Apr 8, 2026 Languages : ಕನ್ನಡ | English

ಇನ್ನೊಂದು ಅವಕಾಶ ಸಿಕ್ಕರೆ ಎಂದು ಭಾವುಕಾರದ ರಜನಿಕಾಂತ್!! ರಜನಿ ಮಾತಿಗೆ ಪ್ರೇಕ್ಷಕರು ಫಿದಾ!!

ಗೋವಾದಲ್ಲಿ ನಡೆದ 56ನೇ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಸಮಾರೋಪ ಸಮಾರಂಭದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರ ಐದು ದಶಕಗಳ ಸಿನಿಮಾ ಪಯಣವನ್ನು ಗೌರವಿಸಲು ಈ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ಸ್ವೀಕರಿಸಲು ವೇದಿಕೆಗೆ ಬಂದಾಗ ಎಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ರೇಷ್ಮೆ ಪಂಚೆ–ಶರ್ಟ್ ಧರಿಸಿ ಬಂದ ರಜನಿಕಾಂತ್ ಅವರು, ತಮ್ಮ ಸಿನಿಮಾ ಜೀವನದ ನೆನಪುಗಳನ್ನು ವೇದಿಕೆ ಮೇಲೆ ಹಂಚಿಕೊಂಡರು. 50 ವರ್ಷಗಳು ದೀರ್ಘವಾಗಿದ್ದರೂ, ಅದು ತುಂಬಾ ಚಿಕ್ಕ ಅವಧಿಯಂತೆ ಭಾಸವಾಯಿತು ಎಂದು ಹೇಳಿದರು. ಈ ಮೈಲಿಗಲ್ಲು ಭಾವನಾತ್ಮಕ ಹಾಗೂ ಅರ್ಥಪೂರ್ಣವಾಗಿದ್ದು, ಮತ್ತೊಂದು ಅವಕಾಶ ಸಿಕ್ಕರೂ ಇದೇ ಸಿನಿಮಾ ಜೀವನವನ್ನು ಮತ್ತೆ ಆಯ್ಕೆ ಮಾಡಿಕೊಳ್ಳುವುದಾಗಿ ಅವರು ಅಭಿಮಾನಿಗಳ ಮುಂದೆ ಘೋಷಣೆ ಮಾಡಿದರು. 

ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು
ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು

 

ಗೋವಾದಲ್ಲಿ ಶುಕ್ರವಾರ ನಡೆದ 56ನೇ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಸಮಾರೋಪ ಸಮಾರಂಭದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರ ಐದು ದಶಕಗಳ ಸಿನಿಮಾ ಪಯಣವನ್ನು ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿ ನೀಡಲಾಯಿತು. ವೇದಿಕೆಯ ಸಂಭ್ರಮ ಪ್ರಶಸ್ತಿ ಸ್ವೀಕರಿಸಲು ರಜನಿಕಾಂತ್ ವೇದಿಕೆಗೆ ಬಂದಾಗ, ಅಲ್ಲಿ ಹಾಜರಿದ್ದ ಎಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ರೇಷ್ಮೆ ಪಂಚೆ ಮತ್ತು ಶರ್ಟ್ ಧರಿಸಿ ಬಂದ ರಜನಿಕಾಂತ್, ತಮ್ಮ ವಿಶಿಷ್ಟ ಶೈಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದರು. 

ಭಾವನಾತ್ಮಕ ನೆನಪು ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ರಜನಿಕಾಂತ್, ತಮ್ಮ ಸಿನಿಮಾ ಪಯಣವನ್ನು ನೆನಪಿಸಿಕೊಂಡರು. 50 ವರ್ಷಗಳು ಕೇಳಲು ದೀರ್ಘ ಎನಿಸಿದರೂ, ಅದು ತುಂಬಾ ಚಿಕ್ಕ ಅವಧಿಯಂತೆ ಭಾಸವಾಯಿತು ಎಂದು ಅವರು ಹೇಳಿದರು. ಮೈಲಿಗಲ್ಲಿನ ಅರ್ಥ ಈ ಪ್ರಶಸ್ತಿ ತಮ್ಮ ಜೀವನದಲ್ಲಿ ಭಾವನಾತ್ಮಕ ಹಾಗೂ ಅರ್ಥಪೂರ್ಣ ಮೈಲಿಗಲ್ಲು ಎಂದು ರಜನಿಕಾಂತ್ ಅಭಿಪ್ರಾಯಪಟ್ಟರು. ಐದು ದಶಕಗಳ ಸಿನಿಮಾ ಜೀವನ ಕೆಲವೇ ವರ್ಷಗಳಲ್ಲಿ ಕಳೆದಂತೆ ಭಾಸವಾಯಿತು ಎಂದು ಅವರು ಹಂಚಿಕೊಂಡರು. ಜೀವನದ ಆಯ್ಕೆ ಭಾವನಾತ್ಮಕ ಕ್ಷಣದಲ್ಲಿ, ಮತ್ತೊಂದು ಅವಕಾಶ ಸಿಕ್ಕರೂ ಇದೇ ಸಿನಿಮಾ ಜೀವನವನ್ನು ಮತ್ತೆ ಆಯ್ಕೆ ಮಾಡಿಕೊಳ್ಳುವುದಾಗಿ ರಜನಿಕಾಂತ್ ಹೇಳಿದರು. ಅವರ ಮಾತುಗಳು ಅಭಿಮಾನಿಗಳ ಮನಸ್ಸಿನಲ್ಲಿ ಪ್ರೇರಣೆಯ ಅಲೆ ಎಬ್ಬಿಸಿದ್ದಂತೂ ಸತ್ಯ. ನೀವು ಕೂಡ ರಜನಿಕಾಂತ್ ಅವರ ಅತಿ ದೊಡ್ಡ ಅಭಿಮಾನಿ ಆಗಿದ್ದರೆ ಅವರ ನೆಚ್ಚಿನ ಸಿನಿಮಾ ಯಾವುದು ನಿಮಗೆ ಇಷ್ಟ ಎಂದು ಕಾಮೆಂಟ್ ಮಾಡಿ. ಈ ಮಾಹಿತಿ ಬಗ್ಗೆ ನಿಮ್ಮ ನಿಸಿಕೆ ತಿಳಿಸಿ. ಧನ್ಯವಾದಗಳು.

Latest News