ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಅಂದ್ರೆನೇ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬ. ಅದ್ರಲ್ಲೂ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್ 2026ರ ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿ ತಂಡವು 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ತನ್ನ ಚಾಂಪಿಯನ್ ಆಗಿ ಮುಂದುವರಿಯುವ ಸೂಚನೆ ನೀಡಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಬ್ಬರ ಹೇಗಿತ್ತು ಅಂದ್ರೆ, ಹೈದರಾಬಾದ್ ಬೌಲರ್‌ಗಳಿಗೆ ಬೆವರಿಳಿಯಿತು.
ಕಿಂಗ್ ಕೊಹ್ಲಿಯ 'ಚೇಸಿಂಗ್' ಮ್ಯಾಜಿಕ್!
202 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿಗೆ ಕೊಹ್ಲಿ ಆಧಾರಸ್ತಂಭವಾದರು. ಕೇವಲ 38 ಎಸೆತಗಳಲ್ಲಿ ಅಜೇಯ 69 ರನ್ ಸಿಡಿಸಿದ ಕೊಹ್ಲಿ, 5 ಭರ್ಜರಿ ಸಿಕ್ಸರ್ ಮತ್ತು 5 ಫೋರ್‌ಗಳೊಂದಿಗೆ ಮೈದಾನದಲ್ಲಿ ಅಬ್ಬರಿಸಿದರು.
ಅವರಿಗೆ ಅದ್ಭುತ ಸಾಥ್ ನೀಡಿದ್ದು ದೇವದತ್ ಪಡಿಕ್ಕಲ್. ಪಡಿಕ್ಕಲ್ ಕೇವಲ 26 ಬಾಲ್‌ಗಳಲ್ಲಿ 61 ರನ್ ಚಚ್ಚಿ ಪಂದ್ಯವನ್ನು ನಮ್ಮ ಕೈಗೆ ತಂದುಕೊಟ್ಟರು. ಇನ್ನು ನಾಯಕ ರಜತ್ ಪಾಟಿದಾರ್ ಕೂಡ 12 ಬಾಲ್‌ಗಳಲ್ಲಿ 31 ರನ್ ಗಳಿಸಿ ಮಿಂಚಿದರು. ಆರ್‌ಸಿಬಿ ತಂಡ ಕೇವಲ 15.4 ಓವರ್‌ಗಳಲ್ಲೇ ಗುರಿಯನ್ನು ತಲುಪಿ, ಎದುರಾಳಿಗಳನ್ನು ದಂಗುಬಡಿಸಿತು!
ಕ್ಯೂಟ್ ಫ್ಲೈಯಿಂಗ್ ಕಿಸ್ ದೃಶ್ಯ!
ಪಂದ್ಯದ ಮುಕ್ತಾಯದ ನಂತರ ಸ್ಟೇಡಿಯಂನಲ್ಲಿ ಒಂದು ಮುದ್ದಾದ ದೃಶ್ಯ ಕಂಡುಬಂತು. ಆರ್‌ಸಿಬಿ ಗೆದ್ದ ತಕ್ಷಣ, ವಿರಾಟ್ ಕೊಹ್ಲಿ ನೇರವಾಗಿ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರನ್ನು ನೋಡಿದರು. ಪ್ರೀತಿಯಿಂದ ಅವರಿಗೆ 'ಫ್ಲೈಯಿಂಗ್ ಕಿಸ್' ನೀಡಿದರು. ಇದನ್ನು ನೋಡಿದ ಫ್ಯಾನ್ಸ್ ಫುಲ್ ಖುಷ್! "ಇನ್ನೂ ಇವರು ಹಳೇ ಕಾಲದಂತೆ ಡೇಟಿಂಗ್ ಮಾಡ್ತಿದ್ದಾರೆ, ಎಷ್ಟು ಕ್ಯೂಟ್ ದಂಪತಿಗಳು!" ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಅದೇ ಸ್ಟ್ಯಾಂಡ್‌ನಲ್ಲಿ ಸ್ಮೃತಿ ಮಂದಾನಾ, ಶ್ರೇಯಾಂಕ ಪಾಟೀಲ್ ಮತ್ತು ಜೆಮಿಮಾ ರೋಡ್ರಿಗ್ಸ್ ಕೂಡ ಕುಳಿತು ಪಂದ್ಯವನ್ನು ಎಂಜಾಯ್ ಮಾಡುತ್ತಿದ್ದುದು ವಿಶೇಷವಾಗಿತ್ತು.
ಶುಭಾರಂಭ.
— Royal Challengers Bengaluru (@RCBTweets) March 28, 2026
शुभारंब।
శుభారంభం.
Good start.#PlayBold
pic.twitter.com/DGPUaTHVoD
ಬೌಲರ್‌ಗಳ ಅಬ್ಬರ!
ಬ್ಯಾಟಿಂಗ್‌ನಷ್ಟೇ ಅಲ್ಲದೆ, ಬೌಲಿಂಗ್‌ನಲ್ಲೂ ಆರ್‌ಸಿಬಿ ಮಿಂಚಿತು. ಹೊಸಬರಾದ ಜೇಕಬ್ ಡಫಿ ಅವರಂತೂ ಅದ್ಭುತವಾಗಿ ಬೌಲಿಂಗ್ ಮಾಡಿ, 4 ಓವರ್‌ಗಳಲ್ಲಿ ಕೇವಲ 22 ರನ್ ನೀಡಿ 3 ವಿಕೆಟ್ ಕಬಳಿಸಿ ಹೈದರಾಬಾದ್ ತಂಡದ ಸೊಕ್ಕನ್ನು ಅಡಗಿಸಿದರು. ಸನ್ ರೈಸರ್ಸ್ ಹೈದರಾಬಾದ್ 201 ರನ್ ಗಳಿಸಿದ್ರೂ, ಆರ್‌ಸಿಬಿ ಬ್ಯಾಟಿಂಗ್ ದಾಳಿಯ ಮುಂದೆ ಅದು ಸಪ್ಪೆಯಾಗಿ ಹೋಯಿತು.
ಐಪಿಎಲ್ ಸೀಸನ್ 19ರ ಆರಂಭ ಆರ್‌ಸಿಬಿ ಪಾಲಿಗೆ ಸಖತ್ ಪಾಸಿಟಿವ್ ಆಗಿದೆ. ಕೊಹ್ಲಿ ಫಾರ್ಮ್ ಮತ್ತು ತಂಡದ ಬ್ಯಾಟಿಂಗ್ ಲೈನ್-ಅಪ್ ನೋಡಿದರೆ, ಈ ಬಾರಿ ಕಪ್ ನಮ್ದೇ ಅನ್ನೋ ನಂಬಿಕೆ ಅಭಿಮಾನಿಗಳಲ್ಲಿ ಮತ್ತಷ್ಟು ಗಟ್ಟಿಯಾಗಿದೆ.