ಆರ್‌ಸಿಬಿ ಖಂಡಿತ ಕಪ್ ಗೆಲ್ಲುವುದಿಲ್ಲವಂತೆ; ಮತ್ಯಾರು ಗೆಲ್ತಾರೆ? - ಈ ಬಾರಿ ಟ್ರೋಫಿ ಎತ್ತುವ ತಂಡ ಇದು ಮಾತ್ರ ಎಂದ ಅಕ್ಷರ್!!

ಐಪಿಎಲ್ 2026 ರ ಕ್ರೇಜ್ ಈಗ ಪೀಕ್‌ ಹಂತಕ್ಕೆ ಬಂದು ತಲುಪಿದೆ. ಲೀಗ್ ಮ್ಯಾಚ್‌ಗಳೆಲ್ಲಾ ಮುಗಿದು, ಇಡೀ ಟೂರ್ನಿ ಈಗ ಪ್ಲೇಆಫ್‌ ಅಖಾಡಕ್ಕೆ ಎಂಟ್ರಿ ಕೊಟ್ಟಿದೆ. ಆದರೆ, ನಮ್ಮ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡ ಮಾತ್ರ ಲೀಗ್ ಹಂತದಲ್ಲೇ ಹೊರಬಿದ್ದು ಮನೆ ಸೇರಿದೆ. ಇತ್ತ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಅಂಕಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿ ರಾಜನಂತೆ ಮೆರೆಯುತ್ತಾ ಪ್ಲೇಆಫ್ ತಲುಪಿದೆ. ಆರ್‌ಸಿಬಿ ಫಾರ್ಮ್ ನೋಡಿ ಈ ಸಲ ಕಪ್ ನಮ್ದೇ ಅಂತ ಫ್ಯಾನ್ಸ್ ಫುಲ್ ಖುಷಿಯಲ್ಲಿದ್ದಾರೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಮಾತ್ರ ಆರ್‌ಸಿಬಿ ಅಭಿಮಾನಿಗಳಿಗೆ ಸಣ್ಣದೊಂದು ಶಾಕ್ ಕೊಟ್ಟಿದ್ದಾರೆ. ಅವರ ಪ್ರಕಾರ, ಈ ಬಾರಿ ಆರ್‌ಸಿಬಿ ಕಪ್ ಗೆಲ್ಲೋದು ಡೌಟಂತೆ! ಹಾಗಾದ್ರೆ ಅಕ್ಷರ್ ಪಟೇಲ್ ಆಯ್ಕೆ ಮಾಡಿರೋ ಆ ವಿನ್ನಿಂಗ್ ಟೀಮ್ ಯಾವುದು? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

RCB ಫ್ಯಾನ್ಸ್ ಕಪ್ ಕನಸು, ಆದರೆ ಅಕ್ಷರ್ ಹೇಳಿದ್ದು? | Photo Credit: indiatoday.in/x.com/JeetN25
RCB ಫ್ಯಾನ್ಸ್ ಕಪ್ ಕನಸು, ಆದರೆ ಅಕ್ಷರ್ ಹೇಳಿದ್ದು? | Photo Credit: indiatoday.in/x.com/JeetN25

ನಾಳೆಯಿಂದಲೇ ಮಹಾ ಯುದ್ಧ!

ಟಾಪ್ 4 ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯಗಳಿಗೆ ವೇದಿಕೆ ಸಂಪೂರ್ಣವಾಗಿ ರೆಡಿಯಾಗಿದೆ. ಬಿಡುಗಡೆಯಾಗಿರುವ ಶೆಡ್ಯೂಲ್ ಪ್ರಕಾರ ಬಿಗ್ ಮ್ಯಾಚ್‌ಗಳು ಹೀಗಿವೆ:

ಕ್ವಾಲಿಫೈಯರ್-1 (ಮೇ 26, ಮಂಗಳವಾರ) - ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನದಲ್ಲಿರೋ ನಮ್ಮ ಆರ್ಸಿಬಿ ಮತ್ತು ಗುಜರಾತ್ ಟೈಟನ್ಸ್ (GT) ತಂಡಗಳು ಧರ್ಮಶಾಲಾದ ಸುಂದರ ಮೈದಾನದಲ್ಲಿ ನಾಳೆ ಮುಖಾಮುಖಿಯಾಗಲಿವೆ. ಇಲ್ಲಿ ಗೆದ್ದವರು ನೇರವಾಗಿ ಫೈನಲ್ ಟಿಕೆಟ್ ಪಡೀತಾರೆ.

