ಬಿಗ್ ಬಾಸ್ ಕಾವ್ಯಾ ಶೈವಗೆ ಲೈವ್ ಸ್ಟೇಜ್ ಮೇಲೆಯೇ ಭೀಕರ ಅವಮಾನ - ಅಸಲಿಗೆ ಆ ವ್ಯಕ್ತಿ ಮಾಡಿದ್ದೇನು?

ಬಿಗ್‌ಬಾಸ್ ಸೀಸನ್ ಮೂಲಕ ಸಖತ್ ಫೇಮಸ್ ಆಗಿರೋ ನಟಿ ಕಾವ್ಯಾ ಶೈವ ಅವರಿಗೆ ಕಲಬುರಗಿಯ ಲೈವ್ ಕಾರ್ಯಕ್ರಮವೊಂದರಲ್ಲಿ ಭಾರೀ ಅವಮಾನ ನಡೆದಿದೆ.. ವೇದಿಕೆ ಮೇಲೆ ಅವರು ಮಾತನಾಡಲು ಮೈಕ್ ಕೈಗೆತ್ತಿಕೊಳ್ಳುತ್ತಿದ್ದಂತೆ, ವ್ಯಕ್ತಿಯೊಬ್ಬ ಏಕಾಏಕಿ ಬಂದು ಕೈಯಲ್ಲಿದ್ದ ಮೈಕ್ ಅನ್ನೇ ಕಿತ್ತುಕೊಂಡು ಹೋಗಿದ್ದಾನೆ. ಇದರಿಂದ ಇಡೀ ಕಾರ್ಯಕ್ರಮದ ಮಧ್ಯೆ ಕೆಲಕಾಲ ಹೈಡ್ರಾಮಾ ನಡೆದಿದ್ದು, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

ಬಿಗ್‌ಬಾಸ್ ಖ್ಯಾತಿಯ ನಟಿಗೆ ಲೈವ್ ಕಾರ್ಯಕ್ರಮದಲ್ಲಿ ಶಾಕ್!
ಬಿಗ್‌ಬಾಸ್ ಖ್ಯಾತಿಯ ನಟಿಗೆ ಲೈವ್ ಕಾರ್ಯಕ್ರಮದಲ್ಲಿ ಶಾಕ್!

ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟ ಅವರ ಆಪ್ತ ಸ್ನೇಹಿತೆಯಾಗಿರೋ ಕಾವ್ಯಾ ಶೈವ ಅವರಿಗೆ ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೆ ದೊಡ್ಡ ಫ್ಯಾನ್ ಫಾಲೋಯಿಂಗ್ ಸೃಷ್ಟಿಯಾಗಿದೆ. ಇದೇ ಹೈಪ್‌ನಲ್ಲಿ ಅವರನ್ನು ರಾಜ್ಯದ ಬೇರೆ ಬೇರೆ ಕಡೆ ಕಾರ್ಯಕ್ರಮಗಳಿಗೆ ಗೆಸ್ಟ್‌ ಆಗಿ ಕರೆಯಿಸುತ್ತಿದ್ದಾರೆ. ಆದರೆ ನಿನ್ನೆ ಕಲಬುರಗಿಯ ಎಸ್‌.ಎಂ. ಪಂಡಿತ್ ರಂಗಮಂದಿರದಲ್ಲಿ ನಡೆದ ಇವೆಂಟ್‌ನಲ್ಲಿ ಆಗಿದ್ದೇ ಬೇರೆ. ಅಲ್ಲಿ ನಡೆದ ಆ ಕಂಪ್ಲೀಟ್ ಗಲಾಟೆಯ ಮ್ಯಾಟರ್ ಇಲ್ಲಿದೆ ನೋಡಿ!

ಲೈವ್ ಕಾರ್ಯಕ್ರಮದಲ್ಲಿ ಏನಾಯ್ತು? 

ನಿನ್ನೆ ಕಲಬುರಗಿಯ ಪ್ರಸಿದ್ಧ ಎಸ್‌.ಎಂ. ಪಂಡಿತ್ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಇವೆಂಟ್‌ಗೆ ಬಿಗ್‌ಬಾಸ್ ಖ್ಯಾತಿಯ ಕಾವ್ಯಾ ಶೈವ ಅವರನ್ನು ಮುಖ್ಯ ಅತಿಥಿಯಾಗಿ ಇನ್ವೈಟ್ ಮಾಡಲಾಗಿತ್ತು. ಕಾರ್ಯಕ್ರಮದ ನಿರೂಪಕರು ಕಾವ್ಯಾ ಅವರ ಹೆಸರನ್ನು ಅನೌನ್ಸ್ ಮಾಡಿ, ಮಾತನಾಡಲು ವೇದಿಕೆಯ ಮುಂಭಾಗಕ್ಕೆ ಕರೆದರು.

