ಶಾಲಿವಾಹನ ಶಕವರ್ಷ 1949ರ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಷಷ್ಠೀ ತಿಥಿಯ ಶನಿವಾರದ ದಿನವಾದ ಇಂದು, ಕೆಲವರಿಗೆ ಉದ್ಯೋಗದಲ್ಲಿ ಅಪ್ಸೆಟ್ ತಂದರೆ, ಇನ್ನು ಕೆಲವರಿಗೆ ಮಕ್ಕಳ ಆರೋಗ್ಯದ ಚಿಂತೆ ಕಾಡಬಹುದು. ರಾಜಕೀಯ ವಲಯದಲ್ಲಿ ಹೊಸ ಟ್ವಿಸ್ಟ್‌ಗಳು ಸಿಗುವ ಸಾಧ್ಯತೆ ಇದೆ.
ಮೇಷ ರಾಶಿ: ಜವಾಬ್ದಾರಿಗಳ ಒತ್ತಡ
ಇಂದು ಮನೆಯ ಜವಾಬ್ದಾರಿಗಳು ನಿಮ್ಮ ತಲೆ ಮೇಲೆ ಬಿದ್ದು ಸ್ವಲ್ಪ ಟೆನ್ಷನ್ ತರಬಹುದು. ಪ್ರೀತಿಪಾತ್ರರ ಜೊತೆ ಮುಕ್ತವಾಗಿ ಮಾತನಾಡಿದರೆ ಸಂಬಂಧದಲ್ಲಿರುವ ಗೊಂದಲಗಳು ಕ್ಲಿಯರ್ ಆಗುತ್ತವೆ. ದೇವಸ್ಥಾನಕ್ಕೆ ಹೋಗಬೇಕು ಅನ್ನಿಸುವ ದಿನವಿದು. ಆದರೆ, ಊಟದ ವಿಷಯದಲ್ಲಿ ನಿಗಾ ಇರಲಿ; ಹೆವಿ ಫುಡ್ ತಿಂದರೆ ಹೆಲ್ತ್ ಕೆಡಬಹುದು. ಮನೆಗೆ ಬಂದವರನ್ನು ನಗುಮುಖದಿಂದ ಬರಮಾಡಿಕೊಳ್ಳಿ. ಎಲ್ಲವೂ ನಿಮ್ಮಿಷ್ಟದಂತೆಯೇ ನಡೆಯಬೇಕು ಎಂಬ ಹಠ ಬೇಡ, ಸ್ವಲ್ಪ ಫ್ಲೆಕ್ಸಿಬಲ್ ಆಗಿರಿ.
ವೃಷಭ ರಾಶಿ: ಆಫೀಸಿನಲ್ಲಿ ಸೈ ಎನಿಸಿಕೊಳ್ಳುವಿರಿ
ಆಫೀಸಿನಲ್ಲಿ ನೀವು ಮಾಡಿದ ಕೆಲಸಕ್ಕೆ ಬಾಸ್ ಹಾಗೂ ಸಹೋದ್ಯೋಗಿಗಳಿಂದ ಪ್ರಶಂಸೆ ಸಿಗಲಿದೆ. ಮನದಾಳದ ಮಾತುಗಳು ನಿಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುತ್ತವೆ. ಹೊಸದಾಗಿ ಸಿಗುವ ಅವಕಾಶಗಳನ್ನು ಮಿಸ್ ಮಾಡಿಕೊಳ್ಳಬೇಡಿ. ಕನ್ಫ್ಯೂಷನ್‌ಗಳೆಲ್ಲ ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಕೋರ್ಟ್-ಕಚೇರಿ ಕೆಲಸಗಳಲ್ಲಿ ಜಯ ನಿಮ್ಮದಾಗಲಿದೆ. ನಿಮ್ಮ ಟ್ಯಾಲೆಂಟ್‌ಗೆ ತಕ್ಕ ಕೆಲಸ ಸಿಗಲಿದ್ದು, ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಧೈರ್ಯವಾಗಿ ನಿಭಾಯಿಸುತ್ತೀರಿ.
