ದಕ್ಷಿಣ ಭಾರತ ಸಿನಿರಂಗದ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಹಾಗೆ ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ನಟ ಅಂದ್ರೆ ಅದು ನಮ್ಮ ಸೂಪರ್ ಸ್ಟಾರ್ ರಜನಿಕಾಂತ್ ಅವರು ಎನ್ನಬಹುದು. ಅವರ ಒಂದೊಂದು ವಿಷಯಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಂದರೆ ಸಾಕು ಅವರ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡುತ್ತಾರೆ. ಅವರ ಹೊಸ ಸಿನಿಮಾ ಅಪಡೇಟ್ಸ್ ಹೊರಗಡೆ ಬಂದರೆ ಸಾಕು ಅವರ ಫ್ಯಾನ್ಸ್ ಗೆ ಒಂದು ಹಬ್ಬದ ರೀತಿ ಆಗಿ ಬಿಡುತ್ತೆ. ಹೆಚ್ಚು ಸಂಭ್ರಮದಿಂದ ಆ ವಿಷಯ ಚರ್ಚೆ ಮಾಡುತ್ತಾರೆ. ಅವರ ಸಿನಿಮಾ ಯಾವಾಗ ಬಿಡುಗಡೆ ಆಗುತ್ತದೆ ಎಂದು ತುಂಬಾ ಕಾತುರದಿಂದ ಕಾಯುತ್ತಾರೆ.
ಹೌದು ಅವರ ಮತ್ತೊಂದು ಸಿನಿಮಾ ಬರುತ್ತಿದೆ ಎಂಬ ಸುದ್ದಿ ಈಗಾಗಲೇ ಎಲ್ಲಾ ಕಡೆ ಹರಿದಾಡುತ್ತಿದ್ದು ತಮಿಳು ಸಿನಿರಂಗದ ಸೂಪರ್‌ಸ್ಟಾರ್ ರಜಿನಿಕಾಂತ್ ಅವರ 173ನೇ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ. ಸಿನಿಮಾದ ಈ ಸುದ್ದಿ ಅವರ ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಮೂಡಿಸಿತು. ರಜನಿಕಾಂತ್ ಅವರ ಹೊಸದಾದ ಪ್ರತೀ ಪ್ರಾಜೆಕ್ಟ್‌ಗೂ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವುದು ಹೆಚ್ಚು ವಿಶೇಷ. ಈ ಬಾರಿ ಕೂಡ ಅದೇ ಉತ್ಸಾಹ ಕಂಡುಬರುತ್ತಿದೆ ಎಂದೆನ್ನಬಹುದು.
ರಜನಿಕಾಂತ್ ಅವರ ಈ ಹೊಸ ಸಿನಿಮಾವನ್ನು ಡಾನ್ ಖ್ಯಾತಿಯ ಸಿಬಿ ಚಕ್ರವರ್ತಿ ಅವರು ನಿರ್ದೇಶನ ಮಾಡುತ್ತಿದ್ದು, ಅವರ ನಿರ್ದೇಶನ ಶೈಲಿ, ಯುವಜನತೆಗೆ ಹತ್ತಿರವಾಗಿರುವ ಕಥಾಹಂದರ, ಅವರ ವಿಭಿನ್ನವಾದ ಕಥೆ ಹೆಣೆಯುವಿಕೆ, ಹಾಗೂ ಸಮಾಜಕ್ಕೆ ಕೊಡುವ ಸಂದೇಶ ಒಳಗೊಂಡಿರುವ ಚಿತ್ರಗಳು ಅವರನ್ನು ಹೆಚ್ಚು ಗುರುತಿಸಿವೆ. ಈಗ ಸೂಪರ್ ಸ್ಟಾರ್ ರಜಿನಿಕಾಂತ್ ಅವರಂತಹ ಮಹಾನ್ ನಟರಿಗೆ ನಿರ್ದೇಶನ ಮಾಡುವ ಅವಕಾಶ ಬಂದಿರುವುದು ಅವರ ವೃತ್ತಿ ಜೀವನದ ಅತಿ ದೊಡ್ಡ ಮೈಲಿಗಲ್ಲು ಎಂದು ಹೇಳಬಹುದು.
ಈ ಚಿತ್ರವನ್ನು ತಮಿಳು ಸಿನಿಮಾರಂಗದ ಮತ್ತೊಬ್ಬ ದಿಗ್ಗಜರಾದ ನಟ ಕಮಲ್ ಹಾಸನ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ನಟ, ನಿರ್ದೇಶಕ, ರಾಜಕಾರಣಿ, ಹಾಗೂ ನಿರ್ಮಾಪಕರಾಗಿಯೂ ಕಮಲ್ ಹಾಸನ್ ಕೆಲಸ ಮಾಡಿದ್ದು, ತಮ್ಮದೇ ಆದ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಹೌದು ಅವರ ನಿರ್ಮಾಣದಲ್ಲಿ ಮೂಡಿಬರುವ ಈ ಸಿನಿಮಾ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ. ನಟ ರಜಿನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರೂ ಸಹ ದಕ್ಷಿಣ ಭಾರತ ಸಿನಿಮಾರಂಗದ ಬಾರಿ ದಿಗ್ಗಜರು ಎನ್ನಬಹುದು. ಇವರಿಬ್ಬರ ಸಹಕಾರವೇ ಅಭಿಮಾನಿಗಳಿಗೆ ಡಬಲ್ ಸಂಭ್ರಮ ಆಗಿ ಪರಿಣಮಿಸಲಿದೆ.
