ಬೋರ್ಗರೆಯುವ ಕಡಲ ಅಲೆಗಳ ಅಬ್ಬರ: ಕಣ್ಣೆದುರೇ ಕೊಚ್ಚಿಹೋದ ಮಹಿಳೆ, ಮರಳಿ ಬಾರದ ಪ್ರಿಯತಮೆ!!

ಜೀವನದಲ್ಲಿ ನಾವು ಹೆಚ್ಚು ಜಾಗರೂಕತೆಯಿಂದ ಇರಬೇಕು. ಇದೀಗ ನಡೆದಿರುವ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ. ತನ್ನ ಪ್ರೀತಿಯ ಹೆಂಡತಿಯೊಡನೆ ಈ ಪುರುಷನು ವಿಹಾರಕ್ಕೆಂದು ಸಮುದ್ರ ಬಳಿ ಹೋಗಿದ್ದಾನೆ, ಸಮುದ್ರದಲ್ಲಿ ಎಂಜಾಯ್ ಮಾಡಲು ತನ್ನ ಹೆಂಡತಿಯೊಡನೆ ದಾಪುಗಾಲು ಹಾಕಿದ್ದಾನೆ. ಆದರೆ ನೋಡ ನೋಡುತ್ತಿದ್ದಂತೆಯೇ, ಈತನು ಊಹೆ ಮಾಡದ ರೀತಿ ತನ್ನ ಹೆಂಡತಿಯನ್ನು, ಆ ಸಮುದ್ರ ತನ್ನೊಡಲೊಳಗೆ ಕರೆದುಕೂಂಡ ಘಟನೆ ಜರುಗಿದೆ. ಅಲೆಗಳ ಮೂಲಕ ಈತನ ಪತ್ನಿಯ ತನ್ನ ಒಡಲಿಗೆ ಸೇರಿಸಿಕೊಂಡಿದ್ದಾಳೆ.

ಸಮುದ್ರದ ಅಲೆಗಳಲ್ಲಿ ಮಹಿಳೆ ಕಾಣೆಯಾದ ಘಟನೆ ವೈರಲ್
ಸಮುದ್ರದ ಅಲೆಗಳಲ್ಲಿ ಮಹಿಳೆ ಕಾಣೆಯಾದ ಘಟನೆ ವೈರಲ್

ರಕ್ಕಸದ ಅಲೆಯ ಹೊಡೆತಕ್ಕೆ ಸಿಲುಕಿದ ಈ ಜೋಡಿ ಒಂದು ಕ್ಷಣ ಭಯಭೀತವಾಗಿತ್ತು. ಆದ್ರೆ ಬೇಗನೆ ದಡ ಸೇರಲು ಸಮಯ ತೆಗೆದುಕೊಂಡ ಪರಿಣಾಮ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ತನ್ನ ಹೆಂಡತಿಯನ್ನು ಅದೆಷ್ಟೇ ಪ್ರಯತ್ನ ಪಟ್ಟು ತಡ ಸೇರಿಸಲು ಯತ್ನಿಸಿದರೂ ಈ ಪುರುಷನಿಗೆ ಅದು ಸಾಧ್ಯವಾಗಿಲ್ಲ. ನಾವು ಸಮುದ್ರದ ಬಳಿ ಹೋಗುತ್ತಿದ್ದೇವೆ ಎಂದರೆ ಮುಂಜಾಗ್ರತೆ ಕ್ರಮಗಳನ್ನು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಸಮುದ್ರದ ಅಲೆಗಳ ಸೆಳೆತ ಹಾಗೂ ರಭಸ ಹೇಗಿರುತ್ತದೆ ಎಂದು ಹೇಳಲು ಆಗುವುದಿಲ್ಲ. ಪ್ರಕೃತಿಯ ವಿಕೋಪ ಕೆಲವೊಮ್ಮೆ ನಾವು ಅಂದುಕೊಂಡಂತೆ ಇರುವುದೇ ಇಲ್ಲ. ಅಸಲಿಗೆ ಸಮುದ್ರದ ಅಲೆಯಲ್ಲಿ ಈತನ ಪತ್ನಿ ಯಾವ ರೀತಿ ಕೊಚ್ಚಿ ಹೋದಳು? ಆ ಭಯಾನಕ ವಿಡಿಯೋ ಇಲ್ಲಿದೆ ಒಮ್ಮೆ ನೋಡಿ. 

ದಡ ಸೇರಿದ ವ್ಯಕ್ತಿಯು ಆಕೆಯನ್ನು ರಕ್ಷಿಸಲು ಕೈ ಚಾಚಿ ಕಿರುಚಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಹಠಮಾರಿ ಅಲೆಗಳು ಆಕೆಯನ್ನು ಮರಳಿ ದಡಕ್ಕೆ ಬಿಡದೆ ತನ್ನೊಡಲಿಗೆ ನುಂಗಿಕೊಂಡವು. ಕಣ್ಣೆದುರೇ ಪ್ರೀತಿಪಾತ್ರಳು ಕಣ್ಮರೆಯಾಗುತ್ತಿರುವುದನ್ನು ನೋಡಿದ ಆ ವ್ಯಕ್ತಿಯ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯ ಮೀನುಗಾರರು ಮತ್ತು ರಕ್ಷಣಾ ಸಿಬ್ಬಂದಿ ಸಮುದ್ರಕ್ಕೆ ಇಳಿದು ಹುಡುಕಾಟ ನಡೆಸಿದರು. ಆದರೆ, ಸಮುದ್ರದ ರೌದ್ರಾವತಾರ ಮತ್ತು ಅಲೆಗಳ ಅಬ್ಬರ ಹೆಚ್ಚಿದ್ದರಿಂದ ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಯಿತು. ಎಷ್ಟೇ ಪ್ರಯತ್ನಿಸಿದರೂ ಮಹಿಳೆಯ ಯಾವುದೇ ಸುಳಿವು ಸಿಗಲಿಲ್ಲ. ಅಂತಿಮವಾಗಿ ಕತ್ತಲಾದ ಕಾರಣ ಅನಿವಾರ್ಯವಾಗಿ ಹುಡುಕಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಯಿತು.

ಈ ಘಟನೆಯು ಪ್ರವಾಸಿಗರಿಗೆ ಒಂದು ದೊಡ್ಡ ಎಚ್ಚರಿಕೆಯಾಗಿದೆ. ಸಮುದ್ರಕ್ಕೆ ಭೇಟಿ ನೀಡುವಾಗ ಹವಾಮಾನದ ಬಗ್ಗೆ ಅರಿವಿರಲಿ. ಅದರಲ್ಲೂ ಮಳೆಗಾಲದಲ್ಲಿ ಅಥವಾ ಕಡಲು ಪ್ರಕ್ಷುಬ್ಧವಾಗಿದ್ದಾಗ ನೀರಿನ ಹತ್ತಿರ ಹೋಗುವುದು ಮೃತ್ಯುವನ್ನು ಆಹ್ವಾನಿಸಿದಂತೆ. ದಡದಲ್ಲಿದ್ದರೂ ಅಲೆಗಳ ಸೆಳೆತ ನಮ್ಮನ್ನು ಎಳೆದುಕೊಂಡು ಹೋಗಬಲ್ಲದು. ಹಾಗಾಗಿ, ಅಧಿಕಾರಿಗಳ ಸೂಚನೆಯನ್ನು ಪಾಲಿಸಿ ಪ್ರಾಣ ರಕ್ಷಿಸಿಕೊಳ್ಳುವುದು ನಮ್ಮ ಜವಾಬ್ದಾರಿ.

Latest News