Apr 23, 2026 Languages : ಕನ್ನಡ | English

ನೈಜ ಹೀರೋ ಅಂದ್ರೆ ನಿರ್ಮಾಪಕ ಕೆವಿಎನ್! 'ಕೆಡಿ' ವೇದಿಕೆಯಲ್ಲಿ ಪ್ರೇಮ್ ಮತ್ತು ಧ್ರುವ ಮೆಚ್ಚುಗೆಯ ಮಾತು!!

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಎಲ್ಲಿ ನೋಡಿದ್ರೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು 'ಜೋಗಿ' ಪ್ರೇಮ್ ಕಾಂಬಿನೇಷನ್‌ನ 'ಕೆಡಿ' ಸಿನಿಮಾದ್ದೇ ಸದ್ದು. ಇತ್ತೀಚೆಗಷ್ಟೇ ಈ ಚಿತ್ರದ ಭರ್ಜರಿ ಟ್ರೇಲರ್ ರಿಲೀಸ್ ಆಗಿದ್ದು, ಫ್ಯಾನ್ಸ್ ಗಳಿಗೆ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. ಅಂದಹಾಗೆ, ಈ ಸಿನಿಮಾ ಇದೇ ಏಪ್ರಿಲ್ 30 ರಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಅಬ್ಬರಿಸಲು ರೆಡಿಯಾಗಿದೆ.

ಪ್ರೇಮ್ & ಧ್ರುವ ಸರ್ಜಾ ಹೇಳಿದ ಮಾತು ವೈರಲ್
ಪ್ರೇಮ್ & ಧ್ರುವ ಸರ್ಜಾ ಹೇಳಿದ ಮಾತು ವೈರಲ್

ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಪ್ರೇಮ್, ಚಿತ್ರದ ನಿರ್ಮಾಪಕ ಕೆ. ವೆಂಕಟ್ ನಾರಾಯಣ್ ಅವರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. "ಸಿನಿಮಾ ಅಂದ್ರೆ ಬರೀ ಬಣ್ಣದ ಲೋಕ ಅಲ್ಲ, ಅದರ ಹಿಂದೆ ಸಾವಿರಾರು ಜನರ ಶ್ರಮ ಇರುತ್ತೆ. ಕಳೆದ ಮೂರು ವರ್ಷಗಳಿಂದ ಸಾವಿರಾರು ಜನಕ್ಕೆ ಅನ್ನ ಹಾಕಿ, ನಮ್ಮನ್ನೆಲ್ಲಾ ಮೇಂಟೇನ್ ಮಾಡಿದ್ದೇ ಕೆವಿಎನ್ (KVN) ಸಂಸ್ಥೆಯ ನಿರ್ಮಾಪಕರು. ಅವರು ನಿಜಕ್ಕೂ ಗುಂಡಿಗೆ ಇರೋ ನಿರ್ಮಾಪಕರು" ಅಂತ ಹೊಗಳಿದ್ದಾರೆ. ನೂರಾರು ಕೋಟಿ ಸುರಿದು ಸಿನಿಮಾ ಮಾಡೋದು ಸುಲಭವಲ್ಲ, ಆದರೆ ಪ್ರೇಕ್ಷಕರಿಗೆ ಒಳ್ಳೆ ಸಿನಿಮಾ ಕೊಡಬೇಕು ಅನ್ನೋ ಹಠ ನಿರ್ಮಾಪಕರಿಗಿದೆ ಅನ್ನೋದು ಪ್ರೇಮ್ ಮಾತು.

ಧ್ರುವ ಸರ್ಜಾ ಏನಂತಾರೆ?

