Sunday, Nov 22, 2026
|
Advertisement

ಹೊಟ್ಟೆಪಾಡಿಗೆ ಕೂಲಿ, ಮಕ್ಕಳ ಭವಿಷ್ಯಕ್ಕಾಗಿ ಜಮೀನು ಮಾರಾಟ; ಬಿಹಾರದ ತಂದೆಯ ತ್ಯಾಗಕ್ಕೆ ಸಿಕ್ಕ ಫಲ !!

ಬಡತನ, ಆರ್ಥಿಕ ಸಂಕಷ್ಟ, ಕೂಲಿ ಕೆಲಸದ ಒತ್ತಡ.. ಇವೆಲ್ಲದರ ನಡುವೆಯೂ ಮಕ್ಕಳ ಶಿಕ್ಷಣಕ್ಕೆ ಯಾವುದೇ ಅಡ್ಡಿಯಾಗಬಾರದು ಎಂದು ತಂದೆಯೊಬ್ಬರು ತಮ್ಮ ಕೃಷಿ ಭೂಮಿಯನ್ನೇ ಮಾರಾಟ ಮಾಡಿದು . ಮಕ್ಕಳ ಭವಿಷ್ಯಕ್ಕಾಗಿ ಆಸ್ತಿ ತ್ಯಜಿಸಿದ ಅವರ ನಿರ್ಧಾರ ಇಂದು ಫಲ ನೀಡಿದ್ದು, ಇಬ್ಬರು ಮಕ್ಕಳು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಶಿಕ್ಷಣ ಪಡೆಯುವ ಹಾದಿಯಲ್ಲಿ ಸಾಗಿದ್ದಾರೆ. ಬಿಹಾರದ ಗಯಾ ಜಿಲ್ಲೆಯ ಕೂಲಿ ಕಾರ್ಮಿಕ ಮನೋಜ್ ಕುಮಾರ್ ಅವರ ಕುಟುಂಬದ ಈ ಕಥೆ ಇದೀಗ ಗಮನ ಸೆಳೆಯುತ್ತಿದೆ.

ಬಿಹಾರ  ವಿದ್ಯಾರ್ಥಿಸಾಧನೆ | Photo Credit: https://www.magnific.com/
ಬಿಹಾರ ವಿದ್ಯಾರ್ಥಿಸಾಧನೆ | Photo Credit: https://www.magnific.com/

ಮನೋಜ್ ಕುಮಾರ್ ಅವರು ಗಯಾದ ಧಾನ್ಯ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಮಾರುಕಟ್ಟೆಗೆ ಬರುವ ರೈತರ ಧಾನ್ಯಗಳ ಚೀಲಗಳನ್ನು ಹೊರುವುದು, ಬೆಳೆ ಮಾರಾಟಕ್ಕೆ ಸಹಾಯ ಮಾಡುವುದು ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಾರೆ. ರೈತರ ಬೆಳೆ ಮಾರಾಟಕ್ಕೆ ಸಹಾಯ ಮಾಡಿದಾಗ ಕಮಿಷನ್ ರೂಪದಲ್ಲಿ ಸ್ವಲ್ಪ ಆದಾಯವೂ ಸಿಗುತ್ತದೆ. ಹಿಂದೆ ಕುಟುಂಬದ ಆರ್ಥಿಕ ಪರಿಸ್ಥಿತಿ ಕಷ್ಟಕರವಾಗಿದ್ದಾಗ ನರೇಗಾ ಯೋಜನೆಯಡಿ ಕೂಲಿ ಕೆಲಸವನ್ನೂ ಮಾಡಿದ್ದರು. ಅವರ ಪತ್ನಿ ರೇಷ್ಮಾ ದೇವಿ ಮನೆಯ ಜವಾಬ್ದಾರಿಯನ್ನು ನಿಭಾಯಿಸುತ್ತಾ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆಂಬಲವಾಗಿ ನಿಂತಿದ್ದಾರೆ.

