ಗುಜರಾತ್‌ನ ರಾಜ್‌ಕೋಟ್‌ನಿಂದ ಒಂದು ಬೆಚ್ಚಿಬೀಳಿಸುವ ಸುದ್ದಿ ಬಂದಿದೆ. ಒಂದು ವಸತಿ ಸಮುಚ್ಚಯದ (Apartment) ಪಾರ್ಕಿಂಗ್ ಏರಿಯಾದಲ್ಲಿ ಭೀಕರ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಇಡೀ ಏರಿಯಾದ ಜನರೇ ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಅಸಲಿಗೆ ಈ ಅವಾಂತರಕ್ಕೆ ಕಾರಣವಾಗಿದ್ದು ಅಲ್ಲಿನ ನಿವಾಸಿಗಳು ಮಾಡಿದ ಒಂದು ದೊಡ್ಡ ತಪ್ಪು ಎಂದು ತಿಳಿದುಬಂದಿದೆ.
ಪಾರ್ಕಿಂಗ್ ಜಾಗದಲ್ಲಿ ಜನರು ಅಕ್ರಮವಾಗಿ ಗ್ಯಾಸ್ ಸಿಲಿಂಡರ್‌ಗಳನ್ನು ಅತಿಯಾಗಿ ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ. ಯಾವುದೋ ಒಂದು ಸಿಲಿಂಡರ್‌ನಲ್ಲಿ ಸಣ್ಣದಾಗಿ ಶುರುವಾದ ಬೆಂಕಿ, ಅಲ್ಲಿ ಸಾಲು ಸಾಲಾಗಿ ಇಟ್ಟಿದ್ದ 40ಕ್ಕೂ ಹೆಚ್ಚು ಸಿಲಿಂಡರ್‌ಗಳಿಗೆ ಹಬ್ಬಿದೆ. ಇದರ ಪರಿಣಾಮವಾಗಿ ಒಂದಾದ ಮೇಲೊಂದರಂತೆ ಸಿಲಿಂಡರ್‌ಗಳು ಬ್ಲಾಸ್ಟ್ ಆಗಿವೆ. ಈ ಸರಣಿ ಸ್ಫೋಟದಿಂದಾಗಿ ಪಾರ್ಕಿಂಗ್‌ನಲ್ಲಿದ್ದ ಕಾರುಗಳು, ಬೈಕ್‌ಗಳು ಸುಟ್ಟು ಕರಕಲಾಗಿದ್ದು, ಕಟ್ಟಡಕ್ಕೂ ಸಾಕಷ್ಟು ಹಾನಿಯಾಗಿದೆ.
ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಜನರು ಭಯಭೀತರಾಗಿ ಓಡಿ ಬಂದಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಆ ನಂತರ ಅಲ್ಲಿ ನಡೆದ ತಪಾಸಣೆಯಲ್ಲಿ ಪೊಲೀಸರೇ ದಂಗಾಗಿದ್ದಾರೆ. ಒಂದು ವಸತಿ ಪ್ರದೇಶದ ಪಾರ್ಕಿಂಗ್‌ನಲ್ಲಿ ಸರಿ ಸುಮಾರು 40ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್‌ಗಳು ಪತ್ತೆಯಾಗಿವೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಿಲಿಂಡರ್‌ಗಳನ್ನು ಅಲ್ಲಿ ಸಂಗ್ರಹಿಸಿರುವುದು ಕಾನೂನುಬಾಹಿರ ಮಾತ್ರವಲ್ಲ, ಅದು ಅಲ್ಲಿನ ನೂರಾರು ಜನರ ಜೀವಕ್ಕೆ ಒಡ್ಡಿದ ಕುತ್ತಾಗಿತ್ತು
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಅಲ್ಲಿನ ದೃಶ್ಯ ನೋಡಿ ದಂಗಾಗಿದ್ದಾರೆ. ಪಾರ್ಕಿಂಗ್ ಅಂತಹ ಕಿರಿದಾದ ಜಾಗದಲ್ಲಿ ಬರೋಬ್ಬರಿ 40ಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ಪತ್ತೆ ಹಚ್ಚಿದ್ದಾರೆ. ಮುಂದಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ರೇಟ್ ಜಾಸ್ತಿ ಆಗಬಹುದು ಅಥವಾ ಸಿಗದೇ ಇರಬಹುದು ಅನ್ನೋ ಆತಂಕಕ್ಕೆ ಬಿದ್ದು ಜನ ಈ ರೀತಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರು ಎನ್ನಲಾಗುತ್ತಿದೆ. ಆದರೆ ಈ ಒಂದು ಅಜಾಗರೂಕತೆ ಇಡೀ ಅಪಾರ್ಟ್‌ಮೆಂಟ್ ಅನ್ನೇ ಸ್ಮಶಾನ ಮಾಡುವಂತಿತ್ತು.
LPG Cylinder Hoarding
— Dr Ranjan (@DocRGM_) March 29, 2026
A Major Gas Cylinder Blast occurred in a residential parking area in Rajkot, Gujarat, after residents were found HOARDING cylinders, triggering a devastating explosion.
Authorities recovered more than 40 gas cylinders from the site. pic.twitter.com/nhtEgPwF6c
ಈ ಘಟನೆ ನಮಗೆಲ್ಲ ಒಂದು ದೊಡ್ಡ ಎಚ್ಚರಿಕೆ. ಗ್ಯಾಸ್ ಸಿಲಿಂಡರ್ ಅಂದರೆ ಅದು ಬಾಂಬ್ ಇದ್ದಂತೆ, ಅದನ್ನು ಇಡಬೇಕಾದ ಜಾಗದಲ್ಲಿ ಸುರಕ್ಷಿತವಾಗಿ ಇಡಬೇಕು. ಸುಮ್ಮನೆ ಮನೆಯಲ್ಲಿ ಅಥವಾ ಪಾರ್ಕಿಂಗ್‌ನಲ್ಲಿ ಹೀಗೆ ಗುಡ್ಡೆ ಹಾಕಿಕೊಳ್ಳುವುದು ನಮ್ಮ ಪ್ರಾಣಕ್ಕೆ ನಾವೇ ಕುತ್ತು ತಂದುಕೊಂಡಂತೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಆದರೆ ಪೊಲೀಸರು ಮಾತ್ರ ಈ ರೀತಿ ಸಿಲಿಂಡರ್ ಸಂಗ್ರಹಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.