Apr 25, 2026 Languages : ಕನ್ನಡ | English

ಮೇಕೆದಾಟುವಿನಲ್ಲಿ ಮೋಜು ಮಾಡಲು ಹೋದವರಿಗೆ ಕಾಡಾನೆ ಶಾಕ್ - ಪ್ರಾಣ ಉಳಿಸಿಕೊಳ್ಳಲು ಪ್ರವಾಸಿಗರ ಓಟ!!

ವೀಕೆಂಡ್ ಬಂತು ಅಂದ್ರೆ ಸಾಕು, ಬೆಂಗಳೂರಿನ ಜನರೆಲ್ಲಾ ಸ್ವಲ್ಪ ತಂಪು ಹುಡುಕಿಕೊಂಡು ಹೋಗೋದು ಮೇಕೆದಾಟು ಅಥವಾ ಸಂಗಮದ ಕಡೆಗೆ. ಆದ್ರೆ ಈ ಶುಕ್ರವಾರ (ಏಪ್ರಿಲ್ 24) ಅಲ್ಲಿಗೆ ಹೋಗಿದ್ದ ಪ್ರವಾಸಿಗರಿಗೆ ಮಾತ್ರ ಜನ್ಮ ಜಾಲಾಡುವಂತ ಅನುಭವವಾಗಿದೆ. ಕಾವೇರಿ ನದಿಯಲ್ಲಿ ಆರಾಮಾಗಿ ಆಟವಾಡುತ್ತಿದ್ದ ಜನರ ಮೇಲೆ ಕಾಡಾನೆಯೊಂದು ಇದ್ದಕ್ಕಿದ್ದಂತೆ ಅಟ್ಯಾಕ್ ಮಾಡಿದೆ!

ನೀರಾಟವಾಡುತ್ತಿದ್ದ ಜನರ ಮೇಲೆ ನುಗ್ಗಿ ಬಂದ ಗಜಪಡೆ
ನೀರಾಟವಾಡುತ್ತಿದ್ದ ಜನರ ಮೇಲೆ ನುಗ್ಗಿ ಬಂದ ಗಜಪಡೆ

ಸಂಗಮದ ಅರಣ್ಯ ಪ್ರದೇಶದ ಮೇಕೆದಾಟು ಬಳಿ ಈ ಘಟನೆ ನಡೆದಿದೆ. ಮಧ್ಯಾಹ್ನದ ಉರಿ ಬಿಸಿಲಿಗೆ ಕಾಡಾನೆಗಳು ಸಾಮಾನ್ಯವಾಗಿ ನದಿಗೆ ನೀರು ಕುಡಿಯಲು ಬರುತ್ತವೆ. ಅದೇ ರೀತಿ ಇಲ್ಲೊಂದು ಕಾಡಾನೆ ನೀರು ಕುಡಿಯಲು ಬಂದಿತ್ತು. ಆದ್ರೆ ಅಲ್ಲಿ ಪ್ರವಾಸಿಗರು ಗುಂಪು ಗುಂಪಾಗಿ ನೀರಾಟವಾಡುತ್ತಾ ಗದ್ದಲ ಮಾಡುತ್ತಿರೋದನ್ನ ನೋಡಿ ಆನೆ ಫುಲ್ ಗರಂ ಆಗಿದೆ. ಮಂದಗತಿಯಲ್ಲಿ ಬಂದ ಆನೆ, ನೋಡನೋಡುತ್ತಿದ್ದಂತೆಯೇ ಜನರ ಮೇಲೆ ಎರಗಿದೆ!

ದಿಕ್ಕಾಪಾಲಾಗಿ ಓಡಿದ ಪ್ರವಾಸಿಗರು

ಆನೆ ತನ್ನ ಕಡೆಗೆ ನುಗ್ಗಿ ಬರ್ತಿರೋದನ್ನ ಕಂಡ ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ. "ಆನೆ ಬಂತು ಆನೆ" ಅಂತ ಕಿರುಚುತ್ತಾ ಕೈಗೆ ಸಿಕ್ಕಿದ್ದನ್ನ ಹಿಡಿದುಕೊಂಡು ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ. ಈ ಗದ್ದಲದ ನಡುವೆ ಓಡುವಾಗ ಮಹಿಳೆಯೊಬ್ಬರು ಕೆಳಗೆ ಬಿದ್ದು ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯಕ್ಕೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

