Apr 21, 2026 Languages : ಕನ್ನಡ | English

ಬೆಂಗಳೂರಿನ ಚಿನ್ನಸ್ವಾಮಿಯಲ್ಲಿಯಲ್ಲಿ ಇಂದು RCB Vs LSG - ಟಾಸ್ ಗೆದ್ದವರಿಗೇ ಮ್ಯಾಚ್ ಫಿಕ್ಸ್? ಯಾಕೆ ಗೊತ್ತಾ?

ಇವತ್ತು ಐಪಿಎಲ್ ಕ್ರೇಜ್ ಅಂದ್ರೆ ಸುಮ್ನೆನಾ? ಅದರಲ್ಲೂ ನಮ್ಮ ಬೆಂಗಳೂರು ಮಂದಿಗಂತೂ ಫುಲ್ ಜೋಶ್! ಯಾಕಂದ್ರೆ, ಐಪಿಎಲ್ 2026ರ ಈ 23ನೇ ಮ್ಯಾಚ್‌ನಲ್ಲಿ ಡಿಫೆಂಡಿಂಗ್ ಚಾಂಪಿಯನ್ಸ್ ಆರ್‌ಸಿಬಿ, ಲಕ್ನೋ ಸೂಪರ್ ಜೈಂಟ್ಸ್ ಎದುರು ಅಖಾಡಕ್ಕಿಳಿಯುತ್ತಿದೆ.

ಬೆಂಗಳೂರಲ್ಲಿ ಇಂದು ಸಿಕ್ಸರ್‌ಗಳ ಸುರಿಮಳೆ ಗ್ಯಾರಂಟಿ?? | Photo Credit: https://www.cricketnmore.com
ಬೆಂಗಳೂರಲ್ಲಿ ಇಂದು ಸಿಕ್ಸರ್‌ಗಳ ಸುರಿಮಳೆ ಗ್ಯಾರಂಟಿ?? | Photo Credit: https://www.cricketnmore.com

ನಮ್ಮ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೀತಿದೆ ಅಂದ್ಮೇಲೆ ಸಿಕ್ಸರ್-ಫೋರ್‌ಗಳ ಮಳೆ ಸುರಿಯೋದ್ರಲ್ಲಿ ಡೌಟೇ ಇಲ್ಲ. ಈ ಸಲ ಆರ್‌ಸಿಬಿ ಬೆಂಕಿ ಫಾರ್ಮ್‌ನಲ್ಲಿದೆ! ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಮತ್ತು ಟಿಮ್ ಡೇವಿಡ್ ಅವರಂತಹ ಬಿಗ್ ಹಿಟ್ಟರ್‌ಗಳ ಪವರ್ ನೋಡಿದ್ರೆ, ಟೀಮ್ ಆರಾಮವಾಗಿ 200 ರನ್ ಗಡಿ ದಾಟೋದು ಗ್ಯಾರಂಟಿ.

ಮುಖ್ಯವಾಗಿ ನಮ್ಮ ಕ್ಯಾಪ್ಟನ್ ರಜತ್ ಪಾಟಿದಾರ್ ಅಂತೂ ಈ ಸಲ ಸಖತ್ ಫಾರ್ಮ್‌ನಲ್ಲಿದ್ದಾರೆ. ಬರೀ 4 ಇನ್ನಿಂಗ್ಸ್‌ಗಳಲ್ಲಿ 195 ರನ್ ಚಚ್ಚಿರೋದು ಅಂದ್ರೆ ಸುಮ್ನೆನಾ? ಅದ್ರಲ್ಲೂ 214ರ ಸ್ಟ್ರೈಕ್ ರೇಟ್ ನೋಡ್ತಿದ್ರೆ ಎದುರಾಳಿ ಬೌಲರ್‌ಗಳಿಗೆ ಆವಾಗ್ಲೇ ನಡುಕ ಶುರುವಾಗಿರುತ್ತೆ. ಚಿನ್ನಸ್ವಾಮಿಯ ಪುಟ್ಟ ಬೌಂಡರಿಗಳಿಗೂ, ಪಾಟಿದಾರ್ ಅಬ್ಬರಕ್ಕೂ ಪಕ್ಕಾ ಮ್ಯಾಚ್ ಆಗುತ್ತೆ!

ಇನ್ನೊಂದೆಡೆ, ರಿಷಭ್ ಪಂತ್ ಕ್ಯಾಪ್ಟನ್ಸಿಯ ಲಕ್ನೋ ಸೂಪರ್ ಜೈಂಟ್ಸ್ ಈ ಬಾರಿ ಸ್ವಲ್ಪ ತಡಬಡಾಯಿಸಿದಂತೆ ಕಾಣ್ತಿದೆ. ಕಳೆದ ಮ್ಯಾಚ್‌ನಲ್ಲಿ ಗುಜರಾತ್ ಎದುರು ಸೋತಿರೋ ಎಲ್‌ಎಸ್‌ಜಿ, ಇವತ್ತು ಹೇಗಾದ್ರೂ ಮಾಡಿ ಮತ್ತೆ ಗೆಲುವಿನ ಲಯಕ್ಕೆ ಮರಳೋ ಪ್ಲಾನ್‌ನಲ್ಲಿದೆ.

