ಸಿನಿಮಾ ಅಂದ್ರೆ ಬರೀ ಎಂಟರ್ಟೈನ್ಮೆಂಟ್ ಅಲ್ಲ, ಅದೊಂದು ದೃಶ್ಯ ವೈಭವ ಅಂತ ತೋರಿಸಿಕೊಟ್ಟ ಸಂಸ್ಥೆ ಹೊಂಬಾಳೆ ಫಿಲ್ಮ್ಸ್. ಈಗ ಈ ಸಂಸ್ಥೆ ಮತ್ತೊಂದು ಬಿಗ್ ಅಪ್‌ಡೇಟ್ ಹೊತ್ತು ತಂದಿದೆ. 'ಕೆಜಿಎಫ್' ಮತ್ತು ಕಾಂತಾರ ಮೂಲಕ ಜಗತ್ತೇ ಕರ್ನಾಟಕದ ಕಡೆ ತಿರುಗಿ ನೋಡುವಂತೆ ಮಾಡಿದ ವಿಜಯ್ ಕಿರಗಂದೂರು ಅವರ ಟೀಮ್, ಈಗ ತನ್ನ ಮುಂದಿನ ಮ್ಯಾಜಿಕ್ ತೋರಿಸಲು ರೆಡಿಯಾಗಿದೆ. ನಾಳೆ ಈ ಹೊಸ ಸಿನಿಮಾದ ಶೀರ್ಷಿಕೆ ಅಧಿಕೃತವಾಗಿ ಹೊರಬೀಳಲಿದೆ.
ಕ್ರಿಯೇಟಿವ್ ಟೀಮ್ ರೀ-ಯೂನಿಯನ್
ಈ ಸಿನಿಮಾದ ಸ್ಪೆಷಾಲಿಟಿ ಏನಪ್ಪಾ ಅಂದ್ರೆ, ಈ ಹಿಂದೆ ಮಹಾವತಾರ ನರಸಿಂಹ ಚಿತ್ರದ ಮೂಲಕ ಎಲ್ಲರ ಹುಬ್ಬೇರಿಸಿದ್ದ ಅದೇ ಸೃಜನಶೀಲ ತಂಡ ಈ ಪ್ರಾಜೆಕ್ಟ್ ಗಾಗಿ ಮತ್ತೆ ಒಂದಾಗಿದೆ. ಅಶ್ವಿನ್ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರ, ಸಖತ್ ಡಿಫರೆಂಟ್ ಆದ ಕಥಾಹಂದರ ಹೊಂದಿದೆಯಂತೆ. ಹೊಂಬಾಳೆ ಸಂಸ್ಥೆ ಒಂದು ಕಥೆಯನ್ನು ಆಯ್ಕೆ ಮಾಡಿಕೊಂಡಿದೆ ಅಂದ್ರೆ ಅಲ್ಲಿ ಏನೋ ಒಂದು ಹೊಸತನ ಇದ್ದೇ ಇರುತ್ತೆ ಅನ್ನೋದು ಸಿನಿರಂಗದ ನಂಬಿಕೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೊಂಬಾಳೆ ಸಾಮ್ರಾಜ್ಯ
ಕೇವಲ 14 ವರ್ಷಗಳ ಹಿಂದೆ 'ನಿನ್ನಿಂದಲೇ' ಸಿನಿಮಾದಿಂದ ಆರಂಭವಾದ ಇವರ ಜರ್ನಿ ಇಂದು ಎಲ್ಲರಿಗೂ ಮಾದರಿ. ಬಾಲಿವುಡ್‌ನಿಂದ ಟಾಲಿವುಡ್‌ವರೆಗೆ ಇವರ ಸಿನಿಮಾಗಳದ್ದೇ ಹವಾ. ಈಗ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂನಲ್ಲೂ ತಮ್ಮ ಛಾಪು ಮೂಡಿಸಿರುವ ಹೊಂಬಾಳೆ ಫಿಲ್ಮ್ಸ್, ಈಗ ಘೋಷಣೆ ಮಾಡಲಿರುವ ಹೊಸ ಸಿನಿಮಾ ಕೂಡ ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ಇರಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ.
ಏನಾಗಿರಬಹುದು ಆ ಹೊಸ ಸಿನಿಮಾ?
ಸದ್ಯಕ್ಕಂತೂ ಗಾಂಧಿನಗರದ ಗಲ್ಲಿಯಿಂದ ಹಿಡಿದು ಸೋಷಿಯಲ್ ಮೀಡಿಯಾದವರೆಗೆ ಎಲ್ಲರೂ ಇದೇ ಚರ್ಚೆ ಮಾಡ್ತಿದ್ದಾರೆ.
ಇದು ಪೌರಾಣಿಕ ಹಿನ್ನೆಲೆಯ ಕಥೆಯಾ?
ಅಥವಾ ಮತ್ತೆ ಯಾವುದೋ ಒಂದು ದೃಶ್ಯ ಕಾವ್ಯನಾ?
ಈ ಸಿನಿಮಾದ ಹೀರೊ ಯಾರು?
ಇವೆಲ್ಲಾ ಪ್ರಶ್ನೆಗಳಿಗೆ ನಾಳೆ ಉತ್ತರ ಸಿಗಲಿದೆ. ಹೊಂಬಾಳೆ ಫಿಲ್ಮ್ಸ್‌ನ ಪ್ರತಿ ಸಿನಿಮಾದ ಮೇಕಿಂಗ್ ಕ್ವಾಲಿಟಿ ಯಾವತ್ತೂ ಹೈ-ಲೆವೆಲ್‌ನಲ್ಲಿ ಇರೋದ್ರಿಂದ, ಈ ಹೊಸ ಅನೌನ್ಸ್‌ಮೆಂಟ್ ಬಗ್ಗೆ ಇಡೀ ಭಾರತೀಯ ಚಿತ್ರರಂಗವೇ ಕಣ್ಣಿಟ್ಟಿದೆ.