Jan 24, 2026 Languages : ಕನ್ನಡ | English

ಆಂಜನೇಯ ಭಕ್ತರು ಇಲ್ನೋಡಿ!! ಈ 3 ದಿನಾಂಕದಲ್ಲಿ ಹುಟ್ಟಿದವರಿಗೆ ಹನುಮಂತ ಸದಾ ಹತ್ತಿರವಂತೆ

ಹನುಮಂತನು ಹಿಂದೂ ಧರ್ಮದಲ್ಲಿ ಅತ್ಯಂತ ಪೂಜಿಸಲ್ಪಡುವ ದೇವರಲ್ಲಿ ಒಬ್ಬ. ಕೋಟ್ಯಾಂತರ ಭಕ್ತರನ್ನು ಹೊಂದಿರುವ ಆಂಜನೇಯ ಸ್ವಾಮಿಯು ಎಲ್ಲರ ಮೇಲೂ ತನ್ನ ಕೃಪೆಯನ್ನು ಹರಿಸುತ್ತಾನೆ. ಆದರೆ, ಕೆಲವು ದಿನಾಂಕಗಳಲ್ಲಿ ಜನಿಸಿದ ಭಕ್ತರ ಮೇಲೆ ಹನುಮಂತನ ವಿಶೇಷ ಆಶೀರ್ವಾದವಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಯಾವ ದಿನಾಂಕದಲ್ಲಿ ಜನಿಸಿದವರಿಗೆ ಹನುಮಂತನ ವಿಶೇಷ ಆಶೀರ್ವಾದ ಸಿಗಲಿದೆ ಅಂದ್ರೆ, ತಿಂಗಳ 9ನೇ, 18ನೇ ಮತ್ತು 27ನೇ ದಿನಾಂಕದಲ್ಲಿ ಜನಿಸಿದವರು ಹನುಮಂತನಿಗೆ ಅತ್ಯಂತ ಪ್ರಿಯರು. ಈ ದಿನಾಂಕಗಳಲ್ಲಿ ಜನಿಸಿದವರ ಮೇಲೆ ಹನುಮಂತನು ಹೆಚ್ಚುವರಿ ಕೃಪೆಯನ್ನು ನೀಡುತ್ತಾನೆ. ಅವರ ಜೀವನದಲ್ಲಿ ಧೈರ್ಯ, ಶೌರ್ಯ ಮತ್ತು ಸಹಿಷ್ಣುತೆಯ ಗುಣಗಳು ಹೆಚ್ಚಾಗಿರುತ್ತವೆ.

ಆಂಜನೇಯ
ಆಂಜನೇಯ

ಈ ದಿನಾಂಕಗಳು ಯಾಕೆ ವಿಶೇಷ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 9, 18 ಮತ್ತು 27 ಸಂಖ್ಯೆಗಳು ಮಂಗಳ ಗ್ರಹದ ಸಂಖ್ಯೆಗಳು. ಹನುಮಂತನು ಮಂಗಳನೊಂದಿಗೆ ಸಂಬಂಧ ಹೊಂದಿರುವ ದೇವನಾದ್ದರಿಂದ, ಈ ದಿನಾಂಕಗಳಲ್ಲಿ ಜನಿಸಿದವರ ಮೇಲೆ ಅವನ ಆಶೀರ್ವಾದ ಸದಾ ಇರುತ್ತದೆ. ಅವರು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ಹನುಮಂತನ ಕೃಪಾಕಟಾಕ್ಷ ದೊರೆಯುತ್ತದೆ.

ಹನುಮಂತನ ಆಶೀರ್ವಾದದಿಂದ ದೊರೆಯುವ ಗುಣಗಳು

  1. ನಿರ್ಭೀತಿಯಿಂದ ಕಾರ್ಯಗಳನ್ನು ಪೂರ್ಣಗೊಳಿಸುವ ಶಕ್ತಿ
  2. ಸಹಿಷ್ಣುತೆ ಮತ್ತು ಧೈರ್ಯ
  3. ಸರಿಯಾದ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ
  4. ಮಂಗಳನ ಆಶೀರ್ವಾದದಿಂದ ಶೌರ್ಯ ಮತ್ತು ಬಲ

9, 18 ಮತ್ತು 27ರಂದು ಜನಿಸಿದವರು ಹೇಗೆ ಪೂಜಿಸಬೇಕು?

  1. ಮಂಗಳವಾರ ಮತ್ತು ಶನಿವಾರದಂದು ಹನುಮಂತನನ್ನು ವಿಶೇಷವಾಗಿ ಪೂಜಿಸಬೇಕು
  2. ಹನುಮಾನ್ ಚಾಲೀಸಾ ಮತ್ತು ಭಜರಂಗ್ ಬಾಣ ಪಠಿಸಬೇಕು
  3. ಹನುಮಂತನಿಗೆ ಮೋತಿಚೂರು ಲಡ್ಡು ಮತ್ತು ಬೆಣ್ಣೆ ನೈವೇದ್ಯವಾಗಿ ಅರ್ಪಿಸಬೇಕು
  4. ನಿಯಮಿತವಾಗಿ ಈ ಮಂತ್ರಗಳನ್ನು ಪಠಿಸುವುದು ಉತ್ತಮ

ಹನುಮಂತನಿಗೆ ಪಠಿಸಬೇಕಾದ ಮಂತ್ರಗಳು

  1. ಹನುಮಾನ್ ಚಾಲೀಸಾ ಮತ್ತು ಭಜರಂಗ್ ಬಾಣವನ್ನು ಭಕ್ತಿಯಿಂದ ಪಠಿಸಬೇಕು.
  2. ಹನುಮಾನ್ ಗಾಯತ್ರಿ ಮಂತ್ರ:

          ಓಂ ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ |

          ತಮ್ಮೋ ಹನುಮತ್ ಪ್ರಚೋದಯಾತ್ ||

          ಓಂ ಹಂ ಹನುಮತೇ ನಮಃ