ಜೀವದ ಹಂಗಿಲ್ಲದೆ ಕಿಕ್ಕಿರಿದ ಬಸ್ಸಿನ ಬಾಗಿಲಲ್ಲೇ ಪ್ರಯಾಣ ಮಾಡಿದ ವಿದ್ಯಾರ್ಥಿಗಳು - ತಮಿಳುನಾಡಿನ ವಿಡಿಯೋ ವೈರಲ್

ದಿನನಿತ್ಯದ ಪ್ರಯಾಣಕ್ಕೆ ಹೆಚ್ಚಿನವ್ರು ಸರ್ಕಾರೀ ಬಸ್ ಬಳಸುವುದು ಮಾಮೂಲಿ. ಈ ಕಾರ್ಮಿಕರು ಕೆಲಸಕ್ಕೆ ಹೋಗೋವುದಕ್ಕೆ ರಾಜ್ಯದ ಸರ್ಕಾರಿ ಬಸ್ ಗಳನ್ನ ಉಪಯೋಗಿಸಿಕೊಳ್ಳುತ್ತಾರೆ. ಕೆಲವರು ಬೇರೆ ಊರಿಗೆ ಕುಟುಂಬದ ಜೊತೆ ಅವರ ನೆರೆ ಊರಿಗೆ ಹೋಗುವಾಗ ಬಸ್ ಉಪಯೋಗ ಪಡೆದುಕೊಳುವುತ್ತಾರೆ. ಇನ್ನು ವಿದ್ಯಾರ್ಥಿಗಳು ಪಾಸ್ ಮೂಲಕ ಬಸ್ಸುಗಳಲ್ಲಿ ಹೋಗುತ್ತಾರೆ. ಹೌದು ಸರ್ಕಾರೀ ಬಸ್ ಸಹ ಸಾರ್ವಜನಿಕರ ಸುರಕ್ಷೆತೆಗೆ ಅಷ್ಟೇ ಗಮನ ಹರಿಸಿ, ಸೂಕ್ತ ಡ್ರೈವರ್ ನೇಮಿಸಿ, ಪರಿಣಿತಿ ಹೊಂದಿದ ಕಂಡಕ್ಟರ್ ಸೌಲಭ್ಯ ನೀಡುವುದು ನಮ್ಮ ರಾಜ್ಯದಲ್ಲಿ ಪ್ರತಿಯೊಂದು ಹಳ್ಳಿಗಳಲ್ಲಿ ನೋಡಿದ್ದೇವೆ. 

ಸಾರ್ವಜನಿಕರ ಸುರಕ್ಷತೆಗೆ ಸರ್ಕಾರೀ ಬಸ್ ವ್ಯವಸ್ಥೆ ನೋಡಿ
ಸಾರ್ವಜನಿಕರ ಸುರಕ್ಷತೆಗೆ ಸರ್ಕಾರೀ ಬಸ್ ವ್ಯವಸ್ಥೆ ನೋಡಿ

ಆದ್ರೆ ಇದೀಗ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು, ಕಾಲೇಜ್ ಹೋಗುವ ವಿದ್ಯಾರ್ಥಿಗಳು ಚಲಿಸುವ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವ ಪರಿ ಎಲ್ಲರಿಗೂ ಶಾಕ್ ಆಗಿದೆ. ಇದು ತಮಿಳುನಾಡು ಬಸ್ ಎಂದು ಕಂಡು ಬಂದಿದ್ದು ಸಾರ್ವಜನಿಕವಾಗಿ ಪ್ರಯಾಣಿಕರ, ಮಕ್ಕಳ ಹಾಗೂ ಪ್ರತಿಯೊಬ್ಬರ ಸುರಕ್ಷತೆಯ ಬಗ್ಗೆ ಪ್ರಶ್ನೆ ಎದ್ದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಬಾಗಿಲು ಬಾಗದಲ್ಲಿಯೇ ನಿಂತುಕೊಂಡು ವಿದ್ಯಾರ್ಥಿಗಳು ಪ್ರಯಾಣ ಮಾಡುವ ದೃಶ್ಯ ವೈರಲ್ ಆಗುತ್ತಿದೆ. ಈ ರೀತಿ ಘಟನೆ ಆಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. 

