Apr 19, 2026 Languages : ಕನ್ನಡ | English

ಕಾಲೇಜಿಗೆ ಹೋದ ಮಗಳು ಲಾಡ್ಜ್‌ನಲ್ಲಿ ಪ್ರತ್ಯಕ್ಷ - ತಾಯಿಯ 'ಧರ್ಮದೇಟು' ವಿಡಿಯೋ ಅಸಲಿಯೋ ಅಥವಾ ನಕಲಿಯೋ?

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಯಾವ ವಿಡಿಯೋ ವೈರಲ್ ಆಗುತ್ತೆ, ಯಾವುದು ಫೇಕ್ ಅಂತ ಹೇಳೋದೇ ಕಷ್ಟವಾಗಿದೆ. ಈಗ ಇಂತಹದ್ದೇ ಒಂದು 'ಹೈಡ್ರಾಮಾ' ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡ್ತಿದೆ. "ಅಮ್ಮಾ ಕಾಲೇಜಿಗೆ ಹೋಗಿ ಬರ್ತೀನಿ" ಅಂತ ಹೇಳಿ ಹೋದ ಮಗಳು, ಲಾಡ್ಜ್‌ನಲ್ಲಿ ಪ್ರಿಯಕರನ ಜೊತೆ ಸಿಕ್ಕಿಬಿದ್ದ ಘಟನೆ ಈಗ ಚರ್ಚೆಗೆ ಗ್ರಾಸವಾಗಿದೆ.

ಲಾಡ್ಜ್‌ನಲ್ಲಿ ಪ್ರಿಯಕರನ ಜೊತೆ ಮಗಳು ಫುಲ್ ಬ್ಯುಸಿ
ಲಾಡ್ಜ್‌ನಲ್ಲಿ ಪ್ರಿಯಕರನ ಜೊತೆ ಮಗಳು ಫುಲ್ ಬ್ಯುಸಿ

ಮನೆಯಿಂದ ಕಾಲೇಜಿಗೆ ಅಂತ ಹೊರಟ ಮಗಳ ಮೇಲೆ ತಾಯಿಗೆ ಮೊದಲೇ ಅನುಮಾನ ಇತ್ತು ಅನ್ಸುತ್ತೆ. ಮಗಳು ಕಾಲೇಜಿಗೆ ಹೋಗದೆ ದಾರಿ ಮಧ್ಯೆ ಪ್ರಿಯಕರನ ಜೊತೆ ಹೋಟೆಲ್ ರೂಮ್ ಸೇರಿದ್ದಾಳೆ ಎಂಬ ಸುಳಿವು ಸಿಕ್ಕ ತಕ್ಷಣ, ತಾಯಿ ಸುಮ್ಮನೆ ಕೂರಲಿಲ್ಲ. ಗ್ರಾಮದ ಕೆಲವರನ್ನು ಜೊತೆಗೆ ಕರೆದುಕೊಂಡು ನೇರವಾಗಿ ಲಾಡ್ಜ್ ಮೇಲೆ ದಾಳಿ ಮಾಡಿದ್ದಾರೆ.

ರೂಮಿನ ಬಾಗಿಲು ತೆರೆದಾಗ ಮಗಳು ತನ್ನ ಪ್ರಿಯಕರನ ಜೊತೆ ಇರೋದನ್ನು ಕಂಡು ತಾಯಿಯ ಆಕ್ರೋಶ ಮುಗಿಲು ಮುಟ್ಟಿದೆ. ಸ್ಥಳದಲ್ಲೇ ಮಗಳ ಕೆನ್ನೆಗೆ ಬಾರಿಸಿ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಜೊತೆಗಿದ್ದ ಯುವಕನಿಗೂ ಸರಿಯಾಗಿಯೇ 'ಧರ್ಮದೇಟು' ನೀಡಿದ್ದಾರೆ. ಈ ವೇಳೆ ಮಹಿಳಾ ಪೊಲೀಸರು ಬಂದು ತಾಯಿಯನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿರೋದು ವಿಡಿಯೋದಲ್ಲಿದೆ.

