ಇಂಟರ್ನೆಟ್‌ನಲ್ಲಿ ದಿನಾ ನೂರಾರು ವಿಚಿತ್ರ ಮತ್ತು ಆಶ್ಚರ್ಯ ತರೋ ವಿಡಿಯೋಗಳನ್ನು ನೀವು ನೋಡಿರ್ತೀರಾ. ಆದರೆ ಇವತ್ತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇರೋ ಸುದ್ದಿ ಕೇಳಿದ್ರೆ ನಿಮ್ಮ ಮೈ ಜುಂ ಅನ್ನೋದು ಗ್ಯಾರಂಟಿ! ನಮ್ಮ ಕಣ್ಣೆದುರು ಒಂದೇ ಒಂದು ಜೇನುನೊಣ ಬಂದ್ರೆನೇ ನಾವು ಅಬ್ಬಬ್ಬಾ ಅಂತ ಓಡಿಹೋಗ್ತೀವಿ. ಅಕಸ್ಮಾತ್ ಅದು ಕಚ್ಚಿದ್ರೆ ಬಾತುಕೊಂಡು ಎಷ್ಟು ಪೇನ್ ಆಗುತ್ತೆ ಅನ್ನೋದು ಎಲ್ಲರಿಗೂ ಗೊತ್ತು.
ಆದರೆ ಯುವಕನೊಬ್ಬನ ಪ್ಯಾಂಟ್‌ನ ಹಿಂಭಾಗದಲ್ಲಿ ಬರೋಬ್ಬರಿ ಸಾವಿರಾರು ಜೇನುನೊಣಗಳು ಒಟ್ಟಿಗೆ ಬಂದು ಮುತ್ತಿಗೆ ಹಾಕಿವೆ! ಇಂತಹ ಡೇಂಜರಸ್ ಸಿಚುಯೇಷನ್‌ನಲ್ಲಿ ಆ ಯುವಕ ಗಾಬರಿಯಾಗದೆ, ಓಡದೆ, ಬರೋಬ್ಬರಿ 30 ನಿಮಿಷಗಳ ಕಾಲ ಒಂದೇ ಒಂದು ಚೂರು ಕದಲದೆ ಸ್ತಬ್ಧವಾಗಿ ನಿಂತು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಗ್ಯಾರೇಜ್‌ಗೆ ಹೋಗುವಾಗ ನಡೆದ ಆ ಒಂದು ಘಟನೆ!
ವರದಿಗಳ ಪ್ರಕಾರ, 25 ವರ್ಷದ ವೆರೆಲ್ ಎಂಬ ಯುವಕ ಎಂದಿನಂತೆ ತನ್ನ ಕೆಲಸ ಮುಗಿಸಿಕೊಂಡು ಗ್ಯಾರೇಜ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದನು. ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಅವನ ಸುತ್ತಲೂ ಜೇನುನೊಣಗಳು ಸೌಂಡ್ ಮಾಡ್ತಾ ಹಾರಾಡೋಕೆ ಶುರು ಮಾಡಿವೆ. ಜೇನುನೊಣಗಳ ಸ್ವಭಾವದ ಪ್ರಕಾರ, ಅವುಗಳ ಗುಂಪಿಗೆ ಒಂದು 'ರಾಣಿ ಜೇನು' (Queen Bee) ಇರುತ್ತೆ. ಆ ರಾಣಿ ಜೇನು ಎಲ್ಲೂ ಹೋಗುತ್ತೋ, ಇಡೀ ಜೇನುನೊಣಗಳ ಸೈನ್ಯವೇ ಅದರ ಹಿಂದೆ ಹೋಗುತ್ತೆ.
