Feb 16, 2026 Languages : ಕನ್ನಡ | English

ಅರಣ್ಯ ಸಂರಕ್ಷಣೆಗೆ ಹೊಸ ಬಲ – ರಾಮನಗರದಲ್ಲಿ ಬೊಲೆರೋ ವಾಹನಗಳ ಸೇರ್ಪಡೆ!!

ರಾಮನಗರದಲ್ಲಿ ಅರಣ್ಯ ಇಲಾಖೆಗೆ ಗಸ್ತು ವಾಹನಗಳ ಕೊಡುಗೆ ನೀಡುವ ಮೂಲಕ ಮಹತ್ವದ ಕಾರ್ಯಕ್ರಮ ನಡೆಯಿತು. ಸಂಸದ ಡಾ. ಮಂಜುನಾಥ್ ಅವರ ನೇತೃತ್ವದಲ್ಲಿ ಬೊಲೆರೋ ವಾಹನಗಳನ್ನು ಹಸ್ತಾಂತರ ಮಾಡಲಾಯಿತು. ಸಿಎಸ್ಆರ್ ನಿಧಿಯಿಂದ ಒದಗಿಸಲಾದ ಈ ಎರಡು ವಾಹನಗಳನ್ನು ರಾಮನಗರ ಪ್ರಾದೇಶಿಕ ಅರಣ್ಯ ವಿಭಾಗ ಹಾಗೂ ಕೊಳ್ಳೆಗಾಲ ವನ್ಯಜೀವಿ ವಲಯದ ಗಸ್ತು ಬಳಕೆಗೆ ನೀಡಲಾಗಿದೆ. ಅರಣ್ಯ ಪ್ರದೇಶಗಳಲ್ಲಿ ಗಸ್ತು ಬಲಪಡಿಸಲು ಈ ವಾಹನಗಳು ನೆರವಾಗಲಿವೆ ಎನ್ನಲಾಗುತ್ತಿದೆ. 

ಜನರ ಹಿತಕ್ಕಾಗಿ ಯೋಜನೆ ವಿಶ್ಲೇಷಣೆ ಅಗತ್ಯ – ಮಂಜುನಾಥ್ ಅಭಿಪ್ರಾಯ
ಜನರ ಹಿತಕ್ಕಾಗಿ ಯೋಜನೆ ವಿಶ್ಲೇಷಣೆ ಅಗತ್ಯ – ಮಂಜುನಾಥ್ ಅಭಿಪ್ರಾಯ

ಜಿ.ಪಂ ಕಚೇರಿ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಡಿಸಿಎಫ್ ರಾಮಚಂದ್ರಯ್ಯಗೆ ವಾಹನಗಳನ್ನು ಹಸ್ತಾಂತರಿಸಿದ ಸಂಸದ ಡಾ. ಮಂಜುನಾಥ್, ಅರಣ್ಯ ಇಲಾಖೆಯ ಸಾಧನೆ ಸಾಮರ್ಥ್ಯಯನ್ನು ಹೆಚ್ಚಿಸಲು ಈ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದರು. ಅರಣ್ಯ ಸಂಪತ್ತು ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ಗಸ್ತು ವಾಹನಗಳ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಇದೇ ಸಂದರ್ಭದಲ್ಲಿ ಜಿ ರಾಮ್ ಜೀ ಕಾಯ್ದೆ ವಿರುದ್ಧ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಕುರಿತು ಸಂಸದ ಮಂಜುನಾಥ್ ಪ್ರತಿಕ್ರಿಯೆ ನೀಡಿದರು. ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ಅವರು ಸ್ಪಷ್ಟನೆ ನೀಡುತ್ತಾ, “ಯೋಜನೆಯಲ್ಲಿ ಹೆಸರು ಬದಲಾವಣೆ ಹೊರತು ಬೇರೆ ಏನೂ ಆಗಿಲ್ಲ. 1960ರಿಂದ ಸುಮಾರು 13 ಬಾರಿ ಹೆಸರು ಬದಲಾವಣೆ ಆಗಿದೆ” ಎಂದು ಹೇಳಿದರು.

ಮುಂದುವರಿದು, “ಮೊದಲು 90% ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತಿತ್ತು, 10% ರಾಜ್ಯ ಸರ್ಕಾರ ನೀಡುತ್ತಿತ್ತು. ಈಗ ಅದನ್ನು 60:40 ಅನುಪಾತದಲ್ಲಿ ಮಾಡಲಾಗಿದೆ. ಇದರ ಉದ್ದೇಶ ರಾಜ್ಯಗಳಿಗೂ ಇದರ ಜವಾಬ್ದಾರಿ ಬರಲಿ ಎಂಬುದು. ಈ ಯೋಜನೆನಿಂದ ಉದ್ಯೋಗದ ದಿನಗಳು ಹೆಚ್ಚಾಗಿವೆ” ಎಂದು ವಿವರಿಸಿದರು.

ಯೋಜನೆಗೆ ವಿರೋಧ ವ್ಯಕ್ತಪಡಿಸುವ ಮೊದಲು ಅದರ ಅನುಕೂಲ-ಅನಾನುಕೂಲಗಳ ಬಗ್ಗೆ ಚರ್ಚೆ ಮಾಡಬೇಕೆಂದು ಅವರು ಸಲಹೆ ನೀಡಿದರು. “ಚರ್ಚೆಗೂ ಮೊದಲೇ ಏಕಾಏಕಿ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಜನರ ಹಿತಕ್ಕಾಗಿ ಯೋಜನೆಯ ಬಗ್ಗೆ ವಿಶ್ಲೇಷಣೆ ಅಗತ್ಯ” ಎಂದು ಸಂಸದ ಮಂಜುನಾಥ್ ಅಭಿಪ್ರಾಯಪಟ್ಟರು.

ಒಟ್ಟಾರೆಯಾಗಿ ಹೇಳಬೇಕು ಅಂದರೆ, ರಾಮನಗರದಲ್ಲಿ ನಡೆದ ಈ ಕಾರ್ಯಕ್ರಮವು ಅರಣ್ಯ ಇಲಾಖೆಗೆ ಗಸ್ತು ವಾಹನಗಳ ಕೊಡುಗೆ ನೀಡಿದ ಸಂತಸದ ಕ್ಷಣವಾಗಿದ್ದು, ಜೊತೆಗೆ ಉದ್ಯೋಗ ಖಾತ್ರಿ ಯೋಜನೆ ಕುರಿತಂತೆ ಸಂಸದ ಮಂಜುನಾಥ್ ಅವರು ನೀಡಿದ ಸ್ಪಷ್ಟನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. 

Latest News