ಹೌದು ಕೆಲವು ಬಸ್‌ಗಳು ಹಳೆಯ ಮಾದರಿಯಲ್ಲಿದ್ದು, ನಿರ್ವಹಣೆಯ ಕೊರತೆಯಿಂದಾಗಿ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ ಎಂಬಂತೆ ಕಂಡು ಬಂದಿದೆ. ಹೊಸ ಬಸ್‌ಗಳನ್ನು ಪರಿಚಯಿಸಿದರೂ, ಅವುಗಳ ಸಂಖ್ಯೆ ಸಾಕಷ್ಟು ಇಲ್ಲದ ಕಾರಣ ಜನಸಂದಣಿ ಹೆಚ್ಚಾಗಿದೆ ಎಂದು ಕೇಳಿ ಬಂದಿದೆ.  ನಗರಗಳಲ್ಲಿ ಬಸ್‌ಗಳು ತುಂಬಿ ಹೋಗುತ್ತವೆ, ಪ್ರಯಾಣಿಕರು ನಿಂತುಕೊಂಡೇ ಪ್ರಯಾಣ ಮಾಡಬೇಕಾಗುತ್ತದೆ. ಹೌದು ಪ್ರತಿನಿತ್ಯ ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು ಎಲ್ಲರೂ ಬಸ್‌ಗಳ ಮೇಲೆ ಅವಲಂಬಿತರಾಗಿದ್ದಾರೆ.ಕೆಲವೊಮ್ಮೆ ಬಸ್‌ಗಳ ವಿಳಂಬದಿಂದ ಜನರಿಗೆ ಸಮಯದ ಸಮಸ್ಯೆ ಎದುರಾಗುತ್ತದೆ. 

View this post on Instagram

A post shared by Saptashwa TV Kannada (@saptashwatv)

ಗ್ರಾಮೀಣ ಪ್ರದೇಶಗಳಲ್ಲಿ ಬಸ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ಜನರು ದೂರದೂರಿಗೆ ಕಾಯಬೇಕಾಗುತ್ತದೆ. ಜನಸಂದಣಿ ಕಡಿಮೆ ಮಾಡಲು ಹೆಚ್ಚಿನ ಬಸ್‌ಗಳನ್ನು ಪರಿಚಯಿಸುವ ಅಗತ್ಯವಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಆರಾಮಕ್ಕಾಗಿ ಬಸ್‌ಗಳ ನಿರ್ವಹಣೆ ಸುಧಾರಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ಬಸ್‌ಗಳನ್ನು ನಿಯೋಜಿಸುವುದು ಜನರ ಜೀವನ ಸುಲಭಗೊಳಿಸುವ ಕಾರ್ಯ ಆಗಬೇಕಾಗುತ್ತದೆ. ತಮಿಳುನಾಡಿನ ಬಸ್‌ಗಳು ಜನರ ದಿನನಿತ್ಯದ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಅವುಗಳ ಸುಧಾರಣೆ ಜನಜೀವನದ ಗುಣಮಟ್ಟವನ್ನು ಹೆಚ್ಚಿಸಲು ಸಹಾಯಕವಾಗಲಿದೆ. ಹಾಗಾಗಿ ಅಧಿಕಾರಿಗಳು ಇದರ ಮೇಲೆ ಗಮನ ಹರಿಸುವ ಕೆಲಸ ಮಾಡಲಿ ಎನ್ನುತ್ತಿದ್ದಾರೆ ಈ ದೃಶ್ಯ ಕಂಡವರು.

Latest News