ಈ ಜಿಲ್ಲೆಯ ಜಿಲ್ಲಾ ಪಂಚಾಯತ್ ನಲ್ಲಿ ಬಾರಿ ಉದ್ಯೋಗಾವಕಾಶ: ಹುದ್ದೆಗೆ ಅರ್ಜಿ ಆರಂಭ; ಪಿಯುಸಿ ಪಾಸಾಗಿದ್ದರೆ ಸಾಕು!!

ರಾಯಚೂರು ಜಿಲ್ಲೆಯ ನಿರುದ್ಯೋಗಿ ಯುವಜನತೆಗೆ ಜಿಲ್ಲಾ ಪಂಚಾಯತ್ ಕಡೆಯಿಂದ ಒಂದು ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ರಾಯಚೂರು ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ "ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ" (Library Supervisors) ಒಟ್ಟು 13 ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತವಾಗಿ ಅರ್ಜಿ ಕರೆಯಲಾಗಿದೆ.

ಜೂನ್ 10ರೊಳಗೆ ಅರ್ಜಿ ಸಲ್ಲಿಸಿ: ರಾಯಚೂರು ಹುದ್ದೆಗಳು; | Photo Credit: AI
ಜೂನ್ 10ರೊಳಗೆ ಅರ್ಜಿ ಸಲ್ಲಿಸಿ: ರಾಯಚೂರು ಹುದ್ದೆಗಳು; | Photo Credit: AI

ಈ ಉದ್ಯೋಗಕ್ಕೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ! ಕೇವಲ ಪಿಯುಸಿ ಮುಗಿಸಿರುವ ಸ್ಥಳೀಯ ಅಭ್ಯರ್ಥಿಗಳಿಗೆ ಇದು ನೇರ ನೇಮಕಾತಿಯಾಗಿದ್ದು, ಆನ್‌ಲೈನ್ ಮೂಲಕ ಅಪ್ಲೈ ಮಾಡಲು ಜೂನ್ 10, 2026 ರವರೆಗೆ ಗಡುವು ನೀಡಲಾಗಿದೆ. ಹಾಗಾದರೆ ಯಾವ ಪಂಚಾಯತಿಯಲ್ಲಿ ಎಷ್ಟೆಷ್ಟು ಹುದ್ದೆಗಳಿವೆ? ಯಾರಿಗೆಲ್ಲ ಅರ್ಹತೆ ಇದೆ? ಅನ್ನೋ ಕಂಪ್ಲೀಟ್ ಗೈಡ್ ಇಲ್ಲಿದೆ ನೋಡಿ.

ಉದ್ಯೋಗದ ಪ್ರಮುಖ ಮಾಹಿತಿ

ನೇಮಕಾತಿ ಸಂಸ್ಥೆ: ಜಿಲ್ಲಾ ಪಂಚಾಯತ್, ರಾಯಚೂರು.

ಹುದ್ದೆಯ ಹೆಸರು: ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರು.

ಒಟ್ಟು ಹುದ್ದೆಗಳು: 13 ಸೀಟುಗಳು ಖಾಲಿ ಇವೆ.

ಅರ್ಜಿ ಹಾಕಲು ಕೊನೆಯ ದಿನಾಂಕ: ಜೂನ್ 10, 2026.

ಸಂಬಳ: ಸರ್ಕಾರದ ನಿಯಮದಂತೆ ನಿಗದಿತ ಮಾಸಿಕ ಗೌರವ ಸಂಭಾವನೆ ಸಿಗಲಿದೆ.

ಯಾವ ತಾಲೂಕಿನಲ್ಲಿ ಎಷ್ಟು ಹುದ್ದೆಗಳಿವೆ?

ಈ ಕೆಲಸಕ್ಕೆ ಆಯಾ ಗ್ರಾಮ ಪಂಚಾಯತಿಯ ಸ್ಥಳೀಯ ನಿವಾಸಿಗಳಿಗೇ ಮೊದಲ ಆದ್ಯತೆ ಇರಲಿದೆ. ಜಿಲ್ಲೆಯ 7 ತಾಲೂಕುಗಳ ಹಂಚಿಕೆ ಹೀಗಿದೆ:

ಸಿಂಧನೂರು: 3 ಹುದ್ದೆಗಳು (ಅಲಬನೂರು, ಗಾಂಧಿನಗರ, ಗೋನವಾರ ಗ್ರಾ.ಪಂ.)