7 ಲಕ್ಷ ವೀಕ್ಷಣೆ: ಆದ್ರೆ ನೆಟ್ಟಿಗರ ಸಂಶಯವೇ ಬೇರೆ!
ಈ ವಿಡಿಯೋ ಎಕ್ಸ್ (ಟ್ವಿಟ್ಟರ್) ನಲ್ಲಿ ಅಪ್ಲೋಡ್ ಆದ ಕೇವಲ ಒಂದೇ ದಿನದಲ್ಲಿ ಸುಮಾರು 7 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಆದರೆ ವಿಡಿಯೋ ನೋಡಿದ ಮೇಲೆ ಜನಸಾಮಾನ್ಯರು ಮತ್ತು ನೆಟ್ಟಿಗರು "ಇದು ನಿಜವಾದ ಘಟನೆನಾ?" ಅಂತ ಪ್ರಶ್ನೆ ಮಾಡ್ತಿದ್ದಾರೆ.

ನೆಟ್ಟಿಗರ ಸಂಶಯಕ್ಕೆ ಕಾರಣಗಳೇನು?

ಸ್ಕ್ರಿಪ್ಟೆಡ್ ನಾಟಕ: ಇತ್ತೀಚಿನ ದಿನಗಳಲ್ಲಿ ಕೇವಲ ವ್ಯೂಸ್ ಮತ್ತು ಸಬ್‌ಸ್ಕ್ರೈಬರ್ಸ್‌ಗಳನ್ನು ಹೆಚ್ಚಿಸಿಕೊಳ್ಳಲು ಇಂತಹ ನಾಟಕೀಯ ವಿಡಿಯೋಗಳನ್ನು ಚಿತ್ರೀಕರಿಸುವುದು ದೊಡ್ಡ ಟ್ರೆಂಡ್ ಆಗಿದೆ. ಇದು ಕೂಡ ಅಂತಹದ್ದೇ ಒಂದು 'ಸ್ಕ್ರಿಪ್ಟೆಡ್' ವಿಡಿಯೋ ಇರಬಹುದು ಅನ್ನೋದು ಬಹುತೇಕರ ವಾದ.

ಕ್ಯಾಮೆರಾ ಆಂಗಲ್: ರೂಮಿನ ಒಳಗಡೆ ನಡೆದ ಈ ಎಲ್ಲಾ ಹೈಡ್ರಾಮಾವನ್ನು ಯಾರೋ ಒಬ್ಬರು ಬಹಳ ಪ್ಲ್ಯಾನ್ ಮಾಡಿದಂತೆ ಮೊದಲೇ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದರು. ಇದು ವಿಡಿಯೋ ನಕಲಿ ಇರಬಹುದು ಎಂಬ ಅನುಮಾನಕ್ಕೆ ಪುಷ್ಠಿ ನೀಡಿದೆ.

ಇದು ನಿಜವೋ ಅಥವಾ ಪ್ರಚಾರಕ್ಕಾಗಿ ಮಾಡಿದ ನಾಟಕವೋ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಹರಿದು ಬರುವ ಪ್ರತಿಯೊಂದು ವಿಡಿಯೋವನ್ನೂ ಕಣ್ಣು ಮುಚ್ಚಿ ನಂಬಬೇಡಿ ಎಂಬುದು ತಜ್ಞರ ಕಿವಿಮಾತು. ಒಂದು ಕಡೆ ಮಗಳ ದಾರಿ ತಪ್ಪಿದ ನಡವಳಿಕೆಯ ಬಗ್ಗೆ ಚರ್ಚೆಯಾಗುತ್ತಿದ್ದರೆ, ಇನ್ನೊಂದೆಡೆ ಪ್ರಚಾರಕ್ಕಾಗಿ ಇಂತಹ ವಿಡಿಯೋ ಮಾಡಿದವರ ವಿರುದ್ಧ ಜನ ಆಕ್ರೋಶ ಹೊರಹಾಕುತ್ತಿದ್ದಾರೆ.