Jan 25, 2026 Languages : ಕನ್ನಡ | English

ಇಂದು ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಆಗಮನ!! ಬರುತ್ತಿರುವ ಉದ್ದೇಶ? ಸಕಲ ಸಿದ್ಧತೆ ಇಲ್ಲಿದೆ

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇಂದು ಭಾರತಕ್ಕೆ ಆಗಮಿಸಲಿದ್ದು, ಅವರ ಎರಡು ದಿನಗಳ ಪ್ರವಾಸಕ್ಕೆ ನವದೆಹಲಿಯಲ್ಲಿ ಭಾರೀ ಸಿದ್ಧತೆ ನಡೆದಿದೆ. ಉಕ್ರೇನ್ ವಿರುದ್ಧ ಯುದ್ಧ ಆರಂಭವಾದ ನಂತರ ಪುಟಿನ್ ಭಾರತಕ್ಕೆ ನೀಡುತ್ತಿರುವ ಇದು ಮೊದಲ ಭೇಟಿ. 2021ರಲ್ಲಿ ಅವರು ಕೊನೆಯದಾಗಿ ಭಾರತಕ್ಕೆ ಭೇಟಿ ನೀಡಿದ್ದರು.

ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಆಗಮನ
ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಆಗಮನ

ವಾಸ್ತವ್ಯಕ್ಕೆ ವಿಶೇಷ ವ್ಯವಸ್ಥೆ

ಪುಟಿನ್ ಅವರ ವಾಸ್ತವ್ಯಕ್ಕಾಗಿ ದೆಹಲಿಯ ಪಂಚತಾರಾ ಹೋಟೆಲ್ ಮೌರ್ಯದಲ್ಲಿ ಇಂದ್ರಲೋಕ ಸೂಟ್ ಕೊಠಡಿ ಸಜ್ಜುಗೊಂಡಿದೆ. ಹೋಟೆಲ್ ಆವರಣ ಮತ್ತು ಸುತ್ತಮುತ್ತ ಭದ್ರತಾ ಸಂಸ್ಥೆಗಳನ್ನ ನಿಯೋಜಿಸಲಾಗಿದ್ದು, ಭದ್ರತೆಗಾಗಿ ವಿಶೇಷ ಕ್ರಮ ಕೈಗೊಳ್ಳಲಾಗಿದೆ.

5 ಹಂತದ ಭದ್ರತೆ

ಪುಟಿನ್ ಭದ್ರತೆಗೆ ರಾಷ್ಟ್ರೀಯ ಭದ್ರತಾ ದಳದ ಕಮಾಂಡೊಗಳು, ಸ್ನೈಪರ್‌ಗಳು, ಡ್ರೋನ್‌ಗಳು, ಜಾಮರ್‌ಗಳು ಹಾಗೂ ಎಐ ಆಧಾರಿತ ಪರಿಶೀಲನಾ ವ್ಯವಸ್ಥೆಗಳನ್ನು ಒಳಗೊಂಡಂತೆ ಒಟ್ಟು 5 ಹಂತದ ಭದ್ರಕೋಟೆ ನಿರ್ಮಿಸಲಾಗಿದೆ. ಹೋಟೆಲ್ ಆವರಣವನ್ನು ಸಂಪೂರ್ಣವಾಗಿ ಭದ್ರತಾ ಸಿಬ್ಬಂದಿ ಕವಿದಿದ್ದಾರೆ.

ಭೇಟಿಯ ಉದ್ದೇಶ

ಭಾರತ ಪ್ರವಾಸದ ವೇಳೆ ರಷ್ಯಾ ವ್ಯಾಪಾರವನ್ನು ಪ್ರತ್ಯೇಕಿಸುವ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ. ಪರಮಾಣು ಶಕ್ತಿಗಾಗಿ ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ ಪ್ರಸ್ತಾಪ, ರಷ್ಯಾದೊಂದಿಗೆ ರಕ್ಷಣಾ ಸಹಕಾರ, ಆರ್ಥಿಕ ಸಹಕಾರ ಪುನಶ್ಚೇತನಗೊಳಿಸುವುದು ಪ್ರಮುಖ ಅಂಶಗಳಾಗಿವೆ.

ವ್ಯಾಪಾರ ಮತ್ತು ಒಪ್ಪಂದಗಳು

ಯುರೇಷಿಯನ್ ಆರ್ಥಿಕ ಒಕ್ಕೂಟದಲ್ಲಿ ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಯುವ ನಿರೀಕ್ಷೆ ಇದೆ. ವ್ಯಾಪಾರಕ್ಕೆ ಸಂಬಂಧಿಸಿದ ಸುಂಕ ಮತ್ತು ಸುಂಕ ರಹಿತ ಅಡೆತಡೆಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಜೊತೆಗೆ ಪ್ರಾದೇಶಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದ್ದು, ಸರ್ಕಾರಿ ಹಾಗೂ ವಾಣಿಜ್ಯ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ.