ಸಂಬಂಧಗಳಿಗೆ ಬೆಲೆ ಇಲ್ಲದ ಇಂದಿನ ಕಾಲದಲ್ಲಿ, ಮಾನವೀಯತೆಯೇ ಮರೆತು ಹೋಗಿದೆಯೇ ಎಂಬ ಸಂಶಯ ಮೂಡುವುದು ಸಹಜ. ಇದಕ್ಕೆ ಸಾಕ್ಷಿ ಎಂಬಂತೆ, ಗಂಡ ತೀರಿಹೋದ ಕೇವಲ ಮೂರೇ ದಿನಕ್ಕೆ ಆತನ ಪತ್ನಿ ತನ್ನ ಮೈದುನನನ್ನೇ ಮದುವೆಯಾಗಿರುವ ಘಟನೆ ಇಡೀ ಸಮಾಜವನ್ನೇ ಬೆಚ್ಚಿಬೀಳಿಸಿದೆ. ಈ ವಿಚಿತ್ರ ನಿರ್ಧಾರದ ಬಗ್ಗೆ ಜನರು ಪ್ರಶ್ನಿಸಿದಾಗ ಆಕೆ ನೀಡಿದ ಉತ್ತರ ಎಲ್ಲರನ್ನೂ ದಂಗಾಗುವಂತೆ ಮಾಡಿದೆ.
ಗಂಡ ತೀರಿಹೋದ ಎಂದು ಅಳುತ್ತಾ ಕುಳಿತು ನನ್ನ ಯೌವನವನ್ನು ನಾನು ಯಾಕೆ ಹಾಳು ಮಾಡಿಕೊಳ್ಳಲಿ? ಜೀವನದಲ್ಲಿ ಯೌವನ ಎಂಬುದು ಒಮ್ಮೆ ಮಾತ್ರ ಬರುತ್ತದೆ, ಅದನ್ನ ಪೂರ್ಣವಾಗಿ ಅನುಭವಿಸಬೇಕು ಎಂದು ಆಕೆ ಅತ್ಯಂತ ನಿರ್ಲಕ್ಷ್ಯದಿಂದ ಹೇಳಿದ್ದಾಳೆ. ಕೇವಲ ವೈಯಕ್ತಿಕ ಸುಖಕ್ಕಾಗಿ ಸಂಬಂಧಗಳ ಮೌಲ್ಯವನ್ನು ಗಾಳಿಗೆ ತೂರಿದ ಆಕೆ ಈ ಮಾತು ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿವೆ. ಇಂತಹ ಘಟನೆಗಳು ಸಮಾಜದ ನೈತಿಕತೆಯ ಬಗ್ಗೆ ಮರುಚಿಂತನೆ ಮಾಡುವಂತೆ ಮಾಡಿದೆ.
ಈ ಕಥೆಯ ಅಸಲಿ ವಿಷಯ ಏನೆಂದರೆ, ಮೃತ ಗಂಡನಿಗೆ ಸುಮಾರು 50 ವರ್ಷ ವಯಸ್ಸಾಗಿತ್ತು, ಆದರೆ ಹೆಂಡತಿಗೆ ಕೇವಲ 30 ವರ್ಷ. ಈ ವಯಸ್ಸಿನ ಅಂತರವೇ ಈ ಕ್ರೂರ ಘಟನೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಪತಿಯಿಂದ ತನಗೆ ದೈಹಿಕ ಸುಖ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಆಕೆ ಸ್ವತಃ ತನ್ನ ಗಂಡನನ್ನೇ ಕೊ*ಲೆ ಮಾಡಿದ್ದಾಳೆ ಎನ್ನೋದು ಈಗ ಬಯಲಾಗಿರುವ ಆಘಾತಕಾರಿ ಸತ್ಯ.
ಕೇವಲ ಸುಖಕ್ಕಾಗಿ ಸಪ್ತಪದಿ ತುಳಿದ ಗಂಡನನ್ನೇ ಕೊ*ಲ್ಲಲು ಈಕೆ ಹಿಂದೆಮುಂದೆ ಯೋಚಿಸಿಲ್ಲ ಎಂದು ಕೇಳಿಬಂದಿದೆ. ಇನ್ನೊಂದು ಕಡೆ ಆಕೆಯ ಮೈದುನನ ಕಥೆಯೇ ಬೇರೆ. ನನ್ನ ಅತ್ತಿಗೆಗಾಗಿ ನಾನು ಪ್ರಾಣ ಕೊಡಬಲ್ಲೆ ಅಥವಾ ಯಾರ ಪ್ರಾಣ ಬೇಕಾದರೂ ತೆಗಿಯಬಲ್ಲೆ ಎಂದು ಆತ ಬಹಿರಂಗವಾಗಿಯೇ ಹೇಳುತ್ತಿದ್ದಾನೆ ಅಂದರೆ, ಅಣ್ಣನ ಹೆಂಡತಿಯ ಮೇಲಿನ ಮೋಹಕ್ಕಾಗಿ ಸ್ವಂತ ಅಣ್ಣನನ್ನೇ ಕೊ*ಲ್ಲಲು ಈತ ಸಹಕಾರ ನೀಡಿದ್ದಾನೆ ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತಿದೆ. ಪ್ರೀತಿ ಅಂಧ ಅಂತಾರೆ, ಆದರೆ ಇಲ್ಲಿ ಅದು ಕ್ರೂರವಾಗಿ ಬದಲಾಗಿದೆ.
ಸಮಾಜದಲ್ಲಿ ಮೈದುನ ಅಂದರೆ ಮಗನಿದ್ದಂತೆ ಎಂಬ ಮಾತಿದೆ. ಆದರೆ ಇಲ್ಲಿ ಮೈದುನ ಮತ್ತು ಅತ್ತಿಗೆಯ ನಡುವಿನ ಅ*ಕ್ರಮ ಸಂಬಂಧ ಒಬ್ಬ ವ್ಯಕ್ತಿಯ ಬಲಿ ಪಡೆದಿದೆ. ಗಂಡನ ಸಾವಿನ ನೋವು ಮರೆಯುವ ಮೊದಲೇ ಹಸೆಮಣೆ ಏರಿದ ಈಕೆಯ ಗುಣಕ್ಕೆ ಜನರು ಶಪಿಸುತ್ತಿದ್ದಾರೆ.
ಸಂಬಂಧಗಳು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತವೆ ಎಂದರೆ ನಾವು ಎಂತಹ ಕಾಲದಲ್ಲಿ ಬದುಕುತ್ತಿದ್ದೇವೆ ಎಂದು ಯೋಚಿಸಬೇಕಿದೆ. ಕೇವಲ ಕ್ಷಣಿಕ ಸುಖಕ್ಕಾಗಿ ಮತ್ತು ವಯಸ್ಸಿನ ನೆಪವನ್ನಿಟ್ಟುಕೊಂಡು ಒಬ್ಬ ಅಮಾಯಕನ ಪ್ರಾಣ ತೆಗೆಯುವುದು ಎಂತಹ ನ್ಯಾಯ? ಇಂತಹ ಘಟನೆಗಳು ಸಮಾಜಕ್ಕೆ ದೊಡ್ಡ ಕಳಂಕ.