ಎಲಿಮಿನೇಟರ್ (ಮೇ 27, ಬುಧವಾರ) - ಪಾಯಿಂಟ್ಸ್ ಟೇಬಲ್‌ನಲ್ಲಿ 3 ಮತ್ತು 4 ನೇ ಸ್ಥಾನದಲ್ಲಿರೋ ಸನ್‌ರೈಸರ್ಸ್ ಹೈದರಾಬಾದ್ (SRH) ಹಾಗೂ ರಾಜಸ್ಥಾನ ರಾಯಲ್ಸ್ (RR) ತಂಡಗಳು ನ್ಯೂ ಚಂಡೀಗಢದ ಮುಲ್ಲನ್‌ಪುರ ಸ್ಟೇಡಿಯಂನಲ್ಲಿ ಸೆಣಸಾಡಲಿವೆ.

ಕ್ವಾಲಿಫೈಯರ್-2 (ಮೇ 29, ಶುಕ್ರವಾರ) - ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದ ಜೊತೆ ಫೈನಲ್‌ನ ಮತ್ತೊಂದು ಸೀಟ್‌ಗಾಗಿ ಫೈಟ್ ಮಾಡಲಿದೆ.

ಮಹಾ ಫೈನಲ್ (ಮೇ 31, ಭಾನುವಾರ) - ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಬಾರಿಯ ಐಪಿಎಲ್ 2026 ರ ಅಂತಿಮ ಹಣಾಹಣಿ ನಡೆಯಲಿದ್ದು, ಯಾರು ರಾಜ ಆಗ್ತಾರೆ ಅನ್ನೋದು ನಿರ್ಧಾರ ಆಗಲಿದೆ.

ಅಕ್ಷರ್ ಪಟೇಲ್ ಫೇವರಿಟ್ ಟೀಮ್ ಆರ್‌ಸಿಬಿ ಅಲ್ಲವೇ ಅಲ್ಲ! ಮತ್ಯಾರು?

ಈಗಾಗಲೇ ಎಲ್ಲಾ ಟಾಪ್ 4 ತಂಡಗಳ SWOT (ಬಲ ಮತ್ತು ದೌರ್ಬಲ್ಯ) ರಿಪೋರ್ಟ್ ರೆಡಿಯಾಗಿದ್ದು, ಕ್ರಿಕೆಟ್ ಪಂಡಿತರು ತಮ್ಮ ತಮ್ಮ ಪ್ರೆಡಿಕ್ಷನ್ ಹೇಳ್ತಿದ್ದಾರೆ. ಇತ್ತೀಚೆಗೆ ಕೆಕೆಆರ್ ವಿರುದ್ಧದ ಪಂದ್ಯ ಮುಗಿದ ಬಳಿಕ ಡೆಲ್ಲಿ ಕ್ಯಾಪ್ಟನ್ ಅಕ್ಷರ್ ಪಟೇಲ್ ಅವರಿಗೂ "ಈ ಬಾರಿ ಕಪ್ ಯಾರಿಗೆ?" ಅನ್ನೋ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಉತ್ತರಿಸಿದ ಅಕ್ಷರ್, ಆರ್ಸಿಬಿಯನ್ನು ಬಿಟ್ಟು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಹೆಸರನ್ನು ಹೆಮ್ಮೆಯಿಂದ ಹೇಳಿದ್ದಾರೆ.

ಅಕ್ಷರ್ ಪಟೇಲ್ ಅವರ ಪ್ರಕಾರ, ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಹೈದರಾಬಾದ್ ತಂಡ ಸದ್ಯಕ್ಕೆ ಟೂರ್ನಿಯಲ್ಲಿ ಅತ್ಯಂತ ಡೇಂಜರಸ್ ಹಾಗೂ ಬಲಿಷ್ಠ ತಂಡವಾಗಿ ಕಾಣಿಸ್ತಿದೆ.

ಅಕ್ಷರ್ ಪಟೇಲ್ ಏನಂದ್ರು ಗೊತ್ತಾ?

