Jan 25, 2026 Languages : ಕನ್ನಡ | English

ಶಿವಾಜಿನಗರ ಟಿಕೆಟ್ ಕುರಿತು ಝೈದ್ ಖಾನ್ ಹೇಳಿಕೆ - ಸಿದ್ದರಾಮಯ್ಯ ಬಿ ಫಾರಂ ಬಗ್ಗೆ ಚರ್ಚೆ!!

ಮೈಸೂರಿನಲ್ಲಿ ಸಚಿವ ಜಮೀರ್ ಅಹಮ್ಮದ್ ಪುತ್ರ ಝೈದ್ ಖಾನ್ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ನನಗೆ ಬಿ ಫಾರಂ ಕೊಟ್ಟಿದ್ದರು, ಆದರೆ ನನಗೆ ರಾಜಕೀಯ ಆಸಕ್ತಿ ಇಲ್ಲದ ಕಾರಣ ಅದನ್ನು ತಿರುಗಿ ಕೂಡ ನೋಡಲಿಲ್ಲ ಎಂದು ಝೈದ್ ಖಾನ್ ಹೇಳಿಕೆ ನೀಡಿದ್ದರು. ರಾಜಕೀಯ ಆಸಕ್ತಿ ಇದ್ದಿದ್ದರೆ ಶಿವಾಜಿ ನಗರದಿಂದ ಸುಲಭವಾಗಿ ಗೆಲ್ಲುತ್ತಿದ್ದೆ ಎಂದು ಅವರು ಹೇಳಿದ ಮಾತು ರಿಜ್ವಾನ್ ಅರ್ಷದ್ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಝೈದ್ ಖಾನ್ ಹೇಳಿಕೆ ವಿರುದ್ಧ ರಿಜ್ವಾನ್ ಅರ್ಷದ್ ಬೆಂಬಲಿಗರ ಆಕ್ರೋಶ!!
ಝೈದ್ ಖಾನ್ ಹೇಳಿಕೆ ವಿರುದ್ಧ ರಿಜ್ವಾನ್ ಅರ್ಷದ್ ಬೆಂಬಲಿಗರ ಆಕ್ರೋಶ!!

ಹೌದು ಬೆಂಬಲಿಗರ ಪ್ರಕಾರ, ರಿಜ್ವಾನ್ ಅರ್ಷದ್ ಅವರಿಗೆ ಪಕ್ಷ ಟಿಕೆಟ್ ನೀಡಿದ್ದು ಅವರ ಪಕ್ಷನಿಷ್ಠೆ ಮತ್ತು ಸಂಘಟನೆಗೆ ಮಾಡಿದ ದುಡಿಮೆಯನ್ನು ಗಮನಿಸಿ. “ನಿಮ್ಮನ್ನು ನೋಡಿ ಟಿಕೆಟ್ ನೀಡಿಲ್ಲ, ರಿಜ್ವಾನ್ ಅರ್ಷದ್ ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ ಪಕ್ಷದಲ್ಲಿ ಇದ್ದರು. ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಸಂಘಟನೆಗೆ ದುಡಿದರು. ಅವರಿಗೆ ಲೋಕಸಭಾ ಟಿಕೆಟ್ ನೀಡಿದಾಗ ನೀವು ಕಾಂಗ್ರೆಸ್ ಪಕ್ಷದಲ್ಲೇ ಇರಲಿಲ್ಲ” ಎಂದು ಬೆಂಬಲಿಗರು ಸ್ಪಷ್ಟಪಡಿಸಿದರು.

ಅವರು ಇನ್ನೂ ಮುಂದೆ, “ನಿಮ್ಮ ತಂದೆ ಕಾಂಗ್ರೆಸ್‌ಗೆ ಬಂದ ಸಂಧರ್ಭದಲ್ಲಿಯೇ ರಿಜ್ವಾನ್ ಅರ್ಷದ್ ಅವರಿಗೆ ವಿಧಾನ ಪರಿಷತ್ ಟಿಕೆಟ್ ನೀಡಲಾಗಿತ್ತು. ಸುಮ್ಮನೆ ಗೊಂದಲದ ಹೇಳಿಕೆಗಳನ್ನು ನೀಡಬೇಡಿ. ಸಿದ್ದರಾಮಯ್ಯ ನನಗೆ ಬಿ ಫಾರಂ ಕೊಟ್ಟಿದ್ದರು ಎಂದು ಹೇಳಿಕೊಂಡು ಅವರ ಹೆಸರನ್ನು ದುರ್ಬಳಕೆ ಮಾಡಬೇಡಿ” ಎಂದು ಎಚ್ಚರಿಕೆ ನೀಡಿದರು. ಹೌದು ರಿಜ್ವಾನ್ ಅರ್ಷದ್ ಬೆಂಬಲಿಗರು ತಮ್ಮ ನಾಯಕನ ಪಕ್ಷನಿಷ್ಠೆ, ಸಂಘಟನೆಗೆ ಮಾಡಿದ ಕೊಡುಗೆ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ತೋರಿದ ನಾಯಕತ್ವವನ್ನು ನೆನೆದು, ಝೈದ್ ಖಾನ್ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದರು. 

“ರಿಜ್ವಾನ್ ಅರ್ಷದ್ ಅವರ ಪರಿಶ್ರಮದಿಂದಲೇ ಪಕ್ಷವು ಅವರಿಗೆ ಟಿಕೆಟ್ ನೀಡಿದೆ. ಇದು ಯಾವುದೇ ವ್ಯಕ್ತಿಗತ ಸಂಬಂಧದಿಂದ ಬಂದಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು. ಒಟ್ಟಿನಲ್ಲಿ ಹೇಳುವುದಾದರೆ, ಮೈಸೂರಿನಲ್ಲಿ ನಡೆದ ಈ ಹೇಳಿಕೆಯ ವಿವಾದವು ಕಾಂಗ್ರೆಸ್ ಪಕ್ಷದ ಒಳಗಿನ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಝೈದ್ ಖಾನ್ ಹೇಳಿಕೆಗೆ ರಿಜ್ವಾನ್ ಅರ್ಷದ್ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest News