2026ರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್‌ಗಾಗಿ ಮಹತ್ವದ ಘೋಷಣೆ ಹೊರಬಿದ್ದಿದೆ. ಮುಂಬೈನ ಪ್ರಸಿದ್ಧ ವಾಂಖೆಡೆ ಸ್ಟೇಡಿಯಂ ಈ ಬಾರಿ ಸೆಮಿಫೈನಲ್ ಪಂದ್ಯವನ್ನು ಆತಿಥ್ಯ ವಹಿಸಲು ಸಜ್ಜಾಗಿದೆ. 2026 ಫೆಬ್ರುವರಿ 6 ರಿಂದ ಟಿ20 ವರ್ಲ್ಡ್ ಕಪ್ ಪಂದ್ಯಾವಳಿಗಳು ಆರಂಭ ಆಗಲಿವೆ. ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹೆಮ್ಮೆಯ ಕ್ಷಣವಾಗಿದ್ದು, ವಿಶ್ವದ ಶ್ರೇಷ್ಠ ತಂಡಗಳು ಇಲ್ಲಿ ಮುಖಾಮುಖಿಯಾಗಲಿವೆ.
ವಾಂಖೆಡೆ ಸ್ಟೇಡಿಯಂ ತನ್ನ ಐತಿಹಾಸಿಕ ಕ್ಷಣಗಳಿಗಾಗಿ ಹೆಚ್ಚು ಬಾರಿ ಪ್ರಸಿದ್ಧವಾಗಿದೆ, ವಿಶೇಷವಾಗಿ 2011ರ ವಿಶ್ವಕಪ್ ಫೈನಲ್ ಪಂದ್ಯದಿಂದ ಎಂದು ಹೇಳಬಹುದು. ಈ ಬಾರಿ ಟಿ20ವಿಶ್ವಕಪ್‌ನ ಸೆಮಿಫೈನಲ್ ಪಂದ್ಯವೂ ಇದೇ ಮೈದಾನದಲ್ಲಿ ನಡೆಯುವುದು ಕ್ರಿಕೆಟ್ ಪ್ರೇಮಿಗಳಿಗೆ ಮತ್ತೊಂದು ಸಂತಸದ ವಿಚಾರ. ಮೈದಾನದ ವಾತಾವರಣ, ಅಭಿಮಾನಿಗಳ ಖುಷಿಯ ಉತ್ಸಾಹ ಮತ್ತು ತಾಂತ್ರಿಕ ಸೌಲಭ್ಯಗಳು ಈ ಆಯ್ಕೆಗೆ ಕಾರಣವಾಗಿವೆ.
2026ರ ಟಿ20 ವಿಶ್ವಕಪ್‌ನಲ್ಲಿ ವಿವಿಧ ದೇಶಗಳ ತಂಡಗಳು ಭಾಗವಹಿಸಲಿದ್ದು, ಸೆಮಿಫೈನಲ್ ಪಂದ್ಯವು ಟೂರ್ನಮೆಂಟ್‌ನ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎನ್ನಬಹದು. ಈ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಫೈನಲ್‌ಗೆ ಪ್ರವೇಶ ಪಡೆಯಲಿದ್ದು, ವಿಶ್ವಕಪ್ ಗೆಲ್ಲುವ ಕನಸಿಗೆ ಇನ್ನೊಂದು ಹೆಜ್ಜೆ ಹತ್ತಿರ ಆಗುತ್ತದೆ.
ಭಾರತೀಯ ಕ್ರಿಕೆಟ್ ಮಂಡಳಿ (BCCI) ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಈ ನಿರ್ಧಾರವನ್ನು ಸ್ವಾಗತಿಸಿದ್ದು, ಟಿಕೆಟ್ ಮಾರಾಟ, ಭದ್ರತೆ ಮತ್ತು ಪ್ರಸಾರ ವ್ಯವಸ್ಥೆಗಳ ಪೂರ್ವ ಆಯೋಜಿತ ಬಗ್ಗೆ ಈಗಾಗಲೇ ತಯಾರಿ ಆರಂಭವಾಗಿದೆ. ಅಭಿಮಾನಿಗಳು ಈಗಾಗಲೇ ಈ ಪಂದ್ಯಕ್ಕಾಗಿ ಹೆಚ್ಚು ನಿರೀಕ್ಷೆಯಲ್ಲಿದ್ದು ಆ ದಿನಕ್ಕೆ ಎದುರು ನೋಡುತ್ತಿದ್ದಾರೆ. ಏಕೆಂದರೆ ಇದು ಕ್ರಿಕೆಟ್‌ನ ಉತ್ಸಾಹ ಮತ್ತು ಸಕತ್ ಡ್ರಾಮಾ ಆ ಹಂತದಲ್ಲಿ ಹೆಚ್ಚು ಪ್ರದರ್ಶನವಾಗಲಿರುವ ಕಾರಣಕ್ಕೆ ಎನ್ನಬಹುದು.