"ಈ ಸೀಸನ್‌ನಲ್ಲಿ ಎಸ್‌ಆರ್‌ಹೆಚ್‌ ಬ್ಯಾಟಿಂಗ್ ಲೈನ್‌ಅಪ್ ತುಂಬಾ ಸ್ಟ್ರಾಂಗ್ ಆಗಿದೆ. ಮುಖ್ಯವಾಗಿ ಅವರ ಟಾಪ್ 3 ಬ್ಯಾಟ್ಸ್‌ಮನ್‌ಗಳು ಏನಾದರೂ ಕ್ರೀಸ್‌ನಲ್ಲಿ ನಿಂತು ರನ್ ಚಚ್ಚಲು ಶುರು ಮಾಡಿದ್ರೆ, ಅವರ ಎದುರು ಬೌಲಿಂಗ್ ಮಾಡೋದು ಆನೆ ಹಿಡಿಯೋ ಅಷ್ಟೇ ಕಷ್ಟ. ಯಾವ ಬೌಲರ್ ತಲೆಗೂ ಅವರ ಬ್ಯಾಟಿಂಗ್‌ಗೆ ಬ್ರೇಕ್ ಹಾಕೋ ಐಡಿಯಾ ಸಿಗಲ್ಲ. ಹಾಗಾಗಿ ಈ ಬಾರಿ ಐಪಿಎಲ್ 2026 ರ ಟ್ರೋಫಿ ಎಸ್‌ಆರ್‌ಹೆಚ್‌ ಪಾಲಾಗಲಿದೆ ಅನ್ನೋದು ನನ್ನ ಪರ್ಸನಲ್ ಒಪಿನಿಯನ್."

ಪಾಯಿಂಟ್ಸ್ ಟೇಬಲ್‌ನಲ್ಲಿ ಎಸ್‌ಆರ್‌ಹೆಚ್‌ ಎಲ್ಲಿದೆ?

ಐಪಿಎಲ್ 2026 ರ ಲೀಗ್ ಹಂತದಲ್ಲಿ ಹೈದರಾಬಾದ್ ತಂಡ ಸಖತ್ ಪರ್ಫಾಮೆನ್ಸ್ ನೀಡಿದೆ. ಆಡಿದ 14 ಪಂದ್ಯಗಳಲ್ಲಿ ಬರೋಬ್ಬರಿ 9 ಮ್ಯಾಚ್ ಗೆದ್ದು, 5 ಪಂದ್ಯಗಳಲ್ಲಿ ಸೋತು ಒಟ್ಟು 18 ಪಾಯಿಂಟ್ಸ್ ಕಲೆಹಾಕಿದೆ. ಆದರೆ, ನಮ್ಮ ಆರ್‌ಸಿಬಿ ಮತ್ತು ಗುಜರಾತ್ ಟೈಟನ್ಸ್ ತಂಡಗಳಿಗಿಂತ ನೆಟ್ ರನ್ ರೇಟ್ (NRR) ಕೊಂಚ ಕಮ್ಮಿ ಇರೋದ್ರಿಂದ ಎಸ್‌ಆರ್‌ಹೆಚ್‌ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂತು. ಅದಕ್ಕೇ ಅವರು ನಾಳೆ ಕ್ವಾಲಿಫೈಯರ್ ಆಡದೆ, ಬುಧವಾರ ಎಲಿಮಿನೇಟರ್ ಮ್ಯಾಚ್ ಆಡಲಿದ್ದಾರೆ.

ಡೆಲ್ಲಿ ಕ್ಯಾಪ್ಟನ್ ಅಕ್ಷರ್ ಪಟೇಲ್ ಹೈದರಾಬಾದ್ ಪರ ಬ್ಯಾಟ್ ಬೀಸಿದ್ದಾರೆ. ಆದರೆ ನಮ್ಮ ಆರ್ಸಿಬಿ ಫ್ಯಾನ್ಸ್ ಮಾತ್ರ "ಯಾರು ಏನೇ ಹೇಳಿದ್ರೂ ಈ ಸಲ ಕಪ್ ನಮ್ಮದೇ!" ಅಂತ ಫುಲ್ ಕಾನ್ಫಿಡೆನ್ಸ್‌ನಲ್ಲಿದ್ದಾರೆ. ಅಕ್ಷರ್ ಪಟೇಲ್ ಹೇಳಿರೋ ಭವಿಷ್ಯ ನಿಜ ಆಗುತ್ತಾ? ಅಥವಾ ನಮ್ಮ ಕಿಂಗ್ ಕೊಹ್ಲಿ ಪಡೆ ಅಕ್ಷರ್ ಬಾಯಿ ಮುಚ್ಚಿಸಿ ಟ್ರೋಫಿ ಎತ್ತಿ ಹಿಡಿಯುತ್ತಾ? ನಿಮ್ಮ ಪ್ರೆಡಿಕ್ಷನ್ ಏನು ಅನ್ನೋದನ್ನ ನಮಗೆ ಕಾಮೆಂಟ್ ಮಾಡಿ ತಿಳಿಸಿ! 

Latest News