Advertisement

ಮಕ್ಕಳ ಶಿಕ್ಷಣಕ್ಕಾಗಿ ಕೃಷಿ ಭೂಮಿ ಮಾರಾಟ

ಮನೋಜ್ ಕುಮಾರ್ ಅವರ ಕುಟುಂಬದ ಬಳಿ ಎರಡು ಸಣ್ಣ ಕೃಷಿ ಜಮೀನುಗಳಿದ್ದವು. ಈ ಜಮೀನುಗಳಲ್ಲಿ ಬೆಳೆಯುತ್ತಿದ್ದ ಬೆಳೆ ಕುಟುಂಬಕ್ಕೆ ಆಹಾರ ಒದಗಿಸುತ್ತಿತ್ತು. ಕೆಲವೊಮ್ಮೆ ಹೆಚ್ಚುವರಿ ಬೆಳೆ ಮಾರಾಟದಿಂದ ಮನೆಯ ಖರ್ಚಿಗೂ ನೆರವಾಗುತ್ತಿತ್ತು. ಆದರೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರ ಭವಿಷ್ಯ ರೂಪಿಸಬೇಕೆಂಬ ಆಸೆ ಮನೋಜ್ ಕುಮಾರ್ ಅವರಲ್ಲಿತ್ತು.

ಮಕ್ಕಳು ವೈದ್ಯರು ಮತ್ತು ಇಂಜಿನಿಯರ್ ಆಗಬೇಕೆಂಬ ಗುರಿ ಹೊಂದಿದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ರಾಜಸ್ಥಾನದ ಕೋಟಾಕ್ಕೆ ತೆರಳಬೇಕಾಯಿತು. ಅಲ್ಲಿ ಕೋಚಿಂಗ್, ವಸತಿ, ಊಟ ಹಾಗೂ ಇತರ ಖರ್ಚುಗಳನ್ನು ಭರಿಸುವುದು ಕುಟುಂಬಕ್ಕೆ ದೊಡ್ಡ ಸವಾಲಾಗಿತ್ತು. ಮಕ್ಕಳ ಓದಿಗೆ ಹಣದ ಕೊರತೆ ಎದುರಾದಾಗ, ತಮ್ಮ ಎರಡು ಕೃಷಿ ಜಮೀನುಗಳಲ್ಲಿ ಒಂದನ್ನು ಮಾರಾಟ ಮಾಡಿ ಶಿಕ್ಷಣಕ್ಕೆ ಬೇಕಾದ ಹಣ ಹೊಂದಿಸುವ ನಿರ್ಧಾರವನ್ನು ತಂದೆ ತೆಗೆದುಕೊಂಡರು. ಕುಟುಂಬದ ಆಹಾರ ಮತ್ತು ಆದಾಯಕ್ಕೆ ಆಧಾರವಾಗಿದ್ದ ಜಮೀನನ್ನು ಮಾರಾಟ ಮಾಡುವುದು ಸುಲಭದ ನಿರ್ಧಾರವಾಗಿರಲಿಲ್ಲ. ಆದರೂ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಆಸ್ತಿಯನ್ನೇ ತ್ಯಜಿಸಿ ಅವರ ಶಿಕ್ಷಣಕ್ಕೆ ಆದ್ಯತೆ ನೀಡಿದರು.

ಕೋಟಾದಲ್ಲಿ ಎರಡು ವರ್ಷಗಳ ಕಠಿಣ ಅಭ್ಯಾಸ

ಮನೋಜ್ ಕುಮಾರ್ ಅವರ ಇಬ್ಬರು ಮಕ್ಕಳು ರಾಜಸ್ಥಾನದ ಕೋಟಾದಲ್ಲಿ ಸುಮಾರು ಎರಡು ವರ್ಷಗಳ ಕಾಲ ಇದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದರು. ಕೋಟಾ ದೇಶದ ಪ್ರಮುಖ ಪ್ರವೇಶ ಪರೀಕ್ಷೆಗಳ ಕೋಚಿಂಗ್ ಕೇಂದ್ರಗಳಲ್ಲಿ ಒಂದಾಗಿದ್ದು, ಇಲ್ಲಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳಿಗೆ ಸಾವಿರಾರು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಾರೆ.

