Apr 9, 2026 Languages : ಕನ್ನಡ | English

ನ್ಯಾಷನಲ್ ಕ್ರಶ್ ರಶ್ಮಿಕಾಗೆ ತವರಿನಿಂದ ಸರ್ಪ್ರೈಸ್ - ಅಪ್ಪ-ಅಮ್ಮ ಕೊಟ್ಟ ಈ ಬೆಲೆಬಾಳುವ ಉಡುಗೊರೆ ಯಾವುದು ಗೊತ್ತಾ!!

ಸ್ಯಾಂಡಲ್‌ವುಡ್‌ನಿಂದ ಶುರುವಾಗಿ ಈಗ ಇಡೀ ದೇಶದ 'ನ್ಯಾಷನಲ್ ಕ್ರಶ್' ಆಗಿರೋ ರಶ್ಮಿಕಾ ಮಂದಣ್ಣ ಅವರಿಗೆ ಅವರ ತವರಿನಿಂದ ಒಂದು ದೊಡ್ಡ ಸರ್ಪ್ರೈಸ್ ಸಿಕ್ಕಿದೆ. ಕೊಡಗು ಅಂದ್ರೆ ರಶ್ಮಿಕಾಗೆ ಎಲ್ಲಿಲ್ಲದ ಪ್ರೀತಿ. ಈಗ ಅವರ ಅಪ್ಪ-ಅಮ್ಮ ಮಗಳಿಗೆ ಒಂದು ಬೆಲೆಬಾಳುವ ಮತ್ತು ಅಷ್ಟೇ ಸುಂದರವಾದ ಉಡುಗೊರೆಯನ್ನು ನೀಡಿದ್ದಾರೆ. ಅದು ಬೇರೇನೂ ಅಲ್ಲ, ವಿರಾಜಪೇಟೆಯಲ್ಲಿರುವ ಅವರ ಐಶಾರಾಮಿ ಬಂಗಲೆ.

ಅರಮನೆಯಂತಿರೋ ಮನೆಯನ್ನು ಮಗಳ ಹೆಸರಿಗೆ ಬರೆದುಕೊಟ್ಟ ಮದನ್ ಮಂದಣ್ಣ
ಅರಮನೆಯಂತಿರೋ ಮನೆಯನ್ನು ಮಗಳ ಹೆಸರಿಗೆ ಬರೆದುಕೊಟ್ಟ ಮದನ್ ಮಂದಣ್ಣ

'ಸೆರಿನಿಟಿ' ಮನೆ ಈಗ ರಶ್ಮಿಕಾ ಅವರದ್ದು

ವಿರಾಜಪೇಟೆ ತಾಲ್ಲೂಕಿನ ಕುಕ್ಲೂರಿನಲ್ಲಿ ರಶ್ಮಿಕಾ ಅವರ ಪೋಷಕರು ವಾಸವಿದ್ದ ಅತ್ಯಂತ ಸುಂದರವಾದ ಮನೆಗೆ 'ಸೆರಿನಿಟಿ' ಅಂತ ಹೆಸರಿಡಲಾಗಿದೆ. ನೋಡುವುದಕ್ಕೆ ಅರಮನೆಯಂತಿರುವ ಈ ಮನೆಯನ್ನು ರಶ್ಮಿಕಾ ಅವರ ತಂದೆ ಮುಂಡಚಾಡಿರ ಮದನ್ ಮಂದಣ್ಣ ಮತ್ತು ತಾಯಿ ಸುಮನ್ ಮಂದಣ್ಣ ಅವರು ಈಗ ಅಧಿಕೃತವಾಗಿ ತಮ್ಮ ಮಗಳ ಹೆಸರಿಗೆ ಹಸ್ತಾಂತರಿಸಿದ್ದಾರೆ. ಮಗಳ ಮದುವೆಯ ಉಡುಗೊರೆಯಾಗಿ ಅಥವಾ ಆಕೆಯ ಮೇಲಿನ ಪ್ರೀತಿಗಾಗಿ ಈ ಆಸ್ತಿಯನ್ನು ಆಕೆಯ ಹೆಸರಿಗೆ ಬರೆದುಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ಕೇವಲ ಬಾಯಲ್ಲಿ ಹೇಳೋದಷ್ಟೇ ಅಲ್ಲ, ವಿರಾಜಪೇಟೆಯ ಉಪ ನೋಂದಣಾಧಿಕಾರಿ (Sub-Registrar) ಕಛೇರಿಯಲ್ಲಿ ಎಲ್ಲಾ ಲೀಗಲ್ ಕೆಲಸಗಳು ಕೂಡ ಮುಗಿದಿವೆ. ಸರ್ವೆ ನಂ 142/1 ಮತ್ತು 142/2 ರಲ್ಲಿರುವ ಈ ವಿಶಾಲವಾದ ಜಾಗ ಮತ್ತು ಅದರಲ್ಲಿರುವ ಬಂಗಲೆಯ ಖಾತೆಯನ್ನು ರಶ್ಮಿಕಾ ಮಂದಣ್ಣ ಅವರ ಹೆಸರಿಗೆ ಬದಲಾವಣೆ ಮಾಡಲಾಗಿದೆ. ಕೊಡಗಿನ ಪ್ರಕೃತಿಯ ಮಡಿಲಲ್ಲಿರುವ ಈ ಮನೆ ಈಗ ಈ ಸ್ಟಾರ್ ನಟಿಯ ಸ್ವಂತ ಆಸ್ತಿಯಾಗಿದೆ.

