ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ್ದ ರಣವೀರ್ ಸಿಂಗ್ ಅವರ ಆಕ್ಷನ್ ಪ್ಯಾಕ್ಡ್ ಸಿನಿಮಾ 'ಧುರಂಧರ್' ನೆನಪಿದೆಯಲ್ಲಾ? ಹೌದು, ಕಳೆದ 2025ರ ಡಿಸೆಂಬರ್‌ನಲ್ಲಿ ರಿಲೀಸ್ ಆಗಿ ಅಬ್ಬರಿಸಿದ್ದ ಈ ಚಿತ್ರ, ಈಗ ಒಟಿಟಿ ಪ್ರೇಕ್ಷಕರ ನಿದ್ದೆ ಗೆಡಿಸಲು ಬಿಲ್ಕುಲ್ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟಿದೆ. ಆದರೆ ಈ ಬಾರಿ ಬಂದಿರುವುದು ನಾರ್ಮಲ್ ವರ್ಷನ್ ಅಲ್ಲವೇ ಅಲ್ಲ! ಬದಲಿಗೆ ಇಂಟರ್‌ನೆಟ್ ಅನ್ನೇ ನಡುಗಿಸುತ್ತಿರುವ 'ಧುರಂಧರ್: ರಾ ಅಂಡ್ ಅಂದೇಖಾ' (Dhurandhar: Raw And Undekha) ಎಂಬ ಅನ್‌ಕಟ್ ವರ್ಷನ್.
ವಿಶೇಷ ಏನೆಂದರೆ, ಈ ಸಿನಿಮಾ ಏಕಕಾಲದಲ್ಲಿ ನೆಟ್‌ಫ್ಲಿಕ್ಸ್ ಹಾಗೂ ಜಿಯೋಹಾಟ್‌ಸ್ಟಾರ್ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ರಿಲೀಸ್ ಆಗಿದ್ದು, ಸಿನಿಮಾ ಪ್ರೇಮಿಗಳಿಗೆ ಫುಲ್ ಕಿಕ್ ಕೊಡ್ತಿದೆ. ಹಾಗಾದ್ರೆ, ಥಿಯೇಟರ್‌ನಲ್ಲಿ ನೋಡಿದ್ದಕ್ಕೂ, ಈಗ ಒಟಿಟಿಗೆ ಬಂದಿರೋ ಈ ರಗಡ್ ವರ್ಷನ್‌ಗೂ ಇರೋ ವ್ಯತ್ಯಾಸ ಏನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
ಕಥೆ ಅದೇ.. ಆದ್ರೆ ಮೈ ಜುಂ ಎನಿಸೋ ವೈಲೆನ್ಸ್!
ಮೊದಲೇ ಕ್ಲಿಯರ್ ಮಾಡಬೇಕಾದ ವಿಷಯ ಅಂದ್ರೆ, ಈ ಅನ್‌ಕಟ್ ಆವೃತ್ತಿಯಲ್ಲಿ ಹೊಸದಾಗಿ ಯಾವುದೇ ಸೀನ್‌ಗಳನ್ನು ಸೇರಿಸಿಲ್ಲ ಅಥವಾ ಕ್ಲೈಮ್ಯಾಕ್ಸ್ ಬದಲಾಯಿಸಿಲ್ಲ. ಚಿತ್ರದ ರನ್ನಿಂಗ್ ಟೈಮ್ ಎಂದಿನಂತೆ 3 ಗಂಟೆ 25 ನಿಮಿಷಗಳೇ ಇದೆ. ಆದರೆ ನಿರ್ದೇಶಕ ಆದಿತ್ಯ ಧರ್ ಸಿನಿಮಾದ ಇಂಟೆನ್ಸಿಟಿ ಮತ್ತು ವಿಶುವಲ್ಸ್ ಅನ್ನು ಕಂಪ್ಲೀಟ್ ಆಗಿ ಚೇಂಜ್ ಮಾಡಿದ್ದಾರೆ.
ಸಿನಿಮಾದ ಆರಂಭದಲ್ಲಿ ಬರೋ ಆರ್. ಮಾಧವನ್ ಅವರ ಕಂದಹಾರ್ ಹೈಜಾಕ್ ಸೀನ್‌ನಿಂದಲೇ ನಿಮಗೆ ಈ ಸಿನಿಮಾದ ರಗಡ್ ಟೆಕ್ಸ್ಚರ್ ಫೀಲ್ ಆಗುತ್ತೆ. ಇಡೀ ಸಿನಿಮಾದ ಕಲರ್ ಗ್ರೇಡಿಂಗ್ ಅನ್ನು ತುಂಬಾ ಡಾರ್ಕ್ ಮತ್ತು ರಗಡ್ ಆಗಿ ಡಿಸೈನ್ ಮಾಡಲಾಗಿದೆ. ಸ್ಕ್ರೀನ್ ಮೇಲೆ ಬರೋ ಗಾಯಗಳು, ರಕ್ತಪಾತ ಮತ್ತು ಮಾರಾಮಾರಿಯ ದೃಶ್ಯಗಳು ಥಿಯೇಟರ್‌ಗಿಂತಲೂ ನೂರರಷ್ಟು ಹೆಚ್ಚು ನೈಜವಾಗಿ ಮತ್ತು ಕ್ರೂರವಾಗಿ ಕಾಣಿಸ್ತವೆ.