ದೇವದುರ್ಗ: 2 ಹುದ್ದೆಗಳು (ಮಸರಕಲ್, ಜೇರಬಂಡಿ ಗ್ರಾ.ಪಂ.)

ಸಿರವಾರ: 3 ಹುದ್ದೆಗಳು (ಕಲ್ಲೂರು, ಮರ್ಚಟಾಳ, ಮಾಡಗಿರಿ ಗ್ರಾ.ಪಂ.)

ಮಸ್ಕಿ: 2 ಹುದ್ದೆಗಳು (ಗುಂಡಾ, ಮಟ್ಟೂರು ಗ್ರಾ.ಪಂ.)

ಮಾನವಿ: 1 ಹುದ್ದೆ (ಭೋಗಾವತಿ ಗ್ರಾ.ಪಂ.)

ಲಿಂಗಸೂಗೂರು: 1 ಹುದ್ದೆ (ಕಾಳಾಪೂರ ಗ್ರಾ.ಪಂ.)

ರಾಯಚೂರು: 1 ಹುದ್ದೆ (ಗಣದಿನ್ನಿ ಗ್ರಾ.ಪಂ.)

ಯಾರೆಲ್ಲಾ ಅರ್ಜಿ ಹಾಕಬಹುದು? (ವಿದ್ಯಾರ್ಹತೆ)

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ (10-06-2026) ಅಭ್ಯರ್ಥಿಗಳು ಈ ಕೆಳಗಿನ ಸರ್ಟಿಫಿಕೇಟ್‌ಗಳನ್ನು ಹೊಂದಿರಬೇಕು:

  • ಸೆಕೆಂಡ್ ಪಿಯುಸಿ (PUC) ಪರೀಕ್ಷೆಯಲ್ಲಿ ಕಡ್ಡಾಯವಾಗಿ ಪಾಸ್ ಆಗಿರಬೇಕು.
  • ಲೈಬ್ರರಿ ಸೈನ್ಸ್‌ನಲ್ಲಿ (Library Science) ಸರ್ಟಿಫಿಕೇಶನ್ ಕೋರ್ಸ್ ಮಾಡಿರಬೇಕು.
  • ಕನಿಷ್ಠ 3 ತಿಂಗಳ ಬೇಸಿಕ್ ಕಂಪ್ಯೂಟರ್ ಕೋರ್ಸ್ ಮುಗಿಸಿರೋ ಪ್ರಮಾಣಪತ್ರ ಇರಬೇಕು.
  • ಗಮನಿಸಿ: ಸದ್ಯಕ್ಕೆ ಪರೀಕ್ಷೆ ಬರೆದು ರಿಸಲ್ಟ್‌ಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಅರ್ಜಿ ಹಾಕಲು ಅವಕಾಶವಿಲ್ಲ.

ವಯೋಮಿತಿ ಮತ್ತು ಅರ್ಜಿ ಶುಲ್ಕ

ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ ವಯಸ್ಸು ಕೆಳಗಿನಂತಿರಬೇಕು:

  1. ಸಾಮಾನ್ಯ ವರ್ಗ (GM): ಗರಿಷ್ಠ 40 ವರ್ಷ.
  2. OBC (2A, 2B, 3A, 3B): ಗರಿಷ್ಠ 43 ವರ್ಷ.
  3. SC/ST ಮತ್ತು ಪ್ರವರ್ಗ-1: ಗರಿಷ್ಠ 45 ವರ್ಷ.

ಅರ್ಜಿ ಶುಲ್ಕ ಎಷ್ಟು?: ಶುಲ್ಕವನ್ನು ಎಸ್‌ಬಿಐ (SBI) ಬ್ಯಾಂಕ್ ಶಾಖೆಯ ಮೂಲಕ ಜಿಪಂ ಖಾತೆಗೆ (Acc No: 52075526994, IFSC: SBIN0020203) ಚಲನ್ ತುಂಬಿ, ಆ ರಶೀದಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು.

