Mar 30, 2026 Languages : ಕನ್ನಡ | English

ಪ್ರೀತಿ ನಂಬಿ ಹೋದವಳಿಗೆ ಘೋರ ಅಂತ್ಯ: ಪ್ರೇಯಸಿಯನ್ನೇ ಕ*ತ್ತರಿಸಿ ಫ್ರಿಜ್‌ನಲ್ಲಿಟ್ಟ ಪಾಪಿ - ನೌಕಾಪಡೆ ಉದ್ಯೋಗಿಯ ಕ್ರೌರ್ಯ!!

ವಿಶಾಖಪಟ್ಟಣದಲ್ಲಿ ನಡೆದ ಈ ದಾರುಣ ಘಟನೆ ಕೇಳಿದರೆ ಮನುಷ್ಯತ್ವವೇ ಮಲಗಿದೆಯೇನೋ ಅನಿಸುತ್ತದೆ. ಪ್ರೀತಿಯ ಹೆಸರಲ್ಲಿ ನಂಬಿಸಿ, ವಂಚಿಸಿ, ಕೊನೆಗೆ ಅಮಾನವೀಯವಾಗಿ ಹ*ತ್ಯೆ ಮಾಡಿರುವ ಈ ಕೇಸ್ ಈಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಭಾರತೀಯ ನೌಕಾಪಡೆಯಲ್ಲಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ ರವೀಂದರ್ ಎಂಬಾತ, ತನ್ನ ಮೂರು ವರ್ಷದ ಪ್ರೇಯಸಿ ಮೌನಿಕಾಳನ್ನು ಅತ್ಯಂತ ಕ್ರೂರವಾಗಿ ಕೊಂ*ದಿದ್ದಾನೆ.

ವರದಕ್ಷಿಣೆ ದುರಾಸೆ ಮತ್ತು ಪ್ರೀತಿಯ ದ್ರೋಹ: ವಿಶಾಖಪಟ್ಟಣ ದುರಂತ; | Photo Credit: https://x.com/revathitweets
ವರದಕ್ಷಿಣೆ ದುರಾಸೆ ಮತ್ತು ಪ್ರೀತಿಯ ದ್ರೋಹ: ವಿಶಾಖಪಟ್ಟಣ ದುರಂತ; | Photo Credit: https://x.com/revathitweets

ರವೀಂದರ್ ಮತ್ತು ಮೌನಿಕಾ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮೌನಿಕಾಳನ್ನು ಮದುವೆಯಾಗುವುದಾಗಿ ರವೀಂದರ್ ಭರವಸೆ ನೀಡಿದ್ದ. ಆದರೆ, ದುರಾಸೆಯ ರವೀಂದರ್ ಹೆಚ್ಚು ವರದಕ್ಷಿಣೆ ಸಿಗುತ್ತದೆ ಎಂಬ ಕಾರಣಕ್ಕೆ ಬೇರೊಬ್ಬ ಮಹಿಳೆಯನ್ನು ಮದುವೆಯಾದ. ಸದ್ಯ ಆತನ ಪತ್ನಿ ಗರ್ಭಿಣಿಯಾಗಿದ್ದು, ಹೆರಿಗೆಗಾಗಿ ತವರು ಮನೆಗೆ ತೆರಳಿದ್ದಾಳೆ. ಈ ಸಮಯವನ್ನು ಬಳಸಿಕೊಂಡ ರವೀಂದರ್, ಮೌನಿಕಾಳನ್ನು ಮುಗಿಸಲು ಪ್ಲಾನ್ ಮಾಡಿದ್ದಾನೆ.

ತನ್ನನ್ನು ಮದುವೆಯಾಗುವಂತೆ ಮೌನಿಕಾ ಒತ್ತಾಯಿಸುತ್ತಿದ್ದಾಳೆ ಎಂಬ ನೆಪವನ್ನಿಟ್ಟುಕೊಂಡು, ಆಕೆಯನ್ನು ಮನೆಗೆ ಕರೆಸಿಕೊಂಡ ರವೀಂದರ್ ಅಲ್ಲಿಯೇ ಆಕೆಯನ್ನು ಕೊಂ*ದಿದ್ದಾನೆ. ಅಷ್ಟಕ್ಕೆ ಆತನ ರಾಕ್ಷಸ ಬುದ್ಧಿ ನಿಂತಿಲ್ಲ. ಮೌನಿಕಾಳ ದೇಹವನ್ನು ಎರಡು ಭಾಗಗಳಾಗಿ ಕ*ತ್ತರಿಸಿದ್ದಾನೆ. ಅರ್ಧ ದೇಹವನ್ನು ಗೋಣಿಚೀಲದಲ್ಲಿ ತುಂಬಿ ಧಾರಪಾಲಂ ಎಂಬಲ್ಲಿಗೆ ಕೊಂಡೊಯ್ದು ಸುಟ್ಟು ಹಾಕಿದ್ದಾನೆ. ಇನ್ನುಳಿದ ಅರ್ಧ ದೇಹವನ್ನು ಸಣ್ಣ ಸಣ್ಣ ತುಂಡುಗಳಾಗಿ ಕ*ತ್ತರಿಸಿ ತನ್ನ ಮನೆಯ ಫ್ರಿಜ್‌ನಲ್ಲಿ ಬಚ್ಚಿಟ್ಟಿದ್ದಾನೆ. ಈ ಸುದ್ದಿ ಈಗ ಮನುಷ್ಯ ಕುಲಕ್ಕೇ ಕಪ್ಪು ಚುಕ್ಕೆಯಂತಿದೆ.