ಇಬ್ಬರೂ ಸಹೋದರರು ಕೋಚಿಂಗ್ ತರಗತಿಗಳಿಗೆ ಹಾಜರಾಗುವುದರ ಜೊತೆಗೆ ಸ್ವತಂತ್ರವಾಗಿ ಅಭ್ಯಾಸ, ಪರೀಕ್ಷೆ ಮತ್ತು ಓದಿನ ಮೂಲಕ ತಮ್ಮ ಗುರಿಯತ್ತ ಸಾಗಿದರು. ಮನೆಯಿಂದ ದೂರ ಉಳಿದು ಓದುವುದು, ಪರೀಕ್ಷೆಯ ಒತ್ತಡ ನಿಭಾಯಿಸುವುದು ಮತ್ತು ಸೀಮಿತ ಆರ್ಥಿಕ ಪರಿಸ್ಥಿತಿಯಲ್ಲಿ ಶಿಕ್ಷಣ ಮುಂದುವರಿಸುವುದು ಅವರ ಜೀವನದ ಪ್ರಮುಖ ಸವಾಲುಗಳಾಗಿದ್ದವು.

Advertisement

ಕಿರಿಯ ಮಗ ಮೋನು ರಾಜ್ ಓದಿನಲ್ಲಿ ಮೊದಲಿನಿಂದಲೂ ಉತ್ತಮ ಸಾಧನೆ ಮಾಡುತ್ತಿದ್ದರು. ಅವರು 10ನೇ ತರಗತಿಯಲ್ಲಿ ಶೇ.96 ಅಂಕ ಗಳಿಸಿದ್ದರೆ, 12ನೇ ತರಗತಿಯಲ್ಲಿ ಶೇ.84.5 ಅಂಕ ಗಳಿಸಿದ್ದರು. ಗಯಾದ ವಿದ್ಯಾರ್ಥಿಗಳು ಕೋಟಾದಲ್ಲಿ ಓದಿ ವೈದ್ಯರು ಮತ್ತು ಇಂಜಿನಿಯರ್ ಆಗುತ್ತಿರುವುದನ್ನು ಕಂಡು, ತಾನೂ ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಕನಸು ಬೆಳೆಸಿಕೊಂಡಿದ್ದರು.

ಅನಾರೋಗ್ಯದ ನಡುವೆಯೂ ಓದನ್ನು ಬಿಡದ ಮೋನು

ಕೋಟಾದಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಮೋನು ರಾಜ್ ಅನಾರೋಗ್ಯದ ಸಮಸ್ಯೆಗಳನ್ನು ಎದುರಿಸಿದ್ದರು. ವರದಿಗಳ ಪ್ರಕಾರ, ಅವರಿಗೆ ಟೈಫಾಯ್ಡ್ ಜ್ವರ ಕಾಣಿಸಿಕೊಂಡಿತ್ತು. ನಂತರ ಕಾಮಾಲೆ (ಜಾಂಡೀಸ್) ಸಮಸ್ಯೆಯೂ ಎದುರಾಗಿತ್ತು. ಹೃದಯ ಬಡಿತ ವೇಗವಾಗಿ ಆಗುವ ಸಮಸ್ಯೆ ಹಾಗೂ ಸುಮಾರು ಮೂರು ತಿಂಗಳ ಕಾಲ ಜ್ವರದಿಂದ ಬಳಲಿದ್ದರೆಂದು ವರದಿಯಾಗಿದೆ.

ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದು ಸುಲಭವಲ್ಲ. ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯುವುದರಿಂದ ತೀವ್ರ ಸ್ಪರ್ಧೆ ಇರುತ್ತದೆ. ಇಂತಹ ಸ್ಪರ್ಧೆಯ ನಡುವೆಯೂ ಸೋನು ರಾಜ್ ಉತ್ತಮ ಅಂಕ ಗಳಿಸಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿರುವುದು 

ಕುಟುಂಬಕ್ಕೆ ದೊಡ್ಡ ಸಂತೋಷ ತಂದಿದೆ.

ಜೆಇಇ ಪರೀಕ್ಷೆಯಲ್ಲಿ ತಮ್ಮನ ಯಶಸ್ಸು; ಕೆಮಿಕಲ್ ಇಂಜಿನಿಯರಿಂಗ್ ಆಯ್ಕೆ ಕಿರಿಯ ಮಗ ಮೋನು ರಾಜ್ ಕೂಡ ತನ್ನ ಕನಸಿನತ್ತ ಹೆಜ್ಜೆ ಇಟ್ಟಿದ್ದಾರೆ. ಜೆಇಇ ಮುಖ್ಯ ಪರೀಕ್ಷೆಯಲ್ಲಿ 93 ಪರ್ಸೆಂಟೈಲ್ ಗಳಿಸಿ, ಬಿಐಟಿ ಮೆಸ್ರಾದಲ್ಲಿ ಕೆಮಿಕಲ್ ಇಂಜಿನಿಯರಿಂಗ್ ಓದಲು ಪ್ರವೇಶ ಪಡೆದಿದ್ದಾರೆ. ಶಾಲಾ ಹಂತದಲ್ಲಿಯೇ ಉತ್ತಮ ಅಂಕ ಗಳಿಸಿದ್ದ ಮೋನು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿಯೂ ತಮ್ಮ ಪ್ರತಿಭೆ ತೋರಿಸಿದ್ದಾರೆ.

ಇಬ್ಬರೂ ಸಹೋದರರು ತಮ್ಮ ಸಾಧನೆಗೆ ತಂದೆ-ತಾಯಿಯ ಪರಿಶ್ರಮ, ತ್ಯಾಗ ಮತ್ತು ಬೆಂಬಲವೇ ಮುಖ್ಯ ಕಾರಣ ಎಂದು ಹೇಳಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ತಂದೆ ತಮ್ಮ ಕೃಷಿ ಭೂಮಿಯನ್ನು ಮಾರಾಟ ಮಾಡಿದ್ದು, ಅವರ ಓದಿಗೆ ಬೇಕಾದ ಅವಕಾಶಗಳನ್ನು ಒದಗಿಸಿದ್ದಾರೆ. ಪೋಷಕರ ಈ ನಂಬಿಕೆಯನ್ನು ಉಳಿಸಿಕೊಳ್ಳಲು ಇಬ್ಬರೂ ಶ್ರಮಿಸಿದ್ದಾರೆ.

ಸಂಪನ್ಮೂಲಗಳ ಕೊರತೆಯಿದ್ದರೂ ಶಿಕ್ಷಣದ ಮೇಲಿನ ನಂಬಿಕೆ, ನಿರಂತರ ಪರಿಶ್ರಮ ಮತ್ತು ಕುಟುಂಬದ ಬೆಂಬಲದಿಂದ ಗುರಿ ತಲುಪಬಹುದು ಎಂಬುದಕ್ಕೆ ಮನೋಜ್ ಕುಮಾರ್ ಅವರ ಕುಟುಂಬದ ಕಥೆ ಒಂದು ಉದಾಹರಣೆಯಾಗಿದೆ. ಮಕ್ಕಳ ಭವಿಷ್ಯಕ್ಕಾಗಿ ತಂದೆಯೊಬ್ಬರು ಮಾಡಿದ ತ್ಯಾಗದ ಕಥೆ ಅನೇಕರಿಗೆ ಪ್ರೇರಣೆ ನೀಡುತ್ತಿದೆ.

Comments