ಕೆಲವೊಮ್ಮೆ ನಾವು ಮಾಡುವ ಸಣ್ಣ ಸಹಾಯ ಮತ್ತೊಬ್ಬರ ಪಾಲಿಗೆ ದೊಡ್ಡ ನೆರವಾಗುತ್ತದೆ. ಇದಕ್ಕೆ ಬೆಂಗಳೂರಿನಲ್ಲಿ ನಡೆದಿರುವ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ . ಸ್ನೇಹಿತನ ಮನೆಯಿಂದ ವಾಕಿಂಗ್ ಮಾಡಿಕೊಂಡು ಮನೆಗೆ ಹಿಂದಿರುಗುತ್ತಿದ್ದ ವ್ಯಕ್ತಿಯೊಬ್ಬರು ದಾರಿಯಲ್ಲಿ ಅಪಘಾತಕ್ಕೀಡಾದ ಫುಡ್ ಡೆಲಿವರಿ ಏಜೆಂಟ್ನನ್ನು ಕಂಡಿದ್ದಾರೆ. ತಕ್ಷಣವೇ ಆತನ ನೆರವಿಗೆ ಧಾವಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟೇ ಅಲ್ಲ, ಆತನ ಬಳಿ ಬಾಕಿ ಉಳಿದಿದ್ದ ಆಹಾರದ ಆರ್ಡರ್ಗಳನ್ನು ತಾವೇ ಗ್ರಾಹಕರ ಮನೆಗಳಿಗೆ ತಲುಪಿಸಿದ್ದಾರೆ!
ವಾಕಿಂಗ್ಗೆಂದು ಹೊರಟ ವ್ಯಕ್ತಿ ಕೆಲವೇ ಗಂಟೆಗಳಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಬದಲಾದ ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಅಪರಿಚಿತ ವ್ಯಕ್ತಿಯ ಕಷ್ಟಕ್ಕೆ ಸ್ಪಂದಿಸಿದ ಅವರ ಮಾನವೀಯ ನಡೆಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ನವೆಂಬರ್ 25ರಂದು ಇಂಡಿಯಾ ಟುಡೇ ಮತ್ತು ಮನಿಕಂಟ್ರೋಲ್ ಸೇರಿದಂತೆ ಹಲವು ಮಾಧ್ಯಮಗಳು ವರದಿ ಮಾಡಿವೆ.
ವಾಕಿಂಗ್ ವೇಳೆ ಎದುರಾದ ಅ*ಪಘಾತಕ್ಕೀಡಾದ ಡೆಲಿವರಿ ಏಜೆಂಟ್
ಈ ಘಟನೆ ನವೆಂಬರ್ 21ರಂದು ಬೆಳಗ್ಗೆ ಸುಮಾರು 11.30ರ ವೇಳೆಗೆ ನಡೆದಿದೆ ಎಂದು ರೆಡ್ಡಿಟ್ನಲ್ಲಿ ಹಂಚಿಕೊಂಡಿರುವ ಪೋಸ್ಟ್ನಲ್ಲಿ ತಿಳಿಸಲಾಗಿದೆ.ಬೆಂಗಳೂರಿನ ವ್ಯಕ್ತಿಯೊಬ್ಬರು ಸ್ನೇಹಿತನ ಮನೆಯಿಂದ ವಾಕಿಂಗ್ ಮಾಡಿಕೊಂಡು ಮನೆಗೆ ಹಿಂದಿರುಗುತ್ತಿದ್ದರು. ಈ ಸಂದರ್ಭದಲ್ಲಿ ಆಹಾರ ವಿತರಣೆ ಮಾಡುತ್ತಿದ್ದ ಡೆಲಿವರಿ ಏಜೆಂಟ್ ಒಬ್ಬರು ಅ*ಪಘಾತಕ್ಕೀಡಾಗಿರುವುದನ್ನು ಗಮನಿಸಿದ್ದಾರೆ.
ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಅನೇಕರು ತಮ್ಮ ಕೆಲಸದ ಮೇಲೆ ಗಮನಹರಿಸಿ ಮುಂದೆ ಸಾಗಬಹುದು. ಆದರೆ ಈ ವ್ಯಕ್ತಿ ಹಾಗೆ ಮಾಡಲಿಲ್ಲ. ಅಪಘಾತಕ್ಕೀಡಾದ ವ್ಯಕ್ತಿಯ ಪರಿಸ್ಥಿತಿಯನ್ನು ಗಮನಿಸಿ ತಕ್ಷಣ ಸಹಾಯಕ್ಕೆ ಮುಂದಾಗಿದ್ದಾರೆ. ಗಾಯಗೊಂಡಿದ್ದ ಡೆಲಿವರಿ ಏಜೆಂಟ್ನನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ನೆರವು ದೊರೆಯುವಂತೆ ಮಾಡಿದ್ದಾರೆ. ಅದೃಷ್ಟವಶಾತ್, ಡೆಲಿವರಿ ಏಜೆಂಟ್ ಅಪಾಯದಿಂದ ಪಾರಾಗಿದ್ದರು ಎಂದು ಪೋಸ್ಟ್ನಲ್ಲಿ ವಿವರಿಸಲಾಗಿದೆ.
ಅ*ಪಘಾತದ ಬಳಿಕವೂ ಬಾಕಿ ಉಳಿದಿದ್ದ ಫುಡ್ ಆರ್ಡರ್ಗಳು!
ಆಸ್ಪತ್ರೆಗೆ ಕರೆದೊಯ್ದ ನಂತರ ಈ ವ್ಯಕ್ತಿಗೆ ಮತ್ತೊಂದು ವಿಚಾರ ತಿಳಿದುಬಂದಿದೆ. ಅ*ಪಘಾತಕ್ಕೀಡಾದ ಡೆಲಿವರಿ ಏಜೆಂಟ್ ಬಳಿ ಇನ್ನೂ ಕೆಲವು ಆಹಾರದ ಆರ್ಡರ್ಗಳು ಗ್ರಾಹಕರಿಗೆ ತಲುಪಿಸಬೇಕಾಗಿತ್ತು. ಅ*ಪಘಾತದಿಂದಾಗಿ ಆತನಿಗೆ ತನ್ನ ಕೆಲಸ ಮುಂದುವರಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿತ್ತು. ಈ ಸಂದರ್ಭದಲ್ಲಿ ಸಹಾಯಕ್ಕೆ ಬಂದ ವ್ಯಕ್ತಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.
ಡೆಲಿವರಿ ಏಜೆಂಟ್ ಬಳಿ ಬಾಕಿ ಉಳಿದಿದ್ದ ಆರ್ಡರ್ಗಳನ್ನು ತಾವೇ ಗ್ರಾಹಕರಿಗೆ ತಲುಪಿಸಿಕೊಡುವುದಾಗಿ ಹೇಳಿದ್ದಾರೆ. ಈ ಕೆಲಸಕ್ಕೆ ಮೊದಲು ಯಾವುದೇ ಅನುಭವವಿಲ್ಲದಿದ್ದರೂ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಹೀಗೆ ವಾಕಿಂಗ್ಗೆಂದು ಹೊರಟಿದ್ದ ವ್ಯಕ್ತಿ ಕೆಲಕಾಲ ಡೆಲಿವರಿ ಏಜೆಂಟ್ ಆಗಿದ್ದಾರೆ. ಆರ್ಡರ್ಗಳನ್ನು ಪಡೆದುಕೊಂಡು, ವಿಳಾಸಗಳನ್ನು ಹುಡುಕಿಕೊಂಡು ಗ್ರಾಹಕರಿಗೆ ಆಹಾರ ತಲುಪಿಸಿದ್ದಾರೆ.
ಡೆಲಿವರಿ ಮುಗಿಸಿ ಆತನನ್ನು ಮನೆಗೂ ಬಿಟ್ಟರು!
