Apr 21, 2026 Languages : ಕನ್ನಡ | English

ನಿಮ್ಮ ರಾಶಿಗೆ ಇವತ್ತು ಲಾಭವೋ ಅಥವಾ ನಷ್ಟವೋ? 12 ರಾಶಿಗಳ ಇಂದಿನ ರಹಸ್ಯ ಫಲ ಇಲ್ಲಿದೆ ನೋಡಿ!!

ಇವತ್ತು 2026ರ ಏಪ್ರಿಲ್ 21, ಮಂಗಳವಾರ. ಹಳೆ ಕಾಲದ ಲೆಕ್ಕಾಚಾರದ ಪ್ರಕಾರ ಇದು ಶಾಲಿವಾಹನ ಶಕೆ 1949ರ ವೈಶಾಖ ಮಾಸದ ಸಮಯ. ಇವತ್ತಿನ ದಿನ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ, ಯಾರಿಗೆ ಸ್ವಲ್ಪ ಎಚ್ಚರಿಕೆ ಅಗತ್ಯ ಅನ್ನೋದನ್ನ ಸಿಂಪಲ್ ಆಗಿ ನೋಡೊಣ.

ಇಂದಿನ ರಾತ್ರಿ ಈ 3 ರಾಶಿಯವರ ಮನೆ ಬಾಗಿಲು ತಟ್ಟಲಿದೆ ಭಾರೀ ಅದೃಷ್ಟ | Photo Credit: CANVA
ಇಂದಿನ ರಾತ್ರಿ ಈ 3 ರಾಶಿಯವರ ಮನೆ ಬಾಗಿಲು ತಟ್ಟಲಿದೆ ಭಾರೀ ಅದೃಷ್ಟ | Photo Credit: CANVA

ಮೇಷ ರಾಶಿಯವರಿಗೆ ಇವತ್ತು ಸ್ವಲ್ಪ ಮಿಕ್ಸ್ಡ್ ಅನುಭವ. ಯಾವುದೋ ವಿಷಯಕ್ಕೆ ಸರಿಯಾದ ನಿರ್ಧಾರ ತಗೊಳ್ಳೋಕೆ ಆಗ್ತಿಲ್ಲ ಅಂತ ಮನೆಯಲ್ಲಿ ಹೆಣ್ಣುಮಕ್ಕಳಿಂದ ಬೈಗುಳ ಕೇಳಬೇಕಾದೀತು. ಆದರೆ ತಲೆ ಕೆಡಿಸಿಕೊಳ್ಳಬೇಡಿ, ಕೈ ಸೇರಬೇಕಾದ ದುಡ್ಡು ಇವತ್ತು ಬಂದೇ ಬರುತ್ತೆ. ಮಕ್ಕಳ ವಿಷಯದಲ್ಲಿ ಸ್ವಲ್ಪ ಸಾಲ್ವ್ ಮಾಡೋ ಕೆಲಸ ಇರುತ್ತೆ. ಯಾರನ್ನೇ ಆಗ್ಲಿ ಅತಿಯಾಗಿ ನಂಬೋಕೆ ಹೋಗಬೇಡಿ.

ವೃಷಭ ರಾಶಿಯವರು ಇವತ್ತು "ಬೇರೆಯವರ ವಸ್ತು ಬೇಕು" ಅನ್ನೋ ಆಸೆ ಬಿಟ್ಟುಬಿಡಿ. ಆರೋಗ್ಯದ ಕಡೆ ಸ್ವಲ್ಪ ಗಮನ ಇರಲಿ. ಯಾವುದೋ ಹೊಸ ವಿಷಯ ಕೇಳಿ ಸಖತ್ ಖುಷಿ ಪಡ್ತೀರಾ. ಆದ್ರೆ ಲೆಕ್ಕಕ್ಕೆ ಸಿಗದ ಹಾಗೆ ಸ್ವಲ್ಪ ಹಣ ಕೈಜಾರುವ ಚಾನ್ಸ್ ಇದೆ, ಜೋಪಾನ!

ಮಿಥುನ ರಾಶಿಯವರಿಗೆ ಇವತ್ತು ಒಂಟಿಯಾಗಿ ಎಲ್ಲಾದ್ರೂ ದೂರ ಹೋಗ್ಬೇಕು ಅನ್ಸುತ್ತೆ. ಫ್ರೆಂಡ್ಸ್ ನಡವಳಿಕೆ ಸ್ವಲ್ಪ ವಿಚಿತ್ರ ಅನ್ಸಬಹುದು. ಆದ್ರೆ ಕಲಾವಿದರಿಗೆ, ನಟರಿಗೆ ಇವತ್ತು ಒಳ್ಳೆ ಟೈಮ್. ಹೊಸ ಗಾಡಿ ತಗೋಬೇಕು ಅನ್ಕೊಂಡಿದ್ರೆ ಇವತ್ತು ಒಳ್ಳೆ ದಿನ. ನೀರಿಗೆ ಸಂಬಂಧಪಟ್ಟ ಕೆಲಸದಲ್ಲಿ ಸ್ವಲ್ಪ ಹುಷಾರಾಗಿರಿ.

