ನಮ್ಮ ಮಣ್ಣಿನ ಕನೆಕ್ಷನ್ಫಿ - ಫಾ ಮೈದಾನದಲ್ಲಿ ಎಲೆಕ್ಷನ್! 20 ವರ್ಷಗಳ ನಂತರ ವಿಶ್ವಕಪ್‌ನಲ್ಲಿ ಭಾರತೀಯ ಮೂಲದ ನಾಲ್ವರ ಜಂಟಿ ಎಂಟ್ರಿ!!

ಫುಟ್‌ಬಾಲ್ ಕ್ರೇಜ್ ಸ್ಟಾರ್ಟ್ ಆಯ್ತು ಅಂದ್ರೆ ಸಾಕು, ನಾವೆಲ್ಲಾ "ಅಯ್ಯೋ, ನಮ್ಮ ಇಂಡಿಯಾ ಟೀಮ್ ಯಾವತ್ತಪ್ಪಾ ಫಿಫಾ ವರ್ಲ್ಡ್ ಕಪ್ ಆಡೋದು?" ಅಂತ ಬೇಸರ ಮಾಡ್ಕೊಳ್ಳೋದು ಕಾಮನ್. ಆದ್ರೆ ಈ ಸಲ ನಮಗೊಂದು ಸಖತ್ ಖುಷಿ ಪಡೋ ವಿಷಯ ಇದೆ ಗುರು! ನಮ್ಮ ನೀಲಿ ಜರ್ಸಿ ಮೈದಾನದಲ್ಲಿ ಇಲ್ಲದೇ ಇರಬಹುದು, ಆದ್ರೆ ನಮ್ಮ ರಕ್ತ, ನಮ್ಮ ಭಾರತೀಯ ಮೂಲದ ನಾಲ್ಕು ಜನ ಹೀರೋಗಳು ಈ ಬಾರಿ ಫಿಫಾ ವಿಶ್ವಕಪ್‌ನಲ್ಲಿ ಬೇರೆ ಬೇರೆ ದೇಶಗಳ ಪರವಾಗಿ ಧೂಳೆಬ್ಬಿಸೋಕೆ ರೆಡಿಯಾಗಿದ್ದಾರೆ.

ಫಿಫಾ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಬರೋಬ್ಬರಿ 20 ವರ್ಷಗಳ ನಂತರ! | Photo Credit: https://pbs.twimg.com/media
ಫಿಫಾ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಬರೋಬ್ಬರಿ 20 ವರ್ಷಗಳ ನಂತರ! | Photo Credit: https://pbs.twimg.com/media

ಜೂನ್ 12ರಿಂದ ಜುಲೈ 19ರವರೆಗೆ ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾದಲ್ಲಿ ನಡೆಯಲಿರೋ 24ನೇ ಆವೃತ್ತಿಯ ಫಿಫಾ ವಿಶ್ವಕಪ್‌ನಲ್ಲಿ ಒಟ್ಟು 48 ಟೀಮ್‌ಗಳು ಸೆಣಸಾಡಲಿವೆ. ಇದರಲ್ಲಿ ನ್ಯೂಜಿಲೆಂಡ್, ಕತಾರ್, ಆಸ್ಟ್ರೇಲಿಯಾ ಮತ್ತು ಕಾಂಗೊ ದೇಶಗಳ ಟೀಮ್‌ನಲ್ಲಿ ನಮ್ಮ ಇಂಡಿಯನ್ ಕನೆಕ್ಷನ್ ಇರೋ ಆಟಗಾರರಿದ್ದಾರೆ.

ಅಷ್ಟಕ್ಕೂ ಯಾರು ಆ ನಾಲ್ಕು ಜನ ಕಿಲಾಡಿಗಳು? ಅವರ ಬ್ಯಾಕ್‌ಗ್ರೌಂಡ್ ಏನು? 

ಸರ್ಪ್ರೀತ್‌ ಸಿಂಗ್‌ (ನ್ಯೂಜಿಲೆಂಡ್‌) - ಪಂಜಾಬಿ ಪುತ್ರ್!

ಮೊದಲನೆಯವರು ಸರ್ಪ್ರೀತ್ ಸಿಂಗ್. ಇವರ ಪೋಷಕರು ಪಕ್ಕಾ ಪಂಜಾಬ್‌ನವರಾಗಿದ್ದರೂ, ಸರ್ಪ್ರೀತ್ ಹುಟ್ಟಿ ಬೆಳೆದಿದ್ದೆಲ್ಲಾ ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ. ಸದ್ಯ ಇವರಿಗೆ 27 ವರ್ಷ. ವಿಶೇಷ ಅಂದ್ರೆ, 2018ರಲ್ಲಿ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಇವರು ಭಾರತದ ವಿರುದ್ಧವೇ ಆಡಿದ್ದರು! ನ್ಯೂಜಿಲೆಂಡ್ ಪರ 2017 ಮತ್ತು 2019ರ ಅಂಡರ್-20 ಫಿಫಾ ವಿಶ್ವಕಪ್ ಆಡಿದ ಎಕ್ಸ್‌ಪೀರಿಯನ್ಸ್ ಇವರಿಗಿದೆ. ಈ ಬಾರಿ ಮೇನ್ ಟೀಮ್‌ನಲ್ಲಿ ಇವರ ಆಟ ನೋಡೋಕೆ ಫ್ಯಾನ್ಸ್ ಕಾಯ್ತಿದ್ದಾರೆ.

