Apr 28, 2026 Languages : ಕನ್ನಡ | English

ಇನ್ಮುಂದೆ ಎಲ್ಲರಿಗೂ ಎಐ ಕೆಲಸ? SDM ಕಾಲೇಜಿನಲ್ಲಿ ನಡೆಯಲಿದೆ ತಂತ್ರಜ್ಞಾನ ಲೋಕದ ದೊಡ್ಡ ಸಮಾವೇಶ!!

"ಇವತ್ತು ಎಲ್ಲೇ ಹೋದ್ರೂ ಎಐ (AI) ಅಲೆ ಸಖತ್ ಜೋರಾಗಿದೆ ಅಲ್ವಾ? ಚಾಟ್ ಜಿಪಿಟಿ ಇಂದ ಹಿಡಿದು ಆಟೋಮ್ಯಾಟಿಕ್ ಕಾರುಗಳವರೆಗೆ ನಾವು ನೋಡೋ ಪ್ರತಿಯೊಂದು ವಸ್ತು ಕೂಡ ಈಗ ಸ್ಮಾರ್ಟ್ ಆಗ್ತಿದೆ. ಈ ವೇಗದ ಬದಲಾವಣೆಗೆ ನಾವು ಹೇಗೆ ರೆಡಿ ಇರಬೇಕು? ಮಷೀನ್ ಮತ್ತು ಮನುಷ್ಯರು ಸೇರಿ ಹೊಸ ಲೋಕವನ್ನು ಹೇಗೆ ಸೃಷ್ಟಿಸಬಹುದು? ಇಂತಹ ಹತ್ತಾರು ಪ್ರಶ್ನೆಗಳಿಗೆ ಉತ್ತರ ಹುಡುಕಲು ಮಂಗಳೂರಿನ ಎಸ್‌ಡಿಎಂ ಪಿಜಿ ಸೆಂಟರ್ (SDM PG Centre) ಒಂದು ಸಖತ್ ಇಂಟರೆಸ್ಟಿಂಗ್ ಕಾರ್ಯಕ್ರಮ ರೆಡಿ ಮಾಡಿದೆ."

ಎಐ ಮತ್ತು ಇಂಡಸ್ಟ್ರಿ 5.0 | Photo Credit: https://x.com/itsmeramc
ಎಐ ಮತ್ತು ಇಂಡಸ್ಟ್ರಿ 5.0 | Photo Credit: https://x.com/itsmeramc

ಬರುವ ಏಪ್ರಿಲ್ 30, 2026 ರಂದು ಮಂಗಳೂರಿನಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ ನಡೆಯಲಿದೆ. “ಎಐ ಮತ್ತು ಇಂಡಸ್ಟ್ರಿ 5.0: ಸ್ಮಾರ್ಟರ್ ಭವಿಷ್ಯಕ್ಕಾಗಿ ಮಾನವ-ಯಂತ್ರ ಸಹಯೋಗ” ಎಂಬುದು ಇದರ ಥೀಮ್.

ಯಾರಿದ್ದಾರೆ ಈ ವೇದಿಕೆಯಲ್ಲಿ?

ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ವಿಶೇಷ. ದೊಡ್ಡ ದೊಡ್ಡ ಕಂಪನಿಗಳ ಮುಖ್ಯಸ್ಥರು ಮತ್ತು ತಂತ್ರಜ್ಞಾನ ಲೋಕದ ದಿಗ್ಗಜರು ಇಲ್ಲಿ ಒಂದೇ ಕಡೆ ಸೇರುತ್ತಿದ್ದಾರೆ.

ಉದ್ಘಾಟನೆ: ಎಬಿಬಿ ಇಂಡಿಯಾ ಲಿಮಿಟೆಡ್‌ನ ಡಿಜಿಟಲ್ ವಿಭಾಗದ ಉಪಾಧ್ಯಕ್ಷರಾದ ಪ್ರಸನ್ನ ದೇಶಪಾಂಡೆ ಅವರು ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಲಿದ್ದಾರೆ.

ವಿಶೇಷ ಅತಿಥಿ: ನಮಗೆಲ್ಲರಿಗೂ ಗೊತ್ತಿರುವ 'ಕೌರ್ಸೆರಾ' (Coursera) ಸಂಸ್ಥೆಯ ಗ್ಲೋಬಲ್ ಹೆಡ್ ಮತ್ತು ಇದೇ ಕಾಲೇಜಿನ ಹೆಮ್ಮೆಯ ಹಳೆಯ ವಿದ್ಯಾರ್ಥಿನಿ ಶಿಲ್ಪಾ ಶೆಟ್ಟಿ ಸಿ. ಅವರು ಭಾಗವಹಿಸುತ್ತಿದ್ದಾರೆ.