ಮಿಥುನ ರಾಶಿ: ಧೈರ್ಯವೇ ನಿಮ್ಮ ಬಂಡವಾಳ
ಸ್ಟೂಡೆಂಟ್ಸ್ ಓದಿನ ಕಡೆಗೆ ಹೆಚ್ಚಿನ ಗಮನ ಕೊಡಬೇಕಾದ ದಿನವಿದು. ಲವ್ ಲೈಫ್‌ನಲ್ಲಿ ನಂಬಿಕೆ ಕೊಂಚ ಕಮ್ಮಿ ಎನಿಸಬಹುದು. ಕೆಲಸದ ವಿಚಾರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳುವಾಗ ಹಿಂಜರಿಯಬೇಡಿ, ದಿಟ್ಟತನ ತೋರಿಸಿ. ನಿಮ್ಮ ಒಳ್ಳೆ ಗುಣಗಳು ಇತರರಿಗೆ ಇನ್ಸ್‌ಪಿರೇಷನ್ ಆಗಲಿವೆ. ನಿಮ್ಮ ಹೆಲ್ಪ್ ಬೇಕು ಅಂತ ಕೆಲವರು ಬರಬಹುದು, ಸಹಾಯ ಮಾಡಿ. ಕೆಲಸದ ಜಾಗದಲ್ಲಿದ್ದ ಹಳೇ ಪ್ರಾಬ್ಲಮ್ಸ್‌ಗೆ ಕೊನೆಗೂ ಪರ್ಮನೆಂಟ್ ಪರಿಹಾರ ಸಿಗಲಿದೆ.
ಕರ್ಕಾಟಕ ರಾಶಿ: ಖರ್ಚಿನ ಭೀತಿ
ಮಕ್ಕಳ ನಡವಳಿಕೆಯಿಂದ ಮನಸ್ಸಿಗೆ ಸ್ವಲ್ಪ ಬೇಸರ ಅಥವಾ ಕಿರಿಕಿರಿ ಉಂಟಾಗಬಹುದು. ಆದರೆ, ಬರಬೇಕಾಗಿದ್ದ ಹಳೇ ಹಣ ಕೈಸೇರುವುದರಿಂದ ನಿರಾಳರಾಗುತ್ತೀರಿ. ಅನಗತ್ಯ ಖರ್ಚುಗಳು ಹೆಚ್ಚಾಗುತ್ತಿವೆ ಎಂಬ ಭಯ ಕಾಡಬಹುದು. ಗೊಂದಲದ ವಾತಾವರಣದಿಂದ ದೂರವಿರಿ. ಮೂಡ್ ಆಫ್ ಆಗಿದ್ದರೆ ಸಾಹಿತ್ಯ ಓದುವುದು ಅಥವಾ ಮ್ಯೂಸಿಕ್ ಕೇಳುವುದರಿಂದ ರಿಲ್ಯಾಕ್ಸ್ ಆಗಬಹುದು. ಮದುವೆ ಮ್ಯಾಟರ್ ಮಾತಾಡಲು ದೂರದ ಊರಿಗೆ ಜರ್ನಿ ಮಾಡುವ ಚಾನ್ಸ್ ಇದೆ.
ಸಿಂಹ ರಾಶಿ: ಅತಿಯಾದ ನಂಬಿಕೆ ಬೇಡ
ಇಂದು ಸಣ್ಣ ಪುಟ್ಟ ವಿಷಯಗಳಿಗೂ ಬೇಗ ಸಿಟ್ಟು ಬರಬಹುದು, ಕಂಟ್ರೋಲ್ ಮಾಡಿಕೊಳ್ಳಿ. ಬೇರೆಯವರ ಪ್ರಾಬ್ಲಮ್ ಸಾಲ್ವ್ ಮಾಡಲು ಹೋಗಿ ನೀವೇ ಸಿಕ್ಕಿಹಾಕಿಕೊಳ್ಳಬೇಡಿ. ಕಷ್ಟದ ಸಮಯದಲ್ಲಿ ಯಾರು ಜೊತೆಗಿರುತ್ತಾರೆ ಎಂಬುದು ಅರ್ಥವಾಗಲಿದೆ. ಹಳೇ ಫ್ರೆಂಡ್ಸ್ ನೆನಪಾಗಿ ಅವರಿಂದ ಹೆಲ್ಪ್ ಸಿಗಬಹುದು. ಯಾರೋ ನಿಮ್ಮನ್ನು ಅತಿಯಾಗಿ ಹೊಗಳುತ್ತಾರೆಂದು ಫ್ಲಾಟ್ ಆಗಬೇಡಿ, ಮುಜುಗರಕ್ಕೆ ಈಡಾಗಬೇಕಾದೀತು. ಯಾರನ್ನೂ ಕುರುಡಾಗಿ ನಂಬಬೇಡಿ, ಬೆಲೆಬಾಳುವ ವಸ್ತುಗಳನ್ನು ಜೋಪಾನವಾಗಿಡಿ.