ದುರದೃಷ್ಟವಶಾತ್, ಆ ಹಾರಿ ಬಂದ ರಾಣಿ ಜೇನುನೊಣ ನೇರವಾಗಿ ಬಂದು ವೆರೆಲ್ ಹಾಕಿಕೊಂಡಿದ್ದ ಪ್ಯಾಂಟ್‌ನ ಹಿಂಭಾಗದಲ್ಲಿ (ಬ್ಯಾಕ್ ಪಾಕೆಟ್ ಹತ್ತಿರ) ಕುಳಿತುಕೊಂಡಿದೆ. ಅಷ್ಟೇ, ಇನ್ನು ಕೆಲವೇ ಸೆಕೆಂಡುಗಳಲ್ಲಿ ಇಡೀ ಜೇನುನೊಣಗಳ ದಂಡೇ ಯುವಕನ ಪ್ಯಾಂಟ್ ಅನ್ನು ಕಂಪ್ಲೀಟ್ ಆಗಿ ಆವರಿಸಿಕೊಂಡು ಬಿಟ್ಟಿದೆ. ದೂರದಿಂದ ನೋಡಿದ್ರೆ ಆತ ಜೇನುನೊಣಗಳ ಪ್ಯಾಂಟ್ ಹಾಕಿಕೊಂಡಿದ್ದಾನೇನೋ ಅನ್ನುವ ತರಹ ಇಡೀ ಜಾಗ ಕಪ್ಪಾಗಿ ಮಾರ್ಪಟ್ಟಿತ್ತು.
ಗಾಬರಿಯಾಗದೆ 30 ನಿಮಿಷ 'ಸ್ಟ್ಯಾಚು' ತರಹ ನಿಂತ ವೆರೆಲ್!
ಇಂತಹ ಪರಿಸ್ಥಿತಿಯಲ್ಲಿ ಯಾರೇ ಆದ್ರೂ ಜೋರಾಗಿ ಕೂಗಾಡುತ್ತಾ, ಕೈಕಾಲು ಬಡಿಯುತ್ತಾ ಓಡೋಕೆ ಶುರು ಮಾಡ್ತಾರೆ. ಆದರೆ ವೆರೆಲ್ ಮಾತ್ರ ಸಖತ್ ಜಾಣ್ಮೆ ಪ್ರದರ್ಶಿಸಿದ್ದಾನೆ. ತಾನು ಏನಾದ್ರೂ ಅಲುಗಾಡಿದ್ರೆ ಅಥವಾ ಜೇನುನೊಣಗಳನ್ನು ಓಡಿಸಲು ಟ್ರೈ ಮಾಡಿದ್ರೆ ಅವುಗಳು ಸಿಟ್ಟಿಗೆದ್ದು ಒಟ್ಟಿಗೆ ದಾಳಿ ಮಾಡ್ತವೆ, ಇಷ್ಟು ಜೇನುಗಳು ಒಟ್ಟಿಗೆ ಕಚ್ಚಿದ್ರೆ ಪ್ರಾಣಕ್ಕೇ ಕಂಟಕ ಅನ್ನೋದು ಅವನಿಗೆ ಗೊತ್ತಿತ್ತು.
ಹಾಗಾಗಿ ಆತ ಒಂದು ಚೂರು ಕದಲದೆ, ಉಸಿರು ಬಿ ಬಿಟ್ಟು ಸುಮಾರು ಅರ್ಧ ಗಂಟೆ ಕಾಲ ಹೆಪ್ಪುಗಟ್ಟಿದ ಹಾಗೆ ಒಂದೇ ಜಾಗದಲ್ಲಿ ನಿಂತುಕೊಂಡಿದ್ದಾನೆ. ಸಾವಿರಾರು ಜೇನುಗಳು ಮೈಮೇಲೆ ಓಡಾಡ್ತಾ ಇದ್ರೂ ಆತ ತೋರಿದ ತಾಳ್ಮೆ ನಿಜಕ್ಕೂ ಸಾಮಾನ್ಯ ವಿಷಯವಲ್ಲ.
【戦慄の30分】
— ネットの珍動画研究所 (@medisarasu) June 1, 2026
ガレージへ向かう、ごく普通の日常。
それが一瞬で「悪夢」に変わりました。
■尻に宿った女王
インドのヴェレルさん(25)を襲った悲劇。
歩行中、一匹の「女王蜂」がズボンに付着。
次の瞬間、数千匹のミツバチが群れをなし、
彼の尻を「新居」として選びました。
■究極の忍耐… pic.twitter.com/SRbMb9ORuj
ಕೊನೆಗೂ ಐಡಿಯಾ ಬಳಸಿ ಪಾರಾದ ಕಿಲಾಡಿ ಯುವಕ!
