ದೇಶದ ರಾಜಕೀಯದಲ್ಲಿ ಈಗ ಮತ್ತೊಂದು ಗಲಾಟೆ ಜೋರಾಗಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಭಾರತದ ಫೇಮಸ್ ‘ಮೆಲೋಡಿ’ ಚಾಕೋಲೇಟ್ ಗಿಫ್ಟ್ ಕೊಟ್ಟ ವಿಡಿಯೋ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗಿತ್ತು ಅಲ್ವಾ? ಆನ್‌ಲೈನ್‌ನಲ್ಲಿ ಚಾಕೋಲೇಟ್ ಖಾಲಿಯಾಗೋ ರೇಂಜ್‌ಗೆ ಇದು ಟ್ರೆಂಡ್ ಸೃಷ್ಟಿಸಿತ್ತು. ಆದರೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತ್ರ ಮೋದಿಯ ಈ ಚಾಕೋಲೇಟ್ ಗಿಫ್ಟ್ ರಾಜಕೀಯ ಅಷ್ಟಾಗಿ ಇಷ್ಟವಾದಂತೆ ಕಾಣುತ್ತಿಲ್ಲ! "ದೇಶ ಕಷ್ಟದಲ್ಲಿದ್ದಾಗ ಪ್ರಧಾನಿ ವಿದೇಶದಲ್ಲಿ ರೀಲ್ಸ್ ಮಾಡ್ತಾ ನೌಟಂಕಿ ಮಾಡ್ತಿದ್ದಾರೆ" ಅಂತ ರಾಹುಲ್ ಗಾಂಧಿ ನೇರವಾಗಿ ಮೋದಿಗೆ ತಿವಿದಿದ್ದಾರೆ.
"ದೇಶದಲ್ಲಿ ಆರ್ಥಿಕ ಮಬ್ಬು, ಇಟಲಿಯಲ್ಲಿ ಮೋದಿಯ ರೀಲ್ಸ್!"
ಇಟಲಿ ಪ್ರಧಾನಿಗೆ ಮೋದಿ ಮೆಲೋಡಿ ಚಾಕೋಲೇಟ್ ಕೊಟ್ಟ ವಿಚಾರದ ಬಗ್ಗೆ ಎಕ್ಸ್ (ಟ್ವಿಟರ್) ಪೋಸ್ಟ್‌ನಲ್ಲಿ ತೀವ್ರ ಅಸಮಾಧಾನ ಹೊರಹಾಕಿರುವ ರಾಹುಲ್ ಗಾಂಧಿ, ಪ್ರಧಾನಿ ವಿರುದ್ಧ ಸಖತ್ ಲೇವಡಿ ಮಾಡಿದ್ದಾರೆ.
"ಇದು ನಾಯಕತ್ವವಲ್ಲ, ಕೇವಲ ನೌಟಂಕಿ! ದೇಶದಲ್ಲಿ ರೈತರು, ಯುವಕರು, ಮಹಿಳೆಯರು, ಕಾರ್ಮಿಕರು ಮತ್ತು ಸಣ್ಣ ಸಣ್ಣ ವ್ಯಾಪಾರಿಗಳು ಬದುಕಲಾರದೆ ಕಷ್ಟಪಡುತ್ತಿದ್ದಾರೆ. ಭಾರತದ ಮೇಲೆ ಆರ್ಥಿಕ ಸಂಕಷ್ಟದ ದೊಡ್ಡ ಮಬ್ಬು ಕವಿದಿದೆ. ಇಂತಹ ಟೈಮ್‌ನಲ್ಲಿ ನಮ್ಮ ಪ್ರಧಾನಿ ವಿದೇಶದಲ್ಲಿ ನಗುತ್ತಾ ರೀಲ್ಸ್ ಮಾಡ್ತಾ, ಸಿಹಿತಿಂಡಿ ಹಂಚುತ್ತಾ ಕಾಲ ಕಳೆಯುತ್ತಿದ್ದಾರೆ. ಇತ್ತ ಪ್ರಧಾನಿ ರೀಲ್ಸ್ ಮಾಡ್ತಿದ್ರೆ, ಅತ್ತ ಬಿಜೆಪಿಯ ನಾಯಕರು ಅದಕ್ಕೆ ಚಪ್ಪಾಳೆ ತಟ್ಟುತ್ತಾ ಖುಷಿ ಪಡ್ತಿದ್ದಾರೆ," ಅಂತ ರಾಹುಲ್ ಗಾಂಧಿ ಭರ್ಜರಿಯಾಗಿ ಕಾಲೆಳೆದಿದ್ದಾರೆ.