ಬಾಕಿ ಉಳಿದಿದ್ದ ಎಲ್ಲಾ ಆಹಾರದ ಆರ್ಡರ್ಗಳನ್ನು ತಲುಪಿಸಿದ ಬಳಿಕವೂ ಸಹಾಯ ಮಾಡಿದ ವ್ಯಕ್ತಿ ತಮ್ಮ ಜವಾಬ್ದಾರಿಯನ್ನು ಅಲ್ಲಿಗೇ ಮುಗಿಸಲಿಲ್ಲ. ಅ*ಪಘಾತಕ್ಕೀಡಾಗಿದ್ದ ಡೆಲಿವರಿ ಏಜೆಂಟ್ನನ್ನು ಅವರ ಮನೆಗೆ ಸುರಕ್ಷಿತವಾಗಿ ಬಿಟ್ಟು ಬಂದಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರೂ ಮಾತನಾಡಿಕೊಂಡು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಆರಂಭದಲ್ಲಿ ಅಪರಿಚಿತರಾಗಿದ್ದ ಇಬ್ಬರು ವ್ಯಕ್ತಿಗಳು ಈ ಘಟನೆಯ ಮೂಲಕ ಪರಿಚಿತರಾಗಿದ್ದಾರೆ. ನಡೆದ ಅನಿರೀಕ್ಷಿತ ಘಟನೆ ಕುರಿತು ಇಬ್ಬರೂ ನಗುತ್ತಾ ಮಾತನಾಡಿಕೊಂಡಿದ್ದಾರೆ ಎಂದು ರೆಡ್ಡಿಟ್ ಪೋಸ್ಟ್ನಲ್ಲಿ ತಿಳಿಸಲಾಗಿದೆ. ವಾಕಿಂಗ್ಗೆಂದು ಹೊರಟ ವ್ಯಕ್ತಿಗೆ ಆಸ್ಪತ್ರೆ ಭೇಟಿ, ಆಹಾರ ವಿತರಣೆ ಮತ್ತು ಅಪರಿಚಿತರೊಬ್ಬರನ್ನು ಮನೆಗೆ ತಲುಪಿಸುವ ಅನುಭವ ಸಿಕ್ಕಿದೆ.
ತಿಂಗಳಿಗೆ ₹50ರಿಂದ ₹60 ಸಾವಿರ ಸಂಪಾದನೆ ಮಾಡ್ತಾರಂತೆ!
ಈ ಘಟನೆಯ ನಡುವೆ ಮತ್ತೊಂದು ಕುತೂಹಲಕಾರಿ ವಿಚಾರವೂ ಬೆಳಕಿಗೆ ಬಂದಿದೆ. ಡೆಲಿವರಿ ಏಜೆಂಟ್ ಜೊತೆ ಮಾತನಾಡುವ ಸಂದರ್ಭದಲ್ಲಿ ಅವರ ಮಾಸಿಕ ಆದಾಯದ ಬಗ್ಗೆಯೂ ಚರ್ಚೆಯಾಗಿದೆ. ಆಗ ಡೆಲಿವರಿ ಏಜೆಂಟ್ ತಾವು ತಿಂಗಳಿಗೆ ಸುಮಾರು ₹50,000ರಿಂದ ₹60,000ವರೆಗೆ ಸಂಪಾದನೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ಆದಾಯದ ವಿಚಾರ ಕೇಳಿ ಸಹಾಯ ಮಾಡಿದ ವ್ಯಕ್ತಿಗೂ ಅಚ್ಚರಿಯಾಗಿದೆ. ಆದರೆ ಇದು ಡೆಲಿವರಿ ಏಜೆಂಟ್ ಸ್ವತಃ ತಿಳಿಸಿರುವ ಮೊತ್ತವಾಗಿದ್ದು, ಅವರ ಆದಾಯದ ಬಗ್ಗೆ ಸ್ವತಂತ್ರವಾಗಿ ಪರಿಶೀಲಿಸಿದ ಮಾಹಿತಿ ಲಭ್ಯವಿಲ್ಲ. ಕೆಲಸದ ಸಮಯ, ಆರ್ಡರ್ಗಳ ಸಂಖ್ಯೆ, ಪ್ರೋತ್ಸಾಹಧನ ಮತ್ತು ಇತರ ವೆಚ್ಚಗಳನ್ನು ಪರಿಗಣಿಸಿದಾಗ ಡೆಲಿವರಿ ಕೆಲಸಗಾರರ ನೈಜ ಆದಾಯ ಬದಲಾಗಬಹುದು.
ರೆಡ್ಡಿಟ್ನಲ್ಲಿ ಹಂಚಿಕೊಂಡ ಪೋಸ್ಟ್ ವೈರಲ್!