ಕನ್ಯಾ ರಾಶಿ: ಆದಾಯದಲ್ಲಿ ಪ್ರಗತಿ
ನಿಮ್ಮ ಲೈಫ್ ಅನ್ನು ನೀವೇ ಕೀಳಾಗಿ ಕಾಣಬೇಡಿ, ಸೆಲ್ಫ್ ಕಾನ್ಫಿಡೆನ್ಸ್ ಮುಖ್ಯ. ಪ್ರಭಾವಿ ವ್ಯಕ್ತಿಗಳ ಜೊತೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರಬಹುದು, ಜಾಗ್ರತೆಯಿರಲಿ. ಫ್ರೆಂಡ್ಸ್ ಕೊಡುವ ಸಜೆಷನ್‌ಗಳು ಹೊಸ ದಾರಿ ತೋರಿಸಬಹುದು. ಬಿಸಿನೆಸ್‌ನಲ್ಲಿ ಒಳ್ಳೆ ಲಾಭದ ಮುನ್ಸೂಚನೆ ಇದೆ. ನಿಮ್ಮ ಇನ್‌ಕಮ್ ಮೊದಲಿಗಿಂತ ಉತ್ತಮವಾಗಲಿದ್ದು, ಅದನ್ನು ಸರಿಯಾಗಿ ಸೇವಿಂಗ್ಸ್ ಮಾಡಿಕೊಳ್ಳಿ. ನಿಮ್ಮ ಆಂತರಿಕ ಶಕ್ತಿಯನ್ನು ನಂಬಿ ಮುನ್ನಡೆಯಿರಿ.
ತುಲಾ ರಾಶಿ: ಫ್ಯಾಮಿಲಿ ಸಪೋರ್ಟ್
ಒತ್ತಡ ಹೆಚ್ಚಾದಾಗ ಸ್ವಲ್ಪ ಹೊತ್ತು ಮೌನವಾಗಿ ಇರಲು ಪ್ರಯತ್ನಿಸಿ, ಮೈಂಡ್ ಫ್ರೆಶ್ ಆಗುತ್ತದೆ. ನೆಗೆಟಿವ್ ಯೋಚನೆಗಳನ್ನು ತಲೆಯಿಂದ ತೆಗೆದುಹಾಕಿ. ಫ್ಯಾಮಿಲಿ ಸಪೋರ್ಟ್ ಇರುವುದರಿಂದ ಅಂದುಕೊಂಡ ಕೆಲಸಗಳನ್ನು ಸುಲಭವಾಗಿ ಮುಗಿಸುತ್ತೀರಿ. ಹೊಸ ಐಡಿಯಾಗಳನ್ನು ಬಳಸಿ ಆಫೀಸ್ ಪ್ರಾಬ್ಲಮ್ಸ್ ಸಾಲ್ವ್ ಮಾಡಲಿದ್ದೀರಿ. ಜರ್ನಿ ಮಾಡುವಾಗ ಯಾವುದೇ ಟೆನ್ಷನ್ ಇರಲ್ಲ. ಕೆಲವರ ಭೇಟಿ ಖುಷಿ ಕೊಡಬಹುದು, ಆದರೆ ಇನ್ವೆಸ್ಟ್‌ಮೆಂಟ್ ಮಾಡುವಾಗ ಯೋಚಿಸಿ ಹೆಜ್ಜೆ ಇಡಿ.
