Apr 25, 2026 Languages : ಕನ್ನಡ | English

ಇಂಟಿಮೇಟ್ ಸೀನ್ ಬಂದಾಗ ಕೆಲವ್ರು ಮೈಮರೆತು ಬಿಡ್ತಾರೆ - ಪ್ರಿಯಾಂಕ ಚೋಪ್ರಾ ಕಿಸ್ಸಿಂಗ್ ವಿಚಾರಕ್ಕೆ ಅಣ್ಣು ಕಪೂರ್ ಗುಡುಗು!!

ಬಾಲಿವುಡ್ ಅಂದ್ಮೇಲೆ ಅಲ್ಲಿ ವಿವಾದಗಳಿಗೆ ಪೂರಕವಾಗಿ ಏನಾದ್ರೂ ಒಂದು ನಡೀತಾನೇ ಇರುತ್ತೆ. ಅದರಲ್ಲೂ ಹಿರಿಯ ನಟ ಅಣ್ಣು ಕಪೂರ್ ಮತ್ತು ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ ನಡುವಿನ ಆ ಹಳೆಯ 'ಕಿಸ್ಸಿಂಗ್ ಸೀನ್' ಗಲಾಟೆ ಯಾರಿಗೆ ತಾನೆ ಗೊತ್ತಿಲ್ಲ? ಸರಿ ಸುಮಾರು 13-14 ವರ್ಷಗಳ ಹಿಂದೆ ನಡೆದ ಆ ಕಿರಿಕ್‌ಗೆ ಅಣ್ಣು ಕಪೂರ್ ಈಗ ಹೊಸದೊಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಅಣ್ಣು ಕಪೂರ್-ಪ್ರಿಯಾಂಕ ಚೋಪ್ರಾ ಕಿಸ್ಸಿಂಗ್ ಸೀನ್ ವಿವಾದ; | Photo Credit: https://x.com/Yadav_anu007
ಅಣ್ಣು ಕಪೂರ್-ಪ್ರಿಯಾಂಕ ಚೋಪ್ರಾ ಕಿಸ್ಸಿಂಗ್ ಸೀನ್ ವಿವಾದ; | Photo Credit: https://x.com/Yadav_anu007

ಏನಿದು 'ಸಾತ್ ಖೂನ್ ಮಾಫ್' ಕಿರಿಕ್?

2011ರಲ್ಲಿ ವಿಶಾಲ್ ಭಾರದ್ವಾಜ್ ಅವರ 'ಸಾತ್ ಖೂನ್ ಮಾಫ್' ಅನ್ನೋ ಸಿನಿಮಾ ಬಂದಿತ್ತು. ಅದರಲ್ಲಿ ಪ್ರಿಯಾಂಕ ಚೋಪ್ರಾಗೆ ಏಳು ಜನ ಗಂಡಂದಿರು! ಅದರಲ್ಲಿ ಒಬ್ಬರಾಗಿ ಅಣ್ಣು ಕಪೂರ್ ನಟಿಸಿದ್ರು. ಆ ಸಮಯದಲ್ಲಿ ಸಿನಿಮಾದಲ್ಲಿ ಒಂದು ಕಿಸ್ಸಿಂಗ್ ಸೀನ್ ಇತ್ತು, ಆದ್ರೆ ಅಣ್ಣು ಕಪೂರ್ ಜೊತೆ ಅಷ್ಟು ಆಪ್ತವಾಗಿ ನಟಿಸೋಕೆ ಪ್ರಿಯಾಂಕ ಚೋಪ್ರಾ ಸ್ವಲ್ಪ ಹಿಂದೇಟು ಹಾಕಿದ್ರು ಅನ್ನೋ ಮಾತು ಕೇಳಿಬಂದಿತ್ತು.