ಇನ್ನು ಈ ಸುದ್ದಿ ಅಷ್ಟೊಂದು ವೈರಲ್ ಆಗೋಕೆ ಮತ್ತೊಂದು ಕಾರಣ ಅಂದ್ರೆ, ಸದ್ಯ ರಶ್ಮಿಕಾ ಮಂದಣ್ಣ ಅವರು ಕೊಡಗಿನಲ್ಲೇ ಇದ್ದಾರೆ. ಅದರಲ್ಲೂ ವಿಶೇಷವಾಗಿ ವಿಜಯ್ ದೇವರಕೊಂಡ ಕೂಡ ರಶ್ಮಿಕಾ ಜೊತೆ ಕೊಡಗಿಗೆ ಭೇಟಿ ನೀಡಿದ್ದಾರೆ. ಇಬ್ಬರೂ ಒಟ್ಟಿಗೆ ಕೊಡಗಿನ ಹಸಿರಿನ ನಡುವೆ ಸಮಯ ಕಳೆಯುತ್ತಿದ್ದಾರೆ. ಮನೆ ಹಸ್ತಾಂತರದ ಬೆನ್ನಲ್ಲೇ ಈ ಜೋಡಿ ಕೊಡಗಿನಲ್ಲಿ ಕಾಣಿಸಿಕೊಂಡಿರೋದು ಹಲವು ಕುತೂಹಲಗಳಿಗೆ ದಾರಿ ಮಾಡಿಕೊಟ್ಟಿದೆ.

ಶೂಟಿಂಗ್ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ರಶ್ಮಿಕಾ ಆಗಾಗ ತಮ್ಮ ಮನೆಗೆ ಬಂದು ರಿಲ್ಯಾಕ್ಸ್ ಮಾಡ್ತಾರೆ. ಈಗ ಈ 'ಸೆರಿನಿಟಿ' ನಿವಾಸ ಅವರದ್ದೇ ಆಗಿರೋದರಿಂದ ಕೊಡಗಿನ ಜೊತೆಗಿನ ಅವರ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ.

ಸಿನಿಮಾಗಳಲ್ಲಿ ಸಕ್ಸಸ್ ಮೇಲೆ ಸಕ್ಸಸ್ ಕಾಣುತ್ತಿರುವ ರಶ್ಮಿಕಾಗೆ ಅವರ ಪೋಷಕರು ನೀಡಿರುವ ಈ ಐಶಾರಾಮಿ ಉಡುಗೊರೆ ನಿಜಕ್ಕೂ ಮೌಲ್ಯಯುತವಾದುದು. ಕೊಡಗಿನ ಸೊಬಗಿನ ನಡುವೆ ಮಗಳ ಹೆಸರಿಗೆ ಅರಮನೆಯಂತಿರೋ ಮನೆಯನ್ನು ಬರೆದುಕೊಟ್ಟ ಮಂದಣ್ಣ ದಂಪತಿಗಳ ನಡೆ ಎಲ್ಲರ ಗಮನ ಸೆಳೆಯುತ್ತಿದೆ.

Latest News