ಹೌದು ಈಗ ನಟ ರಜನಿಕಾಂತ್ ಅವರು ಜೈಲರ್ 2 ಶೂಟಿಂಗ್ ನಲ್ಲಿ ತೊಡಗಿದ್ದಾರೆ, ನಂತರ ಈ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ ಎಂದು ವರದಿಗಳ ಮೂಲಕ ತಿಳಿದು ಬಂದಿದೆ. ಮೂಲಗಳ ಪ್ರಕಾರ, ರಜಿನಿಕಾಂತ್ ಅಭಿನಯದ ಜೈಲರ್ 2 ಬಿಡುಗಡೆಯಾದ ಬಳಿಕ ಈ ಹೊಸ ಸಿನಿಮಾದ ಶೂಟಿಂಗ್ ಪ್ರಾರಂಭವಾಗಲಿದೆಯಂತೆ. ಜೈಲರ್ ಸಿನಿಮಾ ಯಶಸ್ಸು ಇನ್ನೂ ಅಭಿಮಾನಿಗಳ ಮನಸ್ಸಿನಲ್ಲಿ ಸಕತ್ ತಾಜಾ ಆಗಿರುವುದರಿಂದ, ಅದರ ಮುಂದುವರಿದ ಭಾಗ ಹೇಗಿರಲಿದೆ ಎಂದು ಸಕತ್ ನಿರೀಕ್ಷೆ ಹೆಚ್ಚಾಗಿದೆ. ಇದಾದ ಬಳಿಕ 173ನೇ ಸಿನಿಮಾ ಶೂಟಿಂಗ್ ಆರಂಭವಾಗುವುದರಿಂದ ಅವರ ಅಭಿಮಾನಿಗಳಿಗೆ ನಿರಂತರ ಸಂಭ್ರಮ ಸಿಗೋದಂತೂ ಪಕ್ಕಾ ಎನ್ನಬಹುದು.
ರಜಿನಿಕಾಂತ್ ಅವರ ಪ್ರತೀ ಹೊಸ ಸಿನಿಮಾ ಅವರ ಅಭಿಮಾನಿಗಳಿಗೆ ಹಬ್ಬದಂತೆಯೇ ಆಗಿರುತ್ತದೆ. ಈ ಬಾರಿ ಕಮಲ್ ಹಾಸನ್ ನಿರ್ಮಾಣ, ಸಿಬಿ ಚಕ್ರವರ್ತಿ ನಿರ್ದೇಶನ ಎಂಬ ವಿಶೇಷ ಅಂಶಗಳು ರಜನಿಕಾಂತ್ ಅವರ ಭಾರತದಾದ್ಯಂತ ಇರುವ ಅಭಿಮಾನಿಗಳಲ್ಲಿ ಹೆಚ್ಚುವರಿ ಕುತೂಹಲ ಹುಟ್ಟಿಸಿವೆ ಎನ್ನಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಿದ್ದು, “ರಜಿನಿ 173” ಎಂಬ ಹ್ಯಾಶ್‌ಟ್ಯಾಗ್ ಈಗಾಗಲೇ ಟ್ರೆಂಡ್ ಆಗುತ್ತಿದೆ.
ಸಿನಿಮಾದ ನಿರೀಕ್ಷೆಗಳು ನೋಡುವುದಾದರೆ, ಅವರ ಕಥೆ ಯಾವ ರೀತಿಯದ್ದಾಗಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಸಿಬಿ ಚಕ್ರವರ್ತಿ ಅವರ ನಿರ್ದೇಶನ ಶೈಲಿ ಮತ್ತು ಕಮಲ್ ಹಾಸನ್ ಅವರ ನಿರ್ಮಾಣದ ಗುಣಮಟ್ಟದಿಂದ ಸಿನಿಮಾ ಭಾರೀ ಮಟ್ಟದಲ್ಲಿ ಮೂಡಿಬರಲಿದೆ ಎಂಬ ನಿರೀಕ್ಷೆ ಇದೆ. ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಪಾತ್ರ ಯಾವ ರೀತಿಯದ್ದಾಗಿರಬಹುದು ಎಂಬುದೇ ದೊಡ್ಡ ಪ್ರಶ್ನೆ ಇದೀಗ ಎಲ್ಲರ ಮುಂದೆ ಬಂದಿದೆ.