Dec 13, 2025 Languages : ಕನ್ನಡ | English

ದೈವಕ್ಕೆ ಅವಮಾನ ಮಾಡಿದ್ದ ನಟನ ವಿರುದ್ಧ ದೂರು ದಾಖಲು!! ಯಾರು ಕೊಟ್ಟಿದಾರೆ ಗೊತ್ತಾ?

ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ. ನವೆಂಬರ್ 28ರಂದು ಗೋವಾದಲ್ಲಿ ನಡೆದ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾ (IFFI) ಕಾರ್ಯಕ್ರಮದಲ್ಲಿ ನಡೆದ ಘಟನೆ ಇದಕ್ಕೆ ಕಾರಣವಾಗಿದೆ.

ಬಾಲಿವುಡ್ ನಟ ರಣವೀರ್ ಸಿಂಗ್
ಬಾಲಿವುಡ್ ನಟ ರಣವೀರ್ ಸಿಂಗ್

ಘಟನೆ ವಿವರ ನೋಡುವುದಾದರೆ, ಕಾರ್ಯಕ್ರಮದ ವೇಳೆ ರಣವೀರ್ ಸಿಂಗ್ ವೇದಿಕೆಯಲ್ಲಿ ಉಳ್ಳಾಳ್ತಿ ದೈವದ ಅನುಕರಣೆ ಮಾಡಿದರು. ಈ ಸಂದರ್ಭದಲ್ಲಿ ಅವರು ದೈವವನ್ನು "ದೆವ್ವ" ಎಂದು ಕರೆದು ಪೇಚಿಗೆ ಸಿಲುಕಿಕೊಂಡರು, "Female Ghost" ಎಂದು ಉಲ್ಲೇಖಿಸಿದರು. ಕಾಂತಾರ ಚಿತ್ರದ ನಟ ರಿಷಬ್ ಶೆಟ್ಟಿ ಹೊಗುಳುವ ಭರದಲ್ಲಿ ಅವರು ಈ ರೀತಿಯ ಪ್ರತಿಕ್ರಿಯೆ ನೀಡಿದ್ದು, ಧಾರ್ಮಿಕ ಭಾವನೆಗಳಿಗೆ ಅವಹೇಳನವಾಗಿದೆ ಎಂದು ಆರೋಪಿಸಲಾಗಿದೆಯಂತೆ. ಈ ಘಟನೆಗೆ ಸಂಬಂಧಿಸಿದಂತೆ ವಕೀಲ ಪ್ರಶಾಂತ್ ಮೇತಲ್ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ ಎನ್ನಲಾಗುತ್ತಿದೆ. ದೂರುದಲ್ಲಿ, ನಟನ ಹೇಳಿಕೆಗಳು ಮತ್ತು ಅನುಕರಣೆಗಳು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಉಲ್ಲೇಖಿಸಲಾಗಿದೆ. ಆದ್ರೆ ಈ ಘಟನೆ ನಡೆದ ಬಳಿಕ ನಟ ರಣವೀರ್ ಸಿಂಗ್ ತಮ್ಮ ತಪ್ಪಿನ ಅರಿವಾಗಿ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೂಡ ಕೇಳಿದ್ದಾರೆ. 

ಉಳ್ಳಾಳ್ತಿ ದೈವವನ್ನು "Female Ghost" ಎಂದು ಕರೆಯುವುದು, ಜನರ ನಂಬಿಕೆ ಮತ್ತು ಸಂಪ್ರದಾಯಗಳಿಗೆ ಅವಮಾನವಾಗಿದೆ ಎಂದು ದೂರುದಾರರು ಹೇಳಿದ್ದಾರೆ ಎನ್ನಲಾಗುತ್ತಿದೆ. ದೈವವನ್ನು ದೆವ್ವ ಎಂದು ಕರೆಯುವುದು, ವಿಶೇಷವಾಗಿ ಸಾರ್ವಜನಿಕ ವೇದಿಕೆಯಲ್ಲಿ, ಧಾರ್ಮಿಕ ಭಾವನೆಗಳನ್ನು ಹಾನಿಗೊಳಿಸುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದರ ಮುಂದಿನ ಕ್ರಮ, ಪೊಲೀಸರು ದೂರು ಸ್ವೀಕರಿಸಿದ್ದು, ಪ್ರಕರಣದ ಕುರಿತು ತನಿಖೆ ಆರಂಭಿಸುವ ಸಾಧ್ಯತೆ ಇದೆ. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಹಲವರು ನಟನ ಹೇಳಿಕೆಗಳನ್ನು ಖಂಡಿಸಿದ್ದಾರೆ. ಗೋವಾದ IFFI ವೇದಿಕೆಯಲ್ಲಿ ನಡೆದ ರಣವೀರ್ ಸಿಂಗ್ ಅವರ ಹೇಳಿಕೆಗಳು ಈಗ ಕಾನೂನು ಪ್ರಕ್ರಿಯೆಗೆ ತಲುಪಿವೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ದಾಖಲಾಗಿರುವ ಈ ದೂರು, ಮುಂದಿನ ದಿನಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.

Latest News