ವೃಶ್ಚಿಕ ರಾಶಿ: ಸ್ವಾವಲಂಬನೆ ಮುಖ್ಯ
ದೂರದ ಪ್ರಯಾಣ ಆರಂಭದಲ್ಲಿ ಚೆನ್ನಾಗಿದ್ದರೂ ಆಮೇಲೆ ಸುಸ್ತು ತರಿಸಬಹುದು. ಯಾರನ್ನೋ ಡೌನ್ ಮಾಡಲು ಹೋಗಿ ನೀವೇ ಇಕ್ಕಟ್ಟಿಗೆ ಸಿಲುಕಬೇಡಿ. ನಿನ್ನೆ ಫೇಲ್ ಆದ ಕೆಲಸವನ್ನು ಇಂದು ಮತ್ತೊಮ್ಮೆ ಟ್ರೈ ಮಾಡಿ, ಸಕ್ಸಸ್ ಸಿಗುವ ಚಾನ್ಸ್ ಇದೆ. ನಿಮ್ಮ ನಿರ್ಧಾರಗಳನ್ನು ಧೈರ್ಯವಾಗಿ ತಗೊಳ್ಳಿ. ಯಾರ ಮೇಲೂ ಡಿಪೆಂಡ್ ಆಗಬೇಡಿ. ಅನಗತ್ಯ ಜಗಳಗಳಿಂದ ನಿಮ್ಮ ಅಮೂಲ್ಯವಾದ ಸಮಯ ವೇಸ್ಟ್ ಆಗಬಹುದು, ಸೈಲೆಂಟ್ ಆಗಿ ಇರುವುದೇ ಬೆಸ್ಟ್.
ಧನು ರಾಶಿ: ಆರೋಗ್ಯದ ಕಡೆ ಗಮನವಿರಲಿ
ದಿನಚರಿಯಲ್ಲಿ ಆಗುವ ಬದಲಾವಣೆಗಳಿಂದ ಹೆಲ್ತ್ ಸ್ವಲ್ಪ ಅಪ್‌ಸೆಟ್ ಆಗಬಹುದು, ಕೇರ್ ತಗೊಳ್ಳಿ. ನಿಜವಾದ ಫ್ರೆಂಡ್ಸ್ ನಿಮ್ಮ ಕಷ್ಟದ ಸಮಯದಲ್ಲಿ ಜೊತೆಗಿರಲಿದ್ದಾರೆ. ಮನೆಯ ಮ್ಯಾಟರ್ಸ್‌ನಲ್ಲಿ ಸ್ವಲ್ಪ ಅಲರ್ಟ್ ಆಗಿರಿ. ನಿಮ್ಮ ಟ್ಯಾಲೆಂಟ್ ತೋರಿಸಲು ಒಳ್ಳೆ ವೇದಿಕೆ ಸಿಗಲಿದೆ. ಲೈಫ್ ಪಾರ್ಟ್ನರ್ ಜೊತೆ ಪ್ರೀತಿಯಿಂದ ಮಾತನಾಡಿದರೆ ನಿಮ್ಮ ಬಾಂಡಿಂಗ್ ಸ್ಟ್ರಾಂಗ್ ಆಗುತ್ತದೆ. ಕಾಂಪಿಟೇಷನ್‌ಗಳಲ್ಲಿ ಗೆಲ್ಲುವ ಹಠ ನಿಮ್ಮಲ್ಲಿರಲಿದೆ.
