Feb 16, 2026 Languages : ಕನ್ನಡ | English

ಹುಡುಗರಂತೆ ವೇಷ - ಹಾಡಹಗಲೇ ಕಳ್ಳತನ ಮಾಡಿ ಸಿಕ್ಕಿಬಿದ್ದ ಈ ಹುಡುಗಿಯರು! ವಿಡಿಯೋ ವೈರಲ್

ಸಾಮಾನ್ಯವಾಗಿ ಹುಡುಗಿಯರು ಜ್ಯೂವ್ಯಲರಿ ಶಾಪ್ ನಲ್ಲಿ ಹೆಚ್ಚು ಕಳ್ಳತನವನ್ನ ಮಾಡಿರುವುದನ್ನು ನಾವು ನೋಡಿರುತ್ತೇವೆ. ಆದರೆ ಇಲ್ಲಿ ಹುಡುಗಿಯರು ಹುಡುಗರ ವೇಷ ಧರಿಸಿ ಮನೆಗಳ್ಳತನನ ಮಾಡಿರುವುದು ಒಂದು ರೀತಿ ಅಚ್ಚರಿ ಮೂಡಿದೆ ಜೊತೆಗೆ ಇನ್ನೂ ಕೆಲವರಿಗೆ ವಿಶೇಷ ಎನಿಸಿದ್ದಂತೂ ಪಕ್ಕಾ. ಹೌದು ಹಾಡಹಗಲೇ ಮನೆಗಳಿಗೆ ಕನ್ನ ಹಾಕುತ್ತಿದ್ದ ಖತರ್ನಾಕ್ ಲೇಡಿ ಗ್ಯಾಂಗ್ ಶಾಲು ನೀಲು ಸಂಪಿಗೆಹಳ್ಳಿ ಪೊಲೀಸರ ಬಲೆಗೆ ಇದೀಗ ಬಿದ್ದಿದ್ದಾರೆ.

ಮನೆ ಕಳ್ಳತನ – ಸಿಸಿಟಿವಿ ದೃಶ್ಯದಲ್ಲಿ ಪತ್ತೆಯಾದ ಹುಡುಗಿಯರು
ಮನೆ ಕಳ್ಳತನ – ಸಿಸಿಟಿವಿ ದೃಶ್ಯದಲ್ಲಿ ಪತ್ತೆಯಾದ ಹುಡುಗಿಯರು

ನೋಡುವುದಕ್ಕೆ ಸೇಮ್ ಹುಡ್ಗರಂತೆ ಡ್ರೆಸ್ ಮಾಡಿಕೊಂಡು ಓಡಾಡುತ್ತಿದ್ದ ಈ ಹುಡುಗಿಯರ ಕಳ್ಳತನದ ದೃಶ್ಯಗಳು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆ ಹಿಡಿಯಲಾಗಿದೆ. ನಗರದ ಹೊರವಲಯದ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ, ಜನರಲ್ಲಿ ಭೀತಿ ಹಾಗೂ ಕುತೂಹಲವನ್ನೂ ಮೂಡಿಸಿದೆ ಎನ್ನಬಹುದು. ಹೌದು ಜನವರಿ 13ರಂದು, ಯಲಹಂಕ ಅಗ್ರಹಾರ ಲೇಔಟ್‌ನ ಆಟೋ ಚಾಲಕ ಸಂಗಮೇಶ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.

ಮನೆ ಮಾಲೀಕ ಹೊರಗೆ ಹೋದ ವೇಳೆ, ಕೃತ್ಯ ಎಸಗಿದ ಕಳ್ಳರು ಮನೆಗೆ ವಾಪಸ್ ಬಂದ ಸಂಗಮೇಶ್ ನಡೆದ ಕಳ್ಳತನವನ್ನು ಬೆಳಕಿಗೆ ತಂದರು. ಹೌದು ತಕ್ಷಣ ಸಂಪಿಗೆಹಳ್ಳಿ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದ್ದು,ಇನ್ನೂ ಈ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯ ಹಾಗೂ ಬೈಕ್ ನಂಬರ್ ಆಧಾರಿಸಿ ಆರೋಪಿಗಳನ್ನು ಬಹು ಬೇಗ ಪತ್ತೆಹಚ್ಚಿದರು. ನಂತರ ಬಂಧನ ಮಾಡಿ ಠಾಣೆಗೆ ಕರೆತಂದಾಗ, ಹುಡುಗರಂತೆ ಕಾಣುತ್ತಿದ್ದವರು ಅಸಲಿಗೆ ಶಾಲು ನೀಲು ಟ್ಯಾನರಿ ರಸ್ತೆಯ ನಿವಾಸಿಗಳಾದ ಇಬ್ಬರು ಹುಡುಗಿಯರು ಎಂಬುದು ಬಹಿರಂಗವಾಯಿತು. 

ಈ ಖತರ್ನಾಕ್ ಲೇಡಿ ಗ್ಯಾಂಗ್‌ನ ಬಂಧನದಿಂದ, ನಗರದ ಜನರಲ್ಲಿ ಸ್ವಲ್ಪ ನೆಮ್ಮದಿ ಮೂಡಿದೆ. ಕಳ್ಳತನದ ದಾರಿ ಹಿಡಿಯಲು ಕಾರಣ ಏನೇ ಇರಲಿ ಕಳ್ಳತನ ಮಾಡುವುದರಿಂದ ಯಾವತ್ತು ಜೀವನದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯವೇ ಇಲ್ಲ. ಹಾಗಾಗಿ ಈ ರೀತಿ ಕಳ್ಳತನ ಮಾಡಿ ಜೈಲು ಸೇರುವ  ಬದಲು ನಿಯತ್ತಿನಿಂದ ದುಡಿದು ನೆಮ್ಮದಿಯಿಂದ ಬದುಕಬಹುದು. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ. ವಿಡಿಯೋ ಸಹ ಇದೆ ಲೇಖನದ ಒಳಗಿದೆ ಒಮ್ಮೆ ನೋಡಿ. ಹೇಗೆ ಈ ಹುಡುಗಿಯರು ಕಳ್ಳತನ ಮಾಡಿದ್ದರು ಎಂದು ಗೊತ್ತಾಗುತ್ತದೆ.    

Latest News