Apr 9, 2026 Languages : ಕನ್ನಡ | English

ಅಪ್ಪು ಬಗ್ಗೆ ಕೆಟ್ಟದಾಗಿ ಮಾತನಾಡಿದವರಿಗೆ ಅನುಶ್ರೀ ಮಾಡಿದ್ದೇನು? ವಿಡಿಯೋ ನೋಡಿ ದಂಗಾಗ್ತೀರಾ!!

ಕನ್ನಡ ಕಿರುತೆರೆಯ ಜನಪ್ರಿಯ ಆ್ಯಂಕರ್ ಅನುಶ್ರೀ ಅಂದಾಕ್ಷಣ ನೆನಪಾಗುವುದು ಅವರ ಎನರ್ಜಿ ಮತ್ತು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮೇಲಿರುವ ಅವರ ಅಪಾರ ಪ್ರೀತಿ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಇದನ್ನೇ ಗುರಿಯಾಗಿಸಿಕೊಂಡು ಅವರನ್ನು ಟೀಕಿಸುತ್ತಿರುತ್ತಾರೆ. "ಅನುಶ್ರೀ ಪುನೀತ್ ಹೆಸರಲ್ಲಿ ಸಿಂಪಥಿ ಗಿಟ್ಟಿಸಿಕೊಳ್ಳುತ್ತಿದ್ದಾರೆ, ಹಣ ಮಾಡುತ್ತಿದ್ದಾರೆ" ಎಂಬ ಟ್ರೋಲ್‌ಗಳಿಗೆ ಈಗ ಸ್ವತಃ ಅನುಶ್ರೀ ಅವರೇ 'ಗಿಲ್ಲಿ' ಸ್ಟೈಲ್‌ನಲ್ಲಿ ಉತ್ತರ ನೀಡಿದ್ದಾರೆ.

ಕೊನೆಗೂ ಮೌನ ಮುರಿದ ಅನುಶ್ರೀ | Photo Credit: rjmayuraa_raghavendra
ಕೊನೆಗೂ ಮೌನ ಮುರಿದ ಅನುಶ್ರೀ | Photo Credit: rjmayuraa_raghavendra

ಅನುಶ್ರೀ ತಮ್ಮ ಯೂಟ್ಯೂಬ್ ಚಾನೆಲ್ ಲೋಗೋದಲ್ಲಿ ಪುನೀತ್ ಅವರ ಫೋಟೋ ಹಾಕಿಕೊಂಡಿದ್ದಾರೆ. ಅಪ್ಪು ನಿಧನರಾದಾಗ ಬಿಕ್ಕಿ ಬಿಕ್ಕಿ ಅತ್ತಿದ್ದರು. ಅಷ್ಟೇ ಯಾಕೆ, ತಮ್ಮ ಮನೆಯ ಕಾರ್ಯಕ್ರಮಗಳಲ್ಲಿ, ಮದುವೆಯಲ್ಲೂ ಅಪ್ಪು ಫೋಟೋ ಇಟ್ಟು ಪೂಜಿಸಿದ್ದರು. ಇದನ್ನು ನೋಡಿದ ಕೆಲವರು, "ಇದು ಬರಿ ಡೋಂಗಿ ಆಟ, ಮೊಸಳೆ ಕಣ್ಣೀರು" ಎಂದು ಕಾಮೆಂಟ್ ಮಾಡಿದ್ದರು. ಈ ಬಗ್ಗೆ ಸದಾ ಮೌನವಾಗಿದ್ದ ಅನುಶ್ರೀ, ಇತ್ತೀಚೆಗೆ ಆರ್‌ಜೆ ಮಯೂರ್ ಅವರ ‘ಗೋಲ್ಡನ್ ಕ್ಲಾಸ್ ವಿತ್ ಮಯೂರ’ ಯೂಟ್ಯೂಬ್ ಸಂದರ್ಶನದಲ್ಲಿ ಎಲ್ಲವನ್ನೂ ಬಿಚ್ಚಿಟ್ಟಿದ್ದಾರೆ.

ಅಪ್ಪು ಕಳುಹಿಸಿದ್ದ ಆ ಒಂದು ಮೆಸೇಜ್!

ಸಂದರ್ಶನದಲ್ಲಿ ಮಯೂರ್ ಅವರು, "ಅನುಶ್ರೀ ತುಂಬಾ ಡೌ ಮಾಡುತ್ತಾಳೆ ಎಂದು ಜನ ಅಂತಾರಲ್ಲ, ಅದಕ್ಕೆ ನಿಮ್ಮ ರಿಯಾಕ್ಷನ್ ಏನು?" ಎಂದು ನೇರವಾಗಿಯೇ ಕೇಳಿದರು. ಇದಕ್ಕೆ ಅನುಶ್ರೀ ಅವರು ಯಾವುದೇ ಆವೇಶವಿಲ್ಲದೆ, ಒಂದು ಸ್ಕ್ರೀನ್‌ಶಾಟ್ ತೋರಿಸುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.