ತಹ್ಸಿನ್‌ ಮೊಹಮ್ಮದ್‌ (ಕತಾರ್‌) - ಕೇರಳದ ಕುಟ್ಟಿ!

ಇನ್ನೊಬ್ಬ ಯುವ ಪ್ರತಿಭೆ ತಹ್ಸಿನ್ ಮೊಹಮ್ಮದ್. ಇವರ ತಂದೆ ಜಂಶಿದ್ ಅವರು ಮೂಲತಃ ಕೇರಳದವರು ಮತ್ತು ಮಾಜಿ ಫುಟ್‌ಬಾಲ್ ಆಟಗಾರ ಕೂಡ ಹೌದು. 2006ರಲ್ಲಿ ಇವರ ಫ್ಯಾಮಿಲಿ ಕತಾರ್‌ಗೆ ಶಿಫ್ಟ್ ಆಯ್ತು. ತಹ್ಸಿನ್ ಸಖತ್ ಶಾರ್ಪ್ ಪ್ಲೇಯರ್. 2024ರಲ್ಲಿ ತಮಗೆ ಕೇವಲ 18 ವರ್ಷ ತುಂಬಿದ್ದಾಗ ಕತಾರ್ ನ್ಯಾಷನಲ್ ಟೀಮ್‌ಗೆ ಡೆಬ್ಯೂ ಮಾಡಿದ್ರು. ಈಗ ನೇರವಾಗಿ ವರ್ಲ್ಡ್ ಕಪ್ ಆಡೋ ಚಾನ್ಸ್ ಗಿಟ್ಟಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ನಿಶಾನ್‌ ವೇಲುಪಿಳ್ಳೈ (ಆಸ್ಟ್ರೇಲಿಯಾ) - ಗ್ಲೋಬಲ್ ಕನೆಕ್ಷನ್!

ನಿಶಾನ್ ವೇಲುಪಿಳ್ಳೈ ಅವರ ಬ್ಯಾಕ್‌ಗ್ರೌಂಡ್ ಕೇಳಿದ್ರೆ ನಿಮಗೆ ಇಂಟರೆಸ್ಟಿಂಗ್ ಅನ್ಸುತ್ತೆ. ಇವರ ತಾಯಿ ಆಂಗ್ಲೋ-ಇಂಡಿಯನ್, ತಂದೆ ಶ್ರೀಲಂಕಾ ತಮಿಳು ಮೂಲದ ಮಲೇಷ್ಯಾ ಪ್ರಜೆ! ಆದ್ರೆ ನಿಶಾನ್ ಹುಟ್ಟಿದ್ದು ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ. 2024ರಲ್ಲಿ ಆಸ್ಟ್ರೇಲಿಯಾ ಟೀಮ್ ಸೇರಿದ ಇವರು, ಈಗಾಗಲೇ 7 ಇಂಟರ್ನ್ಯಾಷನಲ್ ಮ್ಯಾಚ್‌ಗಳನ್ನು ಆಡಿ ಸೈ ಎನಿಸಿಕೊಂಡಿದ್ದಾರೆ.

ಸ್ಯಾಮುಯೆಲ್‌ ಮುತ್ತುಸ್ವಾಮಿ (ಕಾಂಗೊ ಗಣರಾಜ್ಯ) - ಇಂಡೋ-ಆಫ್ರಿಕನ್ ಮಿಕ್ಸ್!

ಸ್ಯಾಮುಯೆಲ್ ಮುತ್ತುಸ್ವಾಮಿ ಅವರ ತಂದೆ ನಮ್ಮ ತಮಿಳುನಾಡಿನವರು, ತಾಯಿ ಕಾಂಗೊ ಗಣರಾಜ್ಯದವರು. ಇವರು ಹುಟ್ಟಿದ್ದು ಫ್ರಾನ್ಸ್‌ನಲ್ಲಿ! 2019ರಿಂದಲೇ ಕಾಂಗೊ ದೇಶದ ಪರವಾಗಿ ಇಂಟರ್ನ್ಯಾಷನಲ್ ಫುಟ್‌ಬಾಲ್ ಆಡುತ್ತಿದ್ದಾರೆ. ಫ್ರಾನ್ಸ್ ಮತ್ತು ಟರ್ಕಿಯ ಪ್ರಸಿದ್ಧ ಕ್ಲಬ್‌ಗಳ ಪರವಾಗಿಯೂ ಆಡಿದ ದೊಡ್ಡ ಅನುಭವ ಇವರಿಗಿದೆ. ಮಿಡ್‌ಫೀಲ್ಡ್‌ನಲ್ಲಿ ಇವರ ಮ್ಯಾಜಿಕ್ ಸಖತ್ ಆಗಿರುತ್ತೆ.

ಒಂದು ರೋಚಕ ಇತಿಹಾಸ ಗೊತ್ತಾ?

ಈ ಬಾರಿ ಭಾರತೀಯ ಮೂಲದ ಆಟಗಾರರು ಫಿಫಾ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಬರೋಬ್ಬರಿ 20 ವರ್ಷಗಳ ನಂತರ! ಕೊನೆಯದಾಗಿ 2006ರಲ್ಲಿ ಫ್ರಾನ್ಸ್ ತಂಡದ ಪರವಾಗಿ 'ವಿಕಾಸ್ ಧೋರಸೂ' ಎಂಬ ಭಾರತೀಯ ಮೂಲದ ಆಟಗಾರ ಮೈದಾನಕ್ಕಿಳಿದಿದ್ದರು. 

Latest News