ದಿಕ್ಸೂಚಿ ಭಾಷಣ: ಟಾಟಾ ಟ್ರಸ್ಟ್‌ನ ಮಾಜಿ ಸಿಒಒ ಡಾ. ಹರೀಶ್ ಕೃಷ್ಣಸ್ವಾಮಿ ಅವರು ತಂತ್ರಜ್ಞಾನ ಮತ್ತು ಉದ್ಯಮದ ಬೆಳವಣಿಗೆಯ ಬಗ್ಗೆ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.

ಸಂಸ್ಥೆಯ ನಿರ್ದೇಶಕಿ ಡಾ. ಸೀಮಾ ಎಸ್. ಶೆಣೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಬರೀ ಭಾಷಣವಲ್ಲ, ಸಖತ್ ಸಂವಾದ!

ಕಾರ್ಯಕ್ರಮದ ಹೈಲೈಟ್ ಅಂದ್ರೆ ಸಂವಾದ ಕಾರ್ಯಕ್ರಮ. "ಭಾರತದ ಸಬಲೀಕರಣ: ಸುಸ್ಥಿರತೆಗಾಗಿ ಎಐ" ಎಂಬ ವಿಷಯದ ಬಗ್ಗೆ ಗಹನವಾದ ಚರ್ಚೆ ನಡೆಯಲಿದೆ. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ನ ವೈಶಾಖ್ ಪೈ ಅವರು ಇದರ ಸಂಚಾಲಕರಾಗಿದ್ದು, ವೈದ್ಯಕೀಯ ಕ್ಷೇತ್ರದಿಂದ ಹಿಡಿದು ಸ್ಟೀಲ್ ಮತ್ತು ಸಾಫ್ಟ್‌ವೇರ್ ಕ್ಷೇತ್ರದವರೆಗೆ ಎಐ ಹೇಗೆ ಬದಲಾವಣೆ ತರುತ್ತಿದೆ ಎಂಬುದನ್ನು ತಜ್ಞರು ವಿವರಿಸಲಿದ್ದಾರೆ.

ಯೆನೆಪೋಯ ಆಸ್ಪತ್ರೆಯ ಡಾ. ದೀಪಕ್ ರೈ, ಶ್ರೀ ಗರೋಡಿ ಸ್ಟೀಲ್ಸ್‌ನ ಬೀಮಾ ಮನೋಜ್ ಮತ್ತು ಸೆವೆನ್ ಟೆಕ್ನಾಲಜೀಸ್‌ನ ರಾಜೇಶ್ ಪ್ರಭು ಅವರು ಈ ಚರ್ಚೆಯಲ್ಲಿ ಭಾಗವಹಿಸಿ ಹೊಸ ವಿಚಾರಗಳನ್ನು ನಮ್ಮ ಮುಂದೆ ಇಡಲಿದ್ದಾರೆ.

ಇದು ಬರೀ ಸೆಮಿನಾರ್ ಅಂದುಕೊಳ್ಳಬೇಡಿ, ಇಲ್ಲಿ ಮಧ್ಯಾಹ್ನದ ಮೇಲೆ ವಿದ್ಯಾರ್ಥಿಗಳಿಗೆ ಸಖತ್ ಆಕ್ಟಿವಿಟೀಸ್ ಇವೆ:

ಸಂಶೋಧನಾ ಪ್ರಬಂಧ ಸ್ಪರ್ಧೆ: ಹೊಸ ಹೊಸ ಐಡಿಯಾಗಳನ್ನು ಹೊಂದಿರುವವರಿಗೆ ತಮ್ಮ ಪ್ರಬಂಧಗಳನ್ನು ಪ್ರಸ್ತುತಪಡಿಸಲು ಇದು ಒಳ್ಳೆಯ ವೇದಿಕೆ.

ಸೆನ್ಸೆಕ್ಸ್ ವಿಶ್ಲೇಷಣಾ ಸ್ಪರ್ಧೆ: ಹಣಕಾಸು ಮತ್ತು ಷೇರು ಮಾರುಕಟ್ಟೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ತಮ್ಮ ಕೌಶಲ ತೋರಿಸಲು ಇದೊಂದು ಉತ್ತಮ ಅವಕಾಶ.

ಸಮಾರೋಪ ಸಮಾರಂಭದಲ್ಲಿ ಇನ್ಫೋಸಿಸ್‌ನ ಹಿರಿಯ ತಾಂತ್ರಿಕ ವಾಸ್ತುಶಿಲ್ಪಿ ಶಂಕರಸುಬ್ಬು ಅರುಣಾಚಲಂ ಅವರು ಅತಿಥಿಯಾಗಿ ಬರಲಿದ್ದಾರೆ.