SBI Recruitment 2026: SBIನಲ್ಲಿ ಭರ್ಜರಿ 7,150 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ - ಪದವೀಧರರಿಗೆ ಸುವರ್ಣಾವಕಾಶ!!

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆರಿಯರ್ ಶುರು ಮಾಡಬೇಕು ಅಂದುಕೊಂಡಿರುವ ಯುವಕ-ಯುವತಿಯರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಎಸ್‌ಬಿಐ ದೇಶಾದ್ಯಂತ ಖಾಲಿ ಇರುವ ಒಟ್ಟು 7,150 ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ 2026ರ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಯಾವುದೇ ಡಿಗ್ರಿ ಪಾಸ್ ಆಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಬ್ಯಾಂಕಿಂಗ್ ಲೋಕದ ಪ್ರಾಯೋಗಿಕ ಅನುಭವ ಪಡೆಯಲು ಇದೊಂದು ಬೆಸ್ಟ್ ಆಪ್ಷನ್ ಆಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಹೊಸ ನೋಟಿಫಿಕೇಶನ್ ಬಿಡುಗಡೆ | Photo Credit: CANVA
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಹೊಸ ನೋಟಿಫಿಕೇಶನ್ ಬಿಡುಗಡೆ | Photo Credit: CANVA

ಅರ್ಜಿ ಸಲ್ಲಿಸಲು ಇಂಪಾರ್ಟೆಂಟ್ ಡೇಟ್ಸ್

ಎಸ್‌ಬಿಐ ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಮೇ 19 ರಿಂದಲೇ ಆರಂಭವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಜೂನ್ 8, 2026 ಕೊನೆಯ ದಿನಾಂಕವಾಗಿದೆ. ಕೊನೆ ಕ್ಷಣದ ಸರ್ವರ್ ಬ್ಯುಸಿ ತಲೆನೋವು ಬೇಡ ಅಂದುಕೊಳ್ಳುವವರು ಆದಷ್ಟು ಬೇಗ ಅಪ್ಲೈ ಮಾಡುವುದು ಒಳ್ಳೆಯದು.

ಯಾರೆಲ್ಲಾ ಅಪ್ಲೈ ಮಾಡಬಹುದು? (ಅರ್ಹತೆಗಳು)

ವಿದ್ಯಾಭ್ಯಾಸ: ಈ ಹುದ್ದೆಗಳಿಗೆ ಅರ್ಜಿ ಹಾಕಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಯಾವುದಾದರೂ ಒಂದು ವಿಷಯದಲ್ಲಿ ಪದವಿ (Degree) ಮುಗಿಸಿರಬೇಕು.

ವಯೋಮಿತಿ: ಸಾಮಾನ್ಯವಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ತುಂಬಿರಬೇಕು ಮತ್ತು ಗರಿಷ್ಠ 28 ವರ್ಷ ವಯೋಮಿತಿ ಮೀರಿರಬಾರದು. ಆದರೆ ಸರ್ಕಾರದ ನಿಯಮಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ (OBC, SC, ST) ವಯೋಮಿತಿಯಲ್ಲಿ ಸಡಿಲಿಕೆ ಸಿಗಲಿದೆ.

ಸೆಲೆಕ್ಷನ್ ಪ್ರೊಸೆಸ್ ಹೇಗಿರುತ್ತೆ?

ಅಭ್ಯರ್ಥಿಗಳನ್ನು ನೇರವಾಗಿ ಕೆಲಸಕ್ಕೆ ತಗೊಳ್ಳುವುದಿಲ್ಲ, ಅದಕ್ಕೊಂದು ಪ್ರೊಸೀಜರ್ ಇದೆ. ಮೊದಲಿಗೆ ಅಭ್ಯರ್ಥಿಗಳಿಗೆ ಆನ್‌ಲೈನ್ ಲಿಖಿತ ಪರೀಕ್ಷೆ (Online Written Exam) ನಡೆಸಲಾಗುತ್ತದೆ. ಇದರಲ್ಲಿ ಪಾಸ್ ಆದವರಿಗೆ ಸ್ಥಳೀಯ ಭಾಷಾ ಪರೀಕ್ಷೆ (Local Language Test) ಇರಲಿದೆ. ಅಂದರೆ ಕರ್ನಾಟಕದಲ್ಲಿ ಅರ್ಜಿ ಸಲ್ಲಿಸುವವರಿಗೆ ಕನ್ನಡ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ಬರುತ್ತದೆಯೇ ಎಂದು ಚೆಕ್ ಮಾಡಲಾಗುತ್ತದೆ. ಈ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಮುಗಿಸಿದವರನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಕೈತುಂಬಾ ಸ್ಟೈಪೆಂಡ್ ಸಿಗುತ್ತೆ, ಆದ್ರೆ ಒಂದು ಕಂಡಿಷನ್!

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಒಂದು ವರ್ಷದ ತರಬೇತಿ (Apprentice Training) ಅವಧಿ ಇರಲಿದೆ. ಈ ಸಮಯದಲ್ಲಿ ಬ್ಯಾಂಕ್ ನಿಮಗೆ ತಿಂಗಳಿಗೆ 15,000 ರೂಪಾಯಿ ಸ್ಟೈಪೆಂಡ್ ನೀಡಲಿದೆ.

ಗಮನಿಸಿ: ಇದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಿಗುವ ಖಾಯಂ (ಶಾಶ್ವತ) ಉದ್ಯೋಗವಲ್ಲ. ಇದೊಂದು ಕೇವಲ 1 ವರ್ಷದ ಟ್ರೈನಿಂಗ್ ಪ್ರೋಗ್ರಾಂ ಮಾತ್ರ ಆಗಿರುತ್ತದೆ.

ಈ ಯೋಜನೆಯಿಂದ ಏನು ಲಾಭ?

ಇದು ಪರ್ಮನೆಂಟ್ ಕೆಲಸ ಅಲ್ಲದಿದ್ದರೂ ಪದವೀಧರರಿಗೆ ಇದರಿಂದ ಸಿಕ್ಕಾಪಟ್ಟೆ ಹೆಲ್ಪ್ ಆಗಲಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಆದ ಎಸ್‌ಬಿಐನಲ್ಲಿ ಒಂದು ವರ್ಷ ಕೆಲಸ ಕಲಿತರೆ ಭವಿಷ್ಯದಲ್ಲಿ ಬೇರೆ ಬ್ಯಾಂಕಿಂಗ್ ಪರೀಕ್ಷೆಗಳನ್ನು ಎದುರಿಸಲು ದೊಡ್ಡ ಮಟ್ಟದ ಅನುಭವ ಸಿಗುತ್ತದೆ. ಜೊತೆಗೆ ಟ್ರೈನಿಂಗ್ ಮುಗಿದ ಮೇಲೆ ಸಿಗುವ ಸರ್ಟಿಫಿಕೇಟ್ ಬೇರೆ ಪ್ರೈವೇಟ್ ಬ್ಯಾಂಕ್‌ಗಳ ಕೆಲಸಕ್ಕೆ ಹೋಗುವಾಗ ತುಂಬಾ ಯೂಸ್ ಆಗಲಿದೆ.

ಆಸಕ್ತಿ ಇರುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಮತ್ತು ಅಪ್ಲಿಕೇಶನ್ ಹಾಕಲು ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನೋಟಿಫಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

Latest News

Related News