RRB - NTPCಪರೀಕ್ಷಾ ದಿನಾಂಕಗಳಲ್ಲಿ ದಿಢೀರ್ ಬದಲಾವಣೆ - ರೈಲ್ವೆ ಮಂಡಳಿಯಿಂದ ಹೊಸ ನೋಟಿಫಿಕೇಶನ್ ಜಾರಿ!!

ರೈಲ್ವೆ ಇಲಾಖೆಯಲ್ಲಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಬೇಕು ಅಂತ ಹಗಲು ರಾತ್ರಿ ಕಷ್ಟಪಟ್ಟು ಓದ್ತಾ ಇರೋ ಉದ್ಯೋಗಾಕಾಂಕ್ಷಿಗಳಿಗೆ ರೈಲ್ವೆ ನೇಮಕಾತಿ ಮಂಡಳಿ (RRB) ಒಂದು ಪ್ರಮುಖವಾದ ಮಾಹಿತಿಯೊಂದನ್ನು ನೀಡಿದೆ..

ಜೂನ್ 13 ರಿಂದ ಗ್ಯಾಪ್ ಇಲ್ಲದೆ ಸತತ ಪರೀಕ್ಷೆ | Photo Credit: CANVA
ಜೂನ್ 13 ರಿಂದ ಗ್ಯಾಪ್ ಇಲ್ಲದೆ ಸತತ ಪರೀಕ್ಷೆ | Photo Credit: CANVA

ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT 1) ಎರಡನೇ ಹಂತದ ವೇಳಾಪಟ್ಟಿಯಲ್ಲಿ ರೈಲ್ವೆ ಮಂಡಳಿ ದಿಢೀರ್ ಅಂತ ಒಂದಷ್ಟು ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ಈ ಬಗ್ಗೆ ಅಫೀಶಿಯಲ್ ನೋಟಿಫಿಕೇಶನ್ ಕೂಡ ಹೊರಡಿಸಿದೆ.

ಪರೀಕ್ಷಾ ದಿನಾಂಕದಲ್ಲಿ ಏನು ಬದಲಾವಣೆ ಆಗಿದೆ?

ಈ ಹಿಂದೆ ಅನೌನ್ಸ್ ಮಾಡಿದ್ ಟೈಮ್ ಟೇಬಲ್ ಪ್ರಕಾರ, ಮೊದಲ ಹಂತದ ಪರೀಕ್ಷೆಗಳು ಆಲ್ರೆಡಿ ಮೇ 7, 8 ಮತ್ತು 9 ರಂದು ಯಶಸ್ವಿಯಾಗಿ ಮುಗಿದುಹೋಗಿವೆ. ಆದರೆ, ಜೂನ್ ತಿಂಗಳಿನಲ್ಲಿ ನಡೆಯಬೇಕಿದ್ದ ಎರಡನೇ ಹಂತದ ಪರೀಕ್ಷಾ ದಿನಾಂಕಗಳನ್ನು ಈಗ ಪರಿಷ್ಕರಿಸಲಾಗಿದೆ.

ಹಳೇ ಶೆಡ್ಯೂಲ್ ಪ್ರಕಾರ ಜೂನ್ 13, 14 ಮತ್ತು ಜೂನ್ 16 ರಿಂದ 20 ರವರೆಗೆ ಎಕ್ಸಾಮ್ಸ್ ನಡೆಸಲು ಪ್ಲಾನ್ ಮಾಡಲಾಗಿತ್ತು (ಜೂನ್ 15 ಕ್ಕೆ ಗ್ಯಾಪ್ ಕೊಡಲಾಗಿತ್ತು). ಆದರೆ ಈಗ ಮಾಡಿರೋ ಹೊಸ ಚೇಂಜಸ್ ಪ್ರಕಾರ, ಜೂನ್ 13 ರಿಂದ ಜೂನ್ 20 ರವರೆಗೆ ಯಾವುದೇ ರಜೆ ಅಥವಾ ಬಿಡುವಿಲ್ಲದೆ ಸತತವಾಗಿ ಪರೀಕ್ಷೆಗಳು ನಡೆಯಲಿವೆ ಎಂದು ಆರ್‌ಆರ್‌ಬಿ ಸ್ಪಷ್ಟಪಡಿಸಿದೆ. ಸೋ, ಸ್ಟೂಡೆಂಟ್ಸ್ ಯಾವುದೇ ಗೊಂದಲವಿಲ್ಲದೆ ಕಂಟಿನ್ಯೂಸ್ ಆಗಿ ಎಕ್ಸಾಮ್ ಬರೆಯೋಕೆ ರೆಡಿಯಾಗಬೇಕಿದೆ.

ಎಕ್ಸಾಮ್ ಸಿಟಿ ಸ್ಲಿಪ್ ಮತ್ತು ಅಡ್ಮಿಟ್ ಕಾರ್ಡ್ ಸಿಗೋದು ಯಾವಾಗ?

  • ಎಕ್ಸಾಮ್ ಸಿಟಿ ನೋಟಿಫಿಕೇಶನ್ ಸ್ಲಿಪ್: ನಿಮ್ಮ ಪರೀಕ್ಷಾ ಕೇಂದ್ರ ಯಾವ ನಗರದಲ್ಲಿದೆ ಅನ್ನೋ ಇನ್ಫಾರ್ಮೇಷನ್ ಸ್ಲಿಪ್ ಅನ್ನು ಪರೀಕ್ಷೆಗಿಂತ ಪಕ್ಕಾ 10 ದಿನಗಳ ಮುಂಚಿತವಾಗಿ ಆರ್‌ಆರ್‌ಬಿ ತನ್ನ ಅಫೀಶಿಯಲ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಿದೆ.