ಸಾಮಾನ್ಯ ಅಭ್ಯರ್ಥಿಗಳಿಗೆ: ರೂ. 500/-

OBC ಅಭ್ಯರ್ಥಿಗಳಿಗೆ: ರೂ. 300/-

SC/ST/ಮಾಜಿ ಸೈನಿಕರಿಗೆ: ರೂ. 200/-

ವಿಕಲಚೇತನ ಅಭ್ಯರ್ಥಿಗಳಿಗೆ: ರೂ. 100/-

ಅಪ್ಲೈ ಮಾಡೋದು ಹೇಗೆ?

ಸ್ಟೆಪ್ 1: ರಾಯಚೂರು ಜಿಪಂ ಅಧಿಕೃತ ವೆಬ್‌ಸೈಟ್‌ಗೆ (https://zpraichur.karnataka.gov.in/kn) ಭೇಟಿ ನೀಡಿ.

ಸ್ಟೆಪ್ 2: ನಿಮ್ಮ ಫೋಟೋ, ಸಿಗ್ನೇಚರ್, ಮಾರ್ಕ್ಸ್ ಕಾರ್ಡ್ ಮತ್ತು ಬ್ಯಾಂಕ್ ಚಲನ್ ರಶೀದಿಯನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ.

ಸ್ಟೆಪ್ 3: ಪೋರ್ಟಲ್‌ನಲ್ಲಿ ಹೊಸದಾಗಿ ರಿಜಿಸ್ಟರ್ ಮಾಡಿಕೊಂಡು, ಉದ್ಯೋಗದ ಫಾರ್ಮ್ ಭರ್ತಿ ಮಾಡಿ ಡಾಕ್ಯುಮೆಂಟ್ಸ್‌ ಅಪ್‌ಲೋಡ್ ಮಾಡಿ 'Submit' ಕೊಡಿ. ಮುಂದಿನ ರೆಫರೆನ್ಸ್‌ಗೆ ಒಂದು ಪ್ರಿಂಟ್ ತಗೆದು ಇಟ್ಟುಕೊಳ್ಳಿ.

ಸೆಲೆಕ್ಷನ್ ಪ್ರೊಸೆಸ್ ಹೇಗಿರುತ್ತೆ?

ನಿಮಗೆ ಮೊದಲೇ ಹೇಳಿದ ಹಾಗೆ ಯಾವುದೇ ಎಕ್ಸಾಮ್ ಇರೋದಿಲ್ಲ. ನಿಮ್ಮ ಪಿಯುಸಿ ಮಾರ್ಕ್ಸ್ ಆಧಾರದ ಮೇಲೆ 'ಮೆರಿಟ್ ಲಿಸ್ಟ್' (Merit List) ಸಿದ್ಧಪಡಿಸಿ ನೇರವಾಗಿ ಆಯ್ಕೆ ಮಾಡಲಾಗುತ್ತದೆ. ಆದರೆ ನೆನಪಿಡಿ, ನೀವು ವಾಸಿಸುವ ಗ್ರಾಮ ಪಂಚಾಯತಿಯಲ್ಲೇ ಹುದ್ದೆ ಖಾಲಿ ಇದ್ದರೆ ತಹಶೀಲ್ದಾರರಿಂದ ಪಡೆದ 'ವಾಸಸ್ಥಳ ಪ್ರಮಾಣ ಪತ್ರ' ಲಗತ್ತಿಸುವುದು ಕಡ್ಡಾಯ. ಅಲ್ಲಿ ಸ್ಥಳೀಯರು ಯಾರೂ ಸಿಗದಿದ್ದರೆ ಮಾತ್ರ ಬೇರೆ ಗ್ರಾಮದವರನ್ನು ಪರಿಗಣಿಸುತ್ತಾರೆ.

ಸ್ಥಳೀಯ ಯುವಕ-ಯುವತಿಯರಿಗೆ ಇದೊಂದು ಬೆಸ್ಟ್ ಚಾನ್ಸ್. ಲೈಬ್ರರಿ ಕೋರ್ಸ್ ಮಾಡಿರೋ ನಿಮ್ಮ ರಾಯಚೂರು ಜಿಲ್ಲೆಯ ಫ್ರೆಂಡ್ಸ್‌ಗೆ ಈ ಮಾಹಿತಿ ತಲುಪಿಸಿ!

Latest News