ಇದಕ್ಕೆ ಆವತ್ತು ಅಣ್ಣು ಕಪೂರ್ ಕೊಟ್ಟಿದ್ದ ಸ್ಟೇಟ್‌ಮೆಂಟ್ ಬೆಂಕಿಗೆ ತುಪ್ಪ ಸುರಿದಂತಿತ್ತು. "ನಾನು ನೋಡೋಕೆ ಚೆನ್ನಾಗಿಲ್ಲ ಅನ್ನೋ ಕಾರಣಕ್ಕೋ ಅಥವಾ ನಾನು ಹೀರೋ ಅಲ್ಲ ಅನ್ನೋ ಕಾರಣಕ್ಕೋ ಪ್ರಿಯಾಂಕ ಚೋಪ್ರಾ ಕಿಸ್ ಮಾಡೋಕೆ ಒಪ್ಪುತ್ತಿಲ್ಲ. ಅದೇ ನಾನು ಹೀರೋ ಆಗಿದ್ರೆ ಅವರಿಗೆ ಯಾವುದೇ ಪ್ರಾಬ್ಲಂ ಇರ್ತಿರಲಿಲ್ಲ" ಅಂತ ಅಣ್ಣು ಕಪೂರ್ ಗುಡುಗಿದ್ರು. ಇದು ದೊಡ್ಡ ಮಟ್ಟದ ವಿವಾದವಾಗಿತ್ತು.

ಇತ್ತೀಚೆಗೆ ಈ ಬಗ್ಗೆ ಮಾತಾಡಿರೋ ಅಣ್ಣು ಕಪೂರ್, "ಅಂದು ನಾನು ಆ ಮಾತನ್ನ ಸಿಟ್ಟಿನಲ್ಲಿ ಹೇಳಿದ್ದೆ" ಅಂತ ಒಪ್ಪಿಕೊಂಡಿದ್ದಾರೆ. "ಜರ್ನಲಿಸ್ಟ್‌ಗಳು ಪದೇ ಪದೇ ಅದೇ ಪ್ರಶ್ನೆ ಕೇಳಿ ನನ್ನ ತಲೆ ಕೆಡಿಸಿದ್ರು, ಹಾಗಾಗಿ ಸಿಟ್ಟಿನಲ್ಲಿ ಆ ಮಾತು ಬಂತು. ನಿಜ ಹೇಳ್ಬೇಕಂದ್ರೆ ನನಗೇ ಆ ಸೀನ್ ಮಾಡೋಕೆ ಇಷ್ಟ ಇರ್ಲಿಲ್ಲ. ನಾನು ಡೈರೆಕ್ಟರ್ ವಿಶಾಲ್ ಹತ್ತಿರ ಆ ಸೀನ್ ತೆಗೆದುಹಾಕಿ ಅಂತಾನೂ ಹೇಳಿದ್ದೆ, ಆದ್ರೆ ಅವರು ಅದನ್ನ ಸಿನಿಮಾದಲ್ಲಿ ಇಟ್ಟುಕೊಂಡ್ರು" ಅಂತ ಈಗ ಸ್ಪಷ್ಟನೆ ನೀಡಿದ್ದಾರೆ.

ಶೂಟಿಂಗ್ ಸೆಟ್‌ನ ಕಹಿ ಸತ್ಯಗಳ ಬಿಚ್ಚಿಟ್ಟ ನಟ!

ಅಷ್ಟಕ್ಕೇ ನಿಲ್ಲಿಸದ ಅಣ್ಣು ಕಪೂರ್, ಆ ಕಾಲದ ಶೂಟಿಂಗ್ ಹೇಗಿರುತ್ತಿತ್ತು ಅನ್ನೋದನ್ನ ಬಿಚ್ಚಿಟ್ಟಿದ್ದಾರೆ:

ಇಂಟಿಮಸಿ ಕೋಚ್ ಇರಲಿಲ್ಲ: ಇವತ್ತಿನ ಕಾಲದಲ್ಲಿ ಲವ್ ಸೀನ್ ಅಥವಾ ಕಿಸ್ಸಿಂಗ್ ಸೀನ್ ಮಾಡುವಾಗ ಹೇಗಿರಬೇಕು ಅಂತ ಹೇಳಿಕೊಡೋಕೆ ಸ್ಪೆಷಲ್ ಕೋಚ್ ಇರ್ತಾರೆ. ಆದ್ರೆ ಅವತ್ತು ಅದೆಲ್ಲಾ ಇರಲಿಲ್ಲ.