  • ಪ್ರವೇಶ ಪತ್ರ (Admit Card): ನಿಮ್ಮ ಒರಿಜಿನಲ್ ಹಾಲ್ ಟಿಕೆಟ್ ಅಥವಾ ಪ್ರವೇಶ ಪತ್ರಗಳನ್ನು ನಿಮ್ಮ ಎಕ್ಸಾಮ್ ಡೇಟ್‌ಗಿಂತ ಕೇವಲ 4 ದಿನಗಳ ಮೊದಲು ಮಾತ್ರ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಸಿಗುತ್ತದೆ.

ಒಟ್ಟು 3,058 ಹುದ್ದೆಗಳು: ಯಾವ ವಿಭಾಗದಲ್ಲಿ ಎಷ್ಟಿವೆ?

ರೈಲ್ವೆಯ ಈ ಬೃಹತ್ ನೇಮಕಾತಿ ಪ್ರಕ್ರಿಯೆಯ ಮೂಲಕ ಪದವಿಪೂರ್ವ (Undergraduate - 12th pass) ವಿಭಾಗದಲ್ಲಿ ಒಟ್ಟು 3,058 ವಿವಿಧ ತಾಂತ್ರಿಕೇತರ ಜನಪ್ರಿಯ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಹುದ್ದೆಗಳ ಡೀಟೇಲ್ಸ್ ಈ ಕೆಳಗಿನಂತಿದೆ:

ಹುದ್ದೆಯ ಹೆಸರು ಒಟ್ಟು ಪೋಸ್ಟ್‌ಗಳು
ವಾಣಿಜ್ಯ ಕಮ್ ಟಿಕೆಟ್ ಕ್ಲರ್ಕ್ (Commercial cum Ticket Clerk) 2,424
ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ (Accounts Clerk cum Typist) 394
ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ (Junior Clerk cum Typist) 163
ರೈಲು ಕ್ಲರ್ಕ್ (Trains Clerk) 77

ಸೆಲೆಕ್ಷನ್ ಪ್ರೊಸೆಸ್ ಹೇಗಿರುತ್ತೆ?

ಅಭ್ಯರ್ಥಿಗಳನ್ನು ಒಟ್ಟು ಐದು ಕಠಿಣ ಹಂತಗಳ ಮೂಲಕ ಫೈನಲ್ ಆಗಿ ಸೆಲೆಕ್ಟ್ ಮಾಡಿಕೊಳ್ಳಲಾಗುತ್ತದೆ:

  1. ಮೊದಲ ಹಂತದ ಲಿಖಿತ ಪರೀಕ್ಷೆ (CBT 1)

  2. ಎರಡನೇ ಹಂತದ ಲಿಖಿತ ಪರೀಕ್ಷೆ (CBT 2)

  3. ಕಂಪ್ಯೂಟರ್ ಆಧಾರಿತ ಟೈಪಿಂಗ್ ಕೌಶಲ್ಯ ಪರೀಕ್ಷೆ (Typing Test)

  4. ಮೂಲ ದಾಖಲಾತಿಗಳ ಪರಿಶೀಲನೆ (Document Verification)

  5. ವೈದ್ಯಕೀಯ ಪರೀಕ್ಷೆ (Medical Examination)

ನೆಗೆಟಿವ್ ಮಾರ್ಕಿಂಗ್ ಬಗ್ಗೆ ಎಚ್ಚರವಿರಲಿ:

ಆರ್‌ಆರ್‌ಬಿ ಎನ್‌ಟಿಪಿಸಿ ಯುಜಿ ಸಿಬಿಟಿ 1 ಪರೀಕ್ಷೆಯು ಒಟ್ಟು 100 ಮಲ್ಟಿಪಲ್ ಚಾಯ್ಸ್ (MCQ) ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪರೀಕ್ಷೆ ಬರೆಯಲು ನಿಮಗೆ 90 ನಿಮಿಷಗಳ (ಒಂದೂವರೆ ಗಂಟೆ) ಟೈಮ್ ಇರುತ್ತೆ.

ಇದರಲ್ಲಿ ಜನರಲ್ ಅವೇರ್ನೆಸ್‌ನಿಂದ 40 ಪ್ರಶ್ನೆಗಳು, ಮ್ಯಾಥ್ಸ್‌ನಿಂದ 30 ಪ್ರಶ್ನೆಗಳು ಮತ್ತು ರೀಸನಿಂಗ್ ವಿಭಾಗದಿಂದ 30 ಪ್ರಶ್ನೆಗಳನ್ನು ಕೇಳಲಾಗುತ್ತದೆ. ನೆನಪಿರಲಿ, ಈ ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ ನೆಗೆಟಿವ್ ಮಾರ್ಕಿಂಗ್ ಇರುತ್ತೆ! ಗೊತ್ತಿಲ್ಲದ ಪ್ರಶ್ನೆಗಳಿಗೆ ಸುಮ್ಮನೆ ಗೆಸ್ ಮಾಡಿ ಉತ್ತರ ಬರೆದರೆ ನಿಮ್ಮ ಅಂಕಗಳು ಕಟ್ ಆಗುತ್ತವೆ. ಈ CBT 1 ಪರೀಕ್ಷೆಯಲ್ಲಿ ಪಾಸ್ ಆದವರನ್ನು ಮಾತ್ರ ಮುಂದಿನ CBT 2 ಪರೀಕ್ಷೆಗೆ ಕರೆಯಲಾಗುತ್ತದೆ.

Latest News