ಅದು ಸ್ವತಃ ಪುನೀತ್ ರಾಜ್‌ಕುಮಾರ್ ಅವರು ಅನುಶ್ರೀಗೆ ಕಳುಹಿಸಿದ್ದ ಸಂದೇಶ. ಅದರಲ್ಲಿ ಅಪ್ಪು, "ನೀವು ತುಂಬಾನೇ ಸ್ವೀಟ್. ನಿಮ್ಮಂತವರ ಅಭಿಮಾನಿ ಹೊಂದಲು ನಿಜಕ್ಕೂ ಖುಷಿ ಆಗುತ್ತದೆ. ದೇವರು ಒಳ್ಳೆಯದು ಮಾಡಲಿ," ಎಂದು ಬರೆದಿದ್ದರು. ಈ ಸ್ಕ್ರೀನ್‌ಶಾಟ್ ತೋರಿಸಿದ ಅನುಶ್ರೀ, "ನಾನು ಎಂತಹ ಫ್ಯಾನ್ ಅನ್ನೋದು ಅಪ್ಪು ಅವರಿಗೆ ಗೊತ್ತಿತ್ತು. ಅವರೇ ನನ್ನ ಅಭಿಮಾನವನ್ನು ಮೆಚ್ಚಿಕೊಂಡ ಮೇಲೆ, ಬೇರೆ ಯಾರೋ ಏನೋ ಹೇಳ್ತಾರೆ ಅನ್ನೋದಕ್ಕೆ ನಾನು ಯಾಕೆ ತಲೆ ಕೆಡಿಸಿಕೊಳ್ಳಲಿ?" ಎಂದು ಪ್ರಶ್ನಿಸಿದ್ದಾರೆ.

"ಗಿಲ್ಲಿ" ಸ್ಟೈಲ್‌ನಲ್ಲಿ ಜಸ್ಟ್ ಲೀವ್ ಇಟ್!

ಟ್ರೋಲ್ ಮಾಡುವವರಿಗೆ ಉತ್ತರ ಕೊಟ್ಟ ಅನುಶ್ರೀ, "ನನ್ನ ಪ್ರೀತಿ ಅಪ್ಪು ಅವರಿಗೆ ತಲುಪಿದೆ, ಅದು ಸಾಕು. ಸುಮ್ಮನೆ ಟೀಕೆ ಮಾಡುವವರಿಗೆ ನಾನು ಉತ್ತರ ಕೊಡಲು ಹೋಗಲ್ಲ. ಗಿಲ್ಲಿ ಸಿನಿಮಾದಲ್ಲಿ ಬರುವ ಸ್ಟೈಲ್‌ನಲ್ಲಿ ಹೇಳ್ತೀನಿ... ಜಸ್ಟ್ ಲೀವ್ ಇಟ್!" ಎಂದು ಕೂಲ್ ಆಗಿಯೇ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಒಬ್ಬ ವ್ಯಕ್ತಿಯ ಮೇಲಿರುವ ಅಭಿಮಾನ ನಿಜವಾದದ್ದೋ ಅಥವಾ ಸುಳ್ಳೋ ಎಂದು ನಿರ್ಧರಿಸಲು ಹೊರಗಿನವರಿಗೆ ಹಕ್ಕಿಲ್ಲ. ಅನುಶ್ರೀ ಅವರ ಪಾಲಿಗೆ ಅಪ್ಪು ಕೇವಲ ನಟನಲ್ಲ, ಒಂದು ಭಾವನೆ. ಆ ಭಾವನೆಯನ್ನು ಅಪ್ಪು ಅವರೇ ಗುರುತಿಸಿ ಗೌರವಿಸಿದ ಮೇಲೆ, ಟ್ರೋಲ್ ಮಾಡುವವರ ಮಾತುಗಳಿಗೆ ಕಿಮ್ಮತ್ತಿಲ್ಲ ಎಂಬುದು ಸಾಬೀತಾಗಿದೆ.

ಅನುಶ್ರೀ ಕೊಟ್ಟ ಈ ಖಡಕ್ ಮತ್ತು ಕೂಲ್ ಉತ್ತರ ಈಗ ಅಪ್ಪು ಅಭಿಮಾನಿಗಳ ಮನ ಗೆದ್ದಿದೆ. ಟೀಕೆ ಮಾಡುವವರು ಮಾಡಲಿ, ಆದರೆ ಅಪ್ಪು ಮೇಲಿರುವ ಅವರ ಪ್ರೀತಿ ಮಾತ್ರ ಅಚಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.