ದುರಂತವೆಂದರೆ, ಇಷ್ಟು ಭೀಕರವಾಗಿ ಕೊ*ಲೆಯಾದ ಮೌನಿಕಾಳನ್ನೇ ಇಂದು ಕೆಲವು ಸುದ್ದಿಗಳು 'ಗೋಲ್ಡ್ ಡಿಗ್ಗರ್' ಅಥವಾ ಹಣಕ್ಕಾಗಿ ರವೀಂದರ್‌ನನ್ನು ಪೀಡಿಸುತ್ತಿದ್ದವಳು ಎಂದು ಬಿಂಬಿಸುತ್ತಿವೆ. ದೇಹವನ್ನೇ ತುಂಡು ತುಂಡು ಮಾಡಿ ಫ್ರಿಜ್‌ನಲ್ಲಿಟ್ಟಿರುವ ಆರೋಪಿಯ ಕೃತ್ಯಕ್ಕಿಂತ, ಕೊ*ಲೆಯಾದ ಯುವತಿಯ ಚಾರಿತ್ರವಧೆ ಮಾಡುವುದು ಎಷ್ಟು ಸರಿ? ಪ್ರೀತಿಯಲ್ಲಿ ವಂಚನೆಗೊಳಗಾದ ಯುವತಿ ತನ್ನ ಹಕ್ಕಿಗಾಗಿ ಅಥವಾ ಮದುವೆಗಾಗಿ ಕೇಳುವುದು ತಪ್ಪೇ? ಅವಳನ್ನು ರಾಕ್ಷಸಿಯಂತೆ ಬಿಂಬಿಸುತ್ತಿರುವುದು ನಿಜಕ್ಕೂ ದುರ್ದೈವ.

ಈ ಘಟನೆ ನಮ್ಮ ಸಮಾಜದ ಯುವತಿಯರಿಗೆ ಒಂದು ದೊಡ್ಡ ಪಾಠ. ಪ್ರೀತಿಯ ಹೆಸರಿನಲ್ಲಿ ವಂಚಿಸುವ, ವರದಕ್ಷಿಣೆಗಾಗಿ ಬೆನ್ನು ಬೀಳುವ ಇಂತಹ 'ಆತತಾಯಿ'ಗಳ ಬಗ್ಗೆ ಎಚ್ಚರದಿಂದಿರಬೇಕು. ಯಾವುದಾದರೂ ಸಂಬಂಧದಲ್ಲಿ ಮಾನಸಿಕ ಹಿಂಸೆ ಅಥವಾ ವಂಚನೆ ನಡೆಯುತ್ತಿದೆ ಎಂದು ಗೊತ್ತಾದ ತಕ್ಷಣ ಅಲ್ಲಿಂದ ಹೊರಬರುವುದು ಜಾಣತನ. ಅತಿಯಾದ ನಂಬಿಕೆ ಇಂತಹ ದುರಂತಗಳಿಗೆ ಕಾರಣವಾಗಬಹುದು. ಜೀವಕ್ಕಿಂತ ಯಾವುದೂ ದೊಡ್ಡದಲ್ಲ, ಹಾಗಾಗಿ ಸಂಬಂಧಗಳಲ್ಲಿ ವಂಚನೆ ಕಂಡ ತಕ್ಷಣ ಧೈರ್ಯದಿಂದ ಹೆಜ್ಜೆ ಇಡಬೇಕು.

ಶ್ರೀಕಾಕುಳಂ ಜಿಲ್ಲೆಯ ಪಾಲಕೊಂಡ ಮೂಲದ ರವೀಂದರ್‌ನ ಈ ಕ್ರೂರ ಕೃತ್ಯಕ್ಕೆ ತಕ್ಕ ಶಿಕ್ಷೆಯಾಗಲಿ. ಮೌನಿಕಾಳ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಇಂತಹ ಘಟನೆಗಳು ಮರುಕಳಿಸದಿರಲಿ ಎಂಬುದು ಎಲ್ಲರ ಆಶಯ. 

Latest News