ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ KSRTC ಬೆಂಗಳೂರಿನಿಂದ ನಾಲ್ಕು ಹೊಸ ಟೂರ್ ಪ್ಯಾಕೇಜ್‌ಗಳನ್ನು ಆರಂಭಿಸಿದೆ. ವಾರಾಂತ್ಯದಲ್ಲಿ ಒಂದು ದಿನದ ಪ್ರವಾಸವಾಗಿ ಮಂಡ್ಯ, ಮೈಸೂರು ಮತ್ತು ಕೋಲಾರ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಈ ವಿಶೇಷ ಯೋಜನೆ ರೂಪಿಸಲಾಗಿದೆ. ದೇವಸ್ಥಾನಗಳು, ಜಲಪಾತಗಳು ಮತ್ತು ಐತಿಹಾಸಿಕ ಸ್ಥಳಗಳನ್ನು ಒಳಗೊಂಡ ಈ ಪ್ಯಾಕೇಜ್‌ಗಳು ಶನಿವಾರ ಹಾಗೂ ಭಾನುವಾರ ಲಭ್ಯವಿರಲಿವೆ.
ಈ ಪ್ರವಾಸಗಳನ್ನು ಅಶ್ವಮೇಧ ಕ್ಲಾಸಿಕ್ ಮತ್ತು ರಾಜಹಂಸ ಬಸ್‌ಗಳಲ್ಲಿ ಆಯೋಜಿಸಲಾಗಿದೆ. ಬೆಳಿಗ್ಗೆ ಬೆಂಗಳೂರಿನಿಂದ ಹೊರಟು, ರಾತ್ರಿ ವೇಳೆಗೆ ಮರಳಿ ತರಲಾಗುತ್ತದೆ.
ಹೊಸ ಟೂರ್ ಪ್ಯಾಕೇಜ್‌ಗಳ ವಿವರ
ಬೆಂಗಳೂರು – ಗಗನಚುಕ್ಕಿ (ರಾಜಹಂಸ)
ಸ್ಥಳಗಳು: ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ
ದೂರ: 340 ಕಿಮೀ
ಪ್ರಯಾಣದರ:
ವಯಸ್ಕರು – ₹750
ಮಕ್ಕಳು – ₹600
ಬೆಂಗಳೂರು – ಗಗನಚುಕ್ಕಿ (ಅಶ್ವಮೇಧ ಕ್ಲಾಸಿಕ್)
ಸ್ಥಳಗಳು: ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ
ದೂರ: 340 ಕಿಮೀ
ವಯಸ್ಕರು – ₹600
ಮಕ್ಕಳು – ₹450
ಬೆಂಗಳೂರು – ಚಿಕ್ಕತಿರುಪತಿ (ಅಶ್ವಮೇಧ ಕ್ಲಾಸಿಕ್)
ಸ್ಥಳಗಳು: ಚಿಕ್ಕತಿರುಪತಿ, ಕೋಟೆಲಿಂಗೇಶ್ವರ, ಬಂಗಾರು ತಿರುಪತಿ, ಆವಣಿ, ಮುಳಬಾಗಿಲು, ಕುರುಡುಮಲೆ, ಕೋಲಾರ
ದೂರ: 270 ಕಿಮೀ
ವಯಸ್ಕರು – ₹600
ಮಕ್ಕಳು – ₹450
ಬೆಂಗಳೂರು – ಮೇಲುಕೋಟೆ (ಅಶ್ವಮೇಧ ಕ್ಲಾಸಿಕ್)
ಸ್ಥಳಗಳು: ಶ್ರೀರಂಗಪಟ್ಟಣ, ಕಲ್ಲಹಳ್ಳಿ, ಮೇಲುಕೋಟೆ
ದೂರ: 350 ಕಿಮೀ
ವಯಸ್ಕರು – ₹670
ಮಕ್ಕಳು – ₹500
ಪ್ರಮುಖ ನಿಯಮಗಳು
- ಪ್ರತಿ ಶನಿವಾರ ಮತ್ತು ಭಾನುವಾರ ಮಾತ್ರ ಲಭ್ಯ.
- ಒಂದು ದಿನದ ಪ್ರವಾಸ – ಬೆಳಿಗ್ಗೆ ಹೊರಟು ರಾತ್ರಿ ವಾಪಸ್.
- ಟಿಕೆಟ್ ದರದಲ್ಲಿ ಪ್ರವೇಶ ಶುಲ್ಕ, ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಸೇರಿಲ್ಲ.
- ರಾಜಹಂಸ ಹಾಗೂ ಅಶ್ವಮೇಧ ಕ್ಲಾಸಿಕ್ ಬಸ್‌ಗಳಲ್ಲಿ ಪ್ರವಾಸ.
ಬುಕ್ಕಿಂಗ್ ಹೇಗೆ?
ಟಿಕೆಟ್ ಬುಕ್ಕಿಂಗ್‌ಗೆ ಅಧಿಕೃತ ಜಾಲತಾಣಗಳು:
www.ksrtc.in
www.ksrtc.karnataka.gov.in
ಹೆಚ್ಚಿನ ಮಾಹಿತಿಗೆ:
📞 080-26252625
📞 7760990100 / 7760990560 / 7760990287
ಬೆಂಗಳೂರು ಕೇಂದ್ರೀಯ ವಿಭಾಗದಿಂದ ಆರಂಭಿಸಿದ ಈ ಪ್ಯಾಕೇಜ್‌ಗಳಿಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ವಾರಾಂತ್ಯವನ್ನು ಕುಟುಂಬದೊಂದಿಗೆ ಅರ್ಥಪೂರ್ಣವಾಗಿ ಕಳೆಯಲು, ಕಡಿಮೆ ದರದಲ್ಲಿ ಸುಗಮ ಪ್ರಯಾಣಕ್ಕಾಗಿ KSRTC ಈ ಅವಕಾಶ ಒದಗಿಸಿದೆ. ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.