ ಸಿನಿಮಾಗಳಲ್ಲಿ ಓಂ ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿದ್ದು, ಪ್ರತಿ ಪೀಳಿಗೆಯೂ ಅದನ್ನು ಹೊಸದಾಗಿ ಅನುಭವಿಸುತ್ತಲೇ ಇದೆ. ಓಂ ಸಿನಿಮಾದ ಬಗ್ಗೆ ನಿಮ್ಮ ಅನುಭವದ ಬಗ್ಗೆ ಕಾಮೆಂಟ್ ಮಾಡಿ ಧನ್ಯವಾದಗಳು.  

Latest News