ಗಂಟೆಗಟ್ಟಲೆ ಕ್ಯೂ ನಿಲ್ಲೋಕೆ ಬ್ರೇಕ್ - ತಿರುಮಲ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಟ್ರಿ ಕೊಟ್ಟ AI!!

ತಿರುಪತಿ: ನೀವು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಲು ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ರೆ ನಿಮಗೊಂದು ಸಖತ್ ಖುಷಿ ಸುದ್ದಿ ಇಲ್ಲಿದೆ! ಸಾಮಾನ್ಯವಾಗಿ ತಿರುಪತಿಗೆ ಹೋದರೆ ಸಾಕು, ಧರ್ಮದರ್ಶನ ಮತ್ತು ಸರ್ವದರ್ಶನದ ಕ್ಯೂನಲ್ಲಿ ನಿಂತು ವೆಂಕಟರಮಣನ ದರ್ಶನ ಮಾಡಬೇಕಾದರೆ ಸಾಧಾರಣವಾಗಿ ಹತ್ತಾರು ಗಂಟೆಗಳು ಬೇಕಾಗುತ್ತಿತ್ತು. ಆದರೆ ಇನ್ಮೇಲೆ ಸಾಮಾನ್ಯ ಭಕ್ತರು ತಿರುಪತಿಯಲ್ಲಿ ಗಂಟೆಗಟ್ಟಲೆ ಕಾಯದೇ ಅತ್ಯಂತ ವೇಗವಾಗಿ ಶ್ರೀವಾರಿ ದರ್ಶನ ಪಡೆಯಲು ಟಿಟಿಡಿ ಆಡಳಿತ ಮಂಡಳಿ ಒಂದು ಕ್ರಾಂತಿಕಾರಿ ನಿರ್ಧಾರವನ್ನು ತಗೊಂಡಿದೆ. ಇನ್ಮುಂದೆ ಪ್ರತಿದಿನ ಮುಂಜಾನೆ ಸ್ವಾಮಿಗೆ ನಡೆಯುವ ಅತ್ಯಂತ ಪವಿತ್ರವಾದ 'ಅಭಿಷೇಕ ಸೇವೆ'ಯ (Abhishekam Seva) ಸಮಯದಲ್ಲಿಯೂ ಸಾಮಾನ್ಯ ಭಕ್ತರಿಗೆ ದರ್ಶನ ಭಾಗ್ಯ ಸಿಗಲಿದೆ!

ತಿರುಪತಿ ಭಕ್ತರಿಗೆ ಬಂಫರ್ ಲಕ್
ತಿರುಪತಿ ಭಕ್ತರಿಗೆ ಬಂಫರ್ ಲಕ್

ಈಗ ಬೇಸಿಗೆ ರಜೆ ಇರೋದ್ರಿಂದ ತಿರುಮಲದಲ್ಲಿ ಭಕ್ತರ ರಶ್ ಯಾವ ರೇಂಜ್‌ಗೆ ಇದೆ ಅಂದ್ರೆ ಹೇಳತೀರದು. ಇದನ್ನು ಕಂಟ್ರೋಲ್ ಮಾಡಲು ಮತ್ತು ಸಾಮಾನ್ಯ ಭಕ್ತರಿಗೆ ಮೊದಲ ಪ್ರಿಫರೆನ್ಸ್ ಕೊಡಲು ಇತ್ತೀಚೆಗಷ್ಟೇ ವಿಐಪಿ ಬ್ರೇಕ್ ದರ್ಶನಗಳನ್ನು (VIP Break Darshan) ಕಂಪ್ಲೀಟ್ ಆಗಿ ಕ್ಯಾನ್ಸಲ್ ಮಾಡಲಾಗಿತ್ತು. ಇದು ಸಖತ್ ಸಕ್ಸಸ್ ಆಗಿರೋದ್ರಿಂದ, ಈಗ ಮತ್ತೊಂದು ಭರ್ಜರಿ ನಿರ್ಧಾರ ತಗೊಂಡಿದ್ದೇವೆ ಎಂದು ಟಿಟಿಡಿ ಹೆಚ್ಚುವರಿ ಇಒ (Additional EO) ವೆಂಕಯ್ಯ ಚೌದರಿ ಅವರು ಆಫೀಶಿಯಲ್ ಆಗಿ ಅನೌನ್ಸ್ ಮಾಡಿದ್ದಾರೆ.