ತಂಡದಲ್ಲಿ ಏಡನ್ ಮಾರ್ಕ್ರಾಮ್, ನಿಕೋಲಸ್ ಪೂರನ್ ಮತ್ತು ಅಬ್ದುಲ್ ಸಮದ್ ಅವರಂತಹ ಡೇಂಜರಸ್ ಪ್ಲೇಯರ್‌ಗಳಿದ್ದರೂ, ಎಲ್ಲೋ ಒಂದು ಕಡೆ ಫಾರ್ಮ್ ಕನ್ಸಿಸ್ಟೆನ್ಸಿ ಇಲ್ಲದಿರೋದು ತಂಡಕ್ಕೆ ತಲೆನೋವಾಗಿದೆ. ಆದರೆ ಚಿನ್ನಸ್ವಾಮಿ ಮೈದಾನದಲ್ಲಿ ಈ ಹಿಂದೆ ಎಲ್‌ಎಸ್‌ಜಿ ಒಳ್ಳೆ ಪರ್ಫಾರ್ಮೆನ್ಸ್ ಕೊಟ್ಟಿರೋ ಇತಿಹಾಸ ಇದೆ, ಹಾಗಾಗಿ ಪಂತ್ ಪಡೆ ಆರ್‌ಸಿಬಿಗೆ ಸುಲಭವಾಗಿ ಶರಣಾಗಲ್ಲ. ಇನ್ನು ಬೌಲಿಂಗ್ ಬಗ್ಗೆ ಮಾತಾಡೋದಾದ್ರೆ, ಆರ್‌ಸಿಬಿಯ ಕೃನಾಲ್ ಪಾಂಡ್ಯ ಮೇಲೆ ಎಲ್ಲರ ಕಣ್ಣಿದೆ. ರನ್ ಹರಿಯುವ ಈ ಪಿಚ್‌ನಲ್ಲಿ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಕಲೆ ಕೃನಾಲ್‌ಗೆ ಚೆನ್ನಾಗಿ ಗೊತ್ತಿದೆ. ಈಗಾಗಲೇ ಈ ಸೀಸನ್‌ನಲ್ಲಿ 5 ವಿಕೆಟ್ ಕಬಳಿಸಿರುವ ಅವರು ಮಿಡಲ್ ಓವರ್‌ಗಳಲ್ಲಿ ಗೇಮ್ ಚೇಂಜ್ ಮಾಡಬಲ್ಲರು.

ಬೆಂಗಳೂರಿನ ಪಿಚ್ ಅಂದ್ರೆ ಅದು ಬ್ಯಾಟರ್‌ಗಳ ಪ್ಯಾರಡೈಸ್ ಅಂದಹಾಗೆ! ಈ ಸೀಸನ್‌ನಲ್ಲಿ ಇಲ್ಲಿ ನಡೆದ ಎರಡು ಮ್ಯಾಚ್‌ಗಳಲ್ಲೂ 200ಕ್ಕೂ ಹೆಚ್ಚು ಸ್ಕೋರ್ ದಾಖಲಾಗಿರೋದೇ ಅದಕ್ಕೆ ಸಾಕ್ಷಿ. ಇಲ್ಲಿ ಟಾಸ್ ಗೆಲ್ಲೋದು ಕೂಡ ತುಂಬಾ ಮುಖ್ಯ, ಯಾಕಂದ್ರೆ ರಾತ್ರಿ ವೇಳೆ ಇಲ್ಲಿ ಚೇಸಿಂಗ್ ಮಾಡೋದು ತುಂಬಾ ಈಜಿ. ಆರ್‌ಸಿಬಿ ಪರ ಕೊಹ್ಲಿ ಮತ್ತು ಸಾಲ್ಟ್ ಜೋಡಿ ಪವರ್‌ಪ್ಲೇನಲ್ಲಿ ಭರ್ಜರಿ ಸ್ಟಾರ್ಟ್ ಕೊಟ್ಟರೆ, ಮಿಡಲ್ ಆರ್ಡರ್‌ನಲ್ಲಿ ಜಿತೇಶ್ ಶರ್ಮಾ ಮತ್ತು ರೊಮಾರಿಯೋ ಶೆಫರ್ಡ್ ಫಿನಿಶಿಂಗ್ ಟಚ್ ಕೊಡಲು ಕಾಯ್ತಿದ್ದಾರೆ. ಎಲ್‌ಎಸ್‌ಜಿ ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ ಮತ್ತು ಆವೇಶ್ ಖಾನ್ ಅವರ ವೇಗ ನಮ್ಮ ಆರ್‌ಸಿಬಿ ಬ್ಯಾಟರ್‌ಗಳನ್ನು ಹೇಗೆ ಕಂಟ್ರೋಲ್ ಮಾಡುತ್ತೆ ಅನ್ನೋದೇ ದೊಡ್ಡ ಕುತೂಹಲ.

ಹೋಮ್ ಗ್ರೌಂಡ್ ಅಡ್ವಾಂಟೇಜ್ ಮತ್ತು ಈಗಿರೋ ಪ್ಲೇಯರ್ಸ್‌ಗಳ ಫಾರ್ಮ್ ನೋಡಿದ್ರೆ ಇಂದು ಆರ್‌ಸಿಬಿಗೆ ಗೆಲ್ಲೋ ಚಾನ್ಸ್ ಹೆಚ್ಚಿದೆ. ಆದ್ರೂ ಕ್ರಿಕೆಟ್ ಅಂದಮೇಲೆ ಕೊನೆ ಬಾಲ್ ವರೆಗೂ ಏನೂ ಆಗಬಹುದು. ನಿಮ್ಮ ಪ್ರಕಾರ ಇವತ್ತು ಯಾರು ಗೆಲ್ಲಬಹುದು? ಈ ಸಲ ಕೂಡ ಕಪ್ ನಮ್ದೇ ಅನ್ನೋ ಭರವಸೆಯಲ್ಲಿ ಅಭಿಮಾನಿಗಳು ಮೈದಾನಕ್ಕೆ ಹರಿದು ಬರಲಿದ್ದಾರೆ!