ಸ್ವಿಮ್ಮಿಂಗ್ ಪೂಲ್‌ನಲ್ಲಿ18 ವರ್ಷದ ಯುವಕನ ಮರ್ಡರ್ - ನೀರಿನಲ್ಲೇ ಹತ್ತಿಕ್ಕಿದ ಹಂತಕನ ಭೀಕರ ದೃಶ್ಯ CCTVಯಲ್ಲಿ ಸೆರೆ!!

ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಲ್ಲಿ ನೆಟ್ಟಿಗರ ನೆತ್ತಿ ಸುಡುವಂತಹ ಘಟನೆಯೊಂದು ನಡೆದಿದೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡುತ್ತಿದ್ದ 18 ವರ್ಷದ ಸೋಹಿಲ್ ಎಂಬ ಯುವಕನನ್ನು ಮತ್ತೊಬ್ಬ ಕಿರಾತಕ ನೀರಿನಲ್ಲಿ ಮುಳುಗಿಸಿ ಕೊ*ಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೇವಲ ಎರಡು ನಿಮಿಷಗಳ ಕಾಲ ಸೋಹಿಲ್ ನೀರಿನ ಒಳಗೆ ಒದ್ದಾಡಿ, ಪ್ರಾಣ ಬಿಟ್ಟಿರುವ ಭೀಕರ ದೃಶ್ಯ ಅಲ್ಲಿದ್ದ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಲೈವ್ ಆಗಿ ರೆಕಾರ್ಡ್ ಆಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ, ಇಡೀ ಏರಿಯಾ ಜನ ಬೆಚ್ಚಿಬಿದ್ದಿದ್ದಾರೆ.

ಸ್ವಿಮ್ಮಿಂಗ್ ಪೂಲ್‌ನಲ್ಲಿ ಭೀಕರ ಕೊ*ಲೆ! | Photo Credit: https://x.com/HateDetectors
ಸ್ವಿಮ್ಮಿಂಗ್ ಪೂಲ್‌ನಲ್ಲಿ ಭೀಕರ ಕೊ*ಲೆ! | Photo Credit: https://x.com/HateDetectors

ನಖಾಸಾ ಪೊಲೀಸ್ ಠಾಣಾ ವ್ಯಾಪ್ತಿಯ ಸಾಲಾರ್‌ಪುರ ಕಲನ್ ಗ್ರಾಮದಲ್ಲಿರೋ ಒಂದು ಪ್ರೈವೇಟ್ ಸ್ವಿಮ್ಮಿಂಗ್ ಪೂಲ್‌ನಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಹ*ತ್ಯೆಯಾದ ದುರ್ದೈವಿಯನ್ನು ಸೋಹಿಲ್ ಎಂದು ಗುರುತಿಸಲಾಗಿದೆ. ಆದರೆ ಈ ಕ್ರೂರ ಕೃತ್ಯ ಎಸಗಿದ ಆ ರೋಡಿ ಸೈಡ್ ರೋಮಿಯೋ ಯಾರು ಅನ್ನೋದು ಇನ್ನು ಪಕ್ಕಾ ಗೊತ್ತಾಗಿಲ್ಲ. ಪೊಲೀಸರು ಸದ್ಯ ಆರೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಸಿಸಿಟಿವಿಯಲ್ಲಿ ಏನಿದೆ? (The Shocking Footage)

ಸಿಸಿಟಿವಿ ಫೂಟೇಜ್ ಪ್ರಕಾರ, ಸೋಮವಾರ ಮಧ್ಯಾಹ್ನ ಸುಮಾರು 2:30ರ ಟೈಮ್‌ ಅಲ್ಲಿ ಸೋಹಿಲ್ ಮತ್ತೊಬ್ಬ ಯುವಕನ ಜೊತೆ ಪೂಲ್‌ನಲ್ಲಿ ಮಸ್ತಿಯಾಗಿ ಸ್ನಾನ ಮಾಡ್ತಾ ಇದ್ದ. ಇಬ್ಬರೂ ಜಲಕ್ರೀಡೆಯಲ್ಲಿ ಮುಳುಗಿದ್ದಾಗ, ಸಡನ್ ಆಗಿ ಆ ಅಪರಿಚಿತ ಯುವಕ ಸೋಹಿಲ್ ತಲೆಯನ್ನು ನೀರಿನ ಒಳಗೆ ಜೋರಾಗಿ ನೂಕಿದ್ದಾನೆ. ಅಷ್ಟಕ್ಕೇ ನಿಲ್ಲಿಸದೆ, ಅವನು ಮೇಲೆ ಬರದ ಹಾಗೆ ಬಲವಂತವಾಗಿ ನೀರಿನಲ್ಲೇ ಅದುಮಿ ಹಿಡಿದಿದ್ದಾನೆ.