ದಿನಕ್ಕೆ 15,000 ಭಕ್ತರಿಗೆ ಹೆಚ್ಚುವರಿ ದರ್ಶನ ಭಾಗ್ಯ!

ಇದುವರೆಗೂ ಸ್ವಾಮಿಯ ಅಭಿಷೇಕ ಸೇವೆಯ ಸಮಯದಲ್ಲಿ ಕೇವಲ ಗಣ್ಯರಿಗೆ ಅಂದರೆ ವಿಐಪಿಗಳಿಗೆ (VIPs) ಮಾತ್ರ ಅವಕಾಶ ಇರುತ್ತಿತ್ತು. ಆದರೆ ಇನ್ಮುಂದೆ ಆ ಪವಿತ್ರ ಸಮಯದಲ್ಲಿಯೂ ಸರ್ವದರ್ಶನ ಹಾಗೂ ಧರ್ಮದರ್ಶನದ ಕ್ಯೂ ಲೈನ್‌ಗಳಲ್ಲಿ ಕಾಯ್ತಿರುವ ಸುಮಾರು 5,000 ಭಕ್ತರನ್ನು ಡೈರೆಕ್ಟ್ ಆಗಿ ದರ್ಶನಕ್ಕೆ ಬಿಡಲು ನಿರ್ಧರಿಸಲಾಗಿದೆ. ಈ ಹೊಸ ಸಿಸ್ಟಮ್‌ನಿಂದಾಗಿ ದಿನದ ಬೇರೆ ಬೇರೆ ಟೈಮಿಂಗ್ಸ್ ಲೆಕ್ಕ ಹಾಕಿದರೆ, ಪ್ರತಿದಿನ ಹೆಚ್ಚುವರಿಯಾಗಿ ಬರೋಬ್ಬರಿ 15,000 ಸಾಮಾನ್ಯ ಭಕ್ತರಿಗೆ ಯಾವುದೇ ಕಿರಿಕಿರಿ ಇಲ್ಲದೆ ಶ್ರೀಲಕ್ಷ್ಮೀ ವೆಂಕಟೇಶ್ವರನ ದರ್ಶನ ಭಾಗ್ಯ ಸಿಗಲಿದೆ.

ಕ್ಯೂ ಮ್ಯಾನೇಜ್ ಮಾಡಲು ಎಂಟ್ರಿ ಕೊಟ್ಟ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI)!

ತಿರುಮಲದಲ್ಲಿ ಕ್ಯೂ ಲೈನ್‌ಗಳನ್ನು ಮ್ಯಾನೇಜ್ ಮಾಡಲು ಮತ್ತು ಭಕ್ತರ ದಟ್ಟಣೆಯನ್ನು ಕಂಟ್ರೋಲ್ ಮಾಡಲು ಟಿಟಿಡಿ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಾಧುನಿಕ 'AI ಕಮಾಂಡ್ ಕಂಟ್ರೋಲ್ ಸೆಂಟರ್' (AI Command Control Center) ಅನ್ನು ರೆಡಿ ಮಾಡಲಾಗಿದೆ. ಈ ಕೃತಕ ಬುದ್ಧಿಮತ್ತೆ ಕೇಂದ್ರವು ಪ್ರತಿ ಗಂಟೆಗೆ ಕ್ಯೂಲೈನ್‌ಗಳಲ್ಲಿ ಎಷ್ಟು ಜನರಿದ್ದಾರೆ ಮತ್ತು ರಶ್ ಎಷ್ಟಿದೆ ಅನ್ನೋದನ್ನು ಪಕ್ಕಾ ಅಕ್ಯುರೇಟ್ ಆಗಿ ಅಂದಾಜು ಮಾಡುತ್ತೆ. ಈ ಸೆಂಟರ್ ಕೊಡುವ ರಿಪೋರ್ಟ್ ನೋಡಿ ಅಧಿಕಾರಿಗಳು ತಕ್ಷಣವೇ ಭಕ್ತರನ್ನು ದರ್ಶನಕ್ಕೆ ಬಿಡುತ್ತಿದ್ದಾರೆ. ಇದ್ರಿಂದಾಗಿ ಭಕ್ತರು ಕ್ಯೂನಲ್ಲಿ ಕಾಯುವ ಟೈಮ್ ಸಿಕ್ಕಾಪಟ್ಟೆ ಕಮ್ಮಿಯಾಗಿದೆ.

