ನಟ ಡಾಲಿ ಧನಂಜಯ್ ಅವರು ತಮ್ಮ ಜೀವನದ ಹೊಸ ಅಧ್ಯಾಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. “ನಾನು ತಂದೆಯಾಗುತ್ತಿದ್ದೀನಿ” ಎಂದು ಘೋಷಣೆ ಮಾಡಿದ ಅವರು, ಬಹಳ ಖುಷಿಯಿಂದ ಮಗುವನ್ನು ಎತ್ತಿಕೊಳ್ಳಲು ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ಹೌದು, ಅವರು ಇತ್ತೀಚೆಗೆ ಮಕ್ಕಳ ವಿಡಿಯೋಗಳನ್ನು ಹೆಚ್ಚು ನೋಡುತ್ತಿರುವುದಾಗಿ, ತಂದೆಯಾಗಿ ಬದುಕುವ ಕ್ಷಣಗಳನ್ನು ಮನಸ್ಸಿನಲ್ಲಿ ಕಟ್ಟಿಕೊಂಡಿರುವುದಾಗಿ ಹೇಳಿದ್ದಾರೆ. ಮೇ ತಿಂಗಳಲ್ಲಿ ಮಗುವಿನ ಆಗಮನವಾಗಲಿದೆ ಎಂಬ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ನಟ ಧನಂಜಯ ಅವರು ತಮ್ಮ ಹೆಂಡತಿಗೆ ಸಮಯ ಕೊಡಲು ಆರಂಭಿಸಿರುವುದಾಗಿ, ಇರುವಂತಹ ಶೂಟಿಂಗ್‌ಗಳನ್ನು ಮುಗಿಸಿ, ಬ್ರೇಕ್ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. “ಕುಟುಂಬಕ್ಕೆ ಸಮಯ ಕೊಡುವುದು ಈಗ ನನಗೆ ಮುಖ್ಯ” ಎಂದು ಅವರು ಅಭಿಮಾನಿಗಳೊಂದಿಗೆ ಈ ವಿಷಯವನ್ನು ಹಂಚಿಕೊಂಡರು.
ಅವರು ತಮ್ಮ ಸ್ನೇಹಿತರಿಗೂ ಈ ಸಂತೋಷವನ್ನು ಹಂಚಿಕೊಂಡಿದ್ದು, “ಮದುವೆ ಆಗಿ, ತಂದೆಯಾಗುವ ಖುಷಿಯನ್ನು ಅನುಭವಿಸಿ” ಎಂದು ಸ್ನೇಹಿತರಿಗೆ ಹೇಳುತ್ತಿರುವುದಾಗಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಧನಂಜಯ ಅವರ ಈ ಘೋಷಣೆ ಅಭಿಮಾನಿಗಳಲ್ಲಿ ಸಂತೋಷದ ವಾತಾವರಣವನ್ನು ಮೂಡಿಸಿದೆ. ಹಲವರು ಅಭಿನಂದನೆಗಳನ್ನು ವ್ಯಕ್ತಪಡಿಸುತ್ತಿದ್ದು, “ತಂದೆಯಾಗುತ್ತಿರುವುದು ಜೀವನದ ಅತ್ಯಂತ ಸುಂದರ ಕ್ಷಣ” ಎಂದು ಪ್ರತಿಕ್ರಿಯಿಸುತ್ತಿದ್ದಾರೆ.
ಡಾಲಿ ಧನಂಜಯ ಅವರ ಈ ಘೋಷಣೆ, ಕುಟುಂಬದೊಂದಿಗೆ ಹೊಸ ಜೀವನವನ್ನು ಆರಂಭಿಸುವ ಸಂತೋಷವನ್ನು ಪ್ರತಿಬಿಂಬಿಸುತ್ತದೆ. ಅಭಿಮಾನಿಗಳು ಅವರ ತಂದೆಯಾದ ಖುಷಿಯನ್ನು ಹಂಚಿಕೊಳ್ಳುತ್ತಿದ್ದು, ಮೇ ತಿಂಗಳಲ್ಲಿ ಮಗುವಿನ ಆಗಮನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ನೀವು ಕೂಡ ಶುಭಾಶಯ ತಿಳಿಸಿ.