ಕರ್ಕಾಟಕ ರಾಶಿಯವರಿಗೆ ಆಫೀಸಿನಲ್ಲಿ ಸಖತ್ ಡಿಮ್ಯಾಂಡ್. ನಿಮ್ಮ ಶಿಸ್ತು ನೋಡಿ ಬಾಸ್ ಮೆಚ್ಚಿಕೊಳ್ಳಬಹುದು. ದೊಡ್ಡ ದೊಡ್ಡ ವ್ಯಕ್ತಿಗಳ ಭೇಟಿಯಿಂದ ನಿಮ್ಮ ಫ್ಯೂಚರ್ ಪ್ಲಾನ್ ವರ್ಕ್ ಔಟ್ ಆಗುತ್ತೆ. ಆದ್ರೆ ಮಕ್ಕಳ ಕಾಟದಿಂದ ಸ್ವಲ್ಪ ತಲೆನೋವು ಬರಬಹುದು.

ಸಿಂಹದಿಂದ ವೃಶ್ಚಿಕ: ವ್ಯವಹಾರದಲ್ಲಿ ಲಾಭದ ನಿರೀಕ್ಷೆ
ಸಿಂಹ ರಾಶಿಯವರು ಇವತ್ತು ದೇವಸ್ಥಾನ ಅಥವಾ ಧಾರ್ಮಿಕ ಕೆಲಸದಿಂದ ಸ್ವಲ್ಪ ಲಾಭ ಮಾಡಿಕೊಳ್ಳಬಹುದು. ಕಛೇರಿ ಕೆಲಸ ಮನೆಯಲ್ಲೇ ಮಾಡಬೇಕಾಗಿ ಬರಬಹುದು. ಬೇರೆಯವರ ಮಾತು ಕೇಳಿ ಗೊಂದಲ ಮಾಡಿಕೊಳ್ಳಬೇಡಿ, ನಿಮ್ಮ ಮನಸ್ಸು ಹೇಳಿದ ಹಾಗೆ ಕೇಳಿ.

ಕನ್ಯಾ ರಾಶಿಯವರು ಇವತ್ತು ಅನಗತ್ಯವಾಗಿ ಅಲೆದಾಡೋದು ಬೇಡ. ಯಾರನ್ನೋ ನಂಬಿ ಕೈ ಸುಟ್ಟುಕೊಳ್ಳುವ ಸಾಧ್ಯತೆ ಇದೆ, ಅದಕ್ಕೆ ಹಣದ ವ್ಯವಹಾರ ಮಾಡುವಾಗ ಡಬಲ್ ಚೆಕ್ ಮಾಡಿ. ಸ್ಟೂಡೆಂಟ್ಸ್‌ಗೆ ಇವತ್ತು ಸ್ವಲ್ಪ ಕಷ್ಟ ಪಡಲೇಬೇಕು. ಮಾತು ಸ್ವಲ್ಪ ಕಡಿಮೆ ಆಡಿದ್ರೆ ಒಳ್ಳೆಯದು.

ತುಲಾ ರಾಶಿಯವರಿಗೆ ತಂದೆಯಿಂದ ಆರ್ಥಿಕ ಸಹಾಯ ಸಿಗುತ್ತೆ. ಪ್ರೀತಿ-ಪ್ರೇಮದ ವಿಚಾರದಲ್ಲಿ ಇವತ್ತು ಸ್ವಲ್ಪ ಮೂಡ್ ಚೆನ್ನಾಗಿರುತ್ತೆ. ಆದ್ರೆ ಅತಿಯಾದ ಖರ್ಚು ಮಾಡೋದು ಬೇಡ. ನೀವು ಬೇರೆಯವರಿಗೆ ಮಾಡೋ ಉಪಕಾರ ಈ ಸಲ ನಿಮಗೆ ವಾಪಸ್ ಬರಲ್ಲ ಅನ್ಸುತ್ತೆ, ಪರವಾಗಿಲ್ಲ ಬಿಡಿ.