ಬಿಪ್ ಇಲ್ಲ.. ಮ್ಯೂಟ್ ಇಲ್ಲ.. ಇದು ರಿಯಲ್ 'ರಾ' ಡೈಲಾಗ್ಸ್!
ಈ ಅನ್‌ಕಟ್ ವರ್ಷನ್‌ನ ಅತಿ ದೊಡ್ಡ ಹೈಲೈಟ್ ಅಂದ್ರೆ ಅದು ಪಾತ್ರಗಳು ಮಾತನಾಡುವ ಭಾಷೆ. ಥಿಯೇಟರ್‌ನಲ್ಲಿ ಸೆನ್ಸಾರ್ ಮಂಡಳಿಯ ಕತ್ತರಿಗೆ ಸಿಕ್ಕು ಮ್ಯೂಟ್ ಆಗಿದ್ದ ಅಥವಾ ಬಿಪ್ ಸೌಂಡ್ ಅಡಿಯಲ್ಲಿ ಅಡಗಿ ಹೋಗಿದ್ದ ಎಲ್ಲಾ ಹಸಿಬಿಸಿ ಪದಗಳು ಮತ್ತು ಖಡಕ್ ಬೈಗುಳಗಳನ್ನು ಈ ಒಟಿಟಿ ವರ್ಷನ್‌ನಲ್ಲಿ ಯಾವುದೇ ಫಿಲ್ಟರ್ ಇಲ್ಲದೆ ಹಾಗೇ ಬಿಡಲಾಗಿದೆ!
ಹಮ್ಜಾ ಲಿಯಾರಿ ಎಂಟ್ರಿ ಕೊಡುವ ಸನ್ನಿವೇಶದ ಬೈಗುಳಗಳಿರಲಿ, ಅಥವಾ ಮೊದಲ ಭಾಗದಲ್ಲಿ ತುಂಬಾ ಸೈಲೆಂಟ್ ಆಗಿ ಕಂಡಿದ್ದ ಉಜೇರ್ ಬಲೋಚ್ ಪಾತ್ರ ಈ ಆವೃತ್ತಿಯಲ್ಲಿ ಬಳಸುವ ಆಕ್ರಮಣಕಾರಿ ಭಾಷೆಯಿರಲಿ, ಪ್ರೇಕ್ಷಕರಿಗೆ ಕಣ್ಣು-ಕಿವಿ ನೆಟ್ಟಗಾಗುವಂತೆ ಮಾಡುತ್ತದೆ. ಇನ್ನು ರೆಹಮಾನ್ ಡಕಾಯ್ತ್ ಹಿರಿಯ ಮಗ ಸಾಯುವ ದೃಶ್ಯದಲ್ಲಿ ಬರುವ ಆಕ್ರೋಶದ ಸಂಭಾಷಣೆಗಳು ನಿಮ್ಮ ಮೈ ನಡುಗಿಸೋದು ಗ್ಯಾರಂಟಿ.
ಅರ್ಜುನ್ ರಾಂಪಾಲ್ ಖದರ್ ಮತ್ತು ಸಂಜಯ್ ದತ್ ಮಾಸ್ ಎಂಟ್ರಿ
ಸೆನ್ಸಾರ್ ಕಟ್ ಇಲ್ಲದ ಕಾರಣ ಕೆಲವು ದೃಶ್ಯಗಳು ಪ್ರೇಕ್ಷಕರ ಮೇಲೆ ಭೀತಿ ಹುಟ್ಟಿಸುವ ಮಟ್ಟಿಗೆ ಪ್ರಭಾವ ಬೀರುತ್ತವೆ. ಅದರಲ್ಲೂ ದಾಳಿಯ ನಂತರ ಅರ್ಜುನ್ ರಾಂಪಾಲ್ ಕೊಡುವ ಉಗ್ರ ಸೈದ್ಧಾಂತಿಕ ಭಾಷಣದ ಸೀನ್ ("ಯಾರನ್ನೂ ಬಿಡಬೇಡಿ, ಮಹಿಳೆಯರು, ಮಕ್ಕಳು, ವೃದ್ಧರು ಎಲ್ಲರನ್ನೂ ಮುಗಿಸಿ...") ಈ ಅನ್‌ಕಟ್ ವರ್ಷನ್‌ನಲ್ಲಿ ಯಾವುದೇ ಕಟ್ ಇಲ್ಲದೆ ಬರುತ್ತದೆ. ಇದು ಆ ಪಾತ್ರದ ಕ್ರೂರ ಮನಸ್ಥಿತಿಯನ್ನು ಅತ್ಯಂತ ಭಯಾನಕವಾಗಿ ಬಿಂಬಿಸಿದೆ.