ಹಾಗೇ ನಿಂತುಕೊಂಡಿದ್ದ ಯುವಕ ಕೊನೆಗೆ ಒಂದು ಸೂಪರ್ ಪ್ಲಾನ್ ಮಾಡಿದ್ದಾನೆ. ತನ್ನ ಪ್ಯಾಂಟ್‌ಗೆ ಮುತ್ತಿಕೊಂಡಿದ್ದ ಜೇನುಗಳ ಮಧ್ಯೆ ಹುಡುಕಾಡಿ, ಜಾಣ್ಮೆಯಿಂದ ಮೊದಲು ಆ ರಾಣಿ ಜೇನುನೊಣವನ್ನು ಪತ್ತೆ ಹಚ್ಚಿದ್ದಾನೆ. ನಂತರ ಯಾರದ್ದೋ ಸಹಾಯ ಪಡೆದು ಅಥವಾ ತಾನೇ ಮೆಲ್ಲನೆ ಒಂದು ಸಣ್ಣ ಡಬ್ಬಿ ಅಥವಾ ಪಾತ್ರೆಯನ್ನು ತರಿಸಿ, ಆ ರಾಣಿ ಜೇನನ್ನು ಅದರೊಳಗೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾನೆ.
ಯಾವಾಗ ರಾಣಿ ಜೇನುನೊಣ ಯುವಕನ ಪ್ಯಾಂಟ್‌ನಿಂದ ಬೇರ್ಪಟ್ಟು ಡಬ್ಬಿ ಒಳಗೆ ಹೋಯಿತೋ, ಅದನ್ನು ಫಾಲೋ ಮಾಡಿಕೊಂಡು ಪ್ಯಾಂಟ್ ಮೇಲಿದ್ದ ಇನ್ನುಳಿದ ಸಾವಿರಾರು ಜೇನುನೊಣಗಳು ಕೂಡ ವೆರೆಲ್‌ನನ್ನು ಬಿಟ್ಟು ಅಲ್ಲಿಂದ ಹಾರಿ ಹೋಗಿವೆ. ಕೊನೆಗೂ ವೆರೆಲ್ ಒಂದು ಸಣ್ಣ ಗಾಯವೂ ಇಲ್ಲದೆ ಪವಾಡ ಸದೃಶವಾಗಿ ಪಾರಾಗಿದ್ದಾನೆ.
ನೆಟ್ಟಿಗರ ಕಮೆಂಟ್ಸ್: ಇವನಿಗೆ 'ಮ್ಯಾನ್ ಆಫ್ ಸ್ಟೀಲ್' ಪ್ರಶಸ್ತಿ ಕೊಡಬೇಕು!
ಸೋಶಿಯಲ್ media ದಲ್ಲಿ ಈ ಇನ್ಸಿಡೆಂಟ್ ಸಖತ್ ವೈರಲ್ ಆಗ್ತಾ ಇದ್ದು, ನೆಟ್ಟಿಗರು ಯುವಕನ ಧೈರ್ಯಕ್ಕೆ ಹ್ಯಾಂಡ್ಸ್ ಆಫ್ ಹೇಳ್ತಾ ಇದ್ದಾರೆ. "ನನ್ನ ಮೈಮೇಲೆ ಒಂದು ನೊಣ ಕುಳಿತರೂ ನನಗೆ ಇಷ್ಟೊತ್ತು ಸುಮ್ಮನೆ ಇರಲು ಸಾಧ್ಯವಿಲ್ಲ. ಇವನ ಕಂಟ್ರೋಲ್ ಮತ್ತು ತಾಳ್ಮೆ ಅದ್ಭುತ" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಇವನ ಜಾಗದಲ್ಲಿ ನಾನಿದ್ದಿದ್ರೆ ಅಲ್ಲಿಂದ ಓಡಿ ಇಷ್ಟೊತ್ತಿಗೆ ಹಾಸ್ಪಿಟಲ್ ಸೇರಿರುತ್ತಿದ್ದೆ. ಯುವಕ ನಿಜಕ್ಕೂ ಗ್ರೇಟ್" ಅಂತ ಹೊಗಳಿದ್ದಾರೆ.