ನೀರಿನ ಒಳಗಡೆ ಉಸಿರುಗಟ್ಟಿ ಸಾವು-ಬದುಕಿನ ಹೋರಾಟ ನಡೆಸುತ್ತಿದ್ದ ಸೋಹಿಲ್, ಹೆಲ್ಪ್‌ಗಾಗಿ ಕೈಗಳನ್ನು ಮೇಲೆತ್ತಿ ಸಿಕ್ಕಾಪಟ್ಟೆ ಒದ್ದಾಡಿದ್ದಾನೆ. ಆದರೆ ಬ್ಯಾಡ್ ಲಕ್ ಅಂದ್ರೆ, ಆ ಸಮಯದಲ್ಲಿ ಅಲ್ಲಿ ಯಾರು ಇಲ್ಲದ ಕಾರಣ ಯಾರ ಗಮನಕ್ಕೂ ಇದು ಬಂದಿಲ್ಲ. ಇತ್ತ ಕ್ರೂರಿ ಆರೋಪಿ ಸೋಹಿಲ್‌ನನ್ನು ನೀರಿನಲ್ಲಿ ಮುಳುಗಿಸಿಟ್ಟುಕೊಂಡೇ, ಯಾರಾದರೂ ನೋಡ್ತಾ ಇದ್ದಾರಾ ಅಂತ ಆಕಡೆ ಈಕಡೆ ಕೂಲ್ ಆಗಿ ಸೈಟ್ ಹೊಡಿತಾ ನಿಂತಿದ್ದ!

ಸುಮಾರು ಎರಡು ನಿಮಿಷಗಳ ಕಾಲ ಸೋಹಿಲ್‌ನನ್ನು ನೀರಿನಲ್ಲೇ ಮುಕ್ಕಿ ಹಿಡಿದಿದ್ದ ಆರೋಪಿ, ಆಮೇಲೆ ಅವನನ್ನು ಬಿಟ್ಟಿದ್ದಾನೆ. ಸೋಹಿಲ್ ಹೇಗೋ ಕಷ್ಟಪಟ್ಟು ಮೇಲೆ ಬಂದು ಪೂಲ್‌ನ ದಡದ ಕಡೆ ಈಜಲು ಟ್ರೈ ಮಾಡಿದ್ದಾನೆ. ಆದರೆ ಅಷ್ಟರಲ್ಲೇ ಬಾಡಿ ಪೂರ್ತಿ ವೀಕ್ ಆಗಿದ್ದರಿಂದ, ಕೆಲವೇ ಸೆಕೆಂಡುಗಳಲ್ಲಿ ಪೂಲ್‌ನ ತಳಕ್ಕೆ ಮುಳುಗಿಹೋಗಿದ್ದಾನೆ. ಇದನ್ನೆಲ್ಲಾ ನೋಡಿದ ಆರೋಪಿ ಮಾತ್ರ ಏನೂ ತಿಳಿಯದವನಂತೆ ಸೈಲೆಂಟ್ ಆಗಿ ಪೂಲ್‌ನಿಂದ ಹೊರಗೆ ಬಂದು, ಅಲ್ಲಿಂದ ಕಾಲು ಕಿತ್ತಿದ್ದಾನೆ.

ಕೊ*ಲೆ ಪತ್ತೆಯಾಗಿದ್ದು ಹೇಗೆ?

ಸ್ವಿಮ್ಮಿಂಗ್ ಪೂಲ್ ಓನರ್ ಸಲೀಂ ಪ್ರಕಾರ, ಇದಾದ ಕೆಲವೇ ಹೊತ್ತಿನಲ್ಲಿ ಮತ್ತೊಬ್ಬ ವ್ಯಕ್ತಿ ಸ್ನಾನ ಮಾಡಲು ಪೂಲ್ ಒಳಗಡೆ ಇಳಿದಿದ್ದಾನೆ. ಆಗ ಅವನ ಕಾಲಿಗೆ ಯಾವುದೋ ಬಾಡಿ ತಗುಲಿದ ಹಾಗೆ ಫೀಲ್ ಆಗಿದೆ. ಡೌಟ್ ಬಂದು ಚೆಕ್ ಮಾಡಿದಾಗ ಸೋಹಿಲ್ ನೀರಿನ ತಳದಲ್ಲಿ ಬಿದ್ದಿರುವುದು ಗೊತ್ತಾಗಿದೆ. ತಕ್ಷಣ ಅಲ್ಲಿದ್ದ ಜನರೆಲ್ಲಾ ಸೇರಿ ಸೋಹಿಲ್‌ನನ್ನು ಹೊರಗೆ ಎಳೆದು, ಅವನ ಫ್ಯಾಮಿಲಿಗೆ ಮ್ಯಾಟರ್ ಮುಟ್ಟಿಸಿದ್ದಾರೆ.

