ವೈಯಕ್ತಿಕ ಜೀವನದ ಜೊತೆ ಚೆಲ್ಲಾಟ ಆಡಿದ್ರೆ ಜೈಲು ಗ್ಯಾರಂಟಿ: ವಿಕೃತ ಟ್ರೋಲರ್‌ಗಳಿಗೆ ವಿಜಯಲಕ್ಷ್ಮಿ ಕೊಟ್ಟ ಬಿಗ್ ಶಾಕ್!!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟ ದರ್ಶನ್ ಜೈಲು ಪಾಲಾಗಿರೋದು ಸದ್ಯ ಇಡೀ ರಾಜ್ಯದಲ್ಲೇ ದೊಡ್ಡ ಚರ್ಚೆಯ ವಿಷಯ. ಒಂದು ಕಡೆ ಪ್ರಕರಣದ ವಿಚಾರಣೆಗಳು ನ್ಯಾಯಾಲಯದಲ್ಲಿ ನಡೀತಿದ್ರೆ, ಮತ್ತೊಂದೆಡೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಗಂಡನ ಬೇಲ್‌ಗಾಗಿ ಕಾನೂನು ಹೋರಾಟ ನಡೆಸುತ್ತಾ ಸಾಡು ಸಾಲು ಪ್ರಯತ್ನಗಳನ್ನ ಮಾಡ್ತಿದ್ದಾರೆ.

ಸೈಬರ್ ಪೊಲೀಸರ ಮೊರೆ ಹೋದ ವಿಜಯಲಕ್ಷ್ಮಿ | Photo Credit: AI IMAGE
ಸೈಬರ್ ಪೊಲೀಸರ ಮೊರೆ ಹೋದ ವಿಜಯಲಕ್ಷ್ಮಿ | Photo Credit: AI IMAGE

ಆದರೆ, ಇದೇ ಸಂದರ್ಭವನ್ನು ಬಳಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಅತಿ ಕೀಳು ಮಟ್ಟದ ವಿಕೃತಿಯನ್ನು ಪ್ರದರ್ಶಿಸಲು ಶುರು ಮಾಡಿದ್ದಾರೆ. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ತೇಜೋವಧೆ ಮಾಡುವ ರೀತಿಯಲ್ಲಿ ಅಶ್ಲೀಲ ಮತ್ತು ಸುಳ್ಳು ಪೋಸ್ಟ್‌ಗಳನ್ನು ಹರಿಬಿಡಲಾಗುತ್ತಿದ್ದು, ಕೊನೆಗೂ ತಾಳ್ಮೆ ಕಳೆದುಕೊಂಡ ವಿಜಯಲಕ್ಷ್ಮಿ ಅವರು ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ. ಈ ಇಡೀ ವಿವಾದದ ಕಂಪ್ಲೀಟ್ ವಿವರ ಇಲ್ಲಿದೆ.

ಟ್ರೋಲ್ ಹೆಸರಲ್ಲಿ ವಿಕೃತಿ: ಏನಿದು ಸೋಷಿಯಲ್ ಮೀಡಿಯಾ ಪೋಸ್ಟ್?

ಸೋಶಿಯಲ್ ಮೀಡಿಯಾದಲ್ಲಿ ‘ಜಲಗಾರ ಯೂನಿವರ್ಸಿಟಿ’ ಎಂಬ ಹೆಸರಿನ ಅಕೌಂಟ್‌ನಿಂದ ಕಿಡಿಗೇಡಿಯೊಬ್ಬ ದರ್ಶನ್ ಹಾಗೂ ಅವರ ಇಡೀ ಕುಟುಂಬದ ವಿರುದ್ಧ ಸತತವಾಗಿ ಅತ್ಯಂತ ಕೀಳು ಮಟ್ಟದ ಪೋಸ್ಟ್‌ಗಳನ್ನು ಮಾಡುತ್ತಾ ಬಂದಿದ್ದಾನೆ. ಇತ್ತೀಚೆಗೆ ಈ ಖಾತೆಯಲ್ಲಿ ಮಾಡಲಾದ ಒಂದು ಪೋಸ್ಟ್ ಇಡೀ ವಿವಾದಕ್ಕೆ ಕಾರಣವಾಗಿದೆ.

ಸುಳ್ಳು ಆರೋಪ ಮತ್ತು ಅಶ್ಲೀಲತೆ: ದರ್ಶನ್ ಜೈಲಿನಲ್ಲಿದ್ದಾರೆ ಎಂಬ ಕಾರಣಕ್ಕೆ ಅವರ ಪತ್ನಿ ವಿಜಯಲಕ್ಷ್ಮಿ ಅವರು ನಟ ಧನ್ವೀರ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆ ಪೋಸ್ಟ್‌ನಲ್ಲಿ ಅತ್ಯಂತ ಹೀನಾಯವಾಗಿ ಬರೆಯಲಾಗಿದೆ.

ಅಶ್ಲೀಲ ಪದಗಳ ಬಳಕೆ: ಕೇವಲ ಸುಳ್ಳು ಸುದ್ದಿ ಅಷ್ಟೇ ಅಲ್ಲದೆ, ವಿಜಯಲಕ್ಷ್ಮಿ ಹಾಗೂ ಅವರ ಮಗ ವಿನೀಶ್ ಕುರಿತಾಗಿಯೂ ಅಶ್ಲೀಲ ಮತ್ತು ವಿಕೃತ ಪದಗಳನ್ನು ಬಳಸಿ ಪೋಸ್ಟ್ ಹಾಕಲಾಗಿದೆ.

ಅಸಲಿ ಸತ್ಯ ಏನು? ಆ ವಿಡಿಯೋದ ಹಿನ್ನೆಲೆ ಏನು?

ಯಾವ ವಿಡಿಯೋವನ್ನು ಇಟ್ಟುಕೊಂಡು ಕಿಡಿಗೇಡಿಗಳು ಇಂತಹ ಕೀಳು ಮಟ್ಟದ ಸುಳ್ಳು ವಾರ್ತೆಯನ್ನು ಹಬ್ಬಿಸುತ್ತಿದ್ದಾರೋ, ಅದರ ಹಿಂದೆ ಇರೋದು ಪಕ್ಕಾ ಫ್ಯಾಮಿಲಿ ಬಾಂಧವ್ಯ.

ನಟ ಧನ್ವೀರ್ ಅವರು ದರ್ಶನ್ ಅವರನ್ನು ತಮ್ಮ ಅಣ್ಣನ ಸ್ಥಾನದಲ್ಲಿ ನೋಡುತ್ತಾರೆ. ವಿಜಯಲಕ್ಷ್ಮಿ ಅವರನ್ನು ಸದಾ ಗೌರವದಿಂದ "ಅತ್ತಿಗೆ" ಎಂದೇ ಕರೆಯುತ್ತಾರೆ. ದರ್ಶನ್ ಅಭಿನಯದ 'ಡೇವಿಲ್' ಚಿತ್ರದ ಕೆಲಸಗಳಿಗೆ ಸಂಬಂಧಿಸಿದಂತೆ ಧನ್ವೀರ್ ಹಾಗೂ ವಿಜಯಲಕ್ಷ್ಮಿ ಅವರು ಒಟ್ಟಿಗೆ ತೆರಳಿದ್ದರು. ಈ ಸಂದರ್ಭದ ವಿಡಿಯೋವನ್ನು ಕತ್ತರಿಸಿ, ಅದಕ್ಕೆ ತಪ್ಪು ಅರ್ಥ ಬರುವ ಹಾಗೆ ಎಡಿಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಇಂತಹ ವಿಕೃತ ಪೋಸ್ಟ್ ಮಾಡಲಾಗಿದೆ.

