ಸ್ಮೃತಿ ಮಂಧಾನ ಮದುವೆ ನಿಂತಿದ್ದೇಕೆ? ಪಲಾಶ್ ಮುಚ್ಚಲ್ ಗೂ ಈ "ಮೇರಿ ಡಿ’ ಕೋಸ್ಟಾಗೂ ಏನು ಸಂಬಂಧ?

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಹಾಗೂ ನಮ್ಮ ಆರ್ಸಿಬಿ ಮಹಿಳಾ ತಂಡದ ಕ್ಯಾಪ್ಟನ್ ಆಗಿದ್ದ ಸ್ಮೃತಿ ಮಂಧಾನ ಅವರ ವಿವಾಹ ವಿಳಂಬ ಆದ ವಿಷಯದ ಕುರಿತು ನಿಮಗೆಲ್ಲರಿಗೂ ಗೊತ್ತಿದೆ. ಮದುವೆ ದಿವಸವೇ ಮದುವೆ ಮುಂದೂಡಿಕೆಗೆ ಕಾರಣ ಒಂದನ್ನು ನೀಡಿ ಮದುವೆ ನಿಂತು ಹೋಗಿರುವ ವಿಚಾರ, ಅದರ ಬೆಳವಣಿಗೆ ಇದೀಗ ಇನ್ನಷ್ಟು ವಿಷಯಗಳ ಕುರಿತು ಹೆಚ್ಚು ಚರ್ಚೆ ಆಗುತ್ತಿದೆ. ಅದರ ಹಿಂದಿರುವ ಸತ್ಯವನ್ನ ಮಂಧಾನ ಅವರ ಕ್ರಿಕೆಟ್ ಅಭಿಮಾನಿಗಳು ತಿಳಿದುಕೊಳ್ಳಲು ಕಾತುರರಾಗಿದ್ದಾರೆ.  ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಹಾಗೂ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ಮದುವೆ ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ, ಮದುವೆ ತಯಾರಿಯಲ್ಲಿ ಭಾಗಿಯಾಗಿದ್ದ ಮೇರಿ ಡಿ’ಕೋಸ್ಟಾ ಎಂಬ ಹೆಸರಿನ ಮಹಿಳೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಮೇರಿ ಡಿ’ಕೋಸ್ಟಾ ಮುಂಬೈ ಮೂಲದ ನೃತ್ಯ ನಿರ್ದೇಶಕಿ (choreographer) ಆಗಿದ್ದು, ಅವರ ಹೆಸರು ಪಲಾಶ್ ಜೊತೆಗಿನ ಲೀಕ್‌ ಆದ ಚಾಟ್‌ಗಳಲ್ಲಿ ಹೊರಬಂದಿದೆ ಎಂದು ತಿಳಿದುಬಂದಿದೆ. 

ಸ್ಮೃತಿ ಮಂಧಾನ ಮದುವೆ ನಿಂತಿದ್ದೇಕೆ? ಪಲಾಶ್ ಮುಚ್ಚಲ್ ಗೂ ಈ
ಸ್ಮೃತಿ ಮಂಧಾನ ಮದುವೆ ನಿಂತಿದ್ದೇಕೆ? ಪಲಾಶ್ ಮುಚ್ಚಲ್ ಗೂ ಈ "ಮೇರಿ ಡಿ’ ಕೋಸ್ಟಾಗೂ ಏನು ಸಂಬಂಧ?

ನವೆಂಬರ್ 23ರಂದು ನಡೆಯಬೇಕಿದ್ದ ಮದುವೆ, ಸ್ಮೃತಿ ಮಂಧಾನ ಅವರ ತಂದೆಯ ಆರೋಗ್ಯ ಸಮಸ್ಯೆ ಹಾಗೂ ಪಲಾಶ್ ಮುಚ್ಚಲ್ ಆಸ್ಪತ್ರೆಗೆ ದಾಖಲಾಗಿರುವ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಚಾಟ್‌ಗಳು, ಇವರ ಮದುವೆಯನ್ನು ಮುಂದೂಡುವುದಕ್ಕೆ ಬೇರೆ ಕಾರಣಗಳೂ ಇರಬಹುದೇ ಎಂಬ ಅನುಮಾನ ಮೂಡಿಸಿವೆ. ಲೀಕ್‌ ಆದ ಸಂದೇಶಗಳಲ್ಲಿ ಪಲಾಶ್ ಮತ್ತು ಮೇರಿ ಡಿ’ಕೋಸ್ಟಾ ನಡುವೆ ಸ್ನೇಹಕ್ಕಿಂತ ಹೆಚ್ಚು ಆಪ್ತತೆಯ ಮಾತುಕತೆ ನಡೆದಿರುವುದಾಗಿ ಕೆಲವು ಕಡೆ ಅಭಿಮಾನಿಗಳು ಅವರವರ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೇರಿ ಡಿ’ಕೋಸ್ಟಾ ಅವರ ಇನ್‌ಸ್ಟಾಗ್ರಾಂ ಖಾತೆಯನ್ನು ಖಾಸಗಿ (private) ಮಾಡಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಸ್ಮೃತಿ ಮಂಧಾನ ಅಥವಾ ಪಲಾಶ್ ಮುಚ್ಚಲ್ ಇಬ್ಬರೂ ಈ ಆರೋಪಗಳ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ, ಮೇರಿ ಡಿ’ಕೋಸ್ಟಾ ಅವರ ಪಾತ್ರ ನಿಜವಾಗಿಯೂ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ, ಮೇರಿ ಡಿ’ಕೋಸ್ಟಾ ಎಂಬ ಹೆಸರಿನ ಮಹಿಳೆ ಪಲಾಶ್ ಮುಚ್ಚಲ್ ಅವರ alleged cheating ವಿವಾದದಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯ ದಿನದಿಂದ ದಿನಕ್ಕೆ ಹೆಚ್ಚು ಚರ್ಚೆಗೆ ಕಾರಣವಾಗುತ್ತಿದೆ. ಈ ಬೆಳವಣಿಗೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು. 

Latest News