"ಜನರಿಗೆ ಬುದ್ಧಿ ಹೇಳ್ತಾರೆ, ಆದ್ರೆ ತಾವೇ ವಿಮಾನದಲ್ಲಿ ಸುತ್ತುತ್ತಾರೆ!"
ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದ ‘ಬಹುಜನ ಸ್ವಾಭಿಮಾನ ಸಭೆ’ಯಲ್ಲೂ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಮೋದಿಯವರ ವಿದೇಶ ಪ್ರವಾಸಗಳ ಶೈಲಿಯನ್ನ ತೀವ್ರವಾಗಿ ಖಂಡಿಸಿದರು.
"ಪ್ರಧಾನಿ ಮೋದಿ ಅವರು ದೇಶದ ಜನರಿಗೆ ಮಾತ್ರ ಭಾಷಣ ಮಾಡ್ತಾರೆ. ವಿದೇಶ ಪ್ರವಾಸ ಮಾಡಬೇಡಿ, ಚಿನ್ನ ಖರೀದಿ ಮಾಡಬೇಡಿ, ಎಲೆಕ್ಟ್ರಿಕ್ ಗಾಡಿಗಳನ್ನೇ ಬಳಸಿ ಅಂತ ಜನರಿಗೆ ಬುದ್ಧಿ ಹೇಳ್ತಾರೆ. ಆದರೆ, ತಾವೇ ಮಾತ್ರ ಸಾವಿರಾರು ಕೋಟಿ ರೂಪಾಯಿ ಬೆಲೆಬಾಳುವ ಐಷಾರಾಮಿ ವಿಮಾನ ಹತ್ತಿ ವಿದೇಶ ಸುತ್ತುತ್ತಾರೆ," ಎಂದು ರಾಹುಲ್ ಕಿಡಿಕಾರಿದ್ದಾರೆ.
ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ದೇಶದ ಪರಿಸ್ಥಿತಿ ಇನ್ನು ಕೈಮೀರಲಿದೆ ಅಂತ ಭವಿಷ್ಯ ನುಡಿದಿದ್ದಾರೆ. "ದೇಶದ ಮೇಲೆ ದೊಡ್ಡ ಆರ್ಥಿಕ ಚಂಡಮಾರುತ ಬರ್ತಾ ಇದೆ. ಇನ್ನು ಕೆಲವೇ ತಿಂಗಳಲ್ಲಿ ಬೆಲೆ ಏರಿಕೆ ಎಲ್ಲೋ ತಲುಪುತ್ತೆ. ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆಗಳು ಎಲ್ಲಿಗೆ ಹೋಗಿ ನಿಲ್ಲುತ್ತವೆ ಅನ್ನೋದನ್ನ ನೀವೇ ನೋಡ್ತೀರಿ. ಅಷ್ಟೇ ಯಾಕೆ, ಮುಂದೆ ನಮ್ಮ ರೈತರಿಗೆ ಹೊಲಕ್ಕೆ ಹಾಕೋಕೆ ಸರಿಯಾಗಿ ರಸಗೊಬ್ಬರವೂ ಸಿಗದ ಪರಿಸ್ಥಿತಿ ಬರಬಹುದು," ಅಂತ ಜನರಿಗೆ ಎಚ್ಚರಿಸಿದ್ದಾರೆ.
VIDEO | Raebareli, Uttar Pradesh: Lok Sabha LoP Rahul Gandhi (@RahulGandhi) addresses a public gathering, says, "You all are clapping... but when RSS members tear and throw away this Constitution right in front of you, you remain silent. I want to tell you that this Constitution… pic.twitter.com/XtcvbTgsTW
— Press Trust of India (@PTI_News) May 20, 2026
ಆರೆಸ್ಸೆಸ್ ಮತ್ತು ಸಂವಿಧಾನದ ಮೇಲೆ ದಾಳಿ!