ಇನ್ನು ಚಿತ್ರದ ಹೀರೋ ಧ್ರುವ ಸರ್ಜಾ ಅವರು ಮಾತನಾಡುತ್ತಾ, ಕ್ರೆಡಿಟ್ ಪೂರ್ತಿ ನಿರ್ಮಾಪಕರಿಗೆ ಸಲ್ಲಬೇಕು ಅಂದಿದ್ದಾರೆ. "ಈ ಸಿನಿಮಾಗೆ ನಾನಾಗಲಿ, ಪ್ರೇಮ್ ಸರ್ ಆಗಲಿ ಹೀರೋ ಅಲ್ಲ, ನಮ್ಮ ನಿರ್ಮಾಪಕರೇ ನಿಜವಾದ ಹೀರೋ. ಪ್ರೇಕ್ಷಕರು ಮತ್ತು ಕಥೆಯನ್ನ ನಂಬಿ ಇಷ್ಟೊಂದು ಖರ್ಚು ಮಾಡಿದ್ದಾರೆ" ಎಂದಿದ್ದಾರೆ. ಸಿನಿಮಾ ಬಗ್ಗೆ ಮಾಹಿತಿ ನೀಡಿದ ಧ್ರುವ, ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ. ಆದರೆ ಕಥೆಯ ಡಿಮ್ಯಾಂಡ್ ಇರೋದ್ರಿಂದ ಸ್ವಲ್ಪ ಮಟ್ಟಿಗೆ ವಯಲೆನ್ಸ್ ಕೂಡ ಇರುತ್ತೆ. ಅರ್ಜುನ್ ಜನ್ಯ ಅವರ ಮ್ಯೂಸಿಕ್‌ನಲ್ಲಿ ಹಾಡುಗಳು ಅದ್ಭುತವಾಗಿ ಬಂದಿವೆ ಅಂತ ಖುಷಿ ಹಂಚಿಕೊಂಡಿದ್ದಾರೆ.

ರಮೇಶ್ ಅರವಿಂದ್ ಪಾತ್ರದ ವಿಶೇಷತೆ

ನಟ ರಮೇಶ್ ಅರವಿಂದ್ ಅವರು ಈ ಚಿತ್ರದಲ್ಲಿ 'ಧರ್ಮ' ಅನ್ನೋ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. "ಕೆಡಿ ಅಂದ್ರೆ ಕಾಳಿದಾಸ ಅಂತ ಅರ್ಥ. ಆದರೆ ಈ ಕಾಳಿದಾಸ ರಕ್ತದಲ್ಲೇ ಕಾವ್ಯ ಬರೆಯುತ್ತಾನೆ" ಅಂತ ಸಿನಿಮಾ ಶೈಲಿಯಲ್ಲೇ ಡೈಲಾಗ್ ಹೊಡೆದಿದ್ದಾರೆ. ಚಿತ್ರದಲ್ಲಿ ಪ್ರತಿ ಪಾತ್ರಕ್ಕೂ ತನ್ನದೇ ಆದ ತೂಕ ಇದೆ ಅನ್ನೋದು ಅವರ ಅಭಿಪ್ರಾಯ.

ಸಿನಿಮಾದ ಹೈಲೈಟ್ಸ್ ಏನು?

ಕಥೆ - ಇದು 1970 ರಿಂದ 75 ರ ನಡುವೆ ಬೆಂಗಳೂರಿನ ಭೂಗತ ಲೋಕದ ಕಥೆ.

ತಾರಾಗಣ - ಚಿತ್ರದಲ್ಲಿ ಸ್ಟಾರ್‌ಗಳ ದಂಡೇ ಇದೆ. ಧ್ರುವ ಸರ್ಜಾ ಜೊತೆಗೆ ಕ್ರೇಜಿ ಸ್ಟಾರ್ ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ, ನೋರಾ ಫತೇಹಿ, ರವಿಶಂಕರ್ ಮತ್ತು ನಾಯಕಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ.

ತಾಂತ್ರಿಕ ವರ್ಗ - ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಸಿನಿಮಾಕ್ಕೆ ಶ್ರೀಮಂತಿಕೆ ನೀಡಿದೆ.

ಏಪ್ರಿಲ್ 30 ಕ್ಕೆ ಬರಲಿದೆ ಹವಾ

ಟ್ರೇಲರ್ ನೋಡಿದ ಸೆನ್ಸಾರ್ ಟೀಮ್ ಸೇರಿದಂತೆ ಎಲ್ಲರೂ ಧ್ರುವ ಸರ್ಜಾ ಅವರ ನಟನೆಗೆ ಫಿದಾ ಆಗಿದ್ದಾರೆ. ಏಪ್ರಿಲ್ 30 ರಂದು ಈ ಸಿನಿಮಾ ವಿಶ್ವದಾದ್ಯಂತ ತೆರೆಕಾಣಲಿದ್ದು, ಪ್ರೇಮ್ ಮತ್ತೆ ಮ್ಯಾಜಿಕ್ ಮಾಡ್ತಾರೆ ಅನ್ನೋದು ಫ್ಯಾನ್ಸ್ ನಂಬಿಕೆ. ನೀವು ಕೂಡ ಈ 'ಕೆಡಿ' ಹವಾ ನೋಡಲು ರೆಡಿ ಇದ್ದೀರಾ?

Latest News