ಈ ಸಂಪೂರ್ಣ ಅನುಭವವನ್ನು ಆ ವ್ಯಕ್ತಿ ರೆಡ್ಡಿಟ್ನ r/BangaloreSocial ಸಮುದಾಯದಲ್ಲಿ ಹಂಚಿಕೊಂಡಿದ್ದಾರೆ. 'Went out for a walk and somehow ended up delivering food orders today' ಎಂಬ ಶೀರ್ಷಿಕೆಯೊಂದಿಗೆ ತಮ್ಮ ಅನುಭವವನ್ನು ವಿವರಿಸಿದ್ದಾರೆ. ಪೋಸ್ಟ್ ಪ್ರಕಟವಾದ ಬಳಿಕ ಅನೇಕರು ಅವರ ಮಾನವೀಯ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ.
ಕೆಲವರು ಬೆಂಗಳೂರಿನ ಜನರ ಸಹಾಯ ಮನೋಭಾವವನ್ನು ಶ್ಲಾಘಿಸಿದರೆ, ಇನ್ನೂ ಕೆಲವರು ಅಪರಿಚಿತರ ಕಷ್ಟಕ್ಕೆ ಸ್ಪಂದಿಸುವ ಇಂತಹ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅ*ಪಘಾತಕ್ಕೀಡಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದರಿಂದ ಹಿಡಿದು ಆತನ ಬಾಕಿ ಕೆಲಸ ಮುಗಿಸಿ ಮನೆಗೆ ತಲುಪಿಸುವವರೆಗೆ ತೋರಿದ ಕಾಳಜಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಣ್ಣ ಸಹಾಯವೂ ಮತ್ತೊಬ್ಬರ ಬದುಕಿನಲ್ಲಿ ದೊಡ್ಡದು!
ಇಂದಿನ ವೇಗದ ಜೀವನದಲ್ಲಿ ಪ್ರತಿಯೊಬ್ಬರೂ ತಮ್ಮ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಅದರಲ್ಲೂ ಅಪರಿಚಿತ ವ್ಯಕ್ತಿಯ ಸಂಕಷ್ಟಕ್ಕೆ ಸ್ಪಂದಿಸುವುದು ಎಲ್ಲ ಸಂದರ್ಭಗಳಲ್ಲೂ ಸಾಧ್ಯವಾಗುವುದಿಲ್ಲ.
ಆದರೆ ಬೆಂಗಳೂರಿನ ಈ ವ್ಯಕ್ತಿ ತಮಗೆ ಪರಿಚಯವೇ ಇಲ್ಲದ ಡೆಲಿವರಿ ಏಜೆಂಟ್ಗೆ ನೆರವಾಗುವ ಮೂಲಕ ಮಾನವೀಯತೆಯ ಮಹತ್ವವನ್ನು ತೋರಿಸಿದ್ದಾರೆ. ಒಬ್ಬ ವ್ಯಕ್ತಿಯ ಸಂಕಷ್ಟದ ಸಮಯದಲ್ಲಿ ಆತನಿಗೆ ನೆರವಾಗುವುದು ಮಾತ್ರವಲ್ಲದೆ, ಆತನ ಕೆಲಸದ ಜವಾಬ್ದಾರಿಯನ್ನೂ ತಾತ್ಕಾಲಿಕವಾಗಿ ಹೊತ್ತುಕೊಂಡಿರುವುದು ನಿಜಕ್ಕೂ ಮೆಚ್ಚುವಂತಹ ನಡೆ. ವಾಕಿಂಗ್ಗೆಂದು ಹೊರಟ ವ್ಯಕ್ತಿ ದಿಢೀರ್ ಡೆಲಿವರಿ ಬಾಯ್ ಆಗಿ ಬದಲಾದ ಈ ಘಟನೆ ಇದೀಗ ಬೆಂಗಳೂರಿನ ಸಾಮಾಜಿಕ ಜಾಲತಾಣ ಬಳಕೆದಾರರ ಗಮನ ಸೆಳೆದಿದೆ. ಹಣಕ್ಕಿಂತ ಮಾನವೀಯತೆ ದೊಡ್ಡದು ಎಂಬ ಸಂದೇಶವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.
Comments