ಇನ್ನು ಈ ಇಡೀ ಅನ್‌ಕಟ್ ಆವೃತ್ತಿಯಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿರುವುದು ಸಂಜಯ್ ದತ್ ಅವರ ಪೊಲೀಸ್ ಪಾತ್ರ. ಅವರ ಇಂಟ್ರೊಡಕ್ಷನ್ ಸೀನ್ ಮತ್ತು ಎದುರಾಳಿಗಳನ್ನು ಮುಗಿಸುವಾಗ ಅವರು ಬಳಸುವ ಖಡಕ್ ಭಾಷೆ ಚಿತ್ರಕ್ಕೆ ರೋಮಾಂಚನ ತಂದಿದೆ. ಕ್ರಿಮಿನಲ್ ಪ್ರಪಂಚದ ಕಟು ವಾಸ್ತವವನ್ನು ಹತ್ತಿರದಿಂದ ನೋಡಬೇಕೆಂದರೆ ಈ ಆವೃತ್ತಿಯನ್ನು ಮಿಸ್ ಮಾಡದೇ ನೋಡಬಹುದು. ಆದರೆ ನೆನಪಿರಲಿ, ಅತಿಯಾದ ಹಿಂಸಾಚಾರ ಇರುವುದರಿಂದ ಇದು ಕೇವಲ ವಯಸ್ಕರಿಗೆ (Adults Only) ಮಾತ್ರ ಸೂಕ್ತ.
'ಧುರಂಧರ್ 2' ಒಟಿಟಿ ರಿಲೀಸ್ ಡೇಟ್ ಫಿಕ್ಸ್!
ಮೊದಲ ಭಾಗ ಒಟಿಟಿಯಲ್ಲಿ ಅಬ್ಬರಿಸುತ್ತಿರುವ ಬೆನ್ನಲ್ಲೇ, ಅಭಿಮಾನಿಗಳು ಕಣ್ಣಿಟ್ಟು ಕಾಯುತ್ತಿದ್ದ 'ಧುರಂಧರ್ 2: ದಿ ರಿವೆಂಜ್' (Dhurandhar 2: The Revenge) ಸಿನಿಮಾದ ಒಟಿಟಿ ರಿಲೀಸ್ ಡೇಟ್ ಕೂಡ ಆಫೀಶಿಯಲ್ ಆಗಿ ಅನೌನ್ಸ್ ಆಗಿದೆ. ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ದಕ್ಕಿಸಿಕೊಂಡಿರುವ ಜಿಯೋಹಾಟ್‌ಸ್ಟಾರ್ ಸಂಸ್ಥೆ, ಸಿನಿಮಾವನ್ನು ಜೂನ್ 5 ರಿಂದ ಸ್ಟ್ರೀಮಿಂಗ್ ಮಾಡುವುದಾಗಿ ತಿಳಿಸಿದೆ.
ಆದರೆ ಜಿಯೋಹಾಟ್‌ಸ್ಟಾರ್ ತನ್ನ ಚಂದಾದಾರರಿಗಾಗಿ ಒಂದು ಸಖತ್ ಬಿಗ್ ಸರ್ಪ್ರೈಸ್ ಪ್ಲಾನ್ ಮಾಡಿದೆ. ಜೂನ್ 5ರ ಆಫೀಶಿಯಲ್ ರಿಲೀಸ್‌ಗಿಂತ ಮುಂಚಿತವಾಗಿಯೇ, ಅಂದರೆ ಜೂನ್ 4ರ ಸಂಜೆ 7 ಗಂಟೆಗೆ ಒಟಿಟಿಯಲ್ಲೇ ಈ ಚಿತ್ರದ ಭರ್ಜರಿ ಪ್ರೀಮಿಯರ್ ಶೋ ಲಭ್ಯವಾಗಲಿದೆ. ಆ ಬಳಿಕ ಜೂನ್ 5 ರಿಂದ ಎಲ್ಲರೂ ವೀಕ್ಷಿಸಬಹುದು!
ಸಿನಿಮಾ ಪ್ರಿಯರ ಗಮನಕ್ಕೆ: ಮೊದಲ ಭಾಗದ ಈ ರಗಡ್ ಅನ್‌ಕಟ್ ವರ್ಷನ್ ಮುಗಿಸಿ, ಜೂನ್ 4 ರಂದು ಬರಲಿರುವ ಪಾರ್ಟ್ 2 ನೋಡಿದರೆ ಸಿನಿಮಾ ನೋಡುವ ಮಜಾ ದುಪ್ಪಟ್ಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಚಿತ್ರರಂಗದ ಇಂತಹದೇ ಇಂಟರೆಸ್ಟಿಂಗ್ ಮತ್ತು ಲೇಟೆಸ್ಟ್ ಒಟಿಟಿ ಸುದ್ದಿಗಳಿಗಾಗಿ ಸದಾ ಫಾಲೋ ಮಾಡಿ Sapthashwa TV.