ಮಕರ ರಾಶಿ: ಉದ್ಯೋಗ ಬದಲಾವಣೆ ಚಿಂತನೆ
ಜನರು ನಿಮ್ಮನ್ನು ಅಬ್ಸರ್ವ್ ಮಾಡುತ್ತಿರುತ್ತಾರೆ, ಹಾಗಾಗಿ ನಿಮ್ಮ ದಾರಿಯಲ್ಲಿ ನೀವು ರೈಟ್ ಆಗಿರಿ. ಸದ್ಯಕ್ಕೆ ಸೈಲೆಂಟ್ ಆಗಿ ಕೆಲಸ ಮುಗಿಸಿಕೊಳ್ಳುವುದು ಜಾಣತನ. ಅಫೀಶಿಯಲ್ ಪಾರ್ಟ್‌ನರ್‌ಶಿಪ್‌ನಲ್ಲಿ ಸಣ್ಣ ವಿಷಯಗಳನ್ನೂ ಲಘುವಾಗಿ ತೆಗೆದುಕೊಳ್ಳಬೇಡಿ. ಸಹೋದ್ಯೋಗಿಗಳ ಕಿರಿಕಿರಿ ಅತಿಯಾಗಿ ಬೇಸರ ತರಿಸಬಹುದು, ಇದರಿಂದಾಗಿ ಕೆಲವರು ಜಾಬ್ ಚೇಂಜ್ ಮಾಡುವ ಆಲೋಚನೆ ಮಾಡಲಿದ್ದೀರಿ. ಬುದ್ಧಿವಂತಿಕೆಯಿಂದ ಸಮಸ್ಯೆ ಎದುರಿಸಿ.
ಕುಂಭ ರಾಶಿ: ಹಳೇ ಫ್ರೆಂಡ್ಸ್ ಭೇಟಿ
ತುಂಬಾ ದಿನಗಳ ನಂತರ ಫ್ಯಾಮಿಲಿಯ ಪ್ರೀತಿಪಾತ್ರರನ್ನು ಮೀಟ್ ಮಾಡುವ ಅವಕಾಶ ಸಿಗಬಹುದು. ಫ್ರೆಂಡ್ಸ್ ಆಡುವ ಮಾತುಗಳ ಹಿಂದಿನ ರಹಸ್ಯ ತಿಳಿಯಲು ಟ್ರೈ ಮಾಡಲಿದ್ದೀರಿ. ಮನೆಯ ಜವಾಬ್ದಾರಿಗಳನ್ನು ಧೈರ್ಯವಾಗಿ ನಿಭಾಯಿಸಿ. ಆತ್ಮೀಯ ಸ್ನೇಹಿತರ ಜೊತೆ ಟೈಮ್ ಸ್ಪೆಂಡ್ ಮಾಡುವುದರಿಂದ ಮೈಂಡ್ ರಿಲ್ಯಾಕ್ಸ್ ಆಗಿ ಖುಷಿ ಸಿಗುತ್ತದೆ. ಬಿಸಿನೆಸ್ ಮಾಡುವವರ ಜೊತೆ ಕೈಜೋಡಿಸಿ ಹೊಸ ಪ್ರಾಜೆಕ್ಟ್ ಸ್ಟಾರ್ಟ್ ಮಾಡಲು ಒಳ್ಳೆ ದಿನ.
ಮೀನ ರಾಶಿ: ಹಣಕಾಸು ಚೇತರಿಕೆ
ಬಿಸಿನೆಸ್ ಪಾರ್ಟ್‌ನರ್‌ಶಿಪ್‌ನಲ್ಲಿ ಸಿಲುಕಿಕೊಂಡಿದ್ದ ನಿಮ್ಮ ಹಣ ಕೊನೆಗೂ ಕೈಸೇರಲಿದೆ. ಸದ್ಯಕ್ಕೆ ಯಾವುದೇ ಹೊಸ ಪ್ರಸ್ತಾಪಗಳನ್ನು ಪಾರ್ಟ್ನರ್ಸ್ ಮುಂದೆ ಇಡಬೇಡಿ. ನಿಮ್ಮ ಮನಸ್ಸಿನ ಶಾಂತಿಯೇ ನಿಮಗೆ ಶ್ರೀರಕ್ಷೆ. ಹೈಯರ್ ಸ್ಟಡೀಸ್ ಮಾಡಬೇಕು ಅಂದುಕೊಂಡವರಿಗೆ ಬೇರೆ ಊರಿಗೆ ಹೋಗುವ ಯೋಗವಿದೆ. ಕಾರಣವಿಲ್ಲದೆ ಅಲೆದಾಡುವುದರಿಂದ ಸಿಟ್ಟು ಬರಬಹುದು. ತಾಳ್ಮೆಯಿಂದ ದಿನದ ಕೆಲಸಗಳನ್ನು ಪ್ಲಾನ್ ಮಾಡಿಕೊಳ್ಳಿ.