ಸೈಬರ್ ಪೊಲೀಸರ ಮೊರೆ ಹೋದ ವಿಜಯಲಕ್ಷ್ಮಿ

ಯಾವಾಗ ಈ ಪೋಸ್ಟ್‌ಗಳು ಮಿತಿ ಮೀರಿದವೋ ಮತ್ತು ತನ್ನ ಮಗ ಹಾಗೂ ಕುಟುಂಬದ ಗೌರವಕ್ಕೆ ಧಕ್ಕೆ ತರುವ ಹಂತಕ್ಕೆ ತಲುಪಿದವೋ, ಆಗ ವಿಜಯಲಕ್ಷ್ಮಿ ಅವರು ಸುಮ್ಮನೆ ಕೂರಲಿಲ್ಲ. ಈ ಡಿಜಿಟಲ್ ಕಿರುಕುಳ ಹಾಗೂ ತೇಜೋವಧೆಯ ವಿರುದ್ಧ ಅವರು ತಕ್ಷಣವೇ ಬೆಂಗಳೂರಿನ ಸೈಬರ್ ಕ್ರೈಮ್ (CEN) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನಲ್ಲಿ ‘ಜಲಗಾರ ಯೂನಿವರ್ಸಿಟಿ’ ಎಂಬ ಖಾತೆಯ ಲಿಂಕ್ ಹಾಗೂ ಅದರಲ್ಲಿ ಹಾಕಲಾಗಿರುವ ಅಶ್ಲೀಲ ಕಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಲಗತ್ತಿಸಲಾಗಿದೆ. ಮಹಿಳೆಯೊಬ್ಬರ ಚಾರಿತ್ರ್ಯ ಹರಣ ಮಾಡುತ್ತಿರುವ ಇಂತಹ ಕಿಡಿಗೇಡಿಗಳನ್ನು ತಕ್ಷಣವೇ ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಸೈಬರ್ ಪೊಲೀಸರು ಸದ್ಯ ಆ ಫೇಕ್ ಅಕೌಂಟ್‌ನ ಐಪಿ ಅಡ್ರೆಸ್ ಪತ್ತೆ ಹಚ್ಚಲು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ಟ್ರೋಲ್ ಪೇಜ್‌ಗಳ ಅತಿರೇಕ ಮತ್ತು ಸಾರ್ವಜನಿಕರ ಆಕ್ರೋಶ

ರೇಣುಕಾಸ್ವಾಮಿ ಪ್ರಕರಣ ಕಾನೂನು ಚೌಕಟ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ತಪ್ಪು ಮಾಡಿದವರಿಗೆ ನ್ಯಾಯಾಲಯ ಶಿಕ್ಷೆ ಕೊಡುತ್ತದೆ. ಆದರೆ, ಈ ನೆಪದಲ್ಲಿ ಕುಟುಂಬದ ಹೆಣ್ಣುಮಕ್ಕಳನ್ನು, ಅದರಲ್ಲೂ ಒಬ್ಬ ತಾಯಿ ಮತ್ತು ಮಗನನ್ನು ಎಳೆದು ತಂದು ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲವಾಗಿ ಬಿಂಬಿಸುವುದು ಎಷ್ಟು ಸರಿ? ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಲೈಕ್ಸ್ ಮತ್ತು ಫಾಲೋವರ್ಸ್ ಸಿಗುತ್ತಾರೆ ಅನ್ನೋ ಹುಚ್ಚುತನಕ್ಕೆ ಇವತ್ತು ಅನೇಕ ಟ್ರೋಲ್ ಪೇಜ್‌ಗಳು ಸೆಲೆಬ್ರಿಟಿಗಳ ವೈಯಕ್ತಿಕ ಜೀವನದ ಜೊತೆ ಚೆಲ್ಲಾಟ ಆಡುತ್ತಿವೆ. ಸೈಬರ್ ಪೊಲೀಸರು ಇಂಥವರ ವಿರುದ್ಧ ಕೇವಲ ಕೇಸ್ ದಾಖಲಿಸುವುದಷ್ಟೇ ಅಲ್ಲದೆ, ಇಂತಹ ಅಕೌಂಟ್‌ಗಳನ್ನು ಶಾಶ್ವತವಾಗಿ ಬ್ಯಾನ್ ಮಾಡಿ, ಅಡ್ಮಿನ್‌ಗಳನ್ನು ಜೈಲಿಗೆ ಕಳುಹಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಸೋಷಿಯಲ್ ಮೀಡಿಯಾ ಅನ್ನೋದು ಪ್ರತಿಯೊಬ್ಬರಿಗೂ ಸಿಕ್ಕಿರೋ ಮುಕ್ತ ವೇದಿಕೆಯ ಹೌದು. ಆದರೆ ಅಲ್ಲಿ ಒಬ್ಬ ಮಹಿಳೆಯ ಚಾರಿತ್ರ್ಯದ ಬಗ್ಗೆ, ಅದೂ ಸುಳ್ಳು ಮಾಹಿತಿಯನ್ನಿಟ್ಟುಕೊಂಡು ಮಾತನಾಡುವುದು ಅಪರಾಧ. ದರ್ಶನ್ ಅವರ ಅಭಿಮಾನಿಗಳು ಹಾಗೂ ಸಾಮಾನ್ಯ ಸಾರ್ವಜನಿಕರು ಕೂಡ ಈ ಕೀಳು ಮಟ್ಟದ ಪೋಸ್ಟ್‌ಗಳ ವಿರುದ್ಧ ಆಕ್ರೋಶ ಹೊರಹಾಕಿದ್ದು, ವಿಜಯಲಕ್ಷ್ಮಿ ಅವರ ಕಾನೂನು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

Latest News