ಕಾವ್ಯಾ ಶೈವ ಅವರು ನಗುತ್ತಾ ಮೈಕ್ ಹಿಡಿದು, ನೆರೆದಿದ್ದ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಲು ಜಸ್ಟ್ ಶುರು ಮಾಡಬೇಕಿತ್ತು. ಅಷ್ಟರಲ್ಲೇ ವೇದಿಕೆ ಮೇಲಿದ್ದ ವ್ಯಕ್ತಿಯೊಬ್ಬ ಏಕಾಏಕಿ ಕಾವ್ಯಾ ಅವರ ಎದುರಿಗೆ ಬಂದು, ಯಾವುದೇ ಮುನ್ಸೂಚನೆ ಇಲ್ಲದೆ ಅವರ ಕೈಯಲ್ಲಿದ್ದ ಮೈಕ್ ಅನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿದ್ದಾನೆ!

ಶಾಕ್ ಆದ ಕಾವ್ಯಾ ಶೈವ: ಸಂಘಟಕರ ನಡುವೆ ಮಾತಿನ ಚಕಮಕಿ!

ಕೊನೆ ಕ್ಷಣದಲ್ಲಿ ಇಂತಹದೊಂದು ಘಟನೆ ನಡೆಯುತ್ತೆ ಅಂತ ಕಾವ್ಯಾ ಖಂಡಿತ ಅಂದುಕೊಂಡಿರಲಿಲ್ಲ. ನೂರಾರು ಜನರ ಎದುರು ಲೈವ್ ಆಗಿ ಮೈಕ್ ಕಿತ್ತುಕೊಂಡಿದ್ದನ್ನು ನೋಡಿ ಕಾವ್ಯಾ ಶೈವ ಒಂದು ಕ್ಷಣ ಕಂಪ್ಲೀಟ್ ಶಾಕ್ ಆದರು. ಆದರೆ ಜವಾಬ್ದಾರಿಯುತ ನಟಿಯಾಗಿ ಅವರು ವೇದಿಕೆ ಮೇಲೆ ಎಲ್ಲೂ ತಮ್ಮ ಕೋಪವನ್ನು ಹೊರಹಾಕದೆ ಸೈಲೆಂಟ್ ಆಗಿ ನಿಂತುಕೊಂಡರು.

ಆದರೆ ಅತಿಥಿಯಾಗಿ ಬಂದ ನಟಿಗೆ ಈ ರೀತಿ ಸಾರ್ವಜನಿಕವಾಗಿ ಅವಮಾನ ಮಾಡಿದ್ದನ್ನು ಅಲ್ಲೇ ಇದ್ದ ಸಂಘಟಕರೊಬ್ಬರು ತೀವ್ರವಾಗಿ ವಿರೋಧಿಸಿದರು. ಮೈಕ್ ಕಿತ್ತುಕೊಂಡ ವ್ಯಕ್ತಿಯನ್ನು ವೇದಿಕೆ ಮೇಲೆಯೇ ತರಾಟೆಗೆ ತಗೊಂಡರು. ಇಬ್ಬರ ನಡುವೆ ವೇದಿಕೆ ಮೇಲೆಯೇ ಜೋರಾಗಿ ಮಾತಿನ ಚಕಮಕಿ ನಡೆದು, ಇಡೀ ರಂಗಮಂದಿರದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಅಲ್ಲಿದ್ದವರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ!

ಈ ಇಡೀ ಹೈಡ್ರಾಮಾದ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ಭರ್ಜರಿ ಸೌಂಡ್ ಮಾಡ್ತಿದೆ. "ಒಬ್ಬ ಮಹಿಳೆಗೆ, ಅದೂ ಅತಿಥಿಯಾಗಿ ಬಂದ ನಟಿಗೆ ವೇದಿಕೆ ಮೇಲೆ ಗೌರವ ಕೊಡಲು ಬರದಿದ್ದರೆ ಇಂತಹ ಇವೆಂಟ್‌ಗಳನ್ನು ಯಾಕೆ ಮಾಡಬೇಕು? ಆ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ತಗೋಬೇಕು" ಅಂತ ಕಾವ್ಯಾ ಶೈವ ಅವರ ಫ್ಯಾನ್ಸ್ ಹಾಗೂ ನೆಟ್ಟಿಗರು ಸಂಘಟಕರ ವಿರುದ್ಧ ಮತ್ತು ಮೈಕ್ ಕಿತ್ತವನ ವಿರುದ್ಧ ಫುಲ್ ಗರಂ ಆಗಿದ್ದಾರೆ.

ಅಸಲಿಗೆ ಆ ವ್ಯಕ್ತಿ ಕಾವ್ಯಾ ಕೈಯಿಂದ ಮೈಕ್ ಕಿತ್ತುಕೊಂಡಿದ್ದು ಯಾಕೆ? ಅವರ ಮಧ್ಯೆ ಏನಾದ್ರೂ ಮುನಿಸಿತ್ತಾ? ಅಥವಾ ಕಾರ್ಯಕ್ರಮದ ಮ್ಯಾನೇಜ್ಮೆಂಟ್ ಎಡವಟ್ಟಾ? ಅನ್ನೋದು ಇನ್ನು ಪಕ್ಕಾ ಗೊತ್ತಾಗಿಲ್ಲ. ಆದ್ರೆ ಈ ಘಟನೆಯಿಂದ ಕಾವ್ಯಾ ಶೈವ ಅವರಿಗಂತೂ ದೊಡ್ಡ ಮುಜುಗರ ಉಂಟಾಗಿದ್ದಂತೂ ಸುಳ್ಳಲ್ಲ! 

Latest News