ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಎಲ್ಲೆಡೆ ಸುದ್ದಿಯಾಗಿತ್ತು. ಬೀದಿ ನಾಯಿಗಳು ತುಂಬ ಜನರ ಮೇಲೆ ಅಟ್ಯಾಕ್ ಮಾಡಿ ಸಾವನ್ನಪ್ಪಿರುವ ಘಟನೆಗಳು ಬಹಳಷ್ಟಿದೆ. ಇದರ ನಡುವೆಯೇ ಬೀದಿ ನಾಯಿಗಳ ಹಾವಳಿ ನಿಲ್ಲಿಸಲ್ಲೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಕೈಕೊಳ್ಳುವಂತೆ ಜನರು ಮನವಿ ಮಾಡಿಕೊಂಡಿದ್ದರು. ಇದೀಗ ಈ ಬೀದಿ ನಾಯಿಗಳ ಹಾವಳಿ ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಹೌದು ಬೀದಿನಾಯಿಗಳ ಹಾವಳಿ ಕುರಿತು ಸುಪ್ರೀಂಕೋರ್ಟ್ ನೀಡಿದ ಅಭಿಪ್ರಾಯಕ್ಕೆ ನಟಿ ಹಾಗೂ ರಾಜಕಾರಣಿ ರಮ್ಯಾ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ಸುಪ್ರೀಂಕೋರ್ಟ್ ಇಂದು ಬೀದಿನಾಯಿಗಳ ಹಾವಳಿ ಕುರಿತ ಅರ್ಜಿಯನ್ನು ವಿಚಾರಣೆ ನಡೆಸಿತು. ಈ ವೇಳೆ, 'ಬೀದಿನಾಯಿಗಳ ಮನಸ್ಥಿತಿ ಯಾರಿಗೂ ಅರ್ಥವಾಗುವುದಿಲ್ಲ. ಯಾವಾಗ ಕಚ್ಚುತ್ತವೆ, ಯಾವಾಗ ಕಚ್ಚುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ' ಎಂದು ಅಭಿಪ್ರಾಯಪಟ್ಟಿದೆ. ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನಟಿ ರಮ್ಯಾ, “ಹಾಗಾದರೆ ಎಲ್ಲ ಪುರುಷರನ್ನೂ ಜೈಲಿಗೆ ಹಾಕಿ. ಪುರುಷನು ಯಾವಾಗ ಬಲಾತ್ಕಾರ ಮಾಡ್ತಾನೋ, ಯಾವಾಗ ಜೀವ ಹಾನಿ ಮಾಡ್ತಾನೋ ಯಾರಿಗೂ ಗೊತ್ತಿಲ್ಲ” ಎಂದು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದರ ನಡುವೆ ರಮ್ಯಾ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಕಂಡು ಬರುತ್ತಿದ್ದಂತೆಯೇ ಸಾಕಷ್ಟು ಜನರು ರಮ್ಯಾ ಅವರ ಈ ಮಾತನ್ನು ಒಪ್ಪಿಕೊಂಡಿಲ್ಲ, ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕಿಯೆ ನೀಡಿದ್ದಾರೆ. ಇನ್ನೂ ಕೆಲವ್ರು ಇವರ ಪರ ನಿಂತು, ಹೌದು ಎಂದು ಮಹಿಳಾ ಮಣಿಗಳು ಈ ಮಾತನ್ನು ಒಪ್ಪಿಕೊಂಡಿದ್ದಾರೆ, ಇವರ ಮಾತು ನಿಜ ಇದೆ ಎಂದಿದ್ದಾರೆ. ಪುರುಷರು ರಮ್ಯಾ ಪೋಸ್ಟ್ ನೋಡಿ, ಎಲ್ಲರೂ ಹಾಗೆಯೆ ಇರುವುದಿಲ್ಲ, ನಿಮ್ಮ ಆಲೋಚನಾ ಬದಲಿಸಕೊಂಡು ಪೋಸ್ಟ್ ಮಾಡಿ ಇಂತಹ ವಿಷಯಗಳನ್ನು ಎನ್ನುತ್ತಿದ್ದಾರೆ. ಸುಪ್ರೀಂಕೋರ್ಟ್ ಅಭಿಪ್ರಾಯವನ್ನು ಟೀಕಿಸಿದ ರಮ್ಯಾ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕರ ಗಮನ ಸೆಳೆದಿದೆ.