Feb 16, 2026 Languages : ಕನ್ನಡ | English

‘ಜೋಶ್’ ಬೆಡಗಿ ಪೂರ್ಣಾ – ವೈರಲ್ ಆದ ಕ್ಯೂಟ್ ಬೇಬಿ ಬಂಪ್ ಫೋಟೋಗಳು!!

‘ಜೋಶ್’ ಸಿನಿಮಾ ಖ್ಯಾತಿಯ ನಟಿ ಪೂರ್ಣಾ ಅಲಿಯಾಸ್ ಶಮ್ನಾ ಖಾಸಿಮ್ ತಮ್ಮ ಜೀವನದ ಮತ್ತೊಂದು ಸಂತಸದ ಹಂತಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೇ ಒಬ್ಬ ಮಗನ ತಾಯಿಯಾಗಿರುವ ಪೂರ್ಣಾ, ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದು, ಈ ವಿಷಯವನ್ನು ತಮ್ಮ ಮೆಟರ್ನಿಟಿ ಫೋಟೋಶೂಟ್ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಅವರು ತಮ್ಮ ಪತಿ ಶಾನಿದ್ ಆಸಿಫ್ ಮತ್ತು ಮಗನೊಂದಿಗೆ ತೆಗೆಸಿಕೊಂಡಿರುವ ಕ್ಯೂಟ್ ಬೇಬಿ ಬಂಪ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ – ಪೂರ್ಣಾ ಮೆಟರ್ನಿಟಿ ಫೋಟೋಶೂಟ್
ಸೋಶಿಯಲ್ ಮೀಡಿಯಾದಲ್ಲಿ ವೈರಲ್ – ಪೂರ್ಣಾ ಮೆಟರ್ನಿಟಿ ಫೋಟೋಶೂಟ್

ಕನ್ನಡದಲ್ಲಿ ‘ಜೋಶ್’, ‘ರಾಧನ ಗಂಡ’, ‘100’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದಿರುವ ಪೂರ್ಣಾ, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲೂ ಪ್ರಮುಖ ನಟಿಯಾಗಿ ಗುರುತಿಸಿಕೊಂಡಿದ್ದರು. ಸುಮಾರು ನಾಲ್ಕು ವರ್ಷಗಳ ಹಿಂದಿನವರೆಗೂ ಟಾಲಿವುಡ್‌ನಲ್ಲಿ ಸ್ಟಾರ್ ನಾಯಕಿಯಾಗಿ ಮಿಂಚಿದ್ದ ಅವರು, ಮದುವೆ ಮತ್ತು ಮಕ್ಕಳಾದ ಬಳಿಕ ಸಿನಿಮಾಗಳಿಂದ ಸ್ವಲ್ಪ ವಿರಾಮ ತೆಗೆದುಕೊಂಡಿದ್ದರು. ಆದರೂ, ಸಂಪೂರ್ಣವಾಗಿ ಸಿನಿರಂಗದಿಂದ ದೂರವಾಗದೇ, ಪೋಷಕ ಪಾತ್ರಗಳ ಮೂಲಕ ಮತ್ತೆ ಸಕ್ರಿಯರಾಗಿದ್ದಾರೆ.

ಚಿತ್ರಗಳಲ್ಲಿ ನಟಿಸುವುದರ ಜೊತೆಗೆ, ಪೂರ್ಣಾ ಹಲವು ಟಿವಿ ಸೀರಿಯಲ್‌ಗಳು ಹಾಗೂ ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಅವರು ನಟ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ 2: ತಾಂಡವಂ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಮತ್ತೆ ಗಮನ ಸೆಳೆದಿದ್ದಾರೆ. ಇದರಿಂದಾಗಿ ಅವರ ಸಿನಿ ಕಮ್‌ಬ್ಯಾಕ್ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ಪೂರ್ಣಾ ಅವರು ಸುಮಾರು ಮೂರು ವರ್ಷಗಳ ಹಿಂದೆ ದುಬೈ ಮೂಲದ ಉದ್ಯಮಿ ಶಾನಿದ್ ಆಸಿಫ್ ಅವರನ್ನು ಖಾಸಗಿ ರೀತಿಯಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಈಗಾಗಲೇ ಹಮ್ದಾನ್ ಆಸಿಫ್ ಅಲಿ ಎಂಬ ಒಬ್ಬ ಮಗನಿದ್ದಾನೆ. ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಪೂರ್ಣಾ, ಇತ್ತೀಚೆಗೆ ನಡೆಸಿದ ಮೆಟರ್ನಿಟಿ ಫೋಟೋಶೂಟ್‌ನಲ್ಲಿ ತಮ್ಮ ಪತಿ ಮತ್ತು ಮಗನೊಂದಿಗೆ ಭಾವುಕ ಹಾಗೂ ಸಂತಸದ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಫೋಟೋಗಳನ್ನು ನೋಡಿ ಅಭಿಮಾನಿಗಳು ಮತ್ತು ಸಿನಿ ಸಹೋದ್ಯೋಗಿಗಳು ಶುಭಾಶಯಗಳ ಸುರಿಮಳೆ ಸುರಿಸುತ್ತಿದ್ದು, ಪೂರ್ಣಾ ಮತ್ತೆ ತಾಯಿಯಾಗುತ್ತಿರುವ ಖುಷಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

Latest News