Jan 24, 2026 Languages : ಕನ್ನಡ | English

ಕಿಚ್ಚನ ಅಭಿಮಾನಿಗಳಿಗೆ ಸಿಹಿ ಸುದ್ದಿ - ಜಿಯೋಹಾಟ್‌ಸ್ಟಾರ್‌ನಲ್ಲಿ ಭರ್ಜರಿಯಾಗಿ ಬಿಡುಗಡೆಯಾದ ಮಾರ್ಕ್!!

ಬಹಳ ನಿರೀಕ್ಷಿತ "ಮಾರ್ಕ್" ಸಿನಿಮಾ ಇದೀಗ ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿದೆ. ಅಭಿಮಾನಿಗಳು ಕಾಯುತ್ತಿದ್ದ ಈ ಕ್ಷಣವು ಭಾರೀ ಸಂಚಲನ ಮೂಡಿಸಿದೆ. ಶಕ್ತಿ, ಭಾವನೆ ಮತ್ತು ಮಾಸ್ ಕ್ಷಣಗಳ ಸಂಯೋಜನೆಯೊಂದಿಗೆ "ಮಾರ್ಕ್" ಈಗಾಗಲೇ ಪ್ಲಾಟ್‌ಫಾರ್ಮ್‌ನ ಅತ್ಯಂತ ಚರ್ಚಿತ ಬಿಡುಗಡೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಮೊದಲ ದೃಶ್ಯದಿಂದಲೇ ಇದು ಕೇವಲ ಮನರಂಜನೆ ಅಲ್ಲ, ಒಂದು ಅನುಭವ ಎಂಬುದನ್ನು ತೋರಿಸುತ್ತದೆ.

ಜಿಯೋಹಾಟ್‌ಸ್ಟಾರ್‌ನಲ್ಲಿ
ಜಿಯೋಹಾಟ್‌ಸ್ಟಾರ್‌ನಲ್ಲಿ "ಮಾರ್ಕ್" ಸಿನಿಮಾ

ಚಿತ್ರದ ಕಥಾನಕದಲ್ಲಿ ಉತ್ಸಾಹಭರಿತ ದೃಶ್ಯಗಳು, ಹೃದಯಸ್ಪರ್ಶಿ ನಾಟಕೀಯ ಕ್ಷಣಗಳು ಮತ್ತು ಭವ್ಯ ದೃಶ್ಯಾವಳಿಗಳು ತುಂಬಿಕೊಂಡಿವೆ. ನಟನೆಯ ತೀವ್ರತೆ, ಆ್ಯಕ್ಷನ್ ದೃಶ್ಯಗಳ ಭವ್ಯತೆ ಅಥವಾ ಕಥೆಯಲ್ಲಿರುವ ಭಾವನಾತ್ಮಕ ಆಳ – ಎಲ್ಲದರಲ್ಲೂ "ಮಾರ್ಕ್" ತನ್ನದೇ ಆದ ಮೆರಗು ತೋರಿಸಿದೆ ಎನ್ನಬಹುದು. ಹೌದು ಬಿಡುಗಡೆಯ ಸುತ್ತಲಿನ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸುತ್ತಿವೆ.

ಟ್ವಿಟ್ಟರ್, ಇನ್‌ಸ್ಟಾಗ್ರಾಂ ಸೇರಿದಂತೆ ಹಲವು ಪ್ಲಾಟ್‌ಫಾರ್ಮ್‌ಗಳಲ್ಲಿ ಅಭಿಮಾನಿಗಳು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. #MARK ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿ, ಈ ಸಿನಿಮಾ ಒಂದು ಸಾಂಸ್ಕೃತಿಕ ಕ್ಷಣವನ್ನು ಸೃಷ್ಟಿಸಿದೆ. ಅಭಿಮಾನಿಗಳು ಕಿಚ್ಚ ಸುದೀಪ್ ಅವರ ಶಕ್ತಿ ತುಂಬಿದ ಅಭಿನಯವನ್ನು ಮೆಚ್ಚಿಕೊಂಡು, ಚಿತ್ರದಲ್ಲಿನ ಮಾಸ್ ಸನ್ನಿವೇಶಗಳನ್ನು ಸಂಭ್ರಮಿಸುತ್ತಿದ್ದಾರೆ.

ವಿಮರ್ಶಕರು ಮತ್ತು ಪ್ರೇಕ್ಷಕರು ಚಿತ್ರವು ಭವ್ಯತೆಯ ಜೊತೆಗೆ ಭಾವನಾತ್ಮಕ ಅಂಶಗಳನ್ನು ಸಮತೋಲನಗೊಳಿಸಿರುವುದನ್ನು ಗಮನಿಸಿದ್ದಾರೆ. ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾದ ಮಾಸ್ ಕ್ಷಣಗಳು, ಕಥೆಗೆ ಹೃದಯ ತುಂಬುವ ಭಾವನಾತ್ಮಕ ದೃಶ್ಯಗಳೊಂದಿಗೆ ಬೆರೆತು, "ಮಾರ್ಕ್" ಅನ್ನು ವಿಶಿಷ್ಟವಾಗಿಸುತ್ತವೆ. ಇದು ಕೇವಲ ಭವ್ಯತೆ ಬಗ್ಗೆ ಅಲ್ಲ, ಆತ್ಮದ ಬಗ್ಗೆ ಕೂಡ ಎಂದೆನ್ನಬಹದು. ಅತ್ತ ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾದ "ಮಾರ್ಕ್" ಈಗ ಲಕ್ಷಾಂತರ ಪ್ರೇಕ್ಷಕರಿಗೆ ತಲುಪುತ್ತಿದೆ. ಶಕ್ತಿಯುತ ಕಥನಶೈಲಿ ಮತ್ತು ಭವ್ಯ ದೃಶ್ಯಾವಳಿಗಳನ್ನು ಇಷ್ಟಪಡುವವರಿಗೆ ಇದು ತಪ್ಪದೆ ನೋಡಬೇಕಾದ ಸಿನಿಮಾ. "ಮಾರ್ಕ್" ತನ್ನ ಶಕ್ತಿ, ಭಾವನೆ ಮತ್ತು ಸಕತ್ ಮಾಸ್ ದೃಶ್ಯಗಳೊಂದಿಗೆ ಭಾರತೀಯ OTT ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಗುರುತು ಮೂಡಿಸಲಿದೆ. 

Latest News