ತಿರುಪತಿಯಲ್ಲೇ ಸಿದ್ಧವಾಗಲಿದೆ ತಿಮ್ಮಪ್ಪನ ನೈವೇದ್ಯದ ಶುದ್ಧ ತುಪ್ಪ!

ತಿರುಪತಿ ಲಡ್ಡು ಮತ್ತು ತಿಮ್ಮಪ್ಪನ ನೈವೇದ್ಯದ ತುಪ್ಪದ ಮ್ಯಾಟರ್ ನಿಮಗೆ ಗೊತ್ತೇ ಇದೆ. ಈಗ ತಿರುಪತಿಯಲ್ಲಿರುವ ಟಿಟಿಡಿಯ ಅಧಿಕೃತ 'ಎಸ್.ವಿ. ಗೋಶಾಲೆ'ಯಲ್ಲಿ (SV Goshalale) ಹೈಟೆಕ್ ತಂತ್ರಜ್ಞಾನದ ಶುದ್ಧ ತುಪ್ಪ ತಯಾರಿಕಾ ಕೇಂದ್ರ (Ghee Manufacturing Plant) ಹಾಗೂ 'ಸೆಂಟರ್ ಫಾರ್‌ ಎಕ್ಸ್‌ಲೆನ್ಸ್' ಬಿಲ್ಡಿಂಗ್ ಕೆಲಸ ಶರವೇಗದಲ್ಲಿ ನಡೀತಿದೆ. ಮುಂಬರುವ ಜುಲೈ ತಿಂಗಳ ಎಂಡಿಂಗ್ ವೇಳೆಗೆ ಈ ಪ್ಲಾಂಟ್ ಕೆಲಸವನ್ನು ಪೂರ್ತಿಯಾಗಿ ಮುಗಿಸಲು ಆಂಧ್ರಪ್ರದೇಶ ಸರ್ಕಾರ ಟಾರ್ಗೆಟ್ ಫಿಕ್ಸ್ ಮಾಡಿದೆ.

ಸದ್ಯಕ್ಕೆ ಈ ಗೋಶಾಲೆಯಲ್ಲಿ ಉತ್ಪಾದನೆಯಾಗುವ ಸುಮಾರು 2,000 ಲೀಟರ್ ಹಾಲನ್ನು ಅತ್ಯಾಧುನಿಕ ಪ್ರಕ್ರಿಯೆಗೆ (Processing) ಒಳಪಡಿಸಿ, ಶ್ರೀವಾರ ನಿತ್ಯ ಕೈಂಕರ್ಯಗಳು ಹಾಗೂ ನೈವೇದ್ಯಗಳಿಗಾಗಿ ಬಳಸಲಾಗುತ್ತಿದೆ. ಇನ್ನು ತುಪ್ಪ ತಯಾರಿಕಾ ಪ್ಲಾಂಟ್‌ನ ಶೇ. 90 ರಷ್ಟು ಕೆಲಸ ಈಗಾಗಲೇ ಮುಗಿದಿದೆ. ಸ್ಟಾರ್ಟಿಂಗ್ ಹಂತದಲ್ಲಿ ಈ ಪ್ಲಾಂಟ್ ಮೂಲಕ ಪ್ರತಿದಿನ 80 ಕಿಲೋ ಅತ್ಯಂತ ಶುದ್ಧವಾದ ದೇಶಿ ಹಸುವಿನ ತುಪ್ಪವನ್ನು ತಯಾರಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ ಹಂತಹಂತವಾಗಿ ಈ ಪ್ಲಾಂಟ್‌ನ ಕೆಪಾಸಿಟಿಯನ್ನು ದಿನಕ್ಕೆ 10,000 ಲೀಟರ್ ಹಾಲು ಸಂಸ್ಕರಣೆ ಮಾಡುವ ಮಟ್ಟಿಗೆ ದೊಡ್ಡದಾಗಿ ಮಾಡಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಸಾಮಾನ್ಯ ಭಕ್ತರಿಗೆ ಇನ್ಮುಂದೆ ತಿರುಪತಿ ಜರ್ನಿ ಇನ್ನು ಆರಾಮದಾಯಕ ಆಗೋದ್ರಲ್ಲಿ ಡೌಟೇ ಇಲ್ಲ!