ಇದೇ ರಾಯ್‌ಬರೇಲಿ ಸಭೆಯಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ರಾಹುಲ್, ಆರೆಸ್ಸೆಸ್ (RSS) ಹಾಗೂ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದರು. "ನೀವೆಲ್ಲರೂ ಇಲ್ಲಿ ಚಪ್ಪಾಳೆ ತಟ್ಟುತ್ತಿದ್ದೀರಿ ಓಕೆ. ಆದರೆ ಆರೆಸ್ಸೆಸ್‌ನವರು ನಿಮ್ಮ ಕಣ್ಣೆದುರೇ ಸಂವಿಧಾನವನ್ನು ಹರಿದು ಎಸೆಯುವಾಗ ಮೌನವಾಗಿರ್ತೀರಿ. ಈ ಸಂವಿಧಾನದಲ್ಲಿ ನಿಮ್ಮ ಧ್ವನಿ ಇದೆ, ನಿಮ್ಮ ರಕ್ತವಿದೆ. ಅದನ್ನು ಉಳಿಸಿಕೊಳ್ಳುವುದು ನಿಮ್ಮದೇ ಜವಾಬ್ದಾರಿ," ಎಂದರು.
ಅಷ್ಟೇ ಅಲ್ಲದೆ, "ಮೋದಿ, ಅಮಿತ್ ಶಾ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡ್ತಿದ್ದಾರೆ. ಚುನಾವಣೆಗೂ ಮುನ್ನ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಶಾರ್ಟೇಜ್ ಇಲ್ಲ, ರೇಟ್ ಜಾಸ್ತಿ ಆಗಲ್ಲ ಅಂದಿದ್ದರು. ಆದರೆ ಈಗ ನೋಡಿದರೆ ಪ್ರತಿದಿನ ಇಂಧನ ದರ ಏರಿಕೆಯಾಗುತ್ತಿದೆ," ಅಂತ ಆಕ್ರೋಶ ಹೊರಹಾಕಿದ್ದಾರೆ.
आर्थिक तूफ़ान सर पर है, और हमारे प्रधानमंत्री इटली में टॉफ़ी बाँट रहे हैं!
— Rahul Gandhi (@RahulGandhi) May 20, 2026
किसान, युवा, महिलाएँ, मज़दूर और छोटे व्यापारी सब रो रहे हैं - PM हंसकर रील बना रहे हैं, और BJP वाले ताली बजा रहे हैं।
यह नेतृत्व नहीं, नौटंकी है।
ಅದಾನಿ, ಅಂಬಾನಿ ವಿರುದ್ಧವೂ ವಾಗ್ದಾಳಿ!
ಕೊನೆಯದಾಗಿ, ಎಂದಿನಂತೆ ಉದ್ಯಮಿಗಳಾದ ಅದಾನಿ ಮತ್ತು ಅಂಬಾನಿ ಹೆಸರನ್ನೆತ್ತಿ ಮೋದಿ ಸರ್ಕಾರವನ್ನು ತರಾಟೆಗೆ ತಗೊಂಡಿದ್ದಾರೆ ರಾಹುಲ್. "ಅಂಬಾನಿ ಅವರು ರಷ್ಯಾದಿಂದ ಕಡಿಮೆ ಬೆಲೆಗೆ ಪೆಟ್ರೋಲ್ ಖರೀದಿಸಿ ಹೊರಗಡೆ ಮಾರಾಟ ಮಾಡ್ತಾರೆ. ಆ ಹಣದಿಂದ ಪ್ರಧಾನಿ ಮೋದಿಗೆ ಫೈನಾನ್ಸ್ ಮಾಡ್ತಾರೆ. ಮೋದಿ ಇಡೀ ಭಾರತದ ಆರ್ಥಿಕ ವ್ಯವಸ್ಥೆಯನ್ನ ಅಂಬಾನಿ, ಅದಾನಿ ಮತ್ತು ಅಮೆರಿಕದ ಕೈಗೆ ಹಸ್ತಾಂತರಿಸಿದ್ದಾರೆ. ಈ ಸರ್ಕಾರ ನಿಮ್ಮನ್ನು ಉಳಿಸಲ್ಲ.