"ಈ ಇಡೀ ಹೈಡ್ರಾಮಾವನ್ನು ಅಲ್ಲಿದ್ದ ಕೆಲವರು ತಮ್ಮ ಮೊಬೈಲ್‌ನಲ್ಲಿ ಶೂಟ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಈ ಆನೆ ಅಟ್ಯಾಕ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಾ ಜನರ ನಿದ್ದೆಗೆಡಿಸಿದೆ!

ವಿಷಯ ಗೊತ್ತಾಗುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಾಟ್‌ಗೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. 'ನೋಡಿ ಸಾಮಿ, ಇದು ಅಪ್ಪಟ ಕಾಡು ಪ್ರಾಣಿಗಳ ಏರಿಯಾ. ಅವು ನೀರು ಕುಡಿಯೋಕೆ ಬರೋದು ಕಾಮನ್. ನದಿ ಹತ್ತಿರ ಬಂದು ಬೇಕಾಬಿಟ್ಟಿ ಗಲಾಟೆ ಮಾಡಬೇಡಿ' ಅಂತ ಪ್ರವಾಸಿಗರಿಗೆ ಸ್ಟ್ರಿಕ್ಟ್ ಆಗಿ ವಾರ್ನಿಂಗ್ ನೀಡಿದ್ದಾರೆ. ಅಂದಹಾಗೆ, ಈ ಘಟನೆ ನಡೆದಿದ್ದು ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ."

ನಾವೆಲ್ಲಾ ಎಂಜಾಯ್ ಮಾಡೋಕೆ ಹೋಗ್ತೀವಿ ನಿಜ, ಆದ್ರೆ ಕಾಡು ಪ್ರಾಣಿಗಳ ವಲಯಕ್ಕೆ ಹೋದಾಗ ನಾವು ಸ್ವಲ್ಪ ಜಾಗರೂಕರಾಗಿರಬೇಕು:

ವನ್ಯಜೀವಿಗಳ ಮೇಲೆ ನಿಗಾ ಇರಲಿ: ನದಿಯ ಪಕ್ಕಕ್ಕೆ ಹೋಗುವಾಗ ಆನೆ ಅಥವಾ ಇತರ ಪ್ರಾಣಿಗಳು ಇವೆಯೇ ಎಂದು ದೂರದಿಂದಲೇ ಗಮನಿಸಿ.

ಗದ್ದಲ ಬೇಡ: ಅರಣ್ಯ ಪ್ರದೇಶದ ಹತ್ತಿರ ಹೋದಾಗ ಕಿರುಚಾಡುವುದು ಅಥವಾ ಜೋರಾಗಿ ಮ್ಯೂಸಿಕ್ ಹಾಕೋದನ್ನ ತಪ್ಪಿಸಿ. ಇದು ಪ್ರಾಣಿಗಳನ್ನ ಕೆರಳಿಸುತ್ತದೆ.

ದೂರವಿರಿ: ಪ್ರಾಣಿಗಳು ನೀರು ಕುಡಿಯಲು ಬಂದಾಗ ಅವುಗಳಿಗೆ ದಾರಿ ಬಿಟ್ಟು ದೂರ ನಿಲ್ಲುವುದು ಸುರಕ್ಷಿತ. ಸೆಲ್ಫಿ ತಗೊಳ್ಳೋ ಸಾಹಸಕ್ಕೆ ಮಾತ್ರ ಹೋಗಲೇಬೇಡಿ

ಸದ್ಯಕ್ಕೆ ಸಂಗಮ ಮತ್ತು ಮೇಕೆದಾಟು ಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತನ್ನ ಹೆಚ್ಚಿಸಿದ್ದಾರೆ. ಬಿಸಿಲು ಜಾಸ್ತಿ ಇರೋದ್ರಿಂದ ಆನೆಗಳು ಪದೇ ಪದೇ ನದಿಯ ಕಡೆಗೆ ಬರುವ ಸಾಧ್ಯತೆ ಇದೆ.

Latest News