ವೃಶ್ಚಿಕ ರಾಶಿಯವರಿಗೆ ಒಂದು ಕಿವಿಮಾತು—ನಿಮ್ಮ ಮಾತೇ ನಡೆಯಬೇಕು ಅನ್ನೋ ಹಠ ಬಿಡಿ. ಇವತ್ತು ಪ್ರಯಾಣದಿಂದ ಸ್ವಲ್ಪ ಸುಸ್ತಾಗಬಹುದು. ಫಾರಿನ್ ಬಿಸಿನೆಸ್ ಮಾಡೋರಿಗೆ ಇವತ್ತು ಒಳ್ಳೆ ಲಾಭ ಇದೆ. ಮಕ್ಕಳ ಜೊತೆ ಟೈಮ್ ಸ್ಪೆಂಡ್ ಮಾಡಿದ್ರೆ ಮನಸ್ಸಿಗೆ ನೆಮ್ಮದಿ ಸಿಗುತ್ತೆ.

ಧನುಸ್ಸಿನಿಂದ ಮೀನ: ತಾಳ್ಮೆ ಇರಲಿ
ಧನು ರಾಶಿಯವರಿಗೆ ರಿಲೇಟಿವ್ಸ್ ಕಡೆಯಿಂದ ಸಡನ್ ನ್ಯೂಸ್ ಬರಬಹುದು. ಕೆಲಸದ ಜಾಗದಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ. ಸ್ಟೂಡೆಂಟ್ಸ್‌ ಟೈಮ್ ವೇಸ್ಟ್ ಮಾಡಬೇಡಿ, ಆಮೇಲೆ ಪಶ್ಚಾತ್ತಾಪ ಪಡಬೇಕಾಗುತ್ತೆ. ಮನೆಯವರ ಜೊತೆ ಪ್ರೀತಿಯಿಂದ ಇರಿ.

ಮಕರ ರಾಶಿಯವರಿಗೆ ನೀವು ಕಷ್ಟಪಟ್ಟು ಮಾಡಿರೋ ಕೆಲಸದ ಕ್ರೆಡಿಟ್ ಬೇರೆಯವರ ಪಾಲಾಗಬಹುದು, ಹುಷಾರು! ಪ್ರೀತಿ ವಿಚಾರದಲ್ಲಿ ಸಣ್ಣ ತಪ್ಪು ಆಗೋ ಸಾಧ್ಯತೆ ಇದೆ. ಸರ್ಕಾರಿ ಕೆಲಸಗಳು ನಿಧಾನವಾದ್ರೂ ಕೊನೆಗೆ ಅಂದುಕೊಂಡಂತೆ ಆಗುತ್ತೆ. ಎಲ್ಲರನ್ನೂ ಅನುಮಾನದಿಂದ ನೋಡಬೇಡಿ.

ಕುಂಭ ರಾಶಿಯವರಿಗೆ ಇವತ್ತು ಯಾರಿಗೂ ಅಡ್ವೈಸ್ ಕೊಡೋಕೆ ಹೋಗ್ಬೇಡಿ. ಕೊಟ್ಟರೆ ನೀವೇ ಸಿಕ್ಕಿಹಾಕ್ಕೊಳ್ತೀರಾ. ಶಾಪಿಂಗ್ ಅಂತ ಹೋಗಿ ಪರ್ಸ್ ಖಾಲಿ ಮಾಡ್ಕೋಬೇಡಿ. ಭೂಮಿ ವಿಚಾರದಲ್ಲಿ ಇವತ್ತು ಯಾವುದೇ ಡೀಲ್ ಮಾಡೋದು ಅಷ್ಟು ಸರಿ ಇಲ್ಲ.

ಮೀನ ರಾಶಿಯವರು ಇವತ್ತು ಫ್ರೆಂಡ್ಸ್ ಅಥವಾ ರಿಲೇಟಿವ್ಸ್ ಫಂಕ್ಷನ್‌ಗೆ ಹೋಗೋ ಚಾನ್ಸ್ ಇದೆ. ಓನ್ ಬಿಸಿನೆಸ್ ಇರೋರಿಗೆ ಇವತ್ತು ಸಖತ್ ಲಾಭ. ಆದ್ರೆ ಹೆಲ್ತ್ ಕಡೆ ಸ್ವಲ್ಪ ಗಮನ ಇರಲಿ. ಲೈಫ್ ಪಾರ್ಟ್ನರ್ ಜೊತೆ ಸಣ್ಣ ಪುಟ್ಟ ಕಿರಿಕಿರಿ ಆಗಬಹುದು, ತಾಳ್ಮೆಯಿಂದ ಇರಿ.

Latest News