ರಿಹರ್ಸಲ್ ಮಿಸ್‌ಯೂಸ್: ಕೆಲವರು ರಿಹರ್ಸಲ್ ಹೆಸರಲ್ಲಿ ನಟಿಯರನ್ನ ಮುಟ್ಟುವುದು ಅಥವಾ ಕೆಟ್ಟದಾಗಿ ನಡ್ಕೊಳ್ಳೋದನ್ನ ಮಾಡ್ತಿದ್ರು. ಆದ್ರೆ ನಾನು ಮಾತ್ರ ಯಾವತ್ತೂ ಅಂತಹ ಕೆಲಸ ಮಾಡಿಲ್ಲ ಅಂತ ಅಣ್ಣು ಕಪೂರ್ ಹೇಳಿದ್ದಾರೆ.

'ಕಟ್' ಅಂದರೂ ನಿಲ್ಲಿಸದ ನಟರು: ಕೆಲವು ನಟರು ಇಂಟಿಮೇಟ್ ಸೀನ್ ಬಂದಾಗ ಮೈಮರೆತು ಬಿಡ್ತಾರೆ. ಡೈರೆಕ್ಟರ್ 'ಕಟ್' ಅಂದರೂ ಕೆಟ್ಟದಾಗಿ ವರ್ತಿಸ್ತಾರೆ, ಇದರಿಂದ ನಟಿಯರಿಗೆ ಬಹಳ ತೊಂದರೆ ಆಗುತ್ತೆ ಅನ್ನೋ ಕಟು ಸತ್ಯವನ್ನ ಅವರು ತಿಳಿಸಿದ್ದಾರೆ.

"ನನ್ನ ಜೊತೆ ಯಾರೂ ಅನ್‌ಕಂಫರ್ಟಬಲ್ ಆಗಿಲ್ಲ!"

ತನ್ನ ಬಗ್ಗೆ ಹೆಮ್ಮೆಯಿಂದ ಮಾತಾಡಿರೋ ಅಣ್ಣು ಕಪೂರ್, "ನಾನು ಕಳೆದ ನಲವತ್ತು ವರ್ಷಗಳಿಂದ ಈ ಇಂಡಸ್ಟ್ರಿಯಲ್ಲಿದ್ದೀನಿ. ನನ್ನ ಜೊತೆ ನಟಿಸಿದ ಯಾವೊಬ್ಬ ನಟಿಗೂ ಅನ್‌ಕಂಫರ್ಟಬಲ್ ಅಂತ ಅನ್ನಿಸಿಲ್ಲ. ಪ್ರಿಯಾಂಕ ಚೋಪ್ರಾ ಕೂಡ ಶೂಟಿಂಗ್ ಸಮಯದಲ್ಲಿ ಯಾವುದೇ ತೊಂದರೆ ಅನುಭವಿಸಿಲ್ಲ" ಅಂತ ಕ್ಲೀನ್ ಚಿಟ್ ಕೊಟ್ಟಿದ್ದಾರೆ.

ಒಟ್ಟಿನಲ್ಲಿ, ಅಂದು ಸಿಟ್ಟಿನಲ್ಲಿ ಆಡಿದ ಮಾತುಗಳು ಇಂದಿಗೂ ಅವರನ್ನ ಬೆನ್ನಟ್ಟುತ್ತಿವೆ. ಅಣ್ಣು ಕಪೂರ್ ಅವರ ಈ ಸ್ಪಷ್ಟನೆ ನೋಡ್ತಿದ್ರೆ, ಹಳೆಯ ಮ್ಯಾಟರ್‌ಗಳನ್ನ ಮತ್ತೆ ಕೆದಕೋದು ಬಾಲಿವುಡ್‌ಗೆ ಒಂಥರಾ ಹವ್ಯಾಸ ಆದಂತಿದೆ.

Latest News