Mar 2, 2026 Languages : ಕನ್ನಡ | English

ಬಿಎಂಟಿಸಿ ಬಸ್‌ನಲ್ಲಿ ಬಿಟ್ಟುಹೋಗಿದ್ದ - 10 ಲಕ್ಷ ಬೆಲೆ ಬಾಳುವ ಚಿನ್ನ ಏನಾಯಿತು ನೀವೇ ನೋಡಿ!!

ಬೆಂಗಳೂರುದಲ್ಲಿ ಜನವರಿ 31ರಂದು ನಡೆದಿದೆ ಒಂದು ಚಿನ್ನದ ಬ್ಯಾಗ್ ವಾಪಸ್ ಸಿಕ್ಕುವ ಅದ್ಭುತ ಘಟನೆ. ಕೆ.ಆರ್. ಮಾರುಕಟ್ಟೆ ಬಳಿ ಬಸ್ ಹತ್ತಿದ್ದ ಮಹಿಳೆ, ಕನಕಪುರಕ್ಕೆ ಹೋಗಬೇಕಾಗಿದ್ದರೂ, ಬಸ್ ಟಿಕೆಟ್ ಬಸವನಗುಡಿಗೆ ಪಡೆದಿದ್ದರು. ಮಧ್ಯಾಹ್ನ 12.30 ರ ಸಮಯದಲ್ಲಿ, ಶನಿವಾರದ ಹಿನ್ನೆಲೆಯಲ್ಲಿ ಬಸ್‌ನಲ್ಲಿ ವಿದ್ಯಾರ್ಥಿಗಳ ಹೆಚ್ಚಳದಿಂದ ತುಂಬಾ ಭಾರೀ ಜನರ ತಿರುಗಾಟವಿತ್ತು.

ಪ್ರಾಮಾಣಿಕತೆ ಮೆರೆದ ಬಿಎಂಟಿಸಿ ಕಂಡಕ್ಟರ್ ಮತ್ತು ಡ್ರೈವರ್
ಪ್ರಾಮಾಣಿಕತೆ ಮೆರೆದ ಬಿಎಂಟಿಸಿ ಕಂಡಕ್ಟರ್ ಮತ್ತು ಡ್ರೈವರ್

ಬಸ್ ಬದಲಾವಣೆಗಾಗಿ ಬಸವನಗುಡಿಯಲ್ಲಿ ಇಳಿಯುವ ವೇಳೆ, ಮಹಿಳೆ ತಮ್ಮ ಚಿನ್ನದ ಸರ ಇದ್ದ ಬ್ಯಾಗ್ ಮರೆತು ಬಸ್ಸಿನಲ್ಲೆಬಿಟ್ಟು ಹೋಗಿದ್ದರು, ಬಾಗ್ ಕಳೆದುಕೊಂಡ ಘಟನೆ ಮೇಲೆ ಮಹಿಳೆ ಬಸವನಗುಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಬಿಎಂಟಿಸಿ ಮುಖ್ಯ ಕಚೇರಿ ಮೂಲಕ ಬಸ್ ಸಿಬ್ಬಂದಿ ಕಂಡಕ್ಟರ್ ಮತ್ತು ಡ್ರೈವರ್ ಅವರನ್ನು ಸಂಪರ್ಕಿಸಿದ್ದರು.

ಕಂಡಕ್ಟರ್ ಗಂಗಾ ಪೂಜಾರಿ ಅವರು ಬ್ಯಾಗ್ ಅನ್ನು ಮಹಿಳೆ ಕೂತಿದ್ದ ಸೀಟ್ ಬಳಿಯೇ ಇದ್ದಾಗ ಗಮನಿಸಿದರು. ತಕ್ಷಣ ಬ್ಯಾಗ್ ತೆಗೆದು ಸುರಕ್ಷಿತ ಸ್ಥಳದಲ್ಲಿ ಇಟ್ಟುಕೊಂಡಿದ್ದರು. ನಂತರ ಮಹಿಳೆಯನ್ನ ಸಂಪರ್ಕಿಸಿ ಪದ್ಮನಾಭನಗರ ಡಿಪೋ ಬಳಿ ಬ್ಯಾಗ್ ಹಿಂತಿರುಗಿಸಲಾಗಿದೆ. ನಂತರ ಬ್ಯಾಗ್ ಒಳಗೆ ಸುಮಾರು 10 ಲಕ್ಷ ರೂ. ಮೌಲ್ಯದ ಚಿನ್ನ ಇದ್ದುದು ತಿಳಿದಾಗ, ಕಂಡಕ್ಟರ್ ಗಾಬರಿಗೊಂಡಿದ್ದರು.

ಚಿನ್ನದ ಬ್ಯಾಗ್ ಹಿಂತಿರುಗಿದ ಸಂತೋಷದಲ್ಲಿ ಮಹಿಳೆ ತುಂಬಾ ಖುಷಿಪಟ್ಟಿದ್ದಾರೆ. ಬಿಎಂಟಿಸಿ ಕೂಡ ಈ ಘಟನೆಗೆ ಸಂಬಂಧಿಸಿದ ಕಂಡಕ್ಟರ್ ಗಂಗಾ ಪೂಜಾರಿ ಮತ್ತು ಡ್ರೈವರ್ ಗೋವರ್ಧನ್ ಅವರನ್ನು ತಮ್ಮ ಸಹಕಾರಕ್ಕಾಗಿ ಪ್ರಶಂಸೆ ನೀಡಿದ್ದು, ಈ ಘಟನೆ ಪ್ರಾಮಾಣಿಕತೆ ಮತ್ತು ಜವಾಬ್ದಾರಿಯ ಮಹತ್ವವನ್ನು ತೋರಿಸಿದೆ.

Latest News