Apr 23, 2026 Languages : ಕನ್ನಡ | English

ಖ್ಯಾತ ನಟಿ ದಿವ್ಯಾಂಕಾ ನಿಧನ - ಹಣಕಾಸಿನ ಸಂಕಷ್ಟದಲ್ಲಿದ್ದರೇ ಸ್ಟಾರ್ ಸಿಂಗರ್? ಹೊರಬಂತು ಶಾಕಿಂಗ್ ಮಾಹಿತಿ!!

ಹರಿಯಾಣದ ಫೇಮಸ್ ಸಿಂಗರ್ ಮತ್ತು ಆಕ್ಟ್ರೆಸ್ ದಿವ್ಯಾಂಕಾ ಸಿರೋಹಿ ಅವರ ಸಾವು ಇಡೀ ಆರ್ಟಿಸ್ಟ್ ಲೋಕಕ್ಕೆ ದೊಡ್ಡ ಶಾಕ್ ಕೊಟ್ಟಿದೆ. ಬರೀ 29 ವರ್ಷಕ್ಕೆ ಇಷ್ಟು ಟ್ಯಾಲೆಂಟೆಡ್ ಹುಡುಗಿ ಕಣ್ಮುಚ್ಚಿರೋದು ನಿಜಕ್ಕೂ ಬೇಸರದ ಸಂಗತಿ. ಅಷ್ಟಕ್ಕೂ ದಿವ್ಯಾಂಕಾ ಅವರ ಸಾವಿಗೆ ಅಸಲಿ ಕಾರಣವೇನು ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡ್ತಿದೆ.

ಸಾವಿನ 20 ದಿನ ಮುನ್ನ ಗೆಳೆಯರ ಬಳಿ ಹಣ ಕೇಳಿದ್ರೇ ದಿವ್ಯಾಂಕಾ
ಸಾವಿನ 20 ದಿನ ಮುನ್ನ ಗೆಳೆಯರ ಬಳಿ ಹಣ ಕೇಳಿದ್ರೇ ದಿವ್ಯಾಂಕಾ

ಸದ್ಯ ಕೇಳಿಬರ್ತಿರೋ ಮಾಹಿತಿ ಪ್ರಕಾರ, ದಿವ್ಯಾಂಕಾ ಸಾಯೋಕು ಮುಂಚೆ ಸಿಕ್ಕಾಪಟ್ಟೆ ಫೈನಾನ್ಸಿಯಲ್ ಪ್ರಾಬ್ಲಮ್ ಫೇಸ್ ಮಾಡ್ತಿದ್ರಂತೆ. ಅಷ್ಟೇ ಅಲ್ಲದೆ, ಸರಿಯಾಗಿ ಚಾನ್ಸ್ ಸಿಗದೆ ತುಂಬಾನೇ ಮಾನಸಿಕ ಒತ್ತಡ ಅನುಭವಿಸ್ತಿದ್ರು ಅನ್ನೋ ಮಾತುಗಳು ಕೇಳಿಬರ್ತಿವೆ. ಒಂದು ಕಾಲದಲ್ಲಿ ಸಖತ್ ಬ್ಯುಸಿಯಾಗಿದ್ದ ದಿವ್ಯಾಂಕಾಗೆ ಕೊನೆ ದಿನಗಳಲ್ಲಿ ಕೈತುಂಬಾ ಕೆಲಸವಿರಲಿಲ್ಲ.

ವರದಿಗಳ ಪ್ರಕಾರ, ಕಳೆದ ಕೆಲವು ದಿನಗಳಿಂದ ಅವರಿಗೆ ಸಿನಿಮಾಗಳಲ್ಲಾಗಲಿ ಅಥವಾ ಮ್ಯೂಸಿಕ್ ವಿಡಿಯೋಗಳಲ್ಲಾಗಲಿ ಸರಿಯಾದ ಅವಕಾಶಗಳೇ ಸಿಕ್ತಿರಲಿಲ್ಲವಂತೆ. ಇದರಿಂದ ಅವರು ಸಖತ್ ಅಪ್ಸೆಟ್ ಆಗಿದ್ರು. ಕೈಯಲ್ಲಿ ಕೆಲಸವಿಲ್ಲದೆ ಹಣಕಾಸಿನ ಸಮಸ್ಯೆ ಕೂಡ ಹೆಚ್ಚಾಗಿ, ಇದೇ ಟೆನ್ಷನ್ ಅವರನ್ನು ಒಳಗಿನಿಂದಲೇ ಕುಗ್ಗಿಸಿತ್ತು ಎನ್ನಲಾಗುತ್ತಿದೆ.

ವಿಶೇಷ ಅಂದ್ರೆ, ದಿವ್ಯಾಂಕಾ ಸಾಯೋಕೆ ಒಂದು 20 ದಿನ ಮುಂಚೆಯಷ್ಟೇ ತಮ್ಮ ಫ್ರೆಂಡ್ಸ್ ಹತ್ತಿರ ಹಣದ ಸಹಾಯ ಕೇಳಿದ್ರಂತೆ. ಗುರುಗ್ರಾಮದಲ್ಲಿದ್ದ ಅವರು ಕೆಲಸಕ್ಕಾಗಿ ಅಲೆದು ಅಲೆದು ಸುಸ್ತಾಗಿ, ಕೊನೆಗೆ ಗಾಜಿಯಾಬಾದ್‌ನಲ್ಲಿರೋ ಪೋಷಕರ ಮನೆಗೆ ಹೋಗಿದ್ರು. ಅಲ್ಲಿಂದಲೇ ಇಂಡಸ್ಟ್ರಿಯ ಪ್ರಮುಖರನ್ನು ಕಾಂಟ್ಯಾಕ್ಟ್ ಮಾಡಿ ಕೆಲಸಕ್ಕಾಗಿ ಕೇಳಿಕೊಂಡ್ರೂ, ಅವರಿಗೆ ಯಾವುದೇ ಸರಿಯಾದ ರೆಸ್ಪಾನ್ಸ್ ಸಿಕ್ಕಿರಲಿಲ್ಲ.

ದಿವ್ಯಾಂಕಾ ಅವರ ಈ ಪರಿಸ್ಥಿತಿ ಬಗ್ಗೆ ಹರಿಯಾಣದ ಮತ್ತೊಬ್ಬ ಆರ್ಟಿಸ್ಟ್ ಬಿಂದರ್ ದನೋಡಾ ಕೂಡ ಮಾತನಾಡಿದ್ದಾರೆ. "ದಿವ್ಯಾಂಕಾಗೆ ತನ್ನ ಕೆಲಸ ಅಂದ್ರೆ ಪ್ರಾಣ. ಆದ್ರೆ ಇತ್ತೀಚೆಗೆ ಕೆರಿಯರ್ ಮತ್ತು ದುಡ್ಡಿನ ವಿಚಾರವಾಗಿ ಅವರು ತುಂಬಾನೇ ಸ್ಟ್ರೆಸ್‌ನಲ್ಲಿದ್ರು ಅನ್ನೋದು ನಿಜ," ಅಂತ ಹೇಳಿದ್ದಾರೆ.ದಿವ್ಯಾಂಕಾ ಅವರ ಕೊನೆಯ ಪಬ್ಲಿಕ್ ಪ್ರೋಗ್ರಾಂ ಸಿರ್ಸಾದಲ್ಲಿ ನಡೆದ ಲೈವ್ ಶೋ ಆಗಿತ್ತು.

ಸಾವಿನ ಬಗ್ಗೆ ಅನುಮಾನಗಳ ಹುತ್ತ!

ದಿವ್ಯಾಂಕಾ ಅವರ ಸಾವು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಅವರ ಸಹೋದರ ದೀಪಾಂಶು ಹೇಳುವ ಪ್ರಕಾರ, "ರಾತ್ರಿ ದಿಢೀರ್ ಆಗಿ ಹಾರ್ಟ್ ಅಟ್ಯಾಕ್ ಆದ ಕಾರಣ ದಿವ್ಯಾಂಕಾ ಕೆಳಗೆ ಬಿದ್ದಿದ್ದರು. ಈ ವೇಳೆ ತಲೆಗೆ ಏಟಾಗಿ ಅವರು ಮೃತಪಟ್ಟಿದ್ದಾರೆ," ಎನ್ನಲಾಗಿದೆ. ಆದರೆ, ಇಷ್ಟೊಂದು ಚಿಕ್ಕ ವಯಸ್ಸಿಗೆ ಹಾರ್ಟ್ ಅಟ್ಯಾಕ್ ಆಗಿದ್ದು ಹೇಗೆ? ಮತ್ತು ಮನೆಯವರು ಯಾಕೆ ಮರಣೋತ್ತರ ಪರೀಕ್ಷೆ (Post-mortem) ಮಾಡಿಸಲಿಲ್ಲ? ಪೊಲೀಸ್ ದೂರು ಕೂಡ ಯಾಕೆ ನೀಡಲಿಲ್ಲ? ಅನ್ನೋದು ಈಗ ದೊಡ್ಡ ಪ್ರಶ್ನೆಯಾಗಿದೆ.

ಮತ್ತೊಂದು ಕಡೆ ದೀಪಾಂಶು, "ನನ್ನ ತಂಗಿಗೆ ಅಂತಹ ಯಾವುದೇ ಮಾನಸಿಕ ಒತ್ತಡ ಇರಲಿಲ್ಲ, ನಮಗೆ ಯಾರ ಮೇಲೂ ಅನುಮಾನವಿಲ್ಲ," ಎಂದು ಹೇಳಿದ್ದಾರೆ. ಸಾಯುವ ಕೆಲವೇ ದಿನಗಳ ಮೊದಲು ಅವರು 'ಅಂಗದ್' ಎಂಬ ಸಿನಿಮಾದ ಶೂಟಿಂಗ್ ಮುಗಿಸಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಫ್ಯಾನ್ ಫಾಲೋಯಿಂಗ್

ದಿವ್ಯಾಂಕಾ ಸಿರೋಹಿ ಹರಿಯಾಣದ ಸೂಪರ್ ಹಿಟ್ ಹಾಡುಗಳಲ್ಲಿ ಕಾಣಿಸಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲೂ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದರು. ಸ್ಟಾರ್ ಆಗಿ ಮಿಂಚುತ್ತಿದ್ದ ಹುಡುಗಿ, ತೆರೆಯ ಹಿಂದೆ ಇಷ್ಟೊಂದು ನೋವು ಅನುಭವಿಸುತ್ತಿದ್ದರೇ? ಅಥವಾ ಅವರ ಸಾವಿನ ಹಿಂದೆ ಬೇರೆ ಏನಾದರೂ ರಹಸ್ಯ ಅಡಗಿದೆಯೇ? ಅನ್ನೋದು ಸದ್ಯಕ್ಕೆ ನಿಗೂಢವಾಗಿಯೇ ಉಳಿದಿದೆ.

Latest News