ಪೋಷಕರು ತಕ್ಷಣವೇ ಸೋಹಿಲ್‌ನನ್ನು ಸಂಭಲ್‌ನಲ್ಲಿರೋ ಆಸ್ಪತ್ರೆಗೆ ಕರ್ಕೊಂಡು ಓಡಿದ್ದಾರೆ. ಆದರೆ ದುರದೃಷ್ಟವಶಾತ್, ಆತ ಅದಾಗಲೇ ಮೃತಪಟ್ಟಿದ್ದಾನೆ ಎಂದು ಡಾಕ್ಟರ್ಸ್ ಡಿಕ್ಲೇರ್ ಮಾಡಿದ್ದಾರೆ.

ಈಜು ಗೊತ್ತಿದ್ದವನು ಮುಳುಗಿದ್ದು ಹೇಗೆ? ಫ್ಯಾಮಿಲಿ ಡೌಟ್!

ಮಗನ ಹೆ*ಣವನ್ನು ಮನೆಗೆ ತಂದಾಗ ಫ್ಯಾಮಿಲಿ ಮೆಂಬರ್ಸ್‌ಗೆ ಒಂದು ದೊಡ್ಡ ಡೌಟ್ ಶುರುವಾಗಿದೆ. ಯಾಕಂದ್ರೆ ಸೋಹಿಲ್‌ಗೆ ಸೂಪರ್ ಆಗಿ ಈಜಲು ಬರ್ತಾ ಇತ್ತು. ಚೆನ್ನಾಗಿ ಈಜು ಬರುವವನು ಸ್ವಿಮ್ಮಿಂಗ್ ಪೂಲ್‌ನಲ್ಲಿ ಹೇಗೆ ಮುಳುಗಿ ಸಾಯ್ತಾನೆ ಅನ್ನೋದು ಅವರ ಪ್ರಶ್ನೆಯಾಗಿತ್ತು. ಇದೇ ಅನುಮಾನದ ಮೇಲೆ ಅವರು ಪೂಲ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಲೈವ್ ಆಗಿ ಚೆಕ್ ಮಾಡಿದ್ದಾರೆ. ಆಗಲೇ ನೋಡಿ ಅಸಲಿ ಸತ್ಯ ಹೊರಬಿದ್ದಿದ್ದು! ಆ ಅಪರಿಚಿತ ಯುವಕ ಸೋಹಿಲ್‌ನನ್ನು ಮರ್ಡರ್ ಮಾಡಿರೋದು ಸಿಸಿಟಿವಿಯಲ್ಲಿ ಕ್ಲಿಯರ್ ಆಗಿ ಕಂಡಿದೆ.

ಸೋಹಿಲ್ ತಂದೆ ರೈಸ್ ಹೇಳುವ ಪ್ರಕಾರ, "ನನ್ನ ಮಗ ಬೆಳಗ್ಗೆ ಮತ್ತೊಬ್ಬ ಯುವಕನ ಜೊತೆ ಸೈಕಲ್‌ನಲ್ಲಿ ಸ್ವಿಮ್ಮಿಂಗ್ ಪೂಲ್‌ಗೆ ಹೋಗಿದ್ದ. ಯಾರೋ ಪ್ಲಾನ್ ಮಾಡಿ ನನ್ನ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊ*ಲೆ ಮಾಡಿದ್ದಾರೆ," ಎಂದು ಕಣ್ಣೀರು ಹಾಕಿದ್ದಾರೆ. ರೈಸ್ ಅವರಿಗೆ ಒಟ್ಟು ಏಳು ಜನ ಮಕ್ಕಳಿದ್ದು, ಸೋಹಿಲ್ ಮೂರನೇ ಮಗನಾಗಿದ್ದ. ಸದ್ಯ ಮಗನನ್ನು ಕಳೆದುಕೊಂಡು ಇಡೀ ಕುಟುಂಬ ಬೀದಿಗೆ ಬಿದ್ದಿದೆ.

ಸ್ಥಳೀಯ ಪೊಲೀಸ್ ಸ್ಟೇಷನ್ ಇನ್‌ಚಾರ್ಜ್ ಉಮೇಶ್ ಸೋಲಂಕಿ ಮಾತನಾಡಿ, "ಸೋಮವಾರ ಸಂಜೆ ನಮಗೆ ಈ ಇನ್ಸಿಡೆಂಟ್ ಬಗ್ಗೆ ಮಾಹಿತಿ ಸಿಕ್ಕಿದೆ. ಈಗಾಗಲೇ ಎಫ್‌ಐಆರ್ (FIR) ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯ ಸ್ಕೆಚ್ ರೆಡಿ ಮಾಡ್ತಾ ಇದ್ದು, ಶೀಘ್ರದಲ್ಲೇ ಅವನನ್ನು ಕಂಬಿ ಎಣಿಸುವಂತೆ ಮಾಡ್ತೀವಿ," ಎಂದು ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ಈ ಘಟನೆ ಇಡೀ ಉತ್ತರ ಪ್ರದೇಶದಲ್ಲಿ ತಲ್ಲಣ